AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Horoscope 6th October:ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 6ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 6ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Horoscope 6th October:ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 6ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಭವಿಷ್ಯ (ಸಾಂದರ್ಭಿಕ ಚಿತ್ರ)
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ|

Updated on: Oct 06, 2025 | 1:54 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಬುದ್ಧಿವಂತಿಕೆಗಿಂತ ಸಮಯಪ್ರಜ್ಞೆ ಈ ದಿನ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ನಿಮಗೆ ಮಾಹಿತಿ ಇಲ್ಲದ ಅಥವಾ ಅರೆಬರೆ ತಿಳಿದಿರುವ ಸಂಗತಿಗಳ ಬಗ್ಗೆ ಅಧಿಕಾರಯುತವಾಗಿ ಅಭಿಪ್ರಾಯ ಹೇಳದಿರುವುದು ಈ ದಿನ ಮುಖ್ಯವಾಗುತ್ತದೆ. ಅದರಲ್ಲೂ ಸಾರ್ವಜನಿಕ ಸಭೆ- ಸಮಾರಂಭಗಳಲ್ಲಿ ಏನಾದರೂ ಮಾತನಾಡಿ, ಅವಮಾನಕ್ಕೆ ಗುರಿ ಆಗುವಂಥ ಸಾಧ್ಯತೆ ಇದೆ. ಹೊಸದಾಗಿ ಬಟ್ಟೆ ಸೇರಿದಂತೆ ಇತರ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಇತರ ಸಂಸ್ಥೆಗಳಿಂದ ಉದ್ಯೋಗಾವಕಾಶ ಹುಡುಕಿಕೊಂಡು ಬರಲಿದೆ. ಪ್ರೀತಿ- ಪ್ರೇಮ ವಿಚಾರಗಳಿಗೆ ಇಂದು ಹೆಚ್ಚಿನ ಆದ್ಯತೆ ನೀಡಲಿದ್ದೀರಿ. ಕೆಲವು ಕೆಲಸಗಳನ್ನು ಮೊದಲಿನಿಂದ ಆರಂಭಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಸಂಬಂಧಿಗಳಿಗೆ ಬೇಕಾದ ಸಹಾಯ ಮಾಡುವುದಕ್ಕೇ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ತುಂಬ ಆರಾಮವಾಗಿ ಸಮಯ ಕಳೆಯಬೇಕು ಎಂಬ ಆಲೋಚನೆಯಿಂದ ಹೊರಗೆ ಬರುವುದು ಅನಿವಾರ್ಯ ಆಗಲಿದೆ. ಅದಕ್ಕೆ ಕಾರಣ ಆಗುವ ಅಂಶ ಏನೆಂದರೆ, ಯಾವುದೂ ಸುಮ್ಮನೆ ಸಿಗುವುದಿಲ್ಲ, ಅದಕ್ಕೊಂದು ಬೆಲೆ ತೆರಲೇಬೇಕಾಗುತ್ತದೆ ಎಂಬುದು ಈ ದಿನ ನಿಮಗೆ ಗಮನಕ್ಕೆ ಬರಲಿದೆ. ಯಾರ ಬಳಿಯಾದರೂ ಸಹಾಯ ಕೇಳಬೇಕು ಎಂದು ನೀವು ಏನಾದರೂ ಅಂದುಕೊಂಡಲ್ಲಿ ಪ್ರತಿಫಲವಾಗಿ ನೀವು ಏನನ್ನು ನೀಡಬೇಕಾಗುತ್ತದೆ ಎಂಬುದರ ಬಗ್ಗೆ ಗಮನವಿದ್ದರೆ ಒಳ್ಳೆಯದು. ನಿಮಗೆ ಹಳೇ ಸ್ನೇಹಿತರು ಎಂದು ಸಿಕ್ಕಂಥವರು ಯಾಕಾದರೂ ಕಂಡರೋ ಎಂದು ನೀವು ಆಲೋಚನೆ ಮಾಡುವ ಮಟ್ಟಕ್ಕೆ ಬೇಸರ ತರಿಸಲಿದ್ದಾರೆ. ಅತಿ ಉತ್ಸಾಹದಿಂದ ಕೆಲವು ಜವಾಬ್ದಾರಿಗಳನ್ನು ನೀವಾಗಿಯೇ ಮೈಮೇಲೆ ಎಳೆದುಕೊಂಡು, ಆ ನಂತರ ಪರಿತಪಿಸುವಂತಾಗುತ್ತದೆ. ನೀವು ಎಷ್ಟೇ ನಿಯಂತ್ರಣ ಮಾಡಬೇಕು ಎಂದುಕೊಂಡರೂ ಕೈ ಮೀರಿ ಖರ್ಚಾಗಲಿದೆ, ಎಚ್ಚರಿಕೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ತಂದೆ- ತಾಯಿಯ ಆರ್ಥಿಕ ಸ್ಥಿತಿಯು ನಿಮಗೆ ಒತ್ತಡವನ್ನು ತರುತ್ತದೆ. ಸ್ವಲ್ಪ ಸಮಯದ ಮಟ್ಟಿಗೆ ಮಾತ್ರ ಹಣ ನೀಡುವಂತೆ ಕೇಳಿ ಪಡೆದುಕೊಂಡಿದ್ದವರು ಅದನ್ನು ವಾಪಸ್ ಮಾಡದಿರುವುದು ನಿಮ್ಮನ್ನು ಚಿಂತೆಗೆ ದೂಡುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಥವಾ ಸಾಲ ಮರುಪಾವತಿ ವಿಚಾರಗಳು ನಿಮ್ಮಲ್ಲಿ ಆತಂಕವನ್ನು ಉಂಟು ಮಾಡಲಿವೆ. ನಿಮ್ಮ ಅಗತ್ಯಗಳಿಗೆ ಹಣವನ್ನು ಹೊಂದಿಸುವುದು ಕಷ್ಟ ಆಗಬಹುದು. ನೀವು ಬಹಳ ನಂಬಿಕೆ ಇಟ್ಟಿದ್ದ ವ್ಯಕ್ತಿಯು ನಿಮ್ಮಿಂದ ದೂರವಾಗುವಂಥ ಸಾಧ್ಯತೆಗಳಿವೆ. ಅಂತರಂಗದ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರುವುದು ಕ್ಷೇಮ. ಹಳೇ ನೋವು ಅಥವಾ ದೈಹಿಕ ಬಾಧೆಗಳು ಮರುಕಳಿಸಿ, ಚಿಂತೆಗೆ ಕಾರಣ ಆಗಬಹುದು. ನಿಮ್ಮ ಮನೆಯ ಹತ್ತಿರದ ದುರ್ಗಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವುದು ಉತ್ತಮ. ಕನಿಷ್ಠ ಪಕ್ಷ ನಿಮ್ಮ ಮೊಬೈಲ್ ಫೋನ್ ಸ್ಕ್ರೀನ್ ಸೇವರ್ ಆಗಿಯಾದರೂ ದುರ್ಗಾದೇವಿಯ ಚಿತ್ರವನ್ನು ಹಾಕಿಕೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಕೌಟುಂಬಿಕ ವಿಚಾರಗಳು ಆದ್ಯತೆ ಪಡೆದುಕೊಳ್ಳುತ್ತವೆ. ನಿಮ್ಮಿಂದ ಏನು ಮಾಡುವುದಕ್ಕೆ ಸಾಧ್ಯ ಎಂಬುದನ್ನು ಈಗಿಂದೀಗಲೇ ಹೇಳಬೇಕು ಎಂದು ಹೇಳುವುದಕ್ಕೆ ಶುರು ಮಾಡುತ್ತಾರೆ. ಕೆಲವು ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಕ್ಕೆ ಮಾನಸಿಕವಾಗಿ ಸಿದ್ಧರಿರುವುದಿಲ್ಲ. ಆ ಒತ್ತಡದ ಕಾರಣಕ್ಕೆ ಕೆಲವು ಮುಖ್ಯ ಸಂಗತಿಗಳನ್ನು ಮರೆಯುವಂಥ ಸಾಧ್ಯತೆಗಳಿವೆ. ಯಾವುದೋ ಒಂದು ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡುವ ಪ್ರಯತ್ನದಲ್ಲಿ ಕೆಲವು ಡೆಡ್ ಲೈನ್ ಗಳನ್ನು ಮೀರುವಂಥ ಸಾಧ್ಯತೆಗಳಿವೆ. ಹೆಣ್ಣುಮಕ್ಕಳ ಜತೆಗೆ ಹೆಚ್ಚು ಸಲುಗೆಯಿಂದ ವರ್ತಿಸದಿರುವುದು ಉತ್ತಮ. ಬೆಳ್ಳಿ ಅಥವಾ ಬಂಗಾರದಲ್ಲಿ ಹೂಡಿಕೆ ಮಾಡುವಂಥ ವ್ಯವಹಾರದವರು ಇದ್ದಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಲಾಭವಾಗುವ ಅವಕಾಶಗಳಿವೆ. ಅದನ್ನು ಬೇರೆಡೆ ಹೂಡಿಕೆ ಮಾಡುವುದಕ್ಕೆ ಆತುರ ಮಾಡಬೇಡಿ. ಇನ್ನು ದೂರ ಪ್ರಯಾಣ ಮಾಡಬೇಕು ಎಂದು ಆಲೋಚಿಸುತ್ತಿರುವವರು ಸರಿಯಾದ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಗಮನ ಕೊಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ದೊಡ್ಡ ಮಟ್ಟದ ಅಥವಾ ತುಂಬ ಹೆಸರು ತಂದುಕೊಂಡುವಂಥ ಕೆಲವು ಪ್ರಶಸ್ತಿ- ಸಮ್ಮಾನಗಳು ನಿಮಗೆ ಬರುವ ಬಗ್ಗೆ ಸೂಚನೆ ದೊರೆಯಲಿದೆ. ಈ ಹಿಂದೆ ಮಾಡಿದ್ದ ಹೂಡಿಕೆಗಳು ಅತ್ಯುತ್ತಮ ರಿಟರ್ನ್ ನೀಡುತ್ತವೆ. ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿದವರು, ಚಿನ್ನದಲ್ಲಿ ಹಣ ಹೂಡಿದ್ದವರು ಅದನ್ನು ವಾಪಸ್ ಪಡೆಯುವ ತೀರ್ಮಾನ ಮಾಡುತ್ತೀರಿ. ಪರಿಸರ ಪ್ರೇಮಿಗಳು, ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರು, ಪ್ರಾಣಿ ದಯಾ ಸಂಘಗಳಲ್ಲಿ ಇರುವಂಥವರಿಗೆ ಪ್ರಮುಖವಾದ ದಿನ ಇದಾಗಿರುತ್ತದೆ. ಅದೆಷ್ಟೇ ಸಣ್ಣ ಕೆಲಸ ಅಂತಾದರೂ ಹೆಚ್ಚಿನ ಗಮನ ಇಟ್ಟು, ಮಾಡುವುದಕ್ಕೆ ಪ್ರಯತ್ನಿಸಿ. ಇತರರ ಪ್ರಭಾವಕ್ಕೆ ನೀವು ಒಳಗಾಗುವ ಸಾಧ್ಯತೆಗಳಿವೆ, ಯಾರನ್ನು ನೀವು ಅನುಸರಿಸುತ್ತಿದ್ದೀರಿ ಎಂಬ ಕಡೆಗೆ ಲಕ್ಷ್ಯ ಇರಲಿ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಲ್ಲಿ ನಿಮ್ಮಿಂದ ಸಾಧ್ಯವಾ ಎಂಬ ಬಗ್ಗೆ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿದ ನಂತರವಷ್ಟೇ ಒಪ್ಪಿಕೊಳ್ಳಿ. ಪ್ರೀತಿಪಾತ್ರರ ಯಶಸ್ಸಿನಿಂದ ಮನಸ್ಸಿಗೆ ಸಮಾಧಾನ, ಸಂತೋಷ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮನೆ, ಸೈಟು, ಜಮೀನು ಅಥವಾ ವಾಹನ ಖರೀದಿ ಹೀಗೆ ಒಂದಿಲ್ಲೊಂದು ವಿಚಾರದಲ್ಲಿ ಹಿಂದಡಿ ಇಡುವಂತೆ ಆಗುತ್ತದೆ. ಮುಖ್ಯವಾಗಿ ನಿಮ್ಮ ಬಳಿ ಇರುವ ಬಜೆಟ್ ಗೂ ನಿಮಗೆ ಬೇಕಾಗಿರುವುದಕ್ಕೂ ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ ಕೆಲವು ತೀರ್ಮಾನಗಳನ್ನು ಮಾಡುವುದಕ್ಕೆ ನಿಮ್ಮ ಮನಸ್ಸಲ್ಲಿ ಆತಂಕ ಕಾಡಬಹುದು. ಆದರೆ ಮನಸ್ಸಿನಲ್ಲಿ ನಿಮ್ಮ ಇಷ್ಟದೇವರನ್ನು ನೆನಪಿಸಿಕೊಂಡು, ತೀರ್ಮಾನವನ್ನು ತೆಗೆದುಕೊಳ್ಳಿ. ಇನ್ನು ಕುಟುಂಬದಲ್ಲಿ ಸಣ್ಣ- ಪುಟ್ಟ ಮನಸ್ತಾಪಗಳು ಕೂಡ ನಿಮಗೆ ದೊಡ್ಡ ಮಟ್ಟದಲ್ಲಿ ಚಿಂತೆಗೆ ಗುರಿ ಮಾಡುತ್ತವೆ. ಉದ್ಯಮ- ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಹೊಸದಾಗಿ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡು, ಹೆಚ್ಚಿನ ಹೂಡಿಕೆ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಈ ದಿನ ಅಸಹಾಯಕರು, ಅಶಕ್ತರಿಗೆ ಊಟ ಕೊಡಿಸುವುದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ರಾತ್ರಿ ಪ್ರಯಾಣ ಮಾಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ಮುಂದೂಡಿ. ಸಿಹಿ ಪದಾರ್ಥಗಳ ಸೇವನೆಯಿಂದ ದೂರ ಇರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಅರ್ಹತೆ, ತಾಕತ್ತನ್ನೂ ಮೀರಿದಂಥ ಕೆಲಸ- ಜವಾಬ್ದಾರಿಗಳು ಅಥವಾ ಹುದ್ದೆಗಳು ಹುಡುಕಿಕೊಂಡು ಬರುವಂಥ ಸಾಧ್ಯತೆಗಳಿವೆ. ಮೇಲುನೋಟಕ್ಕೆ ಅದು ಬಹಳ ಆಕರ್ಷಣೀಯವಾಗಿಯೂ ಇರುತ್ತದೆ. ಇದರಿಂದ ನಿಮ್ಮ ಬಹಳ ಸಮಸ್ಯೆಗಳು ನಿವಾರಣೆ ಸಹ ಆಗುತ್ತದೆ ಎಂದು ನಿಮಗೆ ಅನಿಸಿಯೂ ಬಿಡುತ್ತದೆ. ಆದರೆ ನಿಮಗೆ ಗೊತ್ತಿರಬೇಕಾದ ಸಂಗತಿ ಏನೆಂದರೆ ಹಣದ ಅಥವಾ ಹುದ್ದೆಯ ಕಾರಣಕ್ಕೆ ಅದನ್ನು ಒಪ್ಪಿಕೊಂಡಲ್ಲಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಂತೆ ಆಗುತ್ತದೆ. ವೈಯಕ್ತಿಕವಾಗಿ ನಿಮಗೆ ಅತ್ಯುತ್ತಮ ಎನಿಸಿದ ಆಯ್ಕೆಗಳನ್ನು ಈ ಸಮಯದಲ್ಲಿ ಬಿಡಬೇಕಾಗುತ್ತದೆ. ಇನ್ನು ಮದುವೆ ವಿಚಾರದಲ್ಲಿ ಬರುವ ಅವಕಾಶಗಳು ಆಕರ್ಷಕ ಅಂತೆನಿಸಿದರೂ ಭವಿಷ್ಯ ಹಾಗೂ ಕುಟುಂಬ ನಿಭಾಯಿಸುವ ಸಾಮರ್ಥ್ಯ ಎರಡರ ಬಗ್ಗೆಯೂ ಆಲೋಚನೆಯನ್ನು ಮಾಡಿ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ. ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಒತ್ತಡದ ಸನ್ನಿವೇಶ ಸೃಷ್ಟಿ ಆಗಲಿದೆ. ಹಣಕಾಸಿನ ವಿಚಾರ ಅಂತ ಬಂದಲ್ಲಿ ದಿಢೀರ್ ನಿರ್ಧಾರ ಬೇಡ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಮಾನಸಿಕ ತೊಳಲಾಟಗಳು ಆದಾಯಕ್ಕೋ ಅಥವಾ ಸ್ನೇಹ- ಸಂಬಂಧಕ್ಕೋ ಧಕ್ಕೆ ಮಾಡದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಗೌರವ ನೀಡುತ್ತಿಲ್ಲ ಎಂಬ ಕಾರಣಕ್ಕೋ ಅಥವಾ ಇವತ್ತಿಗೆ ನೀಡಬೇಕಾದ ಮೊತ್ತವನ್ನು ಕೊಡುತ್ತಿಲ್ಲ ಎಂಬ ಕಾರಣದಿಂದಲೋ ನೀವು ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದಗಳಿಂದ ಹೊರಬರುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸ್ವಂತ ಕಚೇರಿಯನ್ನು ಆರಂಭಿಸುವ ಬಗ್ಗೆ ಸ್ನೇಹಿತರು- ಆಪ್ತರ ಜತೆಗೆ ಚರ್ಚೆ ನಡೆಸಲಿದ್ದೀರಿ. ಕೆಲಸದ ಒತ್ತಡದ ನಡುವೆ ಕುಟುಂಬದ ಅಗತ್ಯಗಳಿಗೆ ಸಮಯ ಮೀಸಲಿಡುವುದು ಸವಾಲಾಗಿ ಪರಿಣಮಿಸಲಿದೆ. ಒಂದೇ ಸಲಕ್ಕೆ ಹಲವು ಕೆಲಸಗಳನ್ನು ಮಾಡುವುದಕ್ಕೆ ಹೋಗದಿರಿ, ಇದರಿಂದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಲಿದೆ. ಬಡ್ಡಿ ವ್ಯವಹಾರವನ್ನು ಮಾಡುತ್ತಿರುವವರು ಒಂದಿಷ್ಟು ಮೊತ್ತವನ್ನು ವಾಪಸ್ ಪಡೆದು, ಸುರಕ್ಷಿತವಾದ ವಿಧಾನದಲ್ಲಿ ಉಳಿತಾಯ ಮಾಡುವುದು ಒಳಿತು ಎಂದೆನಿಸುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಂತೋಷ- ಸಮಾಧಾನ ಇರುವುದು ಬೇರೆಯದೇ ಸಂಗತಿಗಳಲ್ಲಿ ಎಂದು ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ನಿರೀಕ್ಷೆಯೇ ಮಾಡದ ರೀತಿಯಲ್ಲಿ ತುಂಬ ಹಳೆಯ ಸ್ನೇಹಿತರು ಅಥವಾ ಸ್ನೇಹಿತೆಯರು ಸಿಕ್ಕಿ, ಅವರೊಂದಿಗೆ ಆಪ್ತವಾದ ಸಮಯವನ್ನು ಕಳೆಯಲಿದ್ದೀರಿ. ಮೇಕಪ್ ಗಾಗಿ ಬಳಸುವಂಥ ಕ್ರೀಮ್, ಲೋಷನ್ ಇತ್ಯಾದಿಗಳ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಇಲ್ಲದಿದ್ದಲ್ಲಿ ಅಲರ್ಜಿ ಆಗುವಂಥ ಸಾಧ್ಯತೆಗಳಿವೆ. ಸಂಗಾತಿಯ ಕೆಲವು ಮಾತುಗಳು ಅಥವಾ ಧೋರಣೆಯಿಂದ ಮನಸ್ಸಿಗೆ ಬೇಸರ ಎನಿಸುತ್ತದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಇತರ ಸಂಸ್ಥೆಗಳಿಂದ ಉದ್ಯೋಗಾವಕಾಶ ಹುಡುಕಿಕೊಂಡು ಬರಲಿದೆ. ಪ್ರೀತಿ- ಪ್ರೇಮ ವಿಚಾರಗಳಿಗೆ ಇಂದು ಹೆಚ್ಚಿನ ಆದ್ಯತೆ ನೀಡಲಿದ್ದೀರಿ. ಕೆಲವು ಕೆಲಸಗಳನ್ನು ಮೊದಲಿನಿಂದ ಆರಂಭಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಲಕ್ಷ್ಮೀನಾರಾಯಣರನ್ನು ಮನಸ್ಸಿನಲ್ಲಿ ನೆನೆದು, ನಾಮಸ್ಮರಣೆಯನ್ನು ಮಾಡಿದರೆ ಉತ್ತಮ.

ಲೇಖನ- ಎನ್‌.ಕೆ.ಸ್ವಾತಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ