
ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮಲ್ಲಿ ಇರುವಂಥ ನಾಯಕತ್ವದ ಗುಣಗಳು ಇತರರಿಗೂ ಅನುಭವಕ್ಕೆ ಬರುವಂಥ ದಿನ ಇದಾಗಿರುತ್ತದೆ. ಉದ್ಯೋಗಸ್ಥರಾಗಿದ್ದಲ್ಲಿ ನೀವು ಕೆಲಸ ಮಾಡುವ ಸ್ಥಳ- ಕಚೇರಿಯಲ್ಲಿ ನಿಮ್ಮ ನಿರ್ಧಾರಗಳು ಮತ್ತು ಸಲಹೆಗಳಿಗೆ ಮನ್ನಣೆ ಸಿಗಲಿದೆ. ಹೊಸ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗಲಿದ್ದು, ಆರ್ಥಿಕವಾಗಿಯೂ ಸದೃಢರಾಗುವಿರಿ. ದೀರ್ಘಕಾಲದ ಸಾಲವೊಂದು ತೀರಿಸುವ ಸಾಧ್ಯತೆ ಇದೆ.
ಕೌಟುಂಬಿಕ ವಿಚಾರಗಳಲ್ಲಿ ನಡೆಯುವಂಥ ಮಾತುಕತೆಗಳಲ್ಲಿ ನೀವೇ ಮುಂದೆ ನಿಂತು ಸಮಸ್ಯೆಗಳನ್ನು ಬಗೆಹರಿಸುವಿರಿ. ಇನ್ನು ನಿಮ್ಮ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೆ ನೆನಪಲ್ಲಿ ಇರಬೇಕಾದದ್ದು ಏನೆಂದರೆ, ನಿಮ್ಮ ಆತ್ಮವಿಶ್ವಾಸ ಕೆಲವೊಮ್ಮೆ ಅಹಂಕಾರದಂತೆ ಅಥವಾ ಇತರರ ಮೇಲಿನ ಅತಿಯಾದ ನಿಯಂತ್ರಣದಂತೆ ಕಾಣಿಸಬಹುದು. ಬೇರೆಯವರ ಅಭಿಪ್ರಾಯಗಳನ್ನು ಸಹ ಮುಕ್ತ ಮನಸ್ಸಿನಿಂದ ಆಲಿಸಿ.
ಒಂದು ವಿಚಾರಕ್ಕೆ ಅದು ಆಗಲೇಬೇಕು ಎಂದು ವಿಪರೀತ ಪಟ್ಟು ಹಿಡಿದು ಕೂರುವುದು ಒಳ್ಳೆಯದಲ್ಲ. ಉದ್ಯೋಗ ಸ್ಥಳದಲ್ಲಿ ನೀವು ತರುವುದಕ್ಕೆ ಬಯಸಿದಂಥ ಬದಲಾವಣೆಗಳನ್ನು ಜಾರಿಗೆ ಸಾಧ್ಯವಾಗದೇ ಹೋಗಬಹುದು. ಇದರಿಂದಾಗಿ ಮನಸ್ಸಿಗೆ ಬೇಸರ ಆಗಲಿದೆ. ಹಳೇ ಸಾಲದ ವಸೂಲಿ ಮಾಡಬೇಕು ಎಂದಿದ್ದಲ್ಲಿ ಈ ದಿನ ಪ್ರಯತ್ನಿಸಿ.
ಲೇಖನ- ಸ್ವಾತಿ ಎನ್.ಕೆ.