ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 24ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಪುಷ್ಕಳವಾದ, ರುಚಿಕಟ್ಟಾದ ಊಟ- ತಿಂಡಿಗಳನ್ನು ಸವಿಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ಸ್ನೇಹಿತರು ಪಾರ್ಟಿಗಳಿಗೆ ಅಥವಾ ಗೆಟ್ ಟು ಗೆಸರ್ ಗಳಿಗೆ ನಿಮ್ಮನ್ನು ಆಹ್ವಾನಿಸುವಂಥ ಯೋಗ ಇದೆ. ಮನೆ, ಜಮೀನು ಅಥವಾ ಸೈಟುಗಳ ದಲ್ಲಾಳಿ ಆದಂಥವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವಂಥ ಅವಕಾಶಗಳಿವೆ. ಬ್ರ್ಯಾಂಡೆಡ್ ವಾಚ್, ಶೂ, ಗ್ಯಾಜೆಟ್ ಮೊದಲಾದವುಗಳನ್ನು ಗಿಫ್ಟ್ ಆಗಿ ಪಡೆಯುವಂಥ ಯೋಗಗಳಿವೆ. ಈ ಹಿಂದೆ ನೀವೇ ಕೆಲಸ ಮಾಡಿದ ಸ್ಥಳದಿಂದ ಮತ್ತೆ ಕೆಲಸಕ್ಕೆ ಸೇರುವಂತೆ ಆಹ್ವಾನ ಬರಲಿದೆ. ನಿಮ್ಮ ನೇರವಂತಿಕೆ ಹಾಗೂ ಪ್ರಾಮಾಣಿಕತೆಗೆ ಬೆಲೆ ನೀಡುವಂತೆ ಉದ್ಯೋಗ ನೀಡಿದಂಥವರು ನಿಮ್ಮ ಜತೆಗೆ ನಡೆಸುಕೊಳ್ಳಲಿದ್ದಾರೆ.
ಸಂಗೀತಗಾರರು, ಬ್ಯಾಂಕ್ ಗಳಲ್ಲಿ ಕೆಲಸ ಮಾಡುವಂಥವರು, ಮ್ಯಾಜಿಕ್ ಮಾಡುವಂಥವರು ಮತ್ತು ಅದನ್ನೇ ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಸಿಹಿ ಪದಾರ್ಥಗಳು, ಅದರಲ್ಲೂ ನಿಮಗೆ ಬಹಳ ಇಷ್ಟವಾದದ್ದನ್ನು ತಿನ್ನುವಂಥ ವೇಳೆ ಒಂದಿಷ್ಟು ಹತೋಟಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಕೃಷಿಯನ್ನೇ ತಮ್ಮ ವೃತ್ತಿಯಾಗಿ ಮಾಡಿಕೊಂಡವರು ಜಮೀನಿನಲ್ಲಿ ಕೆಲವು ಕೆಲಸಗಳನ್ನು ಮಾಡಿಸುವ ನಿಟ್ಟಿನಲ್ಲಿ ಮಾತುಕತೆ ಆಡಲಿದ್ದೀರಿ. ಒಂದು ವೇಳೆ ಯಾವುದೇ ಕೆಲಸವನ್ನು ತಕ್ಷಣಕ್ಕೆ ಮಾಡಿಸುವುದು ಬೇಡ ಎಂದೆನಿಸಿದ್ದಲ್ಲಿ ಸ್ವಲ್ಪ ಸಮಯ ಮುಂದಕ್ಕೆ ಹಾಕುವುದು ಉತ್ತಮ ಎನಿಸಿಕೊಳ್ಳುತ್ತದೆ.
ಸಂಗಾತಿ ಅಥವಾ ಪ್ರೀತಿಪಾತ್ರರ ಅನಾರೋಗ್ಯ ಸಮಸ್ಯೆಗಳು ಮನಸ್ಸಿಗೆ ಆತಂಕವನ್ನು ಉಂಟು ಮಾಡಲಿದೆ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಗಳು ಮತ್ತು ಆಡಿದ ಮಾತುಗಳ ಬಗ್ಗೆ ಬೇಸರ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ನಿಮ್ಮ ಮಾತಿಗೆ ಮೊದಲಿನಂತೆ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಕೆಲವು ಸ್ನೇಹಿತರ ಸ್ವಭಾವದಿಂದ ಗಮನಕ್ಕೆ ಬರಲಿದೆ. ಸೆಕೆಂಡ್ ಹ್ಯಾಂಡ್ ಕಾರು ಅಥವಾ ಬೈಕ್ ಖರೀದಿ ಮಾಡಬೇಕು ಅಥವಾ ಈ ದಿನ ನೋಡಿಕೊಂಡು ಬರಬೇಕು ಎಂದಿದ್ದಲ್ಲಿ ಸಾಧ್ಯವಾದರೆ ಬೇರೆ ದಿನಕ್ಕೆ ಹಾಕಿಕೊಳ್ಳಿ. ಏಕೆಂದರೆ ಸಮಾಧಾನವಾಗಿ, ಸಮಚಿತ್ತದಿಂದ ಏನನ್ನೂ ಮಾಡುವ ಸನ್ನಿವೇಶ ಈ ದಿನ ಇರುವುದಿಲ್ಲ. ನಿಮ್ಮಿಂದ ತಪ್ಪು ನಿರ್ಧಾರಗಳು ಆಗುವ ಸಾಧ್ಯತೆಗಳಿವೆ.
ಮಕ್ಕಳ ಆರೋಗ್ಯ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿವೆ. ದೇವತಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರಿವರು ಸಲಹೆ ನೀಡುತ್ತಾರೆ. ಒಂದೇ ವಿಷಯವನ್ನು ಹಲವರು ಹೇಳುವುದರಿಂದ ನಿಮಗೂ ಇದು ಏನೋ ಸಮಸ್ಯೆ ಇದ್ದಂತಿದೆ ಎಂದೆನಿಸಲಿದೆ. ತಾಯಿಯ ಕಡೆ ಸಂಬಂಧಿಕರು ಮನೆಗೆ ಬರಲಿದ್ದಾರೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಮುಖ್ಯವಾದ ಮಾತುಕತೆಗಳು ನಡೆಯಬಹುದು. ನಿಮ್ಮ ನಿರ್ಧಾರ ತುಂಬ ಮುಖ್ಯ, ಕಾಗದಗಳಿಗೆ ಸಹಿ ಹಾಕುವಂತೆ ಕೇಳಿದರೆ ತಕ್ಷಣಕ್ಕೆ ಏನನ್ನೂ ಮಾಡದೆ ಒಂದೆರಡು ದಿನಗಳ ಸಮಯವನ್ನು ಕೇಳುವುದು ಒಳ್ಳೆಯದು. ಮತ್ತು ಇಡಿಯಾಗಿ ಓದಿದ ನಂತರದಲ್ಲಿ ಅನುಭವಿಗಳು, ಹಿರಿಯರ ಮಾರ್ಗದರ್ಶನ, ಸಲಹೆ ಪಡೆದು, ತೀರ್ಮಾನವನ್ನು ಕೈಗೊಳ್ಳಿ.
ನಿಮ್ಮ ಎದುರು ನಿಂತು ಮಾತನಾಡುವುದಕ್ಕೆ ಸಹ ಅಂಜುತ್ತಿದ್ದವರು ಈ ದಿನ ಟೀಕೆ, ಆಕ್ಷೇಪ ಅಥವಾ ಆರೋಪಗಳನ್ನು ಮಾಡಬಹುದು. ನಿಮಗೆ ಮಾಹಿತಿ ಇಲ್ಲದ ಅಥವಾ ನಿಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡು, ಬೇರೆಯವರು ಮಾಡಿದ ಕೆಲಸಕ್ಕೆ ನಿಮಗೆ ಈ ರೀತಿಯ ಅನುಭವ ಆಗಲಿದೆ. ಅನಾರೋಗ್ಯದ ಕಾರಣಕ್ಕೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಾಗಲಿದೆ. ಇದಕ್ಕೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ವೆಚ್ಚ ಆಗಲಿದೆ. ಜತೆಗೆ ಇವೇ ಪರೀಕ್ಷೆಗಳನ್ನು ಇನ್ನೊಮ್ಮೆ ಮಾಡಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಆದ್ದರಿಂದ ವೈದ್ಯರು ಸೂಚಿಸಿದ ಕಡೆಯಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಎಲ್ಲಿ ಮತ್ತು ಯಾರಿಗೆ ಸ್ಪಷ್ಟತೆ ನೀಡಬೇಕಿದೆಯೋ ಅವರಿಗೆ ಸರಿಯಾದ ಉತ್ತರವನ್ನು ನೀಡಿ.
ನಿಂತು ಹೋಗಿದ್ದ ಕೆಲಸ- ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಅಷ್ಟೇ ಅಲ್ಲ, ವೇಗ ಕೂಡ ಸಿಗಲಿದೆ. ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಕೆಲವರು ನಿಮಗೆ ಬೆಂಬಲ ನೀಡಲಿದ್ದಾರೆ. ಸೈಟು- ಕೃಷಿ ಜಮೀನು ಖರೀದಿ ಮಾಡುವುದಕ್ಕೆ ಪ್ರಯತ್ನವನ್ನು ಮಾಡುತ್ತಿದ್ದಲ್ಲಿ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಈ ದಿನ ನಿಮ್ಮ ಕಿವಿಗಳನ್ನು ತೆರೆದಿರಿ, ಸಾಧ್ಯವಾದಷ್ಟೂ ಕಡಿಮೆ ಮಾತನಾಡಿದರೆ ಉತ್ತಮ. ಏಕೆಂದರೆ ನಿಮ್ಮ ಕಿವಿಗೆ ಬೀಳುವ ಮಾತುಗಳಿಂದ ಅವಕಾಶಗಳು ತೆರೆದುಕೊಳ್ಳುತ್ತವೆ. ಮನೆಗೆ ವಾಷಿಂಗ್ ಮಶೀನ್, ಫ್ರಿಜ್ ಇಂಥ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ, ತರುವಂಥ ಯೋಗ ಇದೆ.
ಹೂಡಿಕೆ ವಿಚಾರವಾಗಿ ಕುಟುಂಬದವರ ಜತೆಗೆ ಗಂಭೀರವಾದ ಚರ್ಚೆ ನಡೆಸಲಿದ್ದೀರಿ. ಈ ಹಿಂದೆ ಯಾವಾಗಲೋ ನೋಡಿಕೊಂಡು ಬಂದಿದ್ದ ಸ್ಥಳದ ಖರೀದಿಗೆ ಈ ದಿನ ಇನ್ನೊಮ್ಮೆ ಅವಕಾಶ ತೆರೆದುಕೊಳ್ಳಲಿದೆ. ನಿಮ್ಮ ಆಪ್ತರು ಎನಿಸಿಕೊಂಡವರು ತಮ್ಮ ಮೇಲೆ ಬಂದ ನಿಂದೆ ಅಥವಾ ಆರೋಪವನ್ನು ನಿಮ್ಮ ಕಡೆಗೆ ತಿರುಗಿಸುವಂಥ ಸಾಧ್ಯತೆಗಳಿವೆ. ಫೋನ್ ರೆಕಾರ್ಡಿಂಗ್ ಅಥವಾ ನಿಮ್ಮದೇ ವಿಡಿಯೋ ಇಂಥದ್ದನ್ನು ಬಳಸಿಕೊಂಡು, ಕೆಲವರು ಪಿತೂರಿ ಮಾಡಬಹುದು. ಮುಕ್ತ ಮನಸ್ಸಿನಿಂದ ಇದ್ದಲ್ಲಿ ಸಮಸ್ಯೆಯಿಂದ ಹೊರಬರುವಂಥ ಮಾರ್ಗ ಗೋಚರ ಆಗಲಿದೆ. ಸುಖಾಸುಮ್ಮನೆ ಗಾಬರಿ ಆಗಬೇಡಿ. ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ.
ನಾನೇ ಮಾಡಿದ್ದು, ನಾನೇ ತಂದಿದ್ದು, ಈ ದಿನ ನೀವು ಇಷ್ಟು ಉತ್ತಮ ಸ್ಥಿತಿಯಲ್ಲಿ ಇರುವುದಕ್ಕೆ ನಾನೇ ಕಾರಣ- ಇಂಥ ಮಾತುಗಳನ್ನು ಆಡಬೇಡಿ. ಎಲ್ಲೋ ತಮಾಷೆಗೆ ಎಂದು ಆರಂಭವಾಗಿದ್ದ ಮಾತುಕತೆ ವಿಕೋಪಕ್ಕೆ ಹೋಗುವ ಎಲ್ಲ ಸಾಧ್ಯತೆಗಳಿವೆ. ಸಂಬಂಧಿಕರು, ಸ್ನೇಹಿತರ ಮನೆಗೆ ಹೋಗುವಂತಿದ್ದರೆ ಹಣಕಾಸು ಅಥವಾ ಬೆಲೆಬಾಳುವ ವಸ್ತುಗಳನ್ನು ಇಡುವ ಕಡೆಗಳಲ್ಲಿ ಓಡಾಟ ನಡೆಸದಿರಿ. ಅಥವಾ ಅವರಾಗಿಯೇ ಅಂಥ ಬೆಲೆಬಾಳುವ ವಸ್ತುಗಳು, ಹಣಕಾಸಿನ ಜವಾಬ್ದಾರಿಯನ್ನು ನೀಡುವುದಕ್ಕೆ ಮುಂದಾದಲ್ಲಿ ನಯವಾಗಿಯೇ ತಿರಸ್ಕರಿಸುವುದು ಎಲ್ಲ ರೀತಿಯಲ್ಲೂ ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ವಿರುದ್ಧ ಆರೋಪಗಳು ಬರಲಿವೆ.
ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಹೇಳಿದ್ದೇ ಹೇಳಿ ಎದುರಿನಲ್ಲಿ ಇರುವವರಿಗೆ ನಿಮ್ಮ ಮೇಲೆ ಗೌರವ ಕಡಿಮೆ ಆಗುವಂತೆ ಮಾಡಿಕೊಳ್ಳಲಿದ್ದೀರಿ. ಒಳ್ಳೆ ಮೊತ್ತವೇ ನೀಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು, ಮಾಡಿದ ಕೆಲಸ ಅಥವಾ ಪ್ರಾಜೆಕ್ಟ್ ನಿಂದ ಬಹಳ ಕಡಿಮೆ ಹಣ ಸಿಗಬಹುದು ಅಥವಾ ಏನೇನೂ ಸಿಗದೆಯೇ ಹೋಗಬಹುದು. ಮನೆಯಿಂದ ಹೊರಗೆ ಊಟ- ತಿಂಡಿ ಮಾಡುವಂಥವರು ಸ್ವಚ್ಛತೆ ಬಗ್ಗೆ ಜಾಸ್ತಿ ಗಮನ ನೀಡಿ. ಸ್ನೇಹಿತರು ಅಥವಾ ಸಂಬಂಧಿಕರ ಒತ್ತಡಕ್ಕೆ ಮಣಿದು, ಮನೆಯ ಹೊರಗಿನ, ಅಂದರೆ ಹೋಟೆಲ್, ರೆಸ್ಟೋರೆಂಟ್ ಅಥವಾ ಮೆಸ್ ನಲ್ಲಿ ಊಟ ಮಾಡಿದಿರೋ ಆರೋಗ್ಯ ಕೈ ಕೊಡುವ ಎಲ್ಲ ಸಾಧ್ಯತೆಗಳಿವೆ.
ಲೇಖನ- ಎನ್.ಕೆ.ಸ್ವಾತಿ