AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 9ರ ದಿನಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 9ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 9ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ Image Credit source: the-sun.com
TV9 Web
| Edited By: |

Updated on: Feb 09, 2023 | 5:03 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 9ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಶುಭ ಸಮಾರಂಭಗಳಿಗೆ ಅಥವಾ ಪಾರ್ಟಿಗಳಿಗೆ ಆಹ್ವಾನ ಬರಲಿದೆ. ಉನ್ನತ ವ್ಯಾಸಂಗ ಅಥವಾ ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲ ಒದಗಿ ಬರಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಹೊಸ ಯಂತ್ರೋಪಕರಣ ಅಥವಾ ಪೀಠೋಪಕರಣಗಳನ್ನು ಖರೀದಿಸುವ ಯೋಗ ಇದು. ದೇವರ ಆರಾಧನೆ, ಉತ್ಸವಗಳಿಗೆ ದೇಣಿಗೆಯನ್ನು ನೀಡುವುದಕ್ಕೆ ಮನಸ್ಸು ಮಾಡಲಿದ್ದೀರಿ. ಬಾಡಿಗೆ ಮನೆಯಲ್ಲಿ ಇದ್ದು, ಅದನ್ನು ಬದಲಾಯಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಲ್ಲಿ ನಿಮ್ಮ ಮನಸ್ಸಿಗೆ ನೆಚ್ಚುವಂಥ ಮನೆ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಉದ್ಯೋಗ ಸ್ಥಳದಲ್ಲಿ ನಾನಾ ಬಗೆಯ ಒತ್ತಡದ ಸನ್ನಿವೇಶಗಳನ್ನು ಎದುರಿಸಲಿದ್ದೀರಿ. ಮೇಲಧಿಕಾರಿಗಳ ಜತೆಗೆ ಕೆಲವು ವಿಚಾರಗಳಲ್ಲಿ ಅಭಿಪ್ರಾಯ ಭೇದಗಳು ಸೃಷ್ಟಿ ಆಗಲಿವೆ. ಕೃಷಿ ಚಟುವಟಿಕೆ, ಹೈನುಗಾರಿಕೆ, ಪಶು ಸಾಕಣೆಯಂಥದ್ದನ್ನು ಮಾಡುತ್ತಿರುವವರಿಗೆ ಆದಾಯ ಹೆಚ್ಚಳ ಮಾಡಿಕೊಳ್ಳುವಂಥ ಅವಕಾಶಗಳು ದೊರೆಯಲಿವೆ. ಇತರರ ಸಲುವಾಗಿ ನೀವು ಹಣ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಇತರರು ಅವರಾಗಿಯೇ ಕೇಳುವ ತನಕ ಸುಖಾಸುಮ್ಮನೆ ಸಲಹೆಗಳನ್ನು ನೀಡುವುದಕ್ಕೆ ಹೋಗದಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ದಿನ ನಿಮಗೆ ದೃಷ್ಟಿ ದೋಷಗಳು ತಗುಲುವ ಸಾಧ್ಯತೆ ಇದೆ. ಇನ್ನು ಹೊಟ‌್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಅಜೀರ್ಣ, ಹೊಟ್ಟೆಯುಬ್ಬರ, ಪಿತ್ತ ವಿಕಾರಗಳು ನಿಮ್ಮನ್ನು ಕಾಡಬಹುದು. ದೂರ ಪ್ರಯಾಣಗಳನ್ನು ಮಾಡುತ್ತಿರುವವರು ನಿಮ್ಮ ಬಳಿ ಇರುವ ವಸ್ತುಗಳನ್ನು ಒಂದಕ್ಕೆ ನಾಲ್ಕು ಬಾರಿಗೆ ಪರಿಶೀಲಿಸಿಕೊಳ್ಳಿ. ಯಾವುದಾದರೂ ಹೊಸ ಕೆಲಸ ಬಂದರೆ ಅದನ್ನು ನಿಗದಿತ ಸಮಯದಲ್ಲಿ ಪೂರ್ತಿ ಮಾಡುವುದಕ್ಕೆ ಸಾಧ್ಯವಿದ್ದಲ್ಲಿ ಮಾತ್ರ ಒಪ್ಪಿಕೊಳ್ಳಿ. ಇಲ್ಲದಿದ್ದಲ್ಲಿ ನಿಮ್ಮ ವರ್ಚಸ್ಸಿಗೆ ಹಾನಿ ಆಗಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಯಾವುದನ್ನೂ ಸಣ್ಣ- ಪುಟ್ಟ ಕೆಲಸಗಳು ಎಂದು ನಿರ್ಲಕ್ಷ್ಯ ಮಾಡದಿರಿ. ಮನೆ, ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ಸಿಗುವ ಅವಕಾಶಗಳು ಹೆಚ್ಚಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಮನೆಗೆ ಲ್ಯಾಪ್ ಟಾಪ್, ಗ್ಯಾಜೆಟ್, ಮೊಬೈಲ್ ಫೋನ್ ಅನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ. ರಾಜಕಾರಣದಲ್ಲಿ ಇರುವವರಿಗೆ ಬಹಳ ಹತ್ತಿರದವರು ಎಂದುಕೊಂಡಿರುವವರಿಂದಲೇ ವಿರೋಧಗಳು ಎದುರಾಗಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮಕ್ಕಳಿಗೆ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಅದರಲ್ಲೂ ಹೆಣ್ಣುಮಕ್ಕಳಿರುವವರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ವಿದ್ಯಾರ್ಥಿಗಳಿಗೆ ಆಟೋಟಗಳಲ್ಲಿ, ಪಠ್ಯೇತರ ಚಟುವಟಿಕೆಯಲ್ಲಿ ಒಳ್ಳಯ ಹೆಸರು ಬರಲಿದೆ. ನವ ವಿವಾಹಿತರಲ್ಲಿ ಸಣ್ಣ- ಪುಟ್ಟ ಮನಸ್ತಾಪಗಳು ಆಗಬಹುದು. ಬ್ಯೂಟಿಪಾರ್ಲರ್, ಸಲೂನ್, ಲಾಂಡ್ರಿ ನಡೆಸುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವ ಮಾರ್ಗಗಳು ಗೋಚರ ಆಗಲಿವೆ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡಬೇಕು ಎಂದಿರುವವರಿಗೆ ಕೊಳ್ಳುವ ಯೋಗ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಯೂಟ್ಯೂಬರ್ ಗಳು, ಸ್ವಂತ ವೆಬ್ ಸೈಟ್ ನಡೆಸುತ್ತಿರುವವರು, ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಇರುವವರಿಗೆ ವಿಸ್ತರಣೆಗೆ ಅವಕಾಶ ದೊರೆಯಲಿದೆ. ಇನ್ನು ವಕೀಲಿಕೆ ವೃತ್ತಿಯಲ್ಲಿ ಇರುವವರಿಗೆ ಸಾಮಾಜಿಕವಾಗಿ ಪ್ರಭಾ ವಲಯ ವಿಸ್ತರಣೆ ಆಗಲಿದೆ. ಆದರೆ ಮೂತ್ರ ಸೋಂಕು ಆಗುವ ಸಾಧ್ಯತೆ ಇದೆ. ಶುದ್ಧತೆ, ಸ್ವಚ್ಛತೆ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ನಿಮಗೆ ಸಂಬಂಧ ಇಲ್ಲದ ವಿಷಯಗಳಲ್ಲಿ ತಲೆ ಹಾಕಬೇಡಿ. ಅಂತರಂಗದ ವಿಚಾರಗಳನ್ನು ಹೊಸಬರೊಂದಿಗೆ ಹಂಚಿಕೊಳ್ಳದೇ ಇರುವುದು ಉತ್ತಮ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಕುಟುಂಬದವರಿಗೆ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಒಪ್ಪಿಕೊಂಡ ಕೆಲಸವನ್ನು ಡೆಡ್ ಲೈನ್ ಒಳಗೆ ಮುಗಿಸುವ ಕಡೆಗೆ ಲಕ್ಷ್ಯ ನೀಡಿ. ಖರ್ಚಿನ ಮೇಲೆ ಹೆಚ್ಚಿನ ನಿಗಾ ಇಡಿ. ಇನ್ನು ಭಾವನಾತ್ಮಕವಾಗಿ ನಿರ್ಧಾರವನ್ನು ಮಾಡುವ ವಿಚಾರಗಳನ್ನು ಸ್ವಲ್ಪ ಮಟ್ಟಿಗೆ ಮುಂದಕ್ಕೆ ಹಾಕುವುದು ಒಳಿತು. ಪ್ರೀತಿ – ಪ್ರೇಮ ವಿಚಾರಗಳನ್ನು ಹೇಳಿಕೊಳ್ಳುವ ಮುನ್ನ ಆ ನಂತರದ ಪರಿಣಾಮ ಏನು ಆಗಬಹುದು ಎಂಬುದನ್ನು ಆಲೋಚಿಸಿ, ಆ ನಂತರ ಹೇಳಿಕೊಳ್ಳಿ. ಧಾರ್ಮಿಕ ಚಿಂತನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕೇಳಿದ್ದೇ ಕೇಳಿ ಬಹಳ ಕಿರಿಕಿರಿ ಮಾಡುವಂಥವರು ಬಹಳ ಜನ ಈ ದಿನ ನಿಮಗೆ ಎದುರಾಗಲಿದ್ದಾರೆ. ಹಾಗಂತ ತಾಳ್ಮೆ ಕಳೆದುಕೊಳ್ಳಬೇಡಿ. ನಾಲ್ಕು ಜನರ ಎದುರು ಧ್ವನಿ ಎತ್ತರಿಸಿ ಮಾತನಾಡುವಂಥವರನ್ನು ಇತರರು ಎಂಥ ದೊಡ್ಡ ಬಾಯಿಯ ವ್ಯಕ್ತಿ ಎಂದು ತಮ್ಮ ಮೂಗಿನ ನೇರಕ್ಕೆ ಅಂದಾಜು ಮಾಡುತ್ತಾರೆ. ಆದ್ದರಿಂದ ನಿಮ್ಮ ಆಕ್ಷೇಪವನ್ನು ಆಯಾ ವ್ಯಕ್ತಿಗೆ ತಿಳಿಸಿ. ದೀರ್ಘ ಕಾಲದಿಂದ ಕಾನೂನು ವ್ಯಾಜ್ಯಗಳು ಇದ್ದಲ್ಲಿ ರಾಜಿ- ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ಬಜೆಟ್ ಲೆಕ್ಕಾಚಾರ ಮುಖ್ಯ ಆಗಲಿದೆ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದಿಂದ ಬಹಳ ಚಿಂತೆ ಮಾಡುವಂತಾಗುತ್ತದೆ. ಮಹಿಳೆಯರಿಗೆ ಕಾಲು- ಸೊಂಟದ ನೋವು ಕಾಡಲಿದೆ. ದೂರದ ಸ್ಥಳಗಳಿಗೆ ದ್ವಿಚಕ್ರ ವಾಹನ ಓಡಿಸುವಂಥವರು ಈ ದಿನ ಸಾಧ್ಯವಾದಷ್ಟೂ ಸಾರ್ವಜನಿಕ ಸಾರಿಗೆಯನ್ನು ಬಳಸಿ. ಒಂದು ವೇಳೆ ನೀವೇ ದ್ವಿಚಕ್ರ ವಾಹನ ಚಲಾಯಿಸುವುದು ಅಂತಾದರೆ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಇತರರ ವಸ್ತುಗಳಿಗೆ ಆಸೆ ಪಡಬೇಡಿ. ನಿಮ್ಮ ಶ್ರಮಕ್ಕೆ ಒಂದಲ್ಲಾ ಒಂದು ದಿನ ಫಲ ಸಿಕ್ಕೇಸಿಗುತ್ತದೆ.

ಲೇಖನ- ಎನ್‌.ಕೆ.ಸ್ವಾತಿ

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ