AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Yearly Horoscope 2024: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 3ರ 2024ನೇ ಇಸವಿ ವರ್ಷ ಭವಿಷ್ಯ

ಈ ಸಂಖ್ಯೆಯ ಜನರ ಅಧಿಪತಿ ಗುರು. ಇವರು ತಾವು ನಂಬಿದ ತತ್ವ- ಸಿದ್ಧಾಂತಗಳಿಂದ ವಿಮುಖರಾಗುವವರಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಕೆಲಸ ಮಾಡುವಂಥವರು, ಆಸಕ್ತಿ ಬೆಳೆಸಿಕೊಳ್ಳುವಂಥವರು ಇದೇ ಸಂಖ್ಯೆಯ ಜನ ಹೆಚ್ಚು. ಇವರು ಬಹಳ ಅಚ್ಚುಕಟ್ಟು. ಅಡಸಾ- ಬಡಸಾ ಅನ್ನುವ ಹಾಗೆ ಯಾವ ಕೆಲಸವನ್ನೂ ಮಾಡುವವರಲ್ಲ. ವಯಸ್ಸು ಮಾಗಿದಂತೆ ತಾವು ಹೆಚ್ಚೆಚ್ಚು ಕಲಿಕೆ ಮಾಡುತ್ತಾ ಸಾಗುತ್ತಾರೆ.

Numerology Yearly Horoscope 2024: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 3ರ 2024ನೇ ಇಸವಿ ವರ್ಷ ಭವಿಷ್ಯ
ಸ್ವಾತಿ ಎನ್​ಕೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 20, 2023 | 5:49 PM

Share

ಸಂಖ್ಯಾಶಾಸ್ತ್ರದ ಆಧಾರದಲ್ಲಿ 2024ನೇ ಇಸವಿಯ ವರ್ಷ ಭವಿಷ್ಯ ಇಲ್ಲಿದೆ. ಜನ್ಮ ಸಂಖ್ಯೆ 3 ಯಾರದು ಇರುತ್ತದೋ ಅಂಥವರ ವರ್ಷ ಭವಿಷ್ಯ ಇಲ್ಲಿದೆ. ಯಾರ ಜನ್ಮ ಸಂಖ್ಯೆ 3 ಎಂಬುದನ್ನು ತಿಳಿಯಬೇಕು ಅಂತಾದರೆ, ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3 ಎಂದಾಗುತ್ತದೆ. ಅಂಥವರಿಗೆ ವರ್ಷ ಭವಿಷ್ಯ, ಅಂದರೆ 2024ರ ಜನವರಿಯಿಂದ ಡಿಸೆಂಬರ್ ತನಕ ಹೇಗಿರುತ್ತದೆ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಜನ್ಮ ಸಂಖ್ಯೆ 3ರ ಗುಣ- ಸ್ವಭಾವ

ಈ ಸಂಖ್ಯೆಯ ಜನರ ಅಧಿಪತಿ ಗುರು. ಇವರು ತಾವು ನಂಬಿದ ತತ್ವ- ಸಿದ್ಧಾಂತಗಳಿಂದ ವಿಮುಖರಾಗುವವರಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಕೆಲಸ ಮಾಡುವಂಥವರು, ಆಸಕ್ತಿ ಬೆಳೆಸಿಕೊಳ್ಳುವಂಥವರು ಇದೇ ಸಂಖ್ಯೆಯ ಜನ ಹೆಚ್ಚು. ಇವರು ಬಹಳ ಅಚ್ಚುಕಟ್ಟು. ಅಡಸಾ- ಬಡಸಾ ಅನ್ನುವ ಹಾಗೆ ಯಾವ ಕೆಲಸವನ್ನೂ ಮಾಡುವವರಲ್ಲ. ವಯಸ್ಸು ಮಾಗಿದಂತೆ ತಾವು ಹೆಚ್ಚೆಚ್ಚು ಕಲಿಕೆ ಮಾಡುತ್ತಾ ಸಾಗುತ್ತಾರೆ. ತಮಗೆ ಬರುವ ಕೆಲಸವನ್ನು ಎಷ್ಟು ಒಪ್ಪ- ಓರಣವಾಗಿ ಮಾಡುತ್ತಾರೆಂದರೆ ಈ ರೀತಿ ಮತ್ತೊಬ್ಬರು ಆ ಕೆಲಸವನ್ನು ಮಾಡುವುದಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸಿಬಿಡಬೇಕು ಹಾಗಿರುತ್ತದೆ. ಜತೆಗೆ ಕೆಲಸ ಬೇಗ ಮುಗಿಸಬೇಕು, ಹೆಚ್ಚಿನ ಶ್ರಮ ಆಗಬಾರದು ಎಂದೆಲ್ಲ ಅಡ್ಡದಾರಿ ಹುಡುಕುವ ಜಾಯಮಾನದವರಲ್ಲ ಇವರು. ನಿಶ್ಚಿತವಾದ ಗುರಿ ನಿಗದಿ ಮಾಡಿಕೊಂಡು ಗೆರೆ ಕೊಯ್ದಂತೆ ಅದರತ್ತ ಸಾಗುತ್ತಾರೆ. ತುಂಬ ಓದಿಕೊಂಡವರು, ವಿಷಯತಜ್ಞರು, ಪರಿಣತರು ಇಂಥವರ ಸಹವಾಸವನ್ನು ಬಹಳ ಇಷ್ಟಪಡುತ್ತಾರೆ. ಆದರೆ ಎಲ್ಲದರಲ್ಲೂ ಗುಣಮಟ್ಟ, ಸೌಂದರ್ಯ, ಚಂದ ಎಂದು ನೋಡುತ್ತಾ ಸಾಗುವ ಇವರಿಗೆ ಇತರ ತಪ್ಪುಗಳ ವಿಚಾರದಲ್ಲಿ ಕರುಣೆ, ಅನುಕಂಪ ಕಡಿಮೆ. ಇವರು ತಮ್ಮ ದೇಹ ತೂಕದ ಬಗ್ಗೆ ಜಾಸ್ತಿ ಲಕ್ಷ್ಯ ನೀಡಬೇಕು. ಅದೇ ರೀತಿ ಬಾಯಿ ಚಪಲಕ್ಕೆ ಬಿದ್ದು ವಿಪರೀತ ತಿನ್ನುವ ರೂಢಿಯನ್ನು ಸಹ ಮಾಡಿಕೊಳ್ಳಬಾರದು.

ವರ್ಷ ಭವಿಷ್ಯ

ಈ ವರ್ಷದಲ್ಲಿ ನೀವು ಬಹುತೇಕ ಶುಭ ಫಲಗಳನ್ನೇ ಕಾಣುತ್ತೀರಿ. ಹಿಂದಿನ ವರ್ಷದಲ್ಲಿ ಮಾಡಿದ ಪ್ರಯತ್ನಗಳು ನಿಮಗೆ ಫಲ ನೀಡುತ್ತವೆ. ಆದರೆ ನಿಮಗೆ ಎಚ್ಚರಿಕೆಯ ಮಾತು ಏನೆಂದರೆ, ಹಣಕಾಸಿನ ವಿಚಾರದಲ್ಲಿ ಶಿಸ್ತು ರೂಢಿಸಿಕೊಳ್ಳುವುದು ಮುಖ್ಯ. ನಿಮ್ಮಲ್ಲಿ ಕೆಲವರು ಹೇಗಿದ್ದರೂ ಹಣ ಬರುತ್ತದೆ ಎಂಬ ಧೋರಣೆಯಲ್ಲಿ ಅಗತ್ಯ ಇಲ್ಲದಿದ್ದರೂ ಕೆಲವು ವಸ್ತುಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಇನ್ನು ಯಾರದೋ ಮೇಲಿನ ಪ್ರತೀಕಾರಕ್ಕೋ ಅಥವಾ ಪ್ರತಿಷ್ಠೆಗಾಗಿಯೋ ನಿಮ್ಮ ಸಾಮರ್ಥ್ಯ ಅಥವಾ ತಾಕತ್ತಿಗೂ ಮೀರಿ ಖರ್ಚು ಮಾಡಿ, ಆ ನಂತರ ಪರಿತಪಿಸುವಂತಾಗುತ್ತದೆ. ಆದ್ದರಿಂದ ಈ ವಿಚಾರದ ಬಗ್ಗೆ ಮಾತ್ರ ವಿವೇಚನೆಯಿಂದ ವರ್ತಿಸಿ. ಫುಡ್ ಪಾಯಿಸನ್, ಕುಡಿಯುವ ನೀರಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಆ ಕಾರಣಕ್ಕೆ ಸಾಧ್ಯವಾದಷ್ಟೂ ಮನೆಯ ಆಹಾರ ಪದಾರ್ಥಗಳ ಸೇವನೆಯನ್ನು ಮಾಡಿದಲ್ಲಿ ಉತ್ತಮ. ವಿದೇಶ ಪ್ರಯಾಣಕ್ಕೆ ತೆರಳುವ ಯೋಗ ಇದ್ದು, ಸಿದ್ಧತೆ ಸರಿಯಾಗಿರಲಿ. ಇನ್ನು ನಿಮಗೆ ಸೈಟು- ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡುವ ಯೋಗ ಸಹ ಇದೆ.

ಉದ್ಯೋಗ- ವೃತ್ತಿ

ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಈ ವರ್ಷ ಯಶಸ್ಸು ದೊರೆಯುವ ಸಾಧ್ಯತೆ ಹೆಚ್ಚು. ಇನ್ನು ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಬಡ್ತಿ ದೊರೆಯುವ ಅಥವಾ ಪ್ರಮುಖ ಪ್ರಾಜೆಕ್ಟ್ ವೊಂದರ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದೆ. ಕಮಿಷನ್ ಆಧಾರದಲ್ಲಿ ಆದಾಯ ಪಡೆಯುವಂಥ ವ್ಯಕ್ತಿಗಳಿಗೆ ಹಲವು ಆದಾಯ ಮೂಲಗಳು ಸೃಷ್ಟಿಯಾಗಲಿವೆ. ಯಾರು ಲೇವಾದೇವಿ ವ್ಯವಹಾರವನ್ನು ಮಾಡುತ್ತಿರುವಿರೋ ಅಂಥವರಿಗೆ ಮಾತ್ರ ಆದಾಯದಲ್ಲಿ ಇಳಿಕೆ ಆಗಬಹುದು ಅಥವಾ ದೊಡ್ಡ ಮೊತ್ತವೊಂದು ವಾಪಸ್ ಬರುವುದಿಲ್ಲ ಎಂಬ ಸ್ಥಿತಿ ಸೃಷ್ಟಿಯಾಗಲಿದೆ. ನಿಮಗೆ ಯಾವುದಾದರೂ ಮೂಲದಿಂದ ನೀವು ಸಾಲ ಕೊಟ್ಟ ವ್ಯಕ್ತಿಯ ಸ್ಥಿತಿ ಚೆನ್ನಾಗಿಲ್ಲ, ಎಚ್ಚರಿಕೆ ತೆಗೆದುಕೊಳ್ಳಿ ಎಂಬ ಜಾಗ್ರತೆ ಏನಾದರೂ ಸಿಕ್ಕಲ್ಲಿ ಕೂಡಲೇ ಎಚ್ಚೆತ್ತುಕೊಳ್ಳಿ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು, ಸಹಕಾರಿ ಕ್ಷೇತ್ರದಲ್ಲಿ ಇರುವವರು, ಚಿನ್ನಾಭರಣಗಳ ವ್ಯಾಪಾರ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ.

ಪ್ರೀತಿ- ಪ್ರೇಮ, ವಿವಾಹ

ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಹಿಂದೆಯೇ ನೋಡಿಕೊಂಡು ಬಂದಂಥ ಸಂಬಂಧವೇ ಮತ್ತೆ ಕೂಡಿಬರುವಂಥ ಯೋಗ ಇದೆ. ಇನ್ನು ತಂದೆಯ ಕಡೆ ಸಂಬಂಧಿಕರಿಂದ ರೆಫರೆನ್ಸ್ ದೊರೆಯಬಹುದು ಅಥವಾ ಆ ಕಡೆಯ ಸಂಬಂಧವೇ ಕೂಡಿಬರುವ ಸಾಧ್ಯತೆ ಇದೆ. ಈಗಾಗಲೇ ಮದುವೆ ಆಗಿದ್ದು, ಸಂತಾನಕ್ಕೆ ಪ್ರಯತ್ನ ಮಾಡುತ್ತಿದ್ದಲ್ಲಿ ಈ ವರ್ಷದ ದ್ವಿತೀಯಾರ್ಧದಲ್ಲಿ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಈಗಾಗಲೇ ನಿಶ್ಚಿತಾರ್ಥ ಆಗಿದೆ ಎನ್ನುವಂಥವರು ಮಂಗಳವಾರದಂದು (ಒಂದು ದಿನ) ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯನ್ನು ಮಾಡಿಕೊಳ್ಳಿ. ಅವರಿವರು ಹೇಳಿದರು ಎಂಬ ಕಾರಣಕ್ಕೆ ಹೇಳಿಕೆ ಮಾತುಗಳನ್ನು ಕೇಳಬೇಡಿ, ನಿಶ್ಚಿತಾರ್ಥ ಮುರಿದುಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರಿಗೆ ಸಮಾರಂಭಗಳಲ್ಲಿ ಅಥವಾ ಶುಭ ಕಾರ್ಯಕ್ರಮಗಳಲ್ಲಿ ಪರಿಚಯ ಆಗುವ ವ್ಯಕ್ತಿಯ ಜತೆಗೆ ಪ್ರೀತಿ ಮೂಡಿ, ಅದು ಗಟ್ಟಿಯಾಗುವ ಯೋಗ ಇದೆ. ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ಸದಾ ನಿಮ್ಮ ಹೆಚ್ಚುಗಾರಿಕೆ ಬಗ್ಗೆಯೇ ಹೇಳುವುದಕ್ಕೆ ಹೋಗಬೇಡಿ.

ಕೃಷಿಕರು

ಈ ವರ್ಷ ಕೃಷಿಗೆ ಆಧಾರಪಟ್ಟ ಇತರ ವೃತ್ತಿಗಳ ಕಡೆಗೆ ನಿಮ್ಮ ಗಮನ ಇರುತ್ತದೆ. ಸ್ವಂತದ್ದೊಂದು ಬ್ರ್ಯಾಂಡ್ ಆರಂಭಿಸುವ ಬಗ್ಗೆ, ಮಳಿಗೆಯನ್ನು ಶುರು ಮಾಡುವ ಬಗ್ಗೆ ಅಥವಾ ಗ್ರಾಹಕರ ಬಳಿಗೆ ನೀವೇ ತೆಗೆದುಕೊಂಡು ಹೋಗಿ, ವಸ್ತುಗಳ ಮಾರಾಟವನ್ನು ಮಾಡುವ ಬಗ್ಗೆ ಆಲೋಚನೆ ಮಾಡಿ, ಅದು ಕಾರ್ಯರೂಪಕ್ಕೆ ಸಹ ತರಲಿದ್ದೀರಿ. ಸಾಮಾಜಿಕವಾಗಿಯೂ ತುಂಬ ಸಕ್ರಿಯವಾಗಿದ್ದು, ಸಂಘಟನಾ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದ್ದೀರಿ. ಇದರಿಂದ ನಿಮಗೆ ಹೆಸರು, ಕೀರ್ತಿ ಹಾಗೂ ಸನ್ಮಾನಗಳು ದೊರೆಯಲಿವೆ.

ವಿದ್ಯಾರ್ಥಿಗಳು

ನಿಮಗೆ ತಿಳಿಯದಂತೆಯೇ ಒಂದು ಬಗೆಯ ಅಹಂಕಾರ ಕಾಣಿಸಿಕೊಳ್ಳಲಿದೆ. ನಿಮಗೆ ನೀವೇನೋ ಸಹಜವಾಗಿಯೇ ವರ್ತಿಸುತ್ತಿದ್ದೀರಿ ಎನಿಸಬಹುದು, ಆದರೆ ಇತರರಿಗೆ ನಿಮ್ಮ ಧೋರಣೆ, ಮಾತುಕತೆ, ಬಳಸುವ ಭಾಷೆ ಬಗ್ಗೆ ಆಕ್ಷೇಪ ವ್ಯಕ್ತವಾಗಲಿದೆ. ವಿದೇಶಗಳಲ್ಲಿ ವ್ಯಾಸಂಗ ಮಾಡಬೇಕು ಎಂದಿರುವವರಿಗೆ ನಾನಾ ರೀತಿಯ ಅಡೆತಡೆಗಳು ಎದುರಾಗಬಹುದು. ಆದ್ದರಿಂದ ಸಮಯ ವ್ಯರ್ಥವಾಗದಂತೆ ಏನು ಮಾಡಬಹುದು ಎಂಬ ಬಗ್ಗೆ ಪ್ಲ್ಯಾನ್ ಬಿ ಇರಿಸಿಕೊಳ್ಳುವುದು ಒಳ್ಳೆಯದು. ಸ್ನೇಹಿತರ ಜತೆಗೆ ದೂರಪ್ರಯಾಣ ಮಾಡಬೇಕು ಎಂಬ ಯೋಜನೆಗಳಿದ್ದಾಗ ನೀರಿನಿಂದ ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ಇರಬೇಕು.

ಮಹಿಳೆಯರು

ನನ್ನಷ್ಟಕ್ಕೆ ನಾನಿರುತ್ತೇನೆ ಎಂದು ನೀವಂದುಕೊಂಡರೂ ಕೆಲವು ವಿಚಾರಗಳಲ್ಲಿ ಬೇಕೆಂತಲೇ ನಿಮ್ಮ ಹೆಸರನ್ನು ಎಳೆದು ತರಲಾಗುತ್ತದೆ. ಇಡೀ ವರ್ಷ ಒಂದಿಲ್ಲೊಂದು ಕಾರಣಕ್ಕೆ ನಿಮ್ಮ ಹೆಸರು ಚರ್ಚೆಯಲ್ಲಿ ಇರುವಂತೆ ಆಗುತ್ತದೆ. ನಿಮ್ಮ ಎದುರಿಗೆ ಇರುವಂಥ ವ್ಯಕ್ತಿಯು ಎಷ್ಟೇ ಕೆರಳಿಸಿದರೂ ತಾಳ್ಮೆ- ಸಂಯಮವನ್ನು ಕಳೆದುಕೊಳ್ಳಬೇಡಿ. ಯಾವುದೇ ಕೆಲಸ ಪೂರ್ಣವಾಗುವ ಮುನ್ನ ಸಂಭ್ರಮಾಚರಣೆಯಲ್ಲಿ ತೊಡಗಿಕೊಳ್ಳಬೇಡಿ. ಉದ್ಯೋಗ ಸ್ಥಳದಲ್ಲಿ ಬಡ್ತಿಯನ್ನು ನಿರೀಕ್ಷೆ ಮಾಡಬಹುದು. ನಿಮ್ಮಲ್ಲಿ ಕೆಲವರಿಗೆ ಉದ್ಯೋಗ ನಿಮಿತ್ತವಾಗಿ ಕೆಲ ಸಮಯಕ್ಕಾದರೂ ವಿದೇಶಕ್ಕೆ ತೆರಳುವಂಥ ಯೋಗ ಇದೆ. ಆಸ್ತಮಾ, ಕಫ, ಕೆಮ್ಮಿನ ಸಮಸ್ಯೆ ನಿಮ್ಮನ್ನು ವಿಪರೀತವಾಗಿ ಕಾಡಬಹುದು, ಜಾಗ್ರತೆ.

ದುರ್ಗಾ ದೇವಿಯ ಆರಾಧನೆ ಮಾಡವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!