Weekly Horoscope: ವಾರ ಭವಿಷ್ಯ: ಅಕ್ಟೋಬರ್ 22 ರಿಂದ 28 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಅಕ್ಟೋಬರ್ 22 ರಿಂದ 28 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

Weekly Horoscope: ವಾರ ಭವಿಷ್ಯ: ಅಕ್ಟೋಬರ್ 22 ರಿಂದ 28 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 22, 2023 | 1:02 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಅಕ್ಟೋಬರ್ 22 ರಿಂದ 28 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ: ಇದು ಅಕ್ಟೋಬರ್ ತಿಂಗಳ ನಾಲ್ಕನೇ ವಾರವಾಗಿದ್ದು ಗ್ರಹಗಳ ಪರಿವರ್ತನೆಯಿಂದ ನಿಮ್ಮಲ್ಲಿ ಕೆಲವು ಬದಲಾವಣೆಯು ಆಗಲಿದೆ. ಸಪ್ತಮದಲ್ಲಿ ರವಿ, ಕುಜ, ಬುಧ, ಕೇತುಗಳ ಸಮಾಗಮವಾಗಲಿದ್ದು ಉತ್ತಮ ಯೋಗವೆನಿಸಿದರೂ ಆರೋಗ್ಯದ ವಿಚಾರದಲ್ಲಿ ಜಾಗರೂಕತೆ ಬೇಕು. ಪತ್ನಿಯ ಜೊತೆ ಹೆಚ್ಚು ಸಮಯವನ್ನು ಕಳೆದು ಬೇಸರವನ್ನು ದೂರ ಮಾಡಬೇಕು. ಪಂಚಮದಲ್ಲಿ ಇರುವ ಶುಕ್ರನು ಸಂಗಾತಿಯಿಂದ ಸಂತೋಷ ಸಿಗುವಂತೆ ಮಾಡುವನು. ನಿಮ್ಮ ಮನೆಯಲ್ಲಿ ಗುರು ಹಾಗೂ ರಾಹುವು ಸಪ್ತಮ ಸ್ಥಾನವನ್ನು ನೋಡಲಿದ್ದು ದುರ್ಬಲರಾಗುವುದು ಬೇಡ. ಧೈರ್ಯದಿಂದ ಮುನ್ನಡೆಯಬಹುದು.

ವೃಷಭ ರಾಶಿ: ಇದು ಈ ತಿಂಗಳ ನಾಲ್ಕನೇ ವಾರವಾಗಿದ್ದು ಗ್ರಹಗಳು ನಿಮ್ಮ ಮೇಲೆ ಅಸಾಧಾರಣ ಪರಿಣಾಮವನ್ನು ಉಂಟುಮಾಡುವರು. ಷಷ್ಠದಲ್ಲಿ ಇರುವ ನಾಲ್ಕು ಗ್ರಹಗಳಲ್ಲಿ ಗ್ರಹನಾಯಕನಾದ ರವಿಯು ನೀಚನಾಗಿದ್ದು ಆರೋಗ್ಯದ ಮೇಲೆ‌ ವಿಪರೀತ ಪರಿಣಾಮವನ್ನು ಬೀರುವನು. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಹೊಸ ಮನೆಯನ್ನು ಪ್ರವೇಶಿಸುವವರಿಗೆ ಇದು ಶುಭವಾರವಾಗಲಿದೆ. ಶತ್ರುಗಳೂ ಇಲ್ಲವಾಗುವರು. ಗುರುಬಲವು ನಿಮಗೆ ಸದ್ಯ ಇಲ್ಲದಿರುವುದು ನಿಮಗೆ ಇನ್ನಷ್ಟು ಸಂಕಷ್ಟ ಎದುರಾಗಬಹುದು. ಶುಕ್ರ ಚತುರ್ಥದಲ್ಲಿ ಇದ್ದು ವಾಹನ ಸೌಖ್ಯವನ್ನು ಕೊಡುವನು. ಅಲಂಕಾರಿಕ ವಸ್ತುಗಳನ್ನು ಕೊಂಡು ಸುಖಪಡುವಿರಿ.

ಮಿಥುನ ರಾಶಿ: ಅಕ್ಟೋಬರ್ ತಿಂಗಳ ನಾಲ್ಕನೇ ವಾರವು ಇದಾಗಿದ್ದು ಶುಭಫಲವು ನಿಮ್ಮ ಪಾಲಿಗೆ ಇರಲಿದೆ. ತೃತೀಯದಲ್ಲಿ ಶುಕ್ರನ‌ ಉಪಸ್ಥಿತಿಯು ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ, ಉನ್ನತ ಸ್ಥಾನಕ್ಕೆ ಹೋಗಲು ಅನುಕೂಲತೆಗಳನ್ನು ಮಾಡಿಕೊಡುವನು. ಗುರುಬಲವು ನಿಮಗಿದ್ದು ನಿಮ್ಮ ರಕ್ಷಣೆಯನ್ನು ಅವನೇ ಮಾಡುತ್ತಿರುವನು. ಪಂಚಮದಲ್ಲಿ ಇರುವ ಬುಧನು ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವನು. ಆತನೇ ನಿಮಗೆ ಉತ್ತಮ ಮಾರ್ಗವನ್ನು ತೋರಿಸಿಕೊಟ್ಟು ವಿದ್ಯಾವಂತರಾಗುವಂತೆ ಮಾಡುವನು. ಮಕ್ಕಳ ವಿಚಾರದಲ್ಲಿ ಕಿರಿಕಿರಿ ಇರಲಿದ್ದು ಸಮಾಧನಚಿತ್ತವು ಮುಖ್ಯ. ತಂತ್ರಜ್ಞರು ಪ್ರಶಂಸೆಯನ್ನು ಪಡೆಯುವರು.

ಕಟಕ ರಾಶಿ: ಈ ತಿಂಗಳ ನಾಲ್ಕನೇ ವಾರವು ನಿಮ್ಮ ಆದಾಯವು ಖರ್ಚಿನತ್ತ ಮುಖ ಮಾಡಿರುವುದು. ದ್ವಿತೀಯದಲ್ಲಿ ಇರುವ ಶುಕ್ರನ ಕಾರಣ ಸ್ವಲ್ಪ ಅನುಕೂಲವನ್ನು ಕಾಣಬಹುದು. ಸಂಗಾತಿಯಿಂದ ನಿಮಗೆ ಧೈರ್ಯ ಸಿಗುವುದು. ಚತುರ್ಥದಲ್ಲಿ ಚತುರ್ಗ್ರಹ ಯೋಗವಾಗಲಿದ್ದು ಕುಟುಂಬದಲ್ಲಿ ಕೆಲವು ಬದಲಾವಣೆಯನ್ನು ನಿರೀಕ್ಷಿಸಬಹುದು. ಸಹೋದರನ ಬೆಂಬಲವು ನಿಮಗೆ ಮತ್ತಷ್ಟು ಶಕ್ತಿಯು ನೀಡುವುದು. ಸರ್ಕಾರಿ ಕಾರ್ಯಗಳು ಮಂದಗತಿಯಲ್ಲಿ ಇರುವುದು. ನೀವು ಬಯಸಿದ ಕಾಲಕ್ಕೆ ಸರಿಯಾಗಿ ಏನೂ ಆಗದು. ಅಷ್ಟಮದಲ್ಲಿ ಶನಿಯು ಇರುವ ಕಾರಣ ಏನಾದರೂ ಅಸಂಬದ್ಧ ಕೃತ್ಯವನ್ನು ಎಸಗಬಹುದು. ವೃತ್ತಿಯಲ್ಲಿ ಆಕಸ್ಮಿಕವಾಗಿ ಪ್ರಗತಿಯು ನಿಮಗೆ ಅಚ್ಚರಿಯನ್ನು ಕೊಡುವುದು. ನಾಗ ದೇವರ ಆರಾಧನೆಯಿಂದ ಶುಭವಾಗುವುದು.

ಸಿಂಹ ರಾಶಿ: ಈ ವಾರದಲ್ಲಿ ಸಕಾರಾತ್ಮಕ ಅಂಶಗಳನ್ನು ಹೆಚ್ಚು ಪಡೆಯುವಿರಿ. ನವಮದಲ್ಲಿ ಇರುವ ಗುರುವು ನಿಮಗೆ ಅನುಕೂಲನಾಗಿದ್ದು ಸತ್ಕಾರ್ಯಕ್ಕೆ ನಿಮ್ಮನ್ನು ಪ್ರೇರಿಸುವನು. ಕಾರ್ಯದಲ್ಲಿ ಅಡಚಣೆಗಳು ಬರಬಹುದು. ತೃತೀಯದಲ್ಲಿ ನಾಲ್ಕು ಗ್ರಹಗಳ ಯೋಗವು ಸಂಭವಿಸಿದ್ದು ಸಹೋದರರ ಬೆಂಬಲದಿಂದ ಅಸಾಧ್ಯವನ್ನೂ ಸಾಧಿಸುವಿರಿ. ಅಹಂಕಾರದಿಂದ ಬೀಗುವುದು ಬೇಡ. ಬಿದ್ದಾಗ ಎಲ್ಲರೂ ನಕ್ಕಾರು. ಪ್ರೀತಿಯನ್ನು ಗಳಿಸಲು ಸೋಲುವಿರಿ. ಸಪ್ತಮದಲ್ಲಿ ಶನಿ ಇರುವ ಕಾರಣ ನಿಮಗೆ ಯಾವ ಕಾರ್ಯವನ್ನು ಶ್ರದ್ಧೆಯಿಂದ ಮಾಡುವುದಿಲ್ಲ. ಕೆಲಸಗಳಿಗೆ ಏನಾದರೂ ನೆಪ ಹೂಡಿ ತಪ್ಪಿಸಿಕೊಳ್ಳುವಿರಿ. ವಿದೇಶಿ ವ್ಯಾಪಾರವು ಸಿದ್ಧಿಸುವ ಸಾಧ್ಯತೆ ಇದೆ. ಕಲಾವಿದರು ಸಂಕಷ್ಟ ಪಡುವ ಸಂದರ್ಭವು ಬರಬಹುದು.

ಕನ್ಯಾ ರಾಶಿ: ಈ ವಾರವು ಅಕ್ಟೋಬರ್ ತಿಂಗಳ ನಾಲ್ಕನೇ ವಾರವಾಗಿದ್ದು ಗ್ರಹಗತಿಗಳ ಬದಲಾವಣೆಯು ನಿಮ್ಮ ಮನಸ್ಸನ್ನು ಚಾಂಚಲ್ಯಗೊಳಿಸಬಹುದು. ಷಷ್ಠದಲ್ಲಿ ಶನಿಯು ಇದ್ದು ಸಾಲಬಾಧೆಯಿಂದ ಮುಕ್ತಿ ಸಿಗುವುದು. ದ್ವಿತೀಯದಲ್ಲಿ ಕೇತು, ಕುಜ, ಸೂರ್ಯ ಹಾಗೂ ಬುಧರು ಗುರು ಹಾಗು ರಾಹುವಿನ ದೃಷ್ಟಿಯುಳ್ಳವರಾಗಿದ್ದಾರೆ. ಕಣ್ಣಿಗೆ ಸಂಬಂಧಿಸಿದ ರೋಗವು ಕಾಣಿಸಿಕೊಳ್ಳಬಹುದು. ನಿಮ್ಮ ಮಾತು ಇತರರಿಗೆ ಕಹಿಯಾಗಬಹುದು. ತಾಳ್ಮೆಯಿಂದ ಇರಲು ಪ್ರಯತ್ನವಿರಲಿ. ವಾಹನದ ಕಾರಣಕ್ಕೆ ಖರ್ಚು ಮಾಡುವ ಸಂದರ್ಭವು ಬರಲಿದೆ. ವಿದೇಶ ಪ್ರಯಾಣವು ಸ್ಥಗಿತವಾಗಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಬೇಸರ ಉಂಟಾಗುವುದು.

ತುಲಾ ರಾಶಿ: ಈ ತಿಂಗಳ ನಾಲ್ಕನೇ ವಾರ ನಿಮ್ಮ ಯೋಜನೆಯನ್ನು ಕಾರ್ಯಗತ ಮಾಡಲು ಸಹಕಾರಿ. ಪಂಚಮದ ಶನಿಯು ನಿಮಗೆ ಅಲ್ಪ ಹಿನ್ನಡೆ ಆಗುವಂತೆ ಮಾಡಿಯಾನು. ಸಪ್ತದ ಗುರುವು ನಿಮ್ಮ ಕಾರ್ಯಕ್ಕೆ ಪೂರ್ಣ ಬೆಂಬಲ ಕೊಡನು. ಸ್ವಪ್ರಯತ್ನವು ಅಧಿಕವಾಗಿ ಬೇಕಾಗುವುದು. ಅದೃಷ್ಟಕ್ಕೆ ಸ್ವಲ್ಪ ದಿನ ಕಾಯಬೇಕಾಗುವುದು. ನಿಮ್ಮ ರಾಶಿಯಲ್ಲಿ ಬುಧ, ಸೂರ್ಯ, ಕೇತು ಹಾಗೂ ಕುಜರು ಇದ್ದು ನಿಮ್ಮ ಮೇಲೆ ಗುರು ಹಾಗೂ ರಾಹುವಿನ ದೃಷ್ಟಿಯೂ ಇರಲಿದೆ. ದೇಹದಂಡನೆಯನ್ನು ಹೆಚ್ಚು ಮಾಡಬೇಕಾಗುವುದು. ಮಾನಸಿಕ ಒತ್ತಡದಿಂದ ವಿಚಲಿತರಾಗುವ ಸಾಧ್ಯತೆ ಇದೆ. ಮನಸ್ಸನ್ನು ಖಾಲಿ ಬಿಡದೇ ಇರುವ ಹಾಗೆ ಮಾಡಿಕೊಳ್ಳಿ.

ವೃಶ್ಚಿಕ ರಾಶಿ: ಅಕ್ಟೋಬರ್ ತಿಂಗಳ ಈ ನಾಲ್ಕನೇ ವಾರದಲ್ಲಿ ಕಹಿಯ ಭಾಗವೇ ಹೆಚ್ಚು ಇರಲಿದೆ. ದ್ವಾದಶದಲ್ಲಿ ಕುಜ, ಸೂರ್ಯ, ಬುಧ, ಕೇತುಗಳು ಇರಲಿದ್ದು ಶುಭವನ್ನು ಅಲ್ಪ ಮಾತ್ರ ಕೊಡುವರು. ಉದ್ಯೋಗದಲ್ಲಿ ಚಾಂಚಲ್ಯವನ್ನು ಕೊಡುವರು.‌ ಎಷ್ಟೇ ತಾಳ್ಮೆಯನ್ನು ಇಟ್ಟುಕೊಂಡರೂ ಪ್ರಯೋಜನವಾಗದು. ಷಷ್ಠದಲ್ಲಿ ಗುರು ಹಾಗೂ ರಾಹುವಿರುವ ಕಾರಣ ಒಂದಿಲ್ಲೊಂದು ಕಿರಿಕಿರಿ ಇರಲಿದೆ. ವಿದ್ಯಾರ್ಥಿಗಳೂ ನಿಶ್ಚಿತ ಗುರಿಯನ್ನು ತಲುಪಲು ಸೋಲುವರು. ರಾಜಕೀಯ ಕ್ಷೇತ್ರದಲ್ಲಿ ಏರಿಳಿತವು ಉಂಟಾಗಬಹುದು. ಹೊಸ ರೀತಿಯಲ್ಲಿ ಆಲೋಚಿಸದೇ ಇದ್ದರೇ ಅಲ್ಲಿಯೇ ಜಾಡ್ಯವು ಹೆಚ್ಚಾಗಿ ನಿಮ್ಮ ಎಲ್ಲ ಸಾಮರ್ಥ್ಯವೂ ನಿಂತ ನೀರಾಗಬಹುದು. ಸುಬ್ರಹ್ಮಣ್ಯನ ಆರಾಧನೆಯನ್ನು ಪ್ರತಿನಿತ್ಯ ಮಾಡಿ. ನಿಮ್ಮ ದೌರ್ಬಲ್ಯವನ್ನು ಆತ ಸರಿ ಮಾಡುವನು.

ಧನು ರಾಶಿ: ಇದು ನಾಲ್ಕನೇ ವಾರವಾಗಿದ್ದು ಶುಭ ಸಮಾಚಾರಗಳು ನಿಮ್ಮ ಉತ್ಸಾಹವನ್ನು ಹೆಚ್ಚು ಮಾಡುವುವು. ನಾಲ್ಕು ಗ್ರಹಗಳು ಶುಭ ಏಕಾದಶಸ್ಥಾನದಲ್ಲಿ ಇರಲಿದ್ದು ಅಂದುಕೊಂಡ ಕಾರ್ಯವನ್ನು ಸಾಕಾರಗೊಳಿಸುವುವು. ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ದಿನ. ಅವಿವಾಹಿತರಿಗೆ ಕಂಕಣ ಭಾಗ್ಯವು ಕೂಡಿ ಬರಲಿದ್ದು ವಿವಾಹವೂ ನಿಶ್ಚಿತವಾಗಿ ಅದರ ತಯಾರಿ ಮಾಡುವಿರಿ. ಯಾವುದನ್ನೂ ದುಡುಕಿ ಮಾಡಲು ಹೋಗುವುದು ಬೇಡ. ಹಿರಿಯರ ಸಲಹೆ‌, ಸಹಕಾರವನ್ನು ಪಡೆಯುತ್ತ ನಿಮ್ಮ ಕಾರ್ಯವನ್ನು ಸಫಲವಾಗಿಸಿಕೊಳ್ಳಿ. ನಿಮ್ಮ ಸಾಮರ್ಥ್ಯವು ಹೆಚ್ಚಿದ್ದರೂ ಅದನ್ನು ಪ್ರಕಟಿಸುವ ಸಮಯ ಬಂದಿಲ್ಲ.

ಮಕರ ರಾಶಿ: ಇದು ಅಕ್ಟೋಬರ್ ತಿಂಗಳ ನಾಲ್ಕನೇ ವಾರವಾಗಿದ್ದು ಶುಭಫಲವನ್ನು ಹೆಚ್ಚು ನಿರೀಕ್ಷಿಸಬಹುದು. ಬಂದ ಎಲ್ಲ ಎಲ್ಲ ಅವಕಾಶಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳಿ. ದಶಮಸ್ಥಾನದಲ್ಲಿ ಸೂರ್ಯ, ಕುಜ, ಕೇತು, ಬುಧರಿದ್ದು ಗುರು ಹಾಗೂ ರಾಹುವಿನ ದೃಷ್ಟಿಯೂ ಇರಲಿದೆ. ಉದ್ಯೋಗದಲ್ಲಿ ನಿಮಗೆ ಗೊಂದಲವು‌ ಹೆಚ್ಚು ಕಾಡುವುದು. ಸ್ಥಾನಮಾನದ ಪ್ರಶ್ನೆ ನಿಮ್ಮ ತಲೆಯಲ್ಲಿ ಕೊರೆಯುತ್ತ ದಿನ ಕಳೆಯುವಿರಿ. ನವಮ ಸ್ಥಾನಾಧಿಪತಿಯು ದಶಮದಲ್ಲಿ ಇರುವುದರಿಂದ ದೇವತಾರಾಧನೆಯಿಂದ ನೆಮ್ಮದಿ ಲಭ್ಯವಾಗುವುದು. ತೃತೀಯದಲ್ಲಿ ರಾಹು ಹಾಗೂ ಗುರುವಿರುವುದರಿಂದ ಸಹೋದರರ ನಡುವೆ ವಾಗ್ವಾದವು ನಡೆಯಬಹುದು.‌ ಇದು ಯಾವದೇ ದ್ವೇಷ, ಅಸೂಯೆಗೆ ಕಾರಣವಾಗುವುದಲ್ಲ.

ಕುಂಭ ರಾಶಿ: ಈ ವಾರ ನಿಮಗೆ ಸಾಧಾರಣ ಸ್ಥಿತಿ ಇರಲಿದೆ. ಸಪ್ತಮದಲ್ಲಿ ಇರುವ ಶುಕ್ರನು ನಿಮಗೆ ವಿವಾಹ ಸಂಬಂಧಕ್ಕೆ ಹೆಚ್ಚು ಒತ್ತು ಕೊಡುವನು. ವಿವಾಹವು ಬೇಡ ಎಂದಿದ್ದವರು ಬದಲಾಗುವ ಸಾಧ್ಯತೆ ಇದೆ. ನವಮದಲ್ಲಿ ಬುಧ ಹಾಗೂ ಸೂರ್ಯರಿದ್ದು ಬಂಧುಗಳಿಂದ ಆದರ, ಪ್ರೀತಿ ಲಭ್ಯವಾಗುವುದು. ಸರ್ಕಾರಿ ಕಾರ್ಯದಲ್ಲಿ ಅಲ್ಪ ಮುನ್ನಡೆ ಸಿಗುವುದು. ಈಗ ಯಾವ ಗ್ರಹವೂ ನಿಮ್ಮ ಪರವಾಗಿ ಇಲ್ಲ. ನಿಮ್ಮದಾದ ಹೊಸತನ್ನು ಏನನ್ನೂ ಆರಂಭಿಸುವುದಾಗಲೀ, ಅದರ ಬಗ್ಗೆ ಮಾತನಾಡುವುದಾಗಲೀ ಮಾಡುವುದು ಬೇಡ. ನಿಮಗೆ ಯಾರಿಂದಲೂ ಪ್ರೇರಣೆ ಸಿಗದು. ಹನುಮಾನ್ ಚಾಲೀಸ್ ಪಠಣ ಮಾಡಿ.

ಮೀನ ರಾಶಿ: ಅಕ್ಟೋಬರ್ ತಿಂಗಳ ನಾಲ್ಕನೇ ವಾರ ಇದಾಗಿದ್ದು ಸಾಧಾರಣ ಫಲವು ನಿಮ್ಮದಾಗಲಿದೆ. ದ್ವಾದಶದಲ್ಲಿ ಇರುವ ಶನಿಯು ನಿಮಗೆ ಯಾವುದಾದರೂ ಅನಿಶ್ಚಿತ ಕಾರ್ಯಗಳಿಂದ ಧನವನ್ನು ನಷ್ಟ ಮಾಡಿಸುವನು. ನಿಮಗೆ ಏಳು ವರೆಯ ಶನಿಯು ಆರಂಭದಲ್ಲಿ ನೀವಿದ್ದು ದೇವತಾ ಆರಾಧನೆಯನ್ನು ಹೆಚ್ಚು ಮಾಡಬೇಕಾಗುವುದು. ದ್ವಿತೀಯದಲ್ಲಿ ಗುರುವು ಇರಲಿದ್ದು ಗುರುಬಲವು ಮಧ್ಯದಲ್ಲಿ ಇರುವುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ವೃತ್ತಿಯಲ್ಲಿ ಅನಿರೀಕ್ಷಿತ ಪ್ರಗತಿಯು ಕಾಣಿಸುವುದು. ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸವು ಉತ್ತಮ ರೀತಿಯಲ್ಲಿ ಇರುವುದು. ಶುಕ್ರನಿಂದ ಪತ್ನಿಗೆ ಸಂಬಂಧಪಟ್ಟು ಅನವಶ್ಯಕ ಖರ್ಚು ಆಗಲಿದೆ. ದುರ್ಗಾ ಮಾತೆಯನ್ನು ಸ್ತುತಿಸಿ.

ಲೋಹಿತಶರ್ಮಾ – 8762924271 (what’s app only)

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ