ಸಿಂಹ ರಾಶಿ, ಸಿಂಹ ಲಗ್ನ, ಸಿಂಹಸ್ಥ ಶನಿ ಇರುವವರಿಗೆ 2025ರ ಮಾರ್ಚ್ ನಂತರ ಎಚ್ಚರಿಕೆ ಅತ್ಯಗತ್ಯ

ಯಾರಿಗೆ ಷಷ್ಠಾಧಿಪತಿ ಶನಿ ಆಗಿರುತ್ತಾನೋ ಅವರ ಶತ್ರು ಬಲಿಷ್ಠನಾಗಿ ತೊಂದರೆ ತರಬಹುದು. ಶನಿಯು ರಾತ್ರಿ ಬಲಿಷ್ಠ. ಆಗ ರಾತ್ರಿಯ ಹೊತ್ತು ಇವರಿಗೆ ಶತ್ರು ಬಾಧೆ ಹೆಚ್ಚಾದೀತು. ಇನ್ನು ಜನ್ಮ ಜಾತಕದಲ್ಲಿ ಶನಿ ದುರ್ಬಲನಾಗಿದ್ದರೆ, ನೀಚ ಸ್ಥಿತಿಯಲ್ಲಿ ಇದ್ದರೆ ಹಾಗೂ ಸದ್ಯಕ್ಕೆ ಶನಿ ದಶೆಯೇ ನಡೆಯುತ್ತಿದ್ದಲ್ಲಿ ಆಗಂತೂ ಸ್ಥಿತಿಯನ್ನು ಜ್ವಾಲಾಮುಖಿಗೆ ಹೋಲಿಸಬಹುದು. ಈ ಅಪಾಯ ಈ ರಾಶಿಗೆ ಇದೆ. ಅದು ಕೂಡ 2025ರ ಮಾರ್ಚ್ ನಂತರ, ಅದು ಯಾವ ರಾಶಿ ಇಲ್ಲಿದೆ ನೋಡಿ.

ಸಿಂಹ ರಾಶಿ, ಸಿಂಹ ಲಗ್ನ, ಸಿಂಹಸ್ಥ ಶನಿ ಇರುವವರಿಗೆ 2025ರ ಮಾರ್ಚ್ ನಂತರ ಎಚ್ಚರಿಕೆ ಅತ್ಯಗತ್ಯ
ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on:Dec 24, 2024 | 7:56 PM

2025ನೇ ಇಸವಿಯ ಮಾರ್ಚ್ 29ನೇ ತಾರೀಕಿಗೆ ಶನಿ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ಅಲ್ಲಿಂದ ಮುಂದೆ ಕುಂಭ, ಮೀನ ರಾಶಿಯವರ ಜೊತೆಗೆ ಮೇಷ ರಾಶಿಯವರಿಗೆ ಸಾಡೇಸಾತ್ ಶುರುವಾಗುತ್ತದೆ. ಸಿಂಹ ರಾಶಿಯವರಿಗೆ ಅಷ್ಟಮ ಶನಿ ಹಾಗೂ ವೃಶ್ಚಿಕ ರಾಶಿಯವರಿಗೆ ಪಂಚಮ ಶನಿಯ ಪ್ರಭಾವ ಆರಂಭವಾಗುತ್ತದೆ. ಇದರಲ್ಲಿ ಯಾರದು ಸಿಂಹ ರಾಶಿಯೋ ಹಾಗೂ ಯಾರ ಜನ್ಮ ಜಾತಕದಲ್ಲಿ ಸಿಂಹದಲ್ಲಿ ಶನಿ ಇರುತ್ತದೋ ಹಾಗೂ ಯಾರದು ಸಿಂಹ ಲಗ್ನವೋ ಅಂಥವರಿಗೆ ಬಹಳ ಕಷ್ಟ ಮತ್ತು ಸವಾಲಿನ ಸಮಯವಾಗಿರುತ್ತದೆ. ಶನೈಶ್ಚರ ಒಂದು ರಾಶಿಗೆ ಪ್ರವೇಶಿಸಿದರೆ ಅಲ್ಲಿ ಎರಡೂವರೆ ವರ್ಷಗಳ ಕಾಲ ಇರುತ್ತದೆ. ಅಂದರೆ ಮೂವತ್ತು ತಿಂಗಳ ಅವಧಿ. ಇನ್ನು ಈ ಗ್ರಹದ ಕೆಲವು ಪ್ರಾಥಮಿಕ ವಿಚಾರಗಳು ಹೀಗಿವೆ: ಶನಿ ಗ್ರಹಕ್ಕೆ ತುಲಾ ರಾಶಿಯು ಉಚ್ಚ ಸ್ಥಾನವಾದರೆ, ಮೇಷವು ನೀಚ ಸ್ಥಿತಿಯಾಗುತ್ತದೆ. ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತದೆ. ನಾವು ಮಾಡಿದ ಕರ್ಮಕ್ಕೆ ತಕ್ಕ ಫಲ ನೀಡುವ ಗ್ರಹವಾದ ಈ ಶನಿಯು ಸಿಂಹ ರಾಶಿ, ಸಿಂಹ ಲಗ್ನ ಮತ್ತು ಸಿಂಹಸ್ಥ ಶನಿ ಯಾರಿಗೆ ಜನ್ಮ ಜಾತಕದಲ್ಲಿ ಇರುತ್ತದೋ ಅಂಥವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತದೆ.

ಯಾರಿಗೆ ಷಷ್ಠಾಧಿಪತಿ ಶನಿ ಆಗಿರುತ್ತಾನೋ ಅವರ ಶತ್ರು ಬಲಿಷ್ಠನಾಗಿ ತೊಂದರೆ ತರಬಹುದು. ಶನಿಯು ರಾತ್ರಿ ಬಲಿಷ್ಠ. ಆಗ ರಾತ್ರಿಯ ಹೊತ್ತು ಇವರಿಗೆ ಶತ್ರು ಬಾಧೆ ಹೆಚ್ಚಾದೀತು. ಇನ್ನು ಜನ್ಮ ಜಾತಕದಲ್ಲಿ ಶನಿ ದುರ್ಬಲನಾಗಿದ್ದರೆ, ನೀಚ ಸ್ಥಿತಿಯಲ್ಲಿ ಇದ್ದರೆ ಹಾಗೂ ಸದ್ಯಕ್ಕೆ ಶನಿ ದಶೆಯೇ ನಡೆಯುತ್ತಿದ್ದಲ್ಲಿ ಆಗಂತೂ ಸ್ಥಿತಿಯನ್ನು ಜ್ವಾಲಾಮುಖಿಗೆ ಹೋಲಿಸಬಹುದು. ಹಾಗಿದ್ದರೆ ಫಲ ಏನಾಗಬಹುದು ಎಂಬ ಪ್ರಶ್ನೆ ಬರುವುದು ಸಹಜ. ಮುಖ್ಯವಾಗಿ ಶತ್ರುಗಳ ಕೈ ಮೇಲಾಗುತ್ತದೆ. ಹೆಜ್ಜೆಹೆಜ್ಜೆಗೂ ಅವಮಾನಗಳು ಎದುರಾಗುತ್ತವೆ. ಮಕ್ಕಳ ಭವಿಷ್ಯಕ್ಕೆ ನಾನಾ ಸಮಸ್ಯೆಗಳು ಹಾಗೂ ಕೆಲಸ ಹೋಗುವುದು, ವ್ಯಾಪಾರದಲ್ಲಿ ನಷ್ಟ, ರಾಜಕೀಯದಂಥ ಕ್ಷೇತ್ರದಲ್ಲಿ ಇರುವವರ ವೃತ್ತಿ ಜೀವನವೇ ಕೊನೆಯಾಗುವುದು, ಇಲ್ಲಿ ತನಕ ಸಿಗುತ್ತಿದ್ದ ಗೌರವ- ಮನ್ನಣೆಗಳು ಇಲ್ಲದಂತಾಗಿ, ಮೂಲೆಗುಂಪಾಗುವುದು, ಒಂದಲ್ಲಾ ಒಂದು ಪ್ರಕರಣದಲ್ಲಿ ಕೋರ್ಟ್- ಕಟಕಟೆ, ಪೊಲೀಸ್ ಸ್ಟೇಷನ್ ಗೆ ಪದೇ ಪದೇ ಅಲೆದಾಡುವುದು ಇವೆಲ್ಲ ಒಂದು ಭಾಗವಾಗುತ್ತದೆ. ಇನ್ನೊಂದು ಭಾಗವಾಗಿ ವೈವಾಹಿಕ ಜೀವನದಲ್ಲಿ ಸಿಕ್ಕು- ರಂಕಲು ಆಗುತ್ತದೆ. ವಿಚ್ಛೇದನದ ತನಕ ಹೋಗಬಹುದು ಅಥವಾ ವಿಚ್ಛೇದನವೇ ಆಗಿಬಿಡಬಹುದು. ಒಂದು ವೇಳೆ ಈಗಾಗಲೇ ಮದುವೆ ನಿಶ್ಚಯ ಆಗಿದೆ, ಇನ್ನೇನು ಅಲ್ಲಿಂದ ಮುಂದಿನ ಹಂತಕ್ಕೆ ಹೋಗಬೇಕು ಅಂದಾಗ ಮದುವೆಯೇ ಮುರಿದು ಬೀಳಬಹುದು. ಮದುವೆಗೆ ಈಗ ಪ್ರಯತ್ನ ಆರಂಭಿಸಿದ್ದಲ್ಲಿ ನಾನಾ ಅಡೆ- ತಡೆಗಳು ಎದುರಾಗಬಹುದು.

ಇನ್ನು ಜನ್ಮ ಜಾತಕದಲ್ಲಿ ಶನಿ ಉಚ್ಚ ಸ್ಥಿತಿಯಲ್ಲಿ ಇರುವವರು ತಮ್ಮದೇ ಮಹತ್ವಾಕಾಂಕ್ಷೆಯಿಂದ ಭ್ರಮನಿರಸನಕ್ಕೆ ಒಳಗಾಗುತ್ತಾರೆ. ಇನ್ನೇನು ಕೈಗೆ ಸಿಕ್ಕಿಹೋಯಿತು ಎಂಬಂಥ ಅಧಿಕಾರ, ಮನ್ನಣೆ, ಗೌರವ, ಹಣ ಇವೆಲ್ಲ ಸಿಗದಂತಾಗಿ, ತಮ್ಮ ಬದುಕಿನ ಬಗ್ಗೆಯೇ ವೈರಾಗ್ಯ- ನಿರಾಸಕ್ತಿ ಮೂಡುತ್ತದೆ. ಆದರೆ ಈ ವೈರಾಗ್ಯ ಸ್ಥಿತಿಯು ಎಲ್ಲ ಸಮಸ್ಯೆಗಳಾಗಿ, ಇನ್ನು ಅದರಿಂದ ಹೊರಬರುವುದಕ್ಕೆ ಸಾಧ್ಯವೇ ಇಲ್ಲ ಎಂದಾದಾಗ ಬರುತ್ತದೆ. ಯಾರು ಪ್ರಭಾವಶಾಲಿಗಳೋ ಅಂಥವರು ತಮ್ಮ ಶಕ್ತಿಯೇ ಕಳೆದುಕೊಂಡು ಬಿಡುತ್ತಾರೆ. ಈಗಾಗಲೇ ಕೋರ್ಟ್- ಕಚೇರಿ ವ್ಯಾಜ್ಯಗಳು ನಡೆಯುತ್ತಿದೆ, ಅದರ ವಿಚಾರಣೆ ಅಥವಾ ವಾದ- ಸಾಕ್ಷ್ಯಗಳ ಸಂಗ್ರಹ ಇಂಥದ್ದೇನೋ ನಡೆಯುತ್ತಿದ್ದಲ್ಲಿ ಅಂಥವರು ಸ್ವಲ್ಪ ಮೈ ಮರೆತರೂ ಜೈಲು ಕಾಣುವುದು ನಿಶ್ಚಿತ. ಇಲ್ಲಿಯವರೆಗೆ ಇರುವಂಥ ಆತ್ಮವಿಶ್ವಾಸ, ನಂಬಿಕೆ ಎಲ್ಲವೂ ಕರಗಿ ಹೋಗುತ್ತವೆ.

ಇಂಥ ಸನ್ನಿವೇಶಕ್ಕೆ ಗುಣಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮೊದಲ ಆದ್ಯತೆಯಾಗಬೇಕು. ವಿವೇಚನೆಯನ್ನು ಸರಿಯಾಗಿ ಬಳಸಬೇಕು. ಹುಂಬತನ ಮಾಡಬಾರದು. ಈ ಹಿಂದೆ ಮಾಡಿದ ಕರ್ಮಗಳು (ಅದು ಸತ್ಕರ್ಮವಾದಲ್ಲಿ ಒಳ್ಳೆಯದು, ಪಾಪ ಕರ್ಮಗಳಾದಲ್ಲಿ ಕೆಟ್ಟದ್ದು) ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತವೆ. ಕೌಟುಂಬಿಕ ಜೀವನದಲ್ಲಿ ಸಣ್ಣ- ಪುಟ್ಟ ವಿಚಾರಗಳು ಸಹ ಉದ್ವಿಗ್ನ ಸ್ಥಿತಿಯನ್ನು ತರುತ್ತವೆ. ಇಂಥ ಜಾತಕರು ಮಾಡುವ ಕರ್ಮದ ಫಲವನ್ನು ಹೆಂಡತಿ, ಮಕ್ಕಳು ಅನುಭವಿಸುತ್ತಾರೆ. ಅದು ಹೇಗೆಂದರೆ, ಅವರು ಪಡುವ ಕಷ್ಟ- ಹಿಂಸೆಯನ್ನು ಕಂಡು, ಯಾಕಪ್ಪಾ ಬದುಕು ಎಂದೆನಿಸುವಷ್ಟು ತೀವ್ರತರದ ಕಷ್ಟಗಳು ಮೇಲಿಂದ ಮೇಲೆ ಬರುತ್ತವೆ. ಗಾಬರಿಯಲ್ಲಿ ಹೆಚ್ಚೆಚ್ಚು ತಪ್ಪುಗಳನ್ನು ಮಾಡಿ, ಪರಿತಪಿಸುವಂತಾಗುತ್ತದೆ.

ಶನಿಯ ಜಪ ಮಾಡಿಸಿ ಹೋಮ ಮಾಡಿಸಿಕೊಳ್ಳುವುದು, ಒಂದು ವೇಳೆ ಸಾಧ್ಯವಿದ್ದಲ್ಲಿ ತಾವೇ ಜಪ ಮಾಡುವುದು, ಹುಂಬತನವನ್ನು ಬಿಡುವುದು, ವಿವೇಕಯುತವಾಗಿ ನಡೆದುಕೊಳ್ಳುವುದು, ಇತರರಿಗೆ ದಕ್ಕಬೇಕಾದದ್ದನ್ನು ಬಲವಂತವಾಗಿ ಕಸಿದುಕೊಳ್ಳುವ ಸ್ವಭಾವವನ್ನು ಬಿಡುವುದು ಇವೆಲ್ಲ ಮುಖ್ಯ ಸಂಗತಿಗಳಾಗುತ್ತವೆ. ಜಾತಕವನ್ನು ಪರಿಶೀಲಿಸಿಕೊಳ್ಳಿ, ಮುಂಜಾಗ್ರತೆಯನ್ನು ವಹಿಸಿ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ)

Published On - 3:55 pm, Tue, 24 December 24

ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್
ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್
2 ಸಮುದಾಯಗಳ ನಡುವೆ ಭೂಪಾಲ್​ನಲ್ಲಿ ಹಿಂಸಾತ್ಮಕ ಘರ್ಷಣೆ; 6 ಜನರಿಗೆ ಗಾಯ
2 ಸಮುದಾಯಗಳ ನಡುವೆ ಭೂಪಾಲ್​ನಲ್ಲಿ ಹಿಂಸಾತ್ಮಕ ಘರ್ಷಣೆ; 6 ಜನರಿಗೆ ಗಾಯ
ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!
ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!
ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ
ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ
ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಅಶ್ಲೀಲ ಪದ ಬಳಕೆ ವಿಚಾರ: CT ರವಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡ್ಲಿ: ಲಕ್ಷ್ಮೀ
ಅಶ್ಲೀಲ ಪದ ಬಳಕೆ ವಿಚಾರ: CT ರವಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡ್ಲಿ: ಲಕ್ಷ್ಮೀ
ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ