AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರು ಅಹಂಕಾರವನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ

2023 ಡಿಸೆಂಬರ್​​​​ 07ರ ರಾಶಿ ಭವಿಷ್ಯ ಹೇಗಿದೆ? ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Horoscope: ಈ ರಾಶಿಯವರು ಅಹಂಕಾರವನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Dec 08, 2023 | 12:10 AM

Share

ಇಂದಿನ (2023 ಡಿಸೆಂಬರ್​​ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ ಎಂಬ ಮಾಹಿತಿ ಇಲ್ಲಿದೆ. ಅದೇ ರೀತಿಯಾಗಿ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ ಎಂದು ತಿಳಿಯಲು ಮುಂದೆ ಓದಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜೇಷ್ಠಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಸೌಭಾಗ್ಯ​, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 46 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:59 ರಿಂದ 12:24 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:13 ರಿಂದ ಸಂಜೆ 04:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:11 ರಿಂದ 09:36ರ ವರೆಗೆ.

ಮೇಷ ರಾಶಿ: ಇಂದು ನೀವು ಒತ್ತಡಗಳಿಂದ ಮುಕ್ತರಾಗಿ ಶಾಂತವಾಗಿ ಕಾಣಿಸುವಿರಿ. ಶುದ್ಧತೆಯ ವಿಚಾರದಲ್ಲಿ ಇನ್ನಷ್ಟು ಕಾಳಜಿ ಅವಶ್ಯಕ. ಪಾಲುದಾರಿಕೆಗೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡಲು ಇಂದು ಒಳ್ಳೆಯದು. ಬಡ್ತಿಯಲ್ಲಿ ಸುಧಾರಣೆ ಇರಲಿದೆ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು.‌ ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಶುಭಸಮಾರಂಭಗಳಿಗೆ ಭೇಟಿ ಕೊಡುವಿರಿ. ಯಾರದೋ ಒತ್ತಡದಿಂದ ದಿನಚರಿಯನ್ನು ವ್ಯತ್ಯಾಸ‌ ಮಾಡಿಕೊಳ್ಳುವಿರಿ. ಸ್ನೇಹವು ಗೊತ್ತಿಲ್ಲದಂತೆ ಪ್ರೇಮವಾಗುವುದು. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷಿಸುವುದು ಬೇಡ. ಇಂದು ದೇಹಕ್ಕೂ ಮನಸ್ಸಿಗೂ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಆಗಬೇಕಾಗಿರುವ ಕೆಲಸವನ್ನು ನೀವು ಪಟ್ಟಿ ಮಾಡಿ. ಸ್ತ್ರೀಯರ ಸಹವಾಸವು ಅಧಿಕವಾಗಿರುವುದು.

ವೃಷಭ ರಾಶಿ: ನಿಮ್ಮ ಗುರಿಯನ್ನು ಗೌಪ್ಯವಾಗಿ ಇರಿಸಿಕೊಳ್ಳಿ. ಮನಸ್ಸು ಕೆಲವು ವಿಚಾರಗಳಿಗೆ ದುರ್ಬಲವಾಗುವುದು. ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡುವಿರಿ. ನಾನಾ ಕಾರಣಗಳಿಂದ ನಿಮ್ಮ ವ್ಯವಹಾರದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ದೊಡ್ಡ ಲಾಭವನ್ನು ಗಳಿಸಲು ಸಾಧ್ಯವಾಗದು. ವಿಷಯಾಸಕ್ತಿಯು ಅಧಿಕವಾಗಿದ್ದರೂ ಅದಕ್ಕೆ ಯೋಗ್ಯ ಜನರನ್ನು ಹುಡುಕುವಿರಿ. ಆತ್ಮೀಯರಿಂದ ನೀವು ಸಹಾಯವನ್ನು ಪಡೆಯುವಿರಿ. ಅಧಿಕವಾದ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದು. ಕೂಡಿಟ್ಟ ಹಣದಿಂದ ನಿಮಗೆ ಪ್ರಯೋಜನವಾದಂತೆ ಆಗುವುದು. ಹಳೆಯ ರೋಗವು ಮತ್ತೆ ಕಾಣಿಸಿಕೊಂಡು ಸಂಕಟಪಡುವಿರಿ. ಅನಿರೀಕ್ಷಿತ ಸುದ್ದಿಯು ನಿಮ್ಮ‌ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ‌ಇನ್ನೊಬ್ಬರನ್ನು ದೂರುತ್ತ ನಿಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ.

ಮಿಥುನ ರಾಶಿ: ಕೆಲಸವು ಪೂರ್ಣ ಮಾಡಿದ ತೃಪ್ತಿಯನ್ನು ಅನುಭವಿಸುವಾಗ ಮತ್ತೊಂದು ನಿಮ್ಮ ಪಾಲಿಗೆ ಬರಬಹುದು. ಈ ದಿನ ನೀವು ಅದೃಷ್ಟದ ಕಾರಣ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಮಾಡುವಿರಿ. ನೀವು ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಬಹುದು. ಹುಣ್ಣನ್ನು ಕೆರದು ಗಾಯ ಮಾಡಿಕೊಳ್ಳುವುದು. ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ನಿಮ್ಮ ಪ್ರಯತ್ನ ಮುಂದುವರಿಯಲಿ. ವಾಹನ ಚಾಲನೆಯಲ್ಲಿ‌ ಮಿತಿಯಿರಲಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ಮಾತುಕತೆಗಳು ವಿಕೋಪಕ್ಕೆ ಹೋಗಬಹುದು. ಪ್ರೀತಿಯು ಇರಬೇಕಾದ ಸ್ಥಳದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳುವುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗದು.

ಕರ್ಕ ರಾಶಿ: ಅಹಂಕಾರವನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ಹಲವಾರು ದಿನದ ಸಂಕಟವನ್ನು ನೀವು ಹೊರಹಾಕುವಿರಿ. ವೃತ್ತಿಪರ ಮತ್ತು ಸಾಮಾಜಿಕ ವಲಯಗಳಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುವಿರಿ. ದಿನವು ಅನುಕೂಲಕರವಾಗಿದೆ. ವಾಹನದಿಂದ ಅಪಘಾತವು ಆಗಬಹುದು. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗಬಹುದು. ಮಿತವಾದ ಆಹಾರಸೇವನೆಯನ್ನು ಇಟ್ಟುಕೊಳ್ಳಿ. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಅಸ್ಪಷ್ಟ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಯಾರ‌ ಮಾತನ್ನೋ ಕೇಳಿ ನೀವು ಸಮಸ್ಯೆಯನ್ನು ತಂದುಕೊಳ್ಳುವಿರಿ. ಕಣ್ಣಿನ ತೊಂದರೆ ಹೆಚ್ಚಾದೀತು. ವಿವಾಹ ಸಂಬಂಧದಿಂದ ನಿಮಗೆ ಕಿರಿಕಿರಿ ಎನಿಸಬಹುದು.