Horoscope 1 April: ದಿನಭವಿಷ್ಯ; ವ್ಯಾಪಾರದಲ್ಲಿ ಮೋಸ, ಹೊಸ ವ್ಯಕ್ತಿಗಳ ಜೊತೆ ವ್ಯವಹರಿಸುವಾಗ ಎಚ್ಚರ!
Rashi Bhavishya: 2024 ಏಪ್ರಿಲ್ 01 ಸೋಮವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶುಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:01 ರಿಂದ 09:33ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 12:36ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ 03:40ರ ವರೆಗೆ.
ಮೇಷ ರಾಶಿ: ಮನೆಯಲ್ಲಿ ಯಾರಿಗೂ ಏನನ್ನೂ ಹೇಳಲು ಹೋಗದೇ ನಿಮ್ಮಷ್ಟಕ್ಕೆ ನೀವು ಕೆಲಸಗಳನ್ನು ಮಾಡಿ. ಸ್ತ್ರೀಯರು ಸಮಯದ ಬಗ್ಗೆ ಅಲಕ್ಷ್ಯ ಮಾಡಬಹುದು. ಹತ್ತಿರದ ಬಂಧುಗಳ ಮನೆಗೆ ಹೋಗುವುದು ಸನ್ನಿವೇಶವು ಬರುವುದು. ನೀವು ತೋರಿಸುವ ಅನುಕಂಪವು ಇನ್ನೊಬ್ಬರಿಗೆ ಅರಗಿಸಿಕೊಳ್ಳಲು ಕಷ್ಟವಾದೀತು. ಸ್ಥಿರಾಸ್ತಿಯ ಖರೀದಿಸಲು ಸಾಲ ಮಾಡಲು ಇಚ್ಛಿಸುವಿರಿ. ಕುಟುಂಬದ ಸದಸ್ಯರಿಗಾಗಿಯೂ ನೀವು ಸ್ವಲ್ಪ ಸಮಯವನ್ನು ಮೀಸಲಿಡಬೇಕು. ನೀವು ಕೆಲವು ಪ್ರಮುಖ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ನೋವಿನಿಂದ ಹೊರಬರಲು ನಿಮಗೆ ಕಷ್ಟವಾದೀತು. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ. ಶುಭ ದಿನಕ್ಕೆ ದಿನಗಣನೆಯ ಅಗತ್ಯವಿಲ್ಲ. ನಿಮ್ಮಿಂದ ಒಳ್ಳೆಯ ಕಾರ್ಯಗಳು ಆರಂಭವಾಗಲಿ.
ವೃಷಭ ರಾಶಿ: ಇಂದು ನಿಮ್ಮ ವಿಷಯ ಚಿಕ್ಕದಾದರೂ ಮಾತಿನಿಂದಾಗಿ ದೊಡ್ಡ ರೂಪವನ್ನು ಪಡೆಯುವುದು. ಸಮಯ ಪಾಲನೆ ಇಲ್ಲದೇ ಎಲ್ಲರಿಂದ ಬೈಗುಳ ಪಡೆಯಬೇಕಾಗುವುದು. ಕಛೇರಿಯಲ್ಲಿ ನಿಮಗೆ ಅಳುಕಿರುವುದು. ನೀವು ಕೆಲವು ವಿಚಾರಗಳನ್ನು ನೆನಪು ಮಾಡಿಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಕೆಲಸದಲ್ಲಿ ಇನ್ನೊಬ್ಬರಿಗೆ ಪ್ರವೇಶವನ್ನು ಕೊಡುವುದು ಬೇಡ. ಹಣಕಾಸಿನ ಪರಿಸ್ಥಿತಿಯನ್ನು ನೆನೆದು ಚಿಂತಿತರಾಗಬಹುದು. ಸರ್ಕಾರಿ ನಿಯಮಗಳ ಉಲ್ಲಂಘನೆ ಬೇಡ. ಸ್ತ್ರೀಯರಿಂದ ಲಾಭವನ್ನು ಪಡೆಯುವಿರಿ. ಇಂದಿನ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹವನ್ನು ಜಾಗರೂಕಗೊಳಿಸುವುದು. ಕಛೇರಿಯಲ್ಲಿ ನಿಮ್ಮ ಶ್ರಮವು ಲೆಕ್ಕಕ್ಕೆ ಬಾರದೇ ಹೋದೀತು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ ಸಮಯವನ್ನು ವ್ಯರ್ಥ ಮಾಡುವಿರಿ. ಕಾಲಹರಣದಿಂದ ಏನಾದರೂ ಹೇಳಿಯಾರು.
ಮಿಥುನ ರಾಶಿ: ವ್ಯಾಪಾರದ ಸಣ್ಣ ನಷ್ಟವನ್ನೂ ಅತಿ ಗಂಭೀರವಾಗಿ ತೆಗೆದುಕೊಳ್ಳುವಿರಿ. ಎಲ್ಲರ ಜೊತೆ ವೃತ್ತಿಗೆ ಸಂಬಂಧಿಸಿದ ಮಾತುಗಳನ್ನೇ ಆಡುವಿರಿ. ಒಪ್ಪಿಕೊಂಡ ಕೆಲಸವನ್ನು ಶಿಸ್ತಿನಿಂದ ಮಾಡಿ ಯಶಸ್ಸು ಪಡೆಯುವಿರಿ. ನೀವು ಕುಟುಂಬದಿಂದ ಬೆಂಬಲವನ್ನು ಪಡೆಯುತ್ತೀರಿ. ಆದಾಯವು ಉತ್ತಮವಾಗಿ ಉಳಿಯುತ್ತದೆ. ನೀವು ಕೊಟ್ಟ ಆಶ್ವಾಸನೆಯನ್ನು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ. ಅದರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೆಲವು ಹೊಸ ಮೂಲಗಳನ್ನು ವ್ಯಾಪಾರದಲ್ಲಿ ಸೇರಿಸಿಕೊಳ್ಳಬಹುದು. ನಿಮ್ಮ ಕೆಲವು ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ನಿಮ್ಮ ಕೊರತೆಯೇ ನಿಮಗೆ ಶಾಪವಾಗಬಹುದು. ದೇಹಾರೋಗ್ಯವು ಸರಿಯಾಗಿ ಇಲ್ಲದ ಕಾರಣ ಮನಸ್ಸು ಸರಿಯಾಗಿ ಕೆಲಸ ಮಾಡದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು. ಉದ್ಯೋಗವು ಸಾಕು ಎನಿಸಬಹುದು. ನಿಮ್ಮ ಆಚರಣೆಯು ಇತರರಿಗೆ ಇಷ್ಟವಾಗುವುದು.
ಕಟಕ ರಾಶಿ: ಯಾರಿಂದಲಾದರೂ ನಿಮ್ಮ ನೆಮ್ಮದಿಯನ್ನು ಕದಡುವ ಕೆಲಸವು ಬಹಳ ಶಿಸ್ತಿನಿಂದ ಆಗಬಹುದು. ನಿಮ್ಮದಲ್ಲದ ಕಾರ್ಯಕ್ಷೇತ್ರದಲ್ಲಿ ವ್ಯವಹರಿಸುವುದು ಸುಲಭದ್ದಾಗದು. ಸ್ವಾರ್ಥಕ್ಕೆ ಹೆಚ್ಚು ಒತ್ತುಕೊಡುವ ನೀವು ಒತ್ತಾಯಕ್ಕೆ ಮಣಿದು ಇನ್ನೊಬ್ಬರ ವಿಚಾರದಲ್ಲಿ ಯಾವ ಲಾಭವೂ ಇಲ್ಲದೇ ಭಾಗವಹಿಸುವಿರಿ. ಪರಹಿತಾಸಕ್ತಿಯ ಬಗ್ಗೆ ಹೆಚ್ಚು ಗಮನವಿರಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಗೌರವವನ್ನು ಪಡೆಯುವರು. ನೀವು ಅವಕಾಶಗಳತ್ತ ಗಮನ ಹರಿಸಬೇಕು. ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನವು ಸಿಗದೇ ಇರಬಹುದು. ಕುಟುಂಬ ವ್ಯವಸ್ಥೆ ಇಂದು ನಿಮ್ಮನ್ನು ಸುಧಾರಿಸಿಕೊಳ್ಳುವುದು ಸುಲಭವಿಲ್ಲ. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ಬೇಡವೆಂದರೂ ಕೆಟ್ಟವರ ಸಹವಾಸವೇ ಸಿಗುವುದು. ನಂಬಿಕೆಯನ್ನು ಕಳೆದುಕೊಳ್ಳಬಹುದು.
ಸಿಂಹ ರಾಶಿ: ನಿಮ್ಮ ಸಾಲವು ಪೂರ್ಣವಾಗಿ ಮುಕ್ತಾಯವಾದ ಕಾರಣ ಸಂಪೂರ್ಣ ನೆಮ್ಮದಿ ನಿಮಗಿರುವುದು. ಅಪ್ರಯೋಜನವಾದ ಸಮಯವನ್ನು ಕಳೆಯದೇ ನಿಮ್ಮದೇ ಆದ ಯೋಜನೆಯನ್ನು ತಯಾರಿಸಿ. ಯಶಸ್ಸಿಗಾಗಿ ತಪ್ಪು ಮಾರ್ಗಗಳು ನಿಮ್ಮೆದುರು ತೆರೆದುಕೊಳ್ಳಬಹುದು. ವಿವೇಚನೆಯಿಂದ ಅದನ್ನು ತಳ್ಳಿಹಾಕುವಿರಿ. ನೈಪುಣ್ಯದಿಂದ ಕಾರ್ಯವನ್ನು ಸಾಧಿಸಿಕೊಂಡು ಸುಮ್ಮನಾಗುವಿರಿ. ನಿಮ್ಮ ಕೆಲವು ಪ್ರಮುಖ ಯೋಜನೆಗಳು ಬಲವನ್ನು ಕೈ ಬಿಡುವ ಇಚ್ಛೆಯು ಉಂಟಾಗಬಹುದು. ಇಂದು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಮಾಡಿದರೆ, ಅದು ನಿಮಗೆ ಒಳ್ಳೆಯದು. ಮನೆಯಲ್ಲಿ ಬಂಧುಗಳ ಸಮಾಗಮದಿಂದ ಸಂತೋಷವಾಗುವುದು. ದಿನ ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ಅನವಶ್ಯಕ ಮಾತುಗಳನ್ನು ನಿಲ್ಲಿಸಿ.
ಕನ್ಯಾ ರಾಶಿ: ನೀವು ಇಂದು ಸಿಟ್ಟಿನ ಕಾರಣಕ್ಕೆ ಅನೇಕ ಗುಣಾತ್ಮಕ ಅಂಶಗಳನ್ನು ತಿರಸ್ಕತಲರಿಸುವಿರಿ. ಎಲ್ಲವೂ ಕೂಡಲೇ ಆಗಬೇಕೆಂಬ ಧಾವಂತ ಬೇಡ. ಕಾಲವು ಬೇಕಾದಾಗ ಬೇಕಾದುಸನ್ನು ಒದಗಿಸಿಯೇ ಒದಗಿಸುತ್ತದೆ. ಯಾವುದೇ ಯೋಜನೆಯನ್ನು ಕೆಲಸ ಮಾಡುವ ಮೊದಲು, ಅದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ನಿಮ್ಮ ವ್ಯವಹಾರದಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡಬೇಡಿ, ಏಕೆಂದರೆ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ನೀವು ಕೆಲವು ಇನ್ನೊಬ್ಬರಿಗೆ ತೊಂದರೆಯಾಗುವಂತಹ ಚಟುವಟಿಕೆಗಳನ್ನು ತಡೆಯಬೇಕು. ಜಾಣತನವು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಬಹಿಶ್ಶತ್ರುಗಳಿಗಿಂತ ಅಂತಶ್ಶತ್ರುಗಳ ಬಗ್ಗೆ ಎಚ್ಚರ ಅವಶ್ಯಕ. ವ್ಯಾಪರದಲ್ಲಿ ಗ್ರಾಹಕರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು.
ತುಲಾ ರಾಶಿ: ಪರನಿಂದೆಯ ಬಗ್ಗೆ ಚಪಲತೆ ಹೆಚ್ಚಾಗುವುದು. ಮಾತಿನಲ್ಲಿ ಹಿಡಿತ ಅವಶ್ಯವಾಗಿ ಬೇಕು. ನಿಮ್ಮ ಆಸಕ್ತಿಯ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯವನ್ನು ಕಳೆಯುವಿರಿ. ದೇವರ ಬಗ್ಗೆ ಭಕ್ತಿಯು ಬರುವುದು. ಅತಿಯಾದ ಶ್ರಮ ಮತ್ತು ಆಯಾಸದಿಂದಾಗಿ ಕಿರಿಕಿರಿಯು ಮೇಲುಗೈ ಸಾಧಿಸಬಹುದು. ನಿಮ್ಮ ಇಚ್ಛೆಯನ್ನು ಜನರ ಮೇಲೆ ಹೇರಲು ಪ್ರಯತ್ನಿಸಬೇಡಿ. ನಿಮಗೆ ವಹಿಸದ ಕಾರ್ಯಗಳ ಬಗ್ಗೆ ಚಿಂತೆ ಮಾಡಿ, ನಿಮ್ಮ ಕಾರ್ಯವನ್ನೂ ಯಶಸ್ಸನ್ನೂ ಹಾಳುಮಾಡಿಕೊಳ್ಳುವಿರಿ. ಕ್ರಮಬದ್ಧವಾದ ಆಲೋಚನೆಗಳು ನಿಮಗೆ ಸ್ಫೂರ್ತಿಯನ್ನು ಕೊಡಬಹುದು. ಪರಸ್ಪರ ಸಹಕಾರದ ಭಾವನೆ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳು ಬೌದ್ಧಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು. ನಿಮ್ಮ ಬಗ್ಗೆ ಸುಳ್ಳು ವದಂತಿಗಳು ಹರಡಬಹುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ಸಂಬಂಧವಿಲ್ಲದ ವಿಚಾರದಲ್ಲಿ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ.
ವೃಶ್ಚಿಕ ರಾಶಿ: ಆರ್ಥಿಕ ವಲಯವು ಹದ ತಪ್ಪಬಹುದು. ಮಕ್ಕಳಿಗಾಗಿ ಅಷ್ಟನ್ನು ಮಾಡುವುದು ಅನಿವಾರ್ಯವಾದೀತು. ವೈಯಕ್ತಿಕ ದ್ವೇಷವನ್ನು ಕಛೇರಿಗೆ ತರುವುದು ಬೇಡ. ಅದು ಇನ್ನೊಂದು ಮಗ್ಗುಲನ್ನು ಪಡೆಯುವುದು. ಅಪಖ್ಯಾತಿಯ ಭೀತಿಯು ನಿಮ್ಮನ್ನು ಕಾಡುವುದು. ಆಸ್ತಿಯನ್ನು ಖರೀದಿಸುವ ಬಗ್ಗೆ ಸಮಾಲೋಚನೆ ನಡೆಸಬಹುದು. ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಬೇಕು. ನಿಮ್ಮ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ನೀವು ತೊಡಗಿಸಿಕೊಳ್ಳುತ್ತೀರಿ. ನಿಮ್ಮ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯಲಿ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ತಯಾರಿಯಲ್ಲಿ ಶ್ರಮಿಸಬೇಕಾಗುತ್ತದೆ. ವಾಹನದ ದಾಖಲೆಗಳನ್ನು ಪರಿಶೀಲಿಸಿಕೊಂಡು ಚಲಾಯಿಸಿ. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಲೆಕ್ಕಪತ್ರದ ವಿಚಾರದಲ್ಲಿ ಪಾರದರ್ಶಕತೆ ಇರಲಿ. ನಿಮ್ಮ ಆತಂಕದಿಂದ ಆನಂದಿಸುವವರು ಇದ್ದಾರೆ ಎಚ್ಚರ ಇರಲಿ.
ಧನು ರಾಶಿ: ನಿಮ್ಮ ಪರಿಶ್ರಮವನ್ನು ಕಂಡು ಯಾರಾದರೂ ಸಹಕಾರ ನೀಡಬಹುದು. ಆಸ್ತಿಗೆ ಸಂಬಂಧಿಸಿದಂತೆ ನ್ಯಾಯದ ಮಾರ್ಗವು ಮುಖ್ಯವಾಗಿರಲಿ. ವ್ಯಾಪಾರದಲ್ಲಿ ಮೋಸದಿಂದ ನಿಮ್ಮ ವಸ್ತುವು ಬದಲಾಗಬಹುದು. ಹೊಸ ವ್ಯಕ್ತಿಗಳ ಜೊತೆ ವ್ಯವಹರಿಸುವಾಗ ಧೈರ್ಯವನ್ನು ಕಳೆದುಕೊಳ್ಳದೇ ನಿರ್ಬಿಡೆಯಿಂದ ಇರಿ. ನೀವು ಯಾರಿಗಾದರೂ ಕೊಟ್ಟ ಭರವಸೆಯನ್ನು ಪೂರೈಸುವಿರಿ. ನಿಮ್ಮ ಸಂಗಾತಿಯ ವೃತ್ತಿಜೀವನದ ಬಗ್ಗೆ ನೀವು ದೊಡ್ಡ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನೀವು ಬಹಳ ಸಮಯದ ಅನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಸಂಗಾತಿಯ ನಡುವಣ ಭಿನ್ನಾಭಿಪ್ರಾಯವನ್ನು ಮಾತನಾಡಿ ಪರಿಹರಿಸಬಹುದು. ನಿಮ್ಮ ಹಳೆಯ ತಪ್ಪುಗಳಿಂದ ನೀವು ಕಲಿಯಬೇಕು. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ದೇಹದಂಡನೆಯಿಂದ ಹೊಸ ಖಾಯಿಲೆಯು ಬರಬಹುದು.
ಮಕರ ರಾಶಿ: ಇಂದು ಅನುಕೂಲಕರವಾದ ಪರಿಸ್ಥಿತಿಗಳನ್ನು ನೀವೇ ಸೃಷ್ಟಿಸಿಕೊಳ್ಳಬೇಕಾಗುವುದು. ಕಷ್ಟಪಟ್ಟು ಕೆಲಸ ಮಾಡಿಯೇ ಯಶಸ್ಸು ಗಳಿಸುವಿರಿ. ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಸಾಮಾಜಿಕ ಗೌರವ ಸಿಗುವುದು. ವಿದ್ಯಾರ್ಥಿಗಳ ಬಹು ನಿರೀಕ್ಷೆ ತಪ್ಪಾಗುವ ಸಾಧ್ಯತೆ ಇದೆ. ಅವರಿಗೆ ಸಮಾಧಾನವನ್ನು ಹೇಳಬೇಕಾಗಬಹುದು. ಆಲೋಚನೆಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಬಹುದು. ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ತಪ್ಪು ವಿಷಯಗಳಿಗೆ ಗಮನ ಕೊಡುವುದನ್ನು ತಪ್ಪಿಸಿ. ಇಂದು ಕೆಲವು ಸಂದರ್ಭದಲ್ಲಿ ಸುಳ್ಳು ಹೇಳಬೇಕಾಗಬಹುದು. ನಿಮ್ಮ ಸಂಪೂರ್ಣ ಗಮನವು ವೈಯಕ್ತಿಕ ವಿಷಯಗಳ ಮೇಲೆ ಇರುತ್ತದೆ. ನಿಮ್ಮ ಸಂತೋಷಕ್ಕಾಗಿ ನಿಮ್ಮ ಸ್ಥಾನ ಇರುವುದಿಲ್ಲ. ಮಕ್ಕಳ ಪಕ್ಷದಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಜೀವನ ಸಂಗಾತಿಯಿಂದ ನೀವು ಸಾಕಷ್ಟು ಬೆಂಬಲ ಪಡೆಯುವಿರಿ. ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಸಾಲ ಕೊಟ್ಟವರು ನಿಮ್ಮನ್ನು ಪೀಡಿಸಬಹುದು.
ಕುಂಭ ರಾಶಿ: ನಿಮ್ಮ ದಿನದ ಆರಂಭವೇ ಇಂದಿನ ಕಾರ್ಯವನ್ನು ಹೇಳುವುದು. ಕೌಟುಂಬಿಕ ಒತ್ತಡದ ಕಾರಣ ಕಾರ್ಯದ ಮೇಲೆ ಗಮನ ಕಡಿಮೆಯಾಗಿ ಬೇರೆ ಏನನ್ನಾದರೂ ಮಾಡುವಿರಿ. ಸಮಯವು ನಿಮಗೆ ಕೆಲವು ಅವಕಾಶವನ್ನು ನೀಡುವುದು. ವ್ಯಾಪಾರ ಚಟುವಟಿಕೆಗಳು ಸುಧಾರಿಸುತ್ತವೆ, ಆರ್ಥಿಕ ಪರಿಸ್ಥಿತಿ ಮೊದಲಿನಂತೆಯೇ ಇರುತ್ತದೆ. ವ್ಯಾಪಾರ ಯೋಜನೆಗಳಲ್ಲಿ ಗಂಭೀರವಾಗಿ ಕೆಲಸ ಮಾಡಬೇಕಾಗುತ್ತದೆ. ಪತಿ-ಪತ್ನಿಯರ ನಡುವಿನ ಸಂಬಂಧಗಳು ಸುಧಾರಿಸುತ್ತವೆ. ಎದುರಾಳಿಯು ನಿಮ್ಮ ವಿರುದ್ಧ ಸಂಚು ಮಾಡಬಹುದು. ಮನೆಯನ್ನು ನವೀಕರಿಸಲು ಸಹ ನೀವು ಹೆಚ್ಚು ಗಮನಹರಿಸುತ್ತೀರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ಆಕಸ್ಮಿಕ ಧನಲಾಭದಿಂದ ಸಂತಸವು ಇರಲಿದೆ. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ನಿಮ್ಮ ಪ್ರೀತಿಗೆ ಬೆಲೆ ಸಿಗದೇಹೋದೀತು.
ಮೀನ ರಾಶಿ: ಇಂದು ಆರ್ಥಿಕತೆಯ ಮೂಲಕ ನಿಮ್ಮ ಆಸೆಯನ್ನು ಪೂರ್ಣಮಾಡಿಕೊಳ್ಳುವಿರಿ. ನಿಮ್ಮ ಮನಸ್ಸಿಗೆ ಒಪ್ಪಿಗೆಯಾದರಷ್ಟೇ ಇಂದಿನ ಜವಾಬ್ದಾರಿಯನ್ನು ನಿರ್ವಹಿಸಿ. ಮುಖ್ಯ ಕಾರ್ಯದ ಮೊದಲು ಮೊದಲು ಆಪ್ತವಲಯದಲ್ಲಿ ಚರ್ಚಿಸಿ. ವ್ಯವಹಾರದಲ್ಲಿ ನೀವು ಮೇಲುಗೈ ಆಗಲಿದೆ. ಆರೋಗ್ಯ ಸಮಸ್ಯೆಯಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯವನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಸಂತಾನ ಸುದ್ದಿಯು ನಿಮಗೆ ಖುಷಿ ಕೊಟ್ಟೀತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಸಹೋದರನಿಂದ ಆರ್ಥಿಕ ಸಹಕಾರವನ್ನು ನಿರೀಕ್ಷಿಸುವಿರಿ. ಆರೋಗ್ಯವು ಉತ್ತಮವಾಗಲಿದ್ದು, ಮೊದಲಿನ ಸ್ಥಿತಿಗೆ ಮರಳುವಿರಿ. ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟಮಾಡುವ ಆಲೋಚನೆ ಇರಲಿದೆ.
ಲೋಹಿತ ಹೆಬ್ಬಾರ್-8762924271 (what’s app only)