AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಸ್ವಾಭಿಮಾನಕ್ಕೆ ತೊಂದರೆಯಾದರೆ ಈ ರಾಶಿಯವರಿಗೆ ಸಹಿಲಾಗದು

ರಾಶಿ ಭವಿಷ್ಯ ಭಾನುವಾರ(ಸೆ.22): ನಿಮ್ಮ ಆಪ್ತೆರ ಜೊತೆ ಮೃದುವಾಗಿ ವರ್ತಿಸಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯವಾಗಿರಲಿ. ವಿವಾಹದ ವಿಚಾರದಲ್ಲಿ ಒಳ್ಳೆಯದಾಗಲಿದೆ. ಹಿತೈಷಿಗಳ ಮಾತಿನ ಮೇಲೆ‌ ನಂಬಿಕೆ ಇರಲಿ. ನಿಮ್ಮನ್ನು ಹೊಗಳಿ ಶೂಲಕ್ಕೆ ಏರಿಸಬಹುದು. ಹಾಗಾದರೆ ಸೆಪ್ಟೆಂಬರ್​ 22ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಸ್ವಾಭಿಮಾನಕ್ಕೆ ತೊಂದರೆಯಾದರೆ ಈ ರಾಶಿಯವರಿಗೆ ಸಹಿಲಾಗದು
ಸ್ವಾಭಿಮಾನಕ್ಕೆ ತೊಂದರೆಯಾದರೆ ಈ ರಾಶಿಯವರಿಗೆ ಸಹಿಲಾಗದು
TV9 Web
| Edited By: |

Updated on: Sep 22, 2024 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪಂಚಮೀ, ನಿತ್ಯ ನಕ್ಷತ್ರ: ಕೃತ್ತಿಕಾ, ಯೋಗ: ಹರ್ಷಣ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 27 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:57 ರಿಂದ 06:28, ಯಮಘಂಡ ಕಾಲ ಮಧ್ಯಾಹ್ನ 12:25 ರಿಂದ 01:56ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:26 ರಿಂದ  04:57ರ ವರೆಗೆ.

ಧನು ರಾಶಿ: ನಿಮ್ಮ ಆತುರದಿಂದ ಕೆಲವನ್ನು ನಿರ್ವಹಿಸಲಾಗದು. ಇಂದು ನಿಮ್ಮ ಹೊಸ ಉತ್ಸಾಹದಿಂದ ಅಸಂಬದ್ಧವನ್ನು ಮಾಡಿಕೊಳ್ಳಬಹುದು. ಒಳ್ಳೆಯ ಚಿಂತನೆಗಳು ಹೆಚ್ಚಾಗಲಿವೆ. ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳಿಂದ ಶಾಂತಿ ಇರುವುದು. ಸ್ವಾಭಿಮಾನಕ್ಕೆ ತೊಂದರೆಯಾದರೆ ನಿಮಗೆ ಸಹಿಲಾಗದು. ಓದುವ ಹವ್ಯಾಸವನ್ನು ಹೆಚ್ಚಿಸಿ. ಅಗತ್ಯದ ಖರ್ಚುಗಳಿಗೆ ಮಾತ್ರ ಪ್ರಾಧಾನ್ಯ ನೀಡಿ. ಹಣದ ಹರಿವು ಇಂದು ಮಂದಗತಿಯಲ್ಲಿ ಇರುತ್ತದೆ. ವ್ಯರ್ಥ ಓಡಾಟದಿಂದ ತೊಂದರೆಯಾಗಲಿದೆ. ಎಷ್ಟೇ ಸಮಾಧನಾ ಇದ್ದರೂ ಒತ್ತಡವೂ ನಿಮಗೆ ಗೊತ್ತಿಲ್ಲದೇ ಇರಲಿದೆ. ಕೊಡಬೇಕಾದುದನ್ನು ಕೊಟ್ಟುಬಿಡಿ, ಉಳಿಸಿಕೊಳ್ಳವುದು ಬೇಡ. ಹೆಚ್ಚು ವೃತ್ತಿಗಳಲ್ಲಿ ನಿಮಗೆ ಆಯ್ಕೆಗೆ ಗೊಂದಲವಾಗಬಹುದು. ವಾಯುವಿಹಾರದಿಂದ ಆರೋಗ್ಯದಲ್ಲಿ ಚೇತರಿಕೆ ಇರುವುದು. ಇಂದು ನಿಮಗೆ ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವುದು ಇಷ್ಟವಾದೀತು. ಏನಾದರೂ ಮಾಡಿ ಕೆಲಸವನ್ನು ಪಡೆಯುವಿರಿ.

ಮಕರ ರಾಶಿ: ಇಂದು ಹೊಸ ದಾಂಪತ್ಯದಲ್ಲಿ ಸಂಭ್ರಮವಾಗಲಿದೆ. ನಿಮಗಾದ ಒಳ್ಳೆಯ ಅನುಭವವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ನೀವು ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನವನ್ನು ಇಟ್ಟಕೊಳ್ಳುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದೆ. ಮನೆಯವರನ್ನು ಕರೆದುಕೊಂಡು ದೂರದ ಪ್ರಯಾಣವನ್ನು ಮಾಡುವಿರಿ. ಆಸ್ತಿಗಾಗಿ ದಾಖಲೆಗಳನ್ನು ಬದಲಿಸುವ ಯೋಚನೆ ಮಾಡುವಿರಿ. ನಿಮ್ಮ ಯೋಗ್ಯತೆಯ ಬಗ್ಗೆ ಹಿತಶತ್ರುಗಳ ಅಪಪ್ರಚಾರ ಮಾಡಬಹುದು. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಸ್ಥಾನವನ್ನು ನಿರೀಕ್ಷಿಸಬಹುದು. ಸಂಗಾತಿಯ ಆದಾಯವನ್ನು ಬಳಸಿಕೊಳ್ಳುವಿರಿ. ನೀವು ವೃತ್ತಿಯನ್ನು ಹೊಸ ರೀತಿಯಲ್ಲಿ ನೋಡುವಿರಿ. ಸತ್ಯವನ್ನು ಮುಚ್ಚಿಡುವುದು ನಿಮ್ಮ ಮಾತಿನಲ್ಲಿ ಗೊತ್ತಾಗಲಿದೆ.‌ ಅತಿಯಾದ ಮೋಹದಿಂದ ದುಃಖವಾಗಲಿದೆ. ಎಲ್ಲ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ.

ಕುಂಭ ರಾಶಿ: ನೀವು ಇತರರ ದುರ್ಬುದ್ಧಿಯನ್ನು ಅನುಸರಿಸದೇ ಸುಮ್ಮನಿರುವಿರಿ. ಇಂದು ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಅನಿರೀಕ್ಷಿತ ಘಟನೆಗಳಿಂದ ನೀವು ಬೆಚ್ಚಿಬೀಳುವಿರಿ. ಹೊಸ ವ್ಯಕ್ತಿಯ ಪರಿಚಯದಿಂದ ಸಂತಸವಾಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಉದ್ಯೋಗಸ್ಥರಿಗೆ ಆದಾಯದಲ್ಲಿ ಅಲ್ಪ ಏರಿಕೆ ಇರಲಿದೆ. ಅವಿವಾಹಿತರಿಗೆ ವಿವಾಹಯೋಗವು ಇರಲಿದೆ. ಯಾರನ್ನೋ ದ್ವೇಷಿಸುವ ಸ್ವಭಾವವು ಬದಲಾಗಲಿ. ಉಚಿತವಾದುದನ್ನು ಪಡೆಯಲು ಶ್ರಮಿಸುವಿರಿ. ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಸುಳ್ಳು ಹೇಳಿ ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡಾರು. ಒಂಟಿತನವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಮ್ಮ ಕಾರ್ಯವನ್ನು ಮಾಡಬೇಕಾಗುವುದು. ಇನ್ನೊಬ್ಬರ ಮಾತನ್ನು ಪರಿಶೀಲಿಸದೇ ನಂಬಲಾರಿರಿ.

ಮೀನ ರಾಶಿ: ಇಂದು ನಿಮ್ಮ ದೂರಾಲೋಚನೆಯು ಸರಿಯಾದ ಹಾದಿಯಲ್ಲಿ ಇದೆಯೇ ಎಂಬುದನ್ನು ತಿಳಿದುಕೊಳ್ಳಿ. ಇಂದು ಯಾರದೋ ಮಾತಿನ ಕಾರಣಕ್ಕೆ ಮನಸ್ಸಿನೊಳಗೇ ಸಂಕಟ ಪಡುವಿರಿ. ಶಾಂತ ಚಿತ್ತದಿಂದ ಎದುರಿಸಿದರೆ ಒಳ್ಳೆಯ ಫಲ ದೊರಕಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಆತುರದಲ್ಲಿ ನಿರ್ಧಾರವನ್ನು ಮಾಡಬೇಡಿ. ವ್ಯಾಪಾರದಲ್ಲಿ ಚಾಣಾಕ್ಷತೆ ಇರುವುದು. ಮಕ್ಕಳ ಬಗ್ಗೆ ಹೆಚ್ಚು ಅನುಮಾನ ಬೇಡ. ವಿದ್ಯಾರ್ಥಿಗಳು ಓದಿನಿಂದ ಶ್ರೇಯಸ್ಸನ್ನು ಪಡೆಯುವರು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆಪ್ತೆರ ಜೊತೆ ಮೃದುವಾಗಿ ವರ್ತಿಸಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯವಾಗಿರಲಿ. ವಿವಾಹದ ವಿಚಾರದಲ್ಲಿ ಒಳ್ಳೆಯದಾಗಲಿದೆ. ಹಿತೈಷಿಗಳ ಮಾತಿನ ಮೇಲೆ‌ ನಂಬಿಕೆ ಇರಲಿ. ನಿಮ್ಮನ್ನು ಹೊಗಳಿ ಶೂಲಕ್ಕೆ ಏರಿಸಬಹುದು. ಸಮಾರಂಭದಿಂದ ನಿಮಗೆ ಸ್ವಲ್ಪ ಬದಲಾವಣೆ ಇರುವುದು. ನಿಮ್ಮ ಬಗ್ಗೆ ಯಾರೇ ನಕಾರಾತ್ಮಕ ಹೇಳಿಕೆ ಕೊಟ್ಟರೂ ಸಹಿಸುವ ತಾಳ್ಮೆ ಇರದು.

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!