AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ವ್ಯವಹಾರಿಕವಾಗಿ ಯೋಚಿಸಿ ವ್ಯಾಪಾರದಲ್ಲಿ ಬದಲಾವಣೆ ಮಾಡುವಿರಿ

ಸೆಪ್ಟೆಂಬರ್​ 22,​ 2024ರ​​ ನಿಮ್ಮ ರಾಶಿಭವಿಷ್ಯ: ವಾಹನದಿಂದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭವಿರಲಿದೆ. ವೃತ್ತಿಯಲ್ಲಿ ನಿಮಗೆ ಅಸಹಕಾರವನ್ನು ತೋರಿಸುವರು. ನೀವು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಮನಸ್ಸು ಪರಿವರ್ತನೆಯಾಗುತ್ತ ಇರುವುದು. ಹಾಗಾದರೆ ಸೆಪ್ಟೆಂಬರ್​ 22ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ವ್ಯವಹಾರಿಕವಾಗಿ ಯೋಚಿಸಿ ವ್ಯಾಪಾರದಲ್ಲಿ ಬದಲಾವಣೆ ಮಾಡುವಿರಿ
ವ್ಯವಹಾರಿಕವಾಗಿ ಯೋಚಿಸಿ ವ್ಯಾಪಾರದಲ್ಲಿ ಬದಲಾವಣೆ ಮಾಡುವಿರಿ
TV9 Web
| Edited By: |

Updated on: Sep 22, 2024 | 12:05 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪಂಚಮೀ, ನಿತ್ಯ ನಕ್ಷತ್ರ: ಕೃತ್ತಿಕಾ, ಯೋಗ: ಹರ್ಷಣ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 27 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:57 ರಿಂದ 06:28, ಯಮಘಂಡ ಕಾಲ ಮಧ್ಯಾಹ್ನ 12:25 ರಿಂದ 01:56ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:26 ರಿಂದ  04:57ರ ವರೆಗೆ.

ಮೇಷ ರಾಶಿ: ಬಿಡುವಿನ ಸಮಯದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯವನ್ನು ಮಾಡುವಿರಿ. ಸಂಪತ್ತು ಇದ್ದರೂ ಇಲ್ಲವೆಂದು ಕೊರಗುವಿರಿ. ವಾಹನದಿಂದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭವಿರಲಿದೆ. ವೃತ್ತಿಯಲ್ಲಿ ನಿಮಗೆ ಅಸಹಕಾರವನ್ನು ತೋರಿಸುವರು. ನೀವು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಮನಸ್ಸು ಪರಿವರ್ತನೆಯಾಗುತ್ತ ಇರುವುದು. ವ್ಯಾವಹಾರಿಕವಾಗಿ ಯೋಚಿಸಿ ವ್ಯಾಪಾರದಲ್ಲಿ ಬದಲಾವಣೆಯನ್ನು ತರುವಿರಿ. ಸ್ನೇಹಿತರ ಜೊತೆ ವಿನಾಕಾರಣ ವಾಗ್ವಾದ ಮಾಡುವಿರಿ. ನಿಮಗೆ ವಿರೋಧಿಗಳ ಭಯವು ಕಾಡಬಹುದು.‌ ಸಾಮಾಜಿಕ ಕೆಲಸಗಳನ್ನು ಮಾಡಲು ನೀವು ಹಿಂಜರಿಯುವಿರಿ. ನ್ಯಾಯಾಲಯದಲ್ಲಿ ನಿಮ್ಮ ಬಗ್ಗೆ ವಿರೋಧಿಗಳು ದೂರನ್ನು ಸಲ್ಲಿಸಬಹುದು. ನಿಮ್ಮದೇ ತಪ್ಪಿದ್ದರೂ ವಾದ ಮಾಡಿ ಗೆಲ್ಲುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಎಲ್ಲದಕ್ಕೂ ನಕಾರಾತ್ಮಕ ಹೇಳಿಕೆಯನ್ನು ಕೊಡುವುದು ಬೇಡ. ದಾಖಲೆಗಳಿಲ್ಲದೇ ಯಾವುದನ್ನೂ ಕೊಡುವುದು ಬೇಡ.

ವೃಷಭ ರಾಶಿ: ಇಂದು ನೀವು ಏನನ್ನಾದರೂ ನಿರೀಕ್ಷಿಸಿ ಮಾಡಿದ ಕಾರ್ಯಕ್ಕೆ ಫಲ ಸಿಗದು. ದಿನದ ಆರಂಭದಲ್ಲಿ ಉತ್ಸಾಹವಿರದು. ನಿಮ್ಮ ಮೇಲೆ‌ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲೆ ಕಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ನಿಮ್ಮ ಉದ್ಯಮವನ್ನು ಮಾಡಲಿದ್ದೀರಿ. ಆಸ್ತಿಯ ಖರೀದಿಯ ಬಗ್ಗೆ ಖಚಿತ ನಿರ್ಧಾರವನ್ನು ಮಾಡಿಕೊಳ್ಳಿ. ಆಪ್ತರಿಗೆ ಇಷ್ಟವಾಗುವುದನ್ನು ಮಾಡುವಿರಿ. ನಿಮ್ಮ ಮೇಲಿನ ವಿಶ್ವಾಸವು ಕಡಿಮೆಯಾಗಲಿದೆ. ಇಷ್ಟಪಟ್ಟವರನ್ನು ಸೇರಿ ಸಂತೋಷಪಡುವಿರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರಲಿದೆ. ನಿಮ್ಮ‌ ಸ್ವಭಾವವನ್ನು ಬದಲಿಸಿಕೊಳ್ಳಬೇಕಾಗಬಹುದು. ಪ್ರಸಿದ್ಧ ನಟರನ್ನು ಭೇಟಿಯಾಗುವಿರಿ. ಪಾಲುದಾರಿಕೆಯಿಂದ ನಷ್ಟವೆನಿಸಬಹುದು. ಇಂದು ನೀವು ಮಾತುಗಳನ್ನು ಯೋಚಿಸಿ ಆಡುವಿರಿ. ಹಿತಶತ್ರುಗಳಿಂದ ನಿಮ್ಮ ಕಾರ್ಯವನ್ನು ಗೊತ್ತಾಗದೇ ಮಾಡಿಸಿಕೊಳ್ಳುವಿರಿ. ಉದ್ಯಮಿಗಳಿಗೆ ನೌಕರರಿಂದ ಸಮಸ್ಯೆಯಾಗಬಹುದು.

ಮಿಥುನ ರಾಶಿ: ಇಂದು ಎಲ್ಲವನ್ನೂ ದೈವಲೀಲೆ ಎಂದು ಹೇಳುವುದಕ್ಕಿಂತ ಮನುಷ್ಯ ಪ್ರಯತ್ನವೂ ಸ್ವಲ್ಪ ಇರದು. ಅಂಧಾಭಿಮಾನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ‌. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿಕೊಳ್ಳಿ. ಸ್ಪರ್ಧಾತ್ಮಕವಾದ ವಿಚಾರದಲ್ಲಿ ಅಲಕ್ಷ್ಯ ಬೇಡ. ಯಾರ ಮೇಲೂ ಉದ್ಧಟತನದ ಮಾತುಗಳನ್ನು ಆಡುವುದು ಉಚಿತವಲ್ಲ. ವಿದ್ಯಾಭ್ಯಾಸವು ಕಾರಣಾಂತರಗಳಿಂದ ನಿಲ್ಲಬಹುದು. ನಿಮಗೆ ಭರವಸೆಯನ್ನು ತುಂಬುವವರು ಬೇಕಾಗಿದ್ದಾರೆ. ಮನಸ್ಸು ಬಹಳ ದುರ್ಬಲಗೊಂಡು ನಕಾರಾತ್ಮಕ ಆಲೋಚನೆಗಳತ್ತ ಹೊರಳುವುದು. ಮಕ್ಕಳ ತುಂಟಾಟವು ನಿಮಗೆ ಇಷ್ಟವಾಗುವುದು. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿ ಆಗುವುದು. ಕೃತಜ್ಞತೆಯಿಂದ ಪರೋಪಕಾರವನ್ನು ಮಾಡುವಿರಿ.

ಕರ್ಕಾಟಕ ರಾಶಿ: ಇಂದು ಮಿತ್ರರು ಸಹಾಯವನ್ನು ಕೇಳುವ ಮೊದಲೇ ನೀವೇ ಸಹಾಯ ಮಾಡುವಿರಿ. ಇಂದು ರಾಜಕೀಯ ವ್ಯಕ್ತಿಗಳಿಗೆ ಹೆಚ್ಚು ಒತ್ತಡವಿರುವುದು. ಪ್ರಶಂಸೆಯ ಕಾರಣದಿಂದ ಖುಷಿಯಾಗಿ ಕೆಲಸ ಮಾಡುವಿರಿ. ನಿಮ್ಮ ಗೌರವಕ್ಕೆ ತೊಂದರೆಯಾಗಲಿದೆ. ಯಂತ್ರಗಳ ದುರಸ್ತಿಯನ್ನು ನೀವೇ ಮಾಡುವಿರಿ. ನೀವು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟಪಡುವಿರಿ. ಸಂಗಾತಿಯ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದ ವಿಷಯವು ಬಹಳಷ್ಟು ಇರಲಿದೆ. ಆಗಾಗ ಆರೋಗ್ಯದಲ್ಲಿ ಪರಿವರ್ತನೆಯು ಕಾಣುತ್ತಿದ್ದು ವೈದ್ಯರ ಸಲಹೆಯನ್ನೂ ದೈವಜ್ಞರಿಂದ ಪರಿಹಾರವನ್ನೂ ತಿಳಿದುಕೊಳ್ಳಿ. ಅತಿಥಿಗಳಿಗೆ ಗೌರವ ತೋರಿಸುವಿರಿ. ಇಷ್ಟದವರಿಗೆ ಏನನ್ನಾದರೂ ಕೊಡಲು ಇಷ್ಟಪಡುವಿರಿ. ಯಾರಾದರೂ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮಿಂದ ಸಲಹೆಯನ್ನು ಪಡೆಯಬಹುದು. ಕೃಷಿಯು ನಿಮ್ಮ ಇಷ್ಟದ ಸಂಗತಿಯಾಗಲಿದೆ. ಮಾತಿನಿಂದ ನೋವಾಗುವುದು ಎಂಬ ಯೋಚನೆ ಇರದು.

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!