AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ಪ್ರೇಮ‌ ಜೀವನದಲ್ಲಿ ಪ್ರೀತಿ ಅತಿಯಾಗಬಹುದು, ಇಷ್ಟಪಟ್ಟವರನ್ನು ಪಡೆಯುವ ತಂತ್ರವನ್ನು ಹೂಡಬಹುದು

ಇಂದಿನ (2023 ಮೇ​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nitya Bhavishya: ಪ್ರೇಮ‌ ಜೀವನದಲ್ಲಿ ಪ್ರೀತಿ ಅತಿಯಾಗಬಹುದು, ಇಷ್ಟಪಟ್ಟವರನ್ನು ಪಡೆಯುವ ತಂತ್ರವನ್ನು ಹೂಡಬಹುದು
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 25, 2023 | 5:00 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:06 ರಿಂದ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:04 ರಿಂದ 07:40ರ ವರೆಗೆ, ಗುಳಿಕ ಕಾಲ 09:17 ರಿಂದ 10:53ರ ವರೆಗೆ.

ಮೇಷ: ನಿಮಗೆ ಸೌಕರ್ಯಗಳು ಹೆಚ್ಚಾಯಿತು ಅನ್ನಿಸಬಹುದು. ಅತಿಯಾದ ತಂತ್ರಜ್ಞಾನದ ಬಳಕೆಯಿಂದ ದೂರವಿರಲು ಬಯಸಬಹುದು. ಪ್ರೇಮ‌ಜೀವನದಲ್ಲಿ ಪ್ರೀತಿಯು ಅತಿಯಾದೀತು. ಇಷ್ಟಪಟ್ಟವರನ್ನು ಪಡೆಯುವ ತಂತ್ರವನ್ನು ಹೂಡಬಹುದು. ಭೋಜನವು ಇಂದು ಸಮೃದ್ಧವಾಗಿ ಸಿಗಲಿದೆ. ಆಪ್ತರಿಗೆಂದು ಉಡುಗೊರೆಯನ್ನು ಸಿದ್ಧಮಾಡಿಕೊಳ್ಳುವಿರಿ. ಅನಗತ್ಯ ಮಾತಿನಿಂದ ನಿಮಗೆ ಸುಸ್ತಾದೀತು.‌ ಮಾತು ಸಾಕೆನಿಸಬಹುದು. ತಾಯಿಯ ಆರೈಕೆಯಲ್ಲಿ ಸಮಯವನ್ನು ಕಳೆಯುವಿರಿ. ಆಕಸ್ಮಿಕವಾಗಿ ದೇವಾಲಯಕ್ಕೆ ಹೋಗಬೇಕಾದೀತು. ಇದು ನಿಮ್ಮ ಶುಭವನ್ನು ಹೇಳುತ್ತದೆ.‌ ಒಳ್ಳೆಯದನ್ನು ಆರಂಭಿಸಿ.

ವೃಷಭ: ನಿಮ್ಮ ಮನಸ್ಸಿಗೆ ವಿರುದ್ಧವಾದ ವಾತಾವರಣವಿದ್ದರೂ ಅದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಮುನ್ನಡೆಯುವಿರಿ. ಮಕ್ಕಳಿಗೆ ನೀವು ತೋರಿಸುವ ಪ್ರೀತಿಯು ಖುಷಿ ಕೊಡುವುದು. ಹೊಸ ಬಟ್ಟೆಯನ್ನು ಧರಿಸುವಿರಿ. ಆರೋಗ್ಯವು ಸ್ಥಿರವಾಗಿರಲಿದೆ‌. ಸಂಗಾತಿಯ ಜೊತೆ ಮಾತನಾಡದೇ ಕಿರಿಕಿರಿಯಾದೀತು. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಲಿದ್ದೀರಿ. ಆಲಸ್ಯದಿಂದ ಮನೆಯಲ್ಲಿಯೇ ಇರುವಿರಿ. ಅಸಂಬದ್ಧ ಆಲೋಚನೆಗಳು ನಿಮ್ಮನ್ನು ವಿಚಲಿತ ಗೊಳಿಸೀತು. ಖರ್ಚಿಗಾಗಿ ತಂದೆಯಿಂದ ಹಣವನ್ನು ಪಡೆಯುವಿರಿ. ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ನೀಡುವಿರಿ.

ಮಿಥುನ: ನಿಮ್ಮನ್ನು ಹಳಿದವರೇ ನಿಮ್ಮ ಸಹವಾಸ ಬಯಸಿ ಬರಬಹುದು. ಗುಣಮಟ್ಟದ ಜೀವನಕ್ಕೆ ಹೋಗಲು ಸತತವಾಗಿ ಮಾಡಿದ ಪ್ರಯತ್ನವು ಇಂದು ಫಲ ಕೊಡಬಹುದು. ಅಜಾಗರೂಕತೆಯಿಂದ ಮಾಡಿಕೊಂಡ ಎಡವಟ್ಟಿಗೆ ಸಂಕಟಪಡಬೇಕಾದೀತು. ಕಛೇರಿಯಲ್ಲಿ ಕೆಲಸದಲ್ಲಿ ಖುಷಿಯಿದ್ದು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮನ್ನು ಕಂಡು ಇತರರೂ ಖುಷಿಪಟ್ಟಾರು. ಮೇಲಧಿಕಾರಿಗಳ ಹೊಗಳಿಕೆಯು ನಿಮಗೆ ಸಿಕ್ಕೀತು. ಇದು ನಿಮ್ಮ ಎಲ್ಲ ನೋವನ್ನು ಮರೆಸಬಹುದು. ಮಾಡಬೇಕಾದುದನ್ನು ಮಾಡಿಯೇ ತೀರುವಿರಿ.

ಕಟಕ: ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲು ದೂರದಿಂದ ಹೋಗುವಿರಿ. ಜನರು ನಿಮ್ಮನ್ನು ಬಹಳ ಪ್ರೀತಿಯಿಂದ ನೋಡುವರು.‌ ನಿಮ್ಮದೇ ವಸ್ತುವಾದರೂ ನಿಮಗೆ ಗೊತ್ತಾಗದೇ ಹೋಗುವ ಸಾಧ್ಯತೆ ಇದೆ. ಕುಟುಂಬದ ಜೊತೆ ಸಂತೋಷವನ್ನು ಹಂಚಿಕೊಳ್ಳಲು ಬಯಸುವಿರಿ. ನಿಮ್ಮ ಪ್ರೇಮವು ಬಹಳ ಅಚ್ಚುಕಟ್ಟಾಗಿ ಇರುವುದು. ಯಾರದೋ ಮಾತಿನ‌ ಮೇಲೆ ನಂಬಿಕೆ ಇಟ್ಟುಕೊಳ್ಳುವುದು ಪೂರ್ಣ ಸರಿಯಲ್ಲ.‌ ನಿಮ್ಮ‌ ಪರೀಕ್ಷೆಯೂ ಬೇಕಾದೀತು. ಕೃಷಿಯಲ್ಲಿ ಸಾಧಿಸುವ ಛಲವು ಬಂದೀತು.

ಸಿಂಹ: ನಿಮ್ಮ ಬಳಿ ಇರುವುದನ್ನು ಇನ್ನೊಬ್ಬರಿಗೆ ಕೊಡುವ ಮನಸ್ಸು ಇರದು. ಅಧಿಕವಾದ ಮಾತುಗಳು ನಿಮ್ಮ ಸ್ವಭಾವವನ್ನು ತಿಳಿಸುವುದು. ಎಷ್ಟೋ ದಿನದ ಕನಸು ನನಸಾಗುವ ಸಾಧ್ಯತೆ ಇದೆ. ನಿಮ್ಮ ಬಗ್ಗೆ ನಿಮಗೆ ಬೇಸರ ಎನಿಸಬಹುದು. ಸಾಲವನ್ನು ಮರಳಿ ಪಡೆಯಲು ತಂತ್ರವನ್ನು ಬಳಸುವಿರಿ. ಪ್ರೀತಿಯನ್ನು ಹಂಚಿಕೊಳ್ಳಲು ಸಮಯಕ್ಕಾಗಿ ಕಾಯಬಹುದು. ಹೊಸ ತಂತ್ರಜ್ಞಾನವನ್ನು ಕಲಿಯುವ ಮನಸ್ಸಾದೀತು. ಹಿರಿಯರ ಮಾತಿಗೆ ಎದುರಾಡುವುದು ಅಭ್ಯಾಸವಾದೀತು. ಈ ವಿಚಾರದಲ್ಲಿ ನಿಮ್ಮನ್ನು ಬದಲಿಸಿಕೊಳ್ಳಬೇಕಾದೀತು. ನಿಮ್ಮ ಉದ್ಯೋಗಕ್ಕೆ ಹೊಸ ದಿಕ್ಕು ಬರಬಹುದು.

ಕನ್ಯಾ: ನಿಮ್ಮ ಉಪಕಾರವನ್ನು ಸ್ಮರಿಸುವ ಜನರು ನಿಮಗರ ಸಿಗುವರು. ನಿಮ್ಮ ಭಾವನೆಗಳನ್ನು ಹಾಸ್ಯ ಮಾಡುವರು. ಸೌಂದರ್ಯಕ್ಕೆ ಆಕರ್ಷಿತರಾಗುವಿರಿ. ಕೆಲಸದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗದ ಸ್ಥಾನವನ್ನು ಬದಲಿಸುವ ನಿಮ್ಮನ್ನು ಬಿಟ್ಟುಕೊಡಲು ಕಛೇರಿಯು ಸಿದ್ಧವಿರುವುದಿಲ್ಲ. ನೀವೇ ಹಾಕಿಕೊಂಡ ಚೌಕಟ್ಟನ್ನು ನೀವು ಮುರಿಯಬೇಕಾದೀತು.‌ ನಿರ್ಧಾರವಾದ ವಿವಾಹವು ಮುಂದೆ ಹೋದೀತು. ನಿಮ್ಮ ಬಗ್ಗೆಯೇ ನಿಮಗೆ ತಪ್ಪಿತಸ್ಥಭಾವವು ಮೂಡಬಹುದು. ಆಪ್ತರ ಬಗ್ಗೆ ಇರುವ ನಿಮ್ಮ ಸುಪ್ತಭಾವವು ಇಂದು ಪ್ರಕಟವಾದೀತು.

ತುಲಾ: ನೀವು ಅಂದುಕೊಂಡದ್ದು ಮಾತ್ರ ಸತ್ಯ ಎನ್ನುವ ನಿರ್ಧಾರಕ್ಕೆ ಬರುವುದು ಬೇಡ.‌ ಇನ್ನೊಂದು ಮುಖವನ್ನೂ ನೊಡುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವವರಿದ್ದೀರಿ. ನೀವು ಶಿಕ್ಷಕರಾಗಿ ಇದ್ದರೆ ನಿಮಗೆ‌ ನಿಮ್ಮ‌ ವಿದ್ಯಾರ್ಥಿಗಳ ಸಹಾಯವು ಇಂದು ಸಿಗಲಿದೆ. ಸ್ನೇಹಿತರ ನಿಮ್ಮ ಜೊತೆ ಕಳೆಯಲು ಬಯಸಬಹುದು. ನೆರೆಹೊರೆಯವರು ನಿಮ್ಮನ್ನು ಗಮನಿಸಬಹುದು.‌ ಆಹಾರ ಉತ್ಪನ್ನದ ಮಾರಾಟವು ನಿಮಗೆ ಲಾಭದಾಯಕವಾಗಲಿದೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ: ಉದ್ಯೋಗದಲ್ಲಿ ನಿಮ್ಮ ಲಾಭದ ಅಂಶವನ್ನು ಹೆಚ್ಚು ಮಾಡಿಕೊಳ್ಳಲು ಯೋಜನೆಯನ್ನು ಹಾಕಿಕೊಳ್ಳುವಿರಿ. ಹರಟೆಯಿಂದ ಇಂದಿನ ದಿನವು ಮುಕ್ತಾಯವಾಗುವುದು. ಕಛೇರಿಯ ಕೆಲಸದ ಒತ್ತಡದಲ್ಲಿ ಮನೆಯ ಕೆಲಸಗಳು ಮರೆಯಾಗಬಹುದು. ಜೀವನೋಪಾಯಕ್ಕೆ ಯಾವುದಾದರೂ‌ ಇನ್ನೊಂದು ವೃತ್ತಿಯನ್ನು ಆಶ್ರಯಿಸುವಿರಿ. ಅವಸರದಲ್ಲಿ ಏನಾನ್ನಾದರೂ ಮಾಡಿಕೊಳ್ಳಬೇಕಾದೀತು. ಇನ್ನೊಬ್ಬರನ್ನು ನೋಡಿ ನಗುವುದು ಬೇಡ. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ವರ್ತನೆಯು ಬೇರೆಯವರಿಗೆ ಸರಿಯಾಗದು.

ಧನು: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಸ್ನೇಹಿತರ ಸಹಾಯದಿಂದ ಹೊಸ ಉದ್ಯಮವನ್ನು ಆರಂಭಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉನ್ನತ ಸ್ಥಾನ ಸಿಗಲು ಅವಕಾಶಗಳಿದ್ದರೂ ಕಾಲಕ್ಕಾಗಿ ಕಾಯಬೇಕಾಗಿದೆ. ವ್ಯಕ್ತಿಗತ ದೋಷಗಳನ್ನು ಮರೆತು ಮುನ್ನಡೆಯಿರಿ. ಸಮೂಹವನ್ನು ಮುನ್ನಡೆಸುವ ನಾಯಕರಾಗುವಿರಿ. ನಿಮ್ಮ ಸುಕೃತವು ಕಾಪಾಡಲಿದೆ. ನಿಮ್ಮ ದೃಷ್ಟಿಯನ್ನು ಶುದ್ಧ ಮಾಡಿಕೊಳ್ಳುವುದು ಉತ್ತಮ. ಸಾಮಾಜಿಕ ಚಟುವಟಿಕೆಗಳು ನಿಮಗೆ ಯಶಸ್ಸನ್ನು ತಂದು ಕೊಡುವುದು. ದೀರ್ಘಕಾಲದ ಹೂಡಿಕೆಗೆ ನಿಮ್ಮ ಗಟ್ಟಿಯಾದ ನಿಲುವಿರಲಿ.

ಮಕರ: ಇಂದು ನಿಮ್ಮ ಉತ್ಸಾಹವನ್ನು ಅಧಿಕಗೊಳಿಸುವ ಘಟನೆಗಳು ಇರಬಹುದು. ನಿಮ್ಮ ವಾಹನವನ್ನು ಮಾರಾಡ ಮಾಡಲಿದ್ದೀರಿ. ಹಣವು ಸಿಗದೇ ಅದೆರ ಬಗ್ಗೆ ಮೋಹವು ಕಡಿಮೆಯಾಗುವುದು. ಪ್ರೇಮಿಗಳು ದೂರಾಗುವ ಸಂಭವವಿದೆ. ನಿವೃತ್ತರಿಗೆ ಸಮಯವನ್ನು ಕಳೆಯಲು ಬಹಳ ಕಷ್ಟವಾದೀತು. ನಿಮ್ಮ ಫಲಿತಾಂಶವು ನಿನಗೆ ಖುಷಿಕೊಡುವುದು. ಭಿನ್ನಾಭಿಪ್ರಾಯಗಳು ಸಹಜವಿದ್ದರೂ ಅದನ್ನು ಉಳಿಸಿಕೊಳ್ಳುವುದು ಬೇಡ. ನಿಮ್ಮ ಸಮಯವನ್ನು ಯಾರಾದರೂ ಬಳಸಿಕೊಳ್ಳಬಹುದು. ಹತ್ತಿರದ ವ್ಯಕ್ತಿಗಳಿಗೆ ನಿಮ್ಮ ಮೇಲೆ ಅಗೌರವವೂ ಬರಬಹುದು.

ಕುಂಭ: ಮಾನಸಿಕವಾಗಿ ಆಗುವ ನೋವನ್ನು ಶಮನ ಮಾಡಿಕೊಳ್ಳಲು ದೂರಪ್ರಯಾಣ ಮಾಡಬಹುದು. ನಿಮಗೆ ಪರಿಶ್ರಮದ ಕೆಲಸವು ಸಿಕ್ಕಿ ಅದರಲ್ಲಿ ಹೆಚ್ಚು ಆನಂದ ಪಡುವಿರಿ. ಶ್ರಮ ಹೆಚ್ಚಿದ್ದರೂ ಸಂಪತ್ತೂ ತಕ್ಕಮಟ್ಟಿಗೆ ಬರಬಹುದು. ತಂದೆ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ಅದನ್ನು ಕುಳಿತು ಬಗೆ ಹರಿಸಿಕೊಳ್ಳುವುದು ಉತ್ತಮ. ಸುಮ್ಮನೇ ವಾಗ್ವಾದಗಳು ಬೇಡ. ಹೊಂದಣಿಕೆಯಿಂದ‌ ಇತ್ಯರ್ಥ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ದೂರದ ಊರಿಗೆ ಹೋಗಬೇಕಾಗಬಹುದು. ಮನೆಯಲ್ಲಿ ಅಸಮ್ಮತಿ ಇದ್ದರೂ ನಿಮ್ಮ ಹಠವೇ ಮೇಲಾಗುವುದು.

ಮೀನ: ಆರ್ಥಿಕತೆಗೆ ಸಂಬಂಧಿಸಿದಂತೆ ಮನಸ್ತಾಪಗಳು ಬರಬಹುದು. ಕಾರ್ಯಗಳಲ್ಲಿ ಹಿನ್ನಡೆಯಾಗಲಿದೆ. ಮಾಡಬೇಕು ಎಂದುಕೊಂಡ ಕೆಲಸಗಳು ಆರಂಭವಾಗದೇ ಇರಬಹುದು. ವೈವಾಹಿಕ ಜೀವನಕ್ಕೆ ಕಾಲಿಡಲು ಆತುರ ಬೇಡ. ನಿಮಗೆ ಇಷ್ಟವಾದ ಕೆಲಸವನ್ನು ಇಂದು ಮಾಡುವಿರಿ. ನಿಮಗೆ ಎಲ್ಲ ವಿಚಾರದಲ್ಲಿಯೂ ಹಿಂಜರಿಕೆ ಉಂಟಾಗಲಿದೆ. ದೈವಜ್ಞರ ಸಲಹೆ ಪಡೆದು ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ. ಮನಸ್ಸಿನಲ್ಲಿ ಏಕಾಗ್ರತೆಯ ಕೊರತೆ ಕಾಣಲಿದೆ. ಸದಾ ಚಿಂತನೆಯನ್ನು ಮಾಡುವುದು ಬಿಟ್ಟು ಮನಸ್ಸನ್ನು ಖಾಲಿ ಮಾಡಿಕೊಳ್ಳಲು ಪ್ರಯತ್ನಿಸಿ.

ಲೋಹಿತಶರ್ಮಾ – 8762924271 (what’s app only)

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!