AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿತ್ಯಭವಿಷ್ಯ; ಇಂದು ಈ ರಾಶಿಯವರಿಗೆ ಸ್ವಸಾಮರ್ಥ್ಯದಿಂದ ಯಶಸ್ಸು ಸಿಗುವುದು; ಬೇರೆಯವರ ಪ್ರಭಾವ ಕೆಲಸಕ್ಕೆ ಬಾರದು

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮಾರ್ಚ್​​​​​ 26 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ನಿತ್ಯಭವಿಷ್ಯ; ಇಂದು ಈ ರಾಶಿಯವರಿಗೆ ಸ್ವಸಾಮರ್ಥ್ಯದಿಂದ ಯಶಸ್ಸು ಸಿಗುವುದು; ಬೇರೆಯವರ ಪ್ರಭಾವ ಕೆಲಸಕ್ಕೆ ಬಾರದು
ರಾಶಿಭವಿಷ್ಯImage Credit source: freepik
Rakesh Nayak Manchi
|

Updated on: Mar 26, 2024 | 12:45 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಮಾರ್ಚ್​​​​​ 26) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಹಸ್ತಾ, ಯೋಗ : ಧ್ರುವ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:41 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:36 ರಿಂದ 11:07ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:38 ರಿಂದ 02:09

ಧನು ರಾಶಿ : ನಿಮ್ಮ ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಯಾರ ಜೊತೆಯೂ ಬೆರೆಯುವುದು ನಿಮಗೆ ಇಷ್ಟವಾಗದು. ಉದ್ಯೋಗದಲ್ಲಿ ಬಡ್ತಿಯ ನಿರೀಕ್ಷೆ ಇರುವುದು. ಬಂಧುಗಳು ನಿಮ್ಮ ಆರೋಗ್ಯವನ್ನು ವಿಚಾರಿಸಿಕೊಳ್ಳುವರು. ದುಡುಕಿನಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಉದ್ಯಮಕ್ಕೆ ಸಂಬಂಧಿಸಿದ ಸರಿಯಾದ ನಿರ್ಧಾರವನ್ನು ಯಾರಿಂದಲಾದರೂ ಪಡಡಸುಕೊಳ್ಳಿ. ಹಿರಿಯ ಅಧಿಕಾರಿಗಳ ಜೊತೆ ಸ್ನೇಹದಿಂದ ಮಾತನಾಡಿ ವಿಶ್ವಾಸ ಗಳಿಸುವಿರಿ. ಇಂದು ಬರುವ ಹಣದ ಆಧಾರದ ಮೇಲೆ ನೀವು ಯಾವ ವ್ಯವಹಾರವನ್ನೂ ಮಾಡುವುದು ಬೇಡ. ವಾಹನವನ್ನು ಚಾಲಾಯಿಸುವಾಗ ಅನೇಕ ಸಕಾರಾತ್ಮಕ ಯೋಚನೆಗಳು ಇರಲಿ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು. ಸ್ವತಂತ್ರವಾದ ಆಲೋಚನೆಯು ಇಲ್ಲದೇ ಹೋದರೆ ಕಷ್ಟವಾದೀತು‌‌. ಉದ್ಯೋಗಕ್ಕೆ ಅಲೆಯಬೇಕಾಗುವುದು.

ಮಕರ ರಾಶಿ : ಇಂದು ನಿಮಗೆ ಎಂದೋ‌ ಮಾಡಿದ ತಪ್ಪಿನ‌ ಬಗ್ಗೆ ತಿಳಿವಳಿಕೆ ಬರಬಹುದು. ಅಲ್ಪ ಲಾಭದಿಂದ ಇನ್ನಷ್ಟು ಉತ್ಸಾಹ ಹೆಚ್ಚಾಗುವುದು. ಉದ್ಯೋಗದಲ್ಲಿ ಸವಾಲಿನ ಕೆಲಸ ಕಾರ್ಯಗಳು ದೊರೆತರೂ ಸಾಧಿಸಬಲ್ಲಿರಿ. ಸಮಯೋಚಿತ ಸಲಹೆಯಿಂದ ಬರುವ ತೊಂದರೆಯು ದೂರಾಗುವುದು. ಪಾಲುದಾರಿಕೆಯಲ್ಲಿ ಕಲಹವಾಗುವ ಸಾಧ್ಯತೆ ಇದೆ. ನಿಮ್ಮ ಉದ್ಯೋಗವನ್ನು ನೀವು ಪ್ರೀತಿಸುವಿರಿ. ಕೇಳಿಕೊಂಡು ಬಂದವರಿಗೆ ನಿಮ್ಮಿಂದ ಅಲ್ಪ ಸಹಾಯ ಸಿಗುವುದು. ಅನವಶ್ಯಕವಾಗಿ ಚಿಂತನೆಯಿಂದ ನಿಮ್ಮ ಆತ್ಮವಿಶ್ವಾಸವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಸಹೋದ್ಯೋಗಿಗಳ ವರ್ತನೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ. ಭೋಗವಸ್ತುಗಳನ್ನು ಖರೀದಿ ಮಾಡುವಿರಿ. ಇವತ್ತಿಗೆ ತುರ್ತಾಗಿ ಬೇಕಾದುದನ್ನು ಸ್ನೇಹಿತರಿಂದ ಪಡೆದುಕೊಳ್ಳುವಿರಿ. ಸಹೋದರರ ನಡುವೆ ಸಂಬಂಧವು ಚೆನ್ನಾಗಿರುತ್ತದೆ.

ಕುಂಭ ರಾಶಿ : ಇಂದು ನೀವು ಪ್ರಯಾಣ ಮಾಡುವಾಗ ಹಳೆಯ ಮಿತ್ರರ ಭೇಟಿಯಾಗಬಹುದು. ಸಾಲದ ವಿಚಾರವಾಗಿ ಚಿಂತೆ ಕಾಣಿಸಿಕೊಳ್ಳುವುದು. ಉದ್ಯಮದ ವಿಚಾರದಲ್ಲಿ ಸಂಗಾತಿಯ ನಡುವೆ ವಾಗ್ವಾದ ನಡೆಯುವುದು. ಕೌಟುಂಬಿಕ ವಾತಾವರಣವು ನೀರಸ ಎನಿಸಬಹುದು. ಆದಾಯದ ಭಾಗವನ್ನು ಭವಿಷ್ಯಕ್ಕೆ ತೆಗೆದಿಡುವಿರಿ. ಬಂಧುಗಳಿಂದ ನೀವು ದೂರವಾಗುವಿರಿ. ಸದಾ ಅನ್ಯರ ಬಗ್ಗೆ ಆಲೋಚನೆ ಮಾಡುವುದನ್ನು ಬಿಡಿ. ದೇಹಕ್ಕೆ ತೊಂದರೆ ಮಾಡಿಕೊಳ್ಳುವ ಸನ್ನಿವೇಶವಿರಲಿದೆ. ಮನೆಯ ಬದಲಾವಣೆಯನ್ನು ಮಾಡುವಿರಿ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಭೂ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ. ನಿಮ್ಮ ಕಾರ್ಯವು ನಿಮಗೆ ಭಯವನ್ನು ಕೊಡುವುದು. ಇದರಿಂದ ಅಪಮಾನವು ಆಗುವುದು. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಮಸ್ಯೆಯಾಗಬಹುದು. ಹಾಸ್ಯಪ್ರಜ್ಞೆಯಿಂದ ಯಾರಾದರೂ ಹತ್ತಿರವಾಗಬಹುದು.

ಮೀನ ರಾಶಿ : ಪ್ರಭಾವವು ಯಾವುದೂ ನಿಮ್ಮ ಕೆಲಸಕ್ಕೆ ಬಾರದೇ ಸ್ವಸಾಮರ್ಥ್ಯದಿಂದ ಯಶಸ್ಸು, ಸ್ಥಾನ ಸಿಗುವುದು. ಖರೀದಿಸುವ ವಾಹನದ ಬಗ್ಗೆ ಬಹಳ ಕುತೂಹಲವಿರಲಿದೆ. ಮನಃಶಾಂತಿನ್ನು ಏಕಾಂತವಾಗಿದ್ದು ಪಡೆಯುವಿರಿ. ವಿದೇಶದಲ್ಲಿ ಇರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಆಗಲಿದ್ದು ಮನಸ್ಸು ವಿಚಲಿತವಗಲಿದೆ. ಮಿತ್ರರು ನಿಮಗೆ ಸಹಕಾರ ನೀಡಲಾರರು. ಸಾಲ ಮಾಡುವ ಸಂದರ್ಭವನ್ನು ತಂದುಕೊಳ್ಳುವುದು ಬೇಡ. ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುವರು‌. ಆಪ್ತರ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಬಹುದು. ನಿಮಗೆ ಇಂದು ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗಿದ್ದು ದೂರದ ಊರಿನಿಂದ ನೋಡಲು ಹೋಗುವಿರಿ. ಪ್ರೇಮವು ಯಾರಿಂದಲೋ ಬಹಿರಂಗವಾಗುವುದು. ಮಹಿಳಾ ಉದ್ಯೋಗಿಗಳು ಹೆಚ್ಚಿನ ಸ್ಥಾನವನ್ನು ಪಡೆಯುವಿರಿ. ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?