Horoscope May 2026: ಈ ರಾಶಿಯವರಿಗೆ ಮೇ ತಿಂಗಳಲ್ಲಿ ಆಕಸ್ಮಿಕ ಧನ ಲಾಭ

ವೃಶ್ಚಿಕ ರಾಶಿ ಮೇ ತಿಂಗಳಲ್ಲಿ ಮಿಶ್ರ ಫಲಿತಾಂಶ ಕಾಣಲಿದೆ. ಗುರು ದೃಷ್ಟಿಯಿಂದ ಆಕಸ್ಮಿಕ ಧನ ಲಾಭದ ಯೋಗವಿದೆ. ಸೂರ್ಯನಿಂದ ಉದ್ಯೋಗದಲ್ಲಿ ಪ್ರಗತಿ, ಶುಕ್ರನಿಂದ ದಾಂಪತ್ಯ ಸುಖ. ಶನಿ-ಕುಜರ ಪ್ರಭಾವದಿಂದ ನಿರ್ಧಾರಗಳಲ್ಲಿ ಗೊಂದಲ, ಕೋಪ ನಿಯಂತ್ರಣ ಅಗತ್ಯ. ಆರೋಗ್ಯ ಮತ್ತು ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ಶುಭ ಫಲಕ್ಕಾಗಿ ಪರಿಹಾರಗಳನ್ನು ಪಾಲಿಸಿ.

Horoscope May 2026: ಈ ರಾಶಿಯವರಿಗೆ ಮೇ ತಿಂಗಳಲ್ಲಿ ಆಕಸ್ಮಿಕ ಧನ ಲಾಭ
Horoscope May 2026
Image Credit source: Pinterest
Edited By:

Updated on: Apr 30, 2026 | 6:07 PM

ಎಂಟನೇ ರಾಶಿಯಾದ ವೃಶ್ಚಿಕ ರಾಶಿವರಿಗೆ ಮೇ ತಿಂಗಳಲ್ಲಿ ಮಿಶ್ರ ಫಲದ್ದಾಗಲಿದೆ. ವಿಶಾಖಾ, ಅನುರಾಧಾ ಜ್ಯೇಷ್ಠಾ ನಕ್ಷತ್ರದವರಿಗೆ ಗುರು, ಶನಿ ಮತ್ತು ಬುಧರು ಅಧಿಪತಿಗಳಾಗಿದ್ದು ಈ ಮೂರು ಗ್ರಹಗಳ ಪ್ರಭಾವ ಅಧಿಕವಾಗಿರಲಿದೆ ಹಾಗೂ ಗ್ರಹಗಳ ದೃಷ್ಟಿ, ಸ್ಥಾನ, ದಿಗ್ಬಲಗಳ ಆಧಾರದ ಮೇಲೆ ಈ ರಾಶಿಗೆ ಫಲಗಳು ಪ್ರಾಪ್ತಿಯಾಗಾಲಿವೆ.

ಶುಭ ದಶೆ:

  • ರವಿ: ಸೂರ್ಯನು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ದಿಗ್ಬಲನಾಗಿರುತ್ತಾನೆ. ಇದು ಶತ್ರುಗಳ ಮೇಲೆ ಜಯ, ಆರೋಗ್ಯ ಸುಧಾರಣೆ ಮತ್ತು ಸರ್ಕಾರಿ ಕೆಲಸಗಳಲ್ಲಿ ಯಶಸ್ಸನ್ನು ನೀಡುತ್ತದೆ.
  • ಶುಕ್ರ :ಶುಕ್ರನು ತನ್ನ ಸ್ವಕ್ಷೇತ್ರವಾದ ಏಳನೇ ಮನೆಯಲ್ಲಿರುವುದು ನಿಮ್ಮ ವೈಯಕ್ತಿಕ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಇದು ದಾಂಪತ್ಯ ಜೀವನಕ್ಕೆ ಬಹಳ ಶುಭ.
  • ಗುರು :ಗುರು ಎಂಟನೇ ಮನೆಯಲ್ಲಿದ್ದರೂ, ನಿಮ್ಮ ಧನಸ್ಥಾನ ಮತ್ತು ಸುಖಸ್ಥಾನದ ಮೇಲೆ ದೃಷ್ಟಿ ಬೀರುವುದರಿಂದ ಆಕಸ್ಮಿಕ ಧನ ಲಾಭಕ್ಕೆ ದಾರಿಯಾಗುತ್ತದೆ.

​ಅಶುಭ ದಶೆ :

​ಶನಿ, ಕುಜ, ಬುಧ :

ಐದನೇ ಮನೆಯಲ್ಲಿ ಈ ಮೂರು ಗ್ರಹಗಳ ಯುತಿ ಇರುವುದು ಸ್ವಲ್ಪ ಕಳವಳಕಾರಿ. ಇದು ಮುಖ್ಯವಾಗಿ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ, ಮಕ್ಕಳ ಆರೋಗ್ಯ ಅಥವಾ ಶಿಕ್ಷಣದ ಬಗ್ಗೆ ಚಿಂತೆ ಉಂಟಾಗಲಿದೆ.

​ಕುಜ :

ನಿಮ್ಮ ರಾಶ್ಯಾಧಿಪತಿಯಾದ ಕುಜನು ಶನಿಯೊಂದಿಗೆ ಇರುವುದರಿಂದ ಅತಿಯಾದ ಕೋಪ ಅಥವಾ ಆತುರದ ನಿರ್ಧಾರಗಳಿಂದ ಕೆಲಸಗಳು ಕೆಡುವ ಸಾಧ್ಯತೆ ಇದೆ.

​ಉದ್ಯೋಗ ಮತ್ತು ಅಧಿಕಾರ :

​ಸೂರ್ಯನು ಆರನೇ ಮನೆಯಲ್ಲಿರುವುದರಿಂದ ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಬಾಕಿ ಉಳಿದಿದ್ದ ಫೈಲ್‌ಗಳು ವಿಲೇವಾರಿಯಾಗಲಿವೆ. ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆ ಇದೆ. ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ಐದನೇ ಮನೆಯಲ್ಲಿ ಶನಿ-ಕುಜ ಇರುವುದರಿಂದ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಸಂಯಮವಿರಲಿ. ನಿಮ್ಮ ಮಾತೇ ನಿಮಗೆ ಶತ್ರುವಾಗದಂತೆ ನೋಡಿಕೊಳ್ಳಿ.

​ಪ್ರೇಮ ಮತ್ತು ವಿವಾಹ :

ಶುಕ್ರನು ಏಳನೇ ಮನೆಯಲ್ಲಿರುವುದರಿಂದ ವಿವಾಹ ಸಂಬಂಧಿ ಮಾತುಕತೆಗಳು ಯಶಸ್ವಿಯಾಗುತ್ತವೆ. ಕಂಕಣ ಬಲ ಕೂಡಿಬರುವ ಸಾಧ್ಯತೆ ಹೆಚ್ಚಿದೆ. ಪ್ರೇಮಿಗಳ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಐದನೇ ಮನೆಯಲ್ಲಿರುವ ಪಾಪಗ್ರಹಗಳ ಪ್ರಭಾವದಿಂದ ಸಂಗಾತಿಯನ್ನು ಸಂಶಯಿಸಬೇಡಿ. ಪರಸ್ಪರ ಗೌರವ ನೀಡಿದರೆ ಸಂಬಂಧ ಗಟ್ಟಿಯಾಗುತ್ತದೆ.

​ಆರ್ಥಿಕ ಮತ್ತು ಆರೋಗ್ಯ :

ಗುರುವಿನ ದೃಷ್ಟಿಯಿಂದಾಗಿ ಹಳೆಯ ಸಾಲಗಳು ತೀರುವ ಸಾಧ್ಯತೆ ಇದೆ. ಆದರೆ ಅನಗತ್ಯ ಹೂಡಿಕೆಗಳ ಬಗ್ಗೆ ಎಚ್ಚರವಿರಲಿ. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗರೂಕತೆ ಇರಲಿ. ವಾಹನ ಚಾಲನೆ ಮಾಡುವಾಗ ಅಧಿಕ ಗಮನ ಬೇಕು.

​ಕುಜ ಮತ್ತು ಶನಿಯ ಪ್ರಭಾವ ತಗ್ಗಿಸಲು ಮಂಗಳವಾರ ಸುಬ್ರಹ್ಮಣ್ಯ ಅಷ್ಟಕ ಪಠಿಸಿ. ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚುವುದು ಉತ್ತಮ.

– ಲೋಹಿತ ಹೆಬ್ಬಾರ್

Published On - 6:06 pm, Thu, 30 April 26

Follow Us