Horoscope Today 01 September : ಇಂದು ಈ ರಾಶಿಯವರ ಮೇಲೆ ಹಲವರಿಗೆ ಕನಿಕರ ಭಾವ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಶುಕ್ಲ ಪಕ್ಷದ ನವಮೀ ತಿಥಿ ಸೋಮವಾರ ವಿವೇಕ, ಉಪಕೃತಿ, ಧನಾಗಮ, ರುಚಿ ಆಹಾರ ಸೇವನೆ, ವರ್ಗಾವಣೆಯ ಭೀತಿ, ದುರಭ್ಯಾಸ, ವ್ಯಾಪಾರ ವಿನಿಮಯ ಇವೆಲ್ಲ ದಿನ ವಿಶೇಷ.

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ನವಮೀ ನಿತ್ಯನಕ್ಷತ್ರ : ಮೂಲಾ, ಯೋಗ : ಬ್ರಹ್ಮ, ಕರಣ : ಬಾಲವ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 – 43 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:54 – 09:27, ಗುಳಿಕ ಕಾಲ 14:05 – 15:38, ಯಮಗಂಡ ಕಾಲ 10:59 – 12:33
ಮೇಷ ರಾಶಿ : ನಿಮ್ಮ ನಿಲುವನ್ನು ಸಹೋದ್ಯೋಗಿಗಳು ಬಿಂಬಲಿಸುವರು. ಕಾನೂನಿಗೆ ಯೋಗ್ಯವಾದ ದಾರಿಯಲ್ಲಿ ಸಂಪಾದನೆಯನ್ನು ಆಲೋಚಿಸಿ. ಇಂದು ಸಂಗಾತಿಯು ನಿಮ್ಮ ಇಂಗಿತವನ್ನು ಅರಿತು ಕೆಲಸ ಮಾಡುವರು. ನಿಮಗೆ ಕೃತ್ರಿಮ ಮಾಡಿರುವ ಬಗ್ಗೆ ಭೀತಿ ಇರಲಿದೆ. ವಿದ್ಯಾರ್ಥಿಗಳು ಆಭ್ಯಾಸದಿಂದ ವಿಮುಖರಾಗುವಿರಿ. ಆಲಂಕಾರಿಕ ವಿಚಾರದಲ್ಲಿ ಆಸಕ್ತಿ ಹೆಚ್ಚಾಗುವುದು. ಅನಿವಾರ್ಯತೆಯನ್ನು ಸೃಷ್ಟಿ ಮಾಡಿ ಸಾಲವನ್ನು ಮಾಡಿಕೊಳ್ಳುವಿರಿ. ಅದನ್ನು ಗಮನದಲ್ಲಿ ಇಟ್ಟುಕೊಳ್ಳಿ. ತಾಯಿಯ ಜೊತೆ ಕಲಹ ಆಗುವ ಸಾಧ್ಯತೆ ಇದೆ. ಮನೆಯ ಕೆಲಸಗಳನ್ನು ಮಾಡಲು ನೀವು ಆಸಕ್ತಿಯ ತೊರುವುದಿಲ್ಲ. ಮಾತಿನಲ್ಲಿ ಚಾಣಾಕ್ಷತೆ ಇರುವಂತೆ ಅದು ಕೃತಿಯಲ್ಲಿಯೂ ಬರಬೇಕಾಗುವುದು. ಆಲಸ್ಯದಿಂದ ಇರುವಿರಿ ಇಂದು. ಸಂಗಾತಿಯ ಮೇಲೆ ಅನುಮಾನ ಬರಬಹುದು. ಶತ್ರುವನ್ನು ಮಿತ್ರನನ್ನು ಮಾಡಿಕೊಳ್ಳುವ ತಂತ್ರವನ್ನು ಹೂಡುವಿರಿ. ಹೊರಲಾಗದಷ್ಟು ಭಾರವನ್ನು ಒಯ್ಯುವುದು ಬೇಡ. ಕೆಲವು ಅಭ್ಯಾಸವು ದುರಭ್ಯಾಸವಾಗಿ ಪರಿವರ್ತನೆ ಆಗಲಿದೆ.
ವೃಷಭ ರಾಶಿ : ದಾನ ಸ್ವೀಕರಿಸಿದ ಮೇಲೆ ಜವಾಬ್ದಾರಿ ಹೆಚ್ಚಾಗಲಿದೆ. ನಿಮಗೆ ಆಗದವರಿಂದಲೇ ಸಹಕಾರವನ್ನು ಪಡೆಯಬೇಕಾಗಬಹುದು. ಇಂದು ಸ್ತ್ರೀಯರು ಸ್ವಪ್ರಯತ್ನದಿಂದ ಲಾಭ ಗಳಿಸುವರು. ಖುಷಿಯಿಂದ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನಿಮಗೆ ಬಲವಂತ ಮಾಡುವುದು ಇಷ್ಟವಾಗದು. ಸಮಾಧಾನದ ಚಿತ್ತವು ನಿಮ್ಮ ಇಂದಿನ ದಿನವನ್ನು ಚೆನ್ನಾಗಿ ಇಡುವುದು. ಪ್ರಾಣವನ್ನು ನೀವು ಆನಂದದಿಂದ ಮಾಡುವಿರಿ. ನಿಮ್ಮ ನಡೆಯು ಯಾರಿಗೂ ತಿಳಿಯದಾಗಿದೆ. ಯಾವುದೇ ಒತ್ತಡಕ್ಕೆ ಸಿಕ್ಕದೇ ಆರಾಮಾಗಿ ಇರಲು ಇಂದು ಇಷ್ಟಪಡುವಿರಿ. ಅನಿರೀಕ್ಷಿತವಾಗಿ ಧನಾಗಮನದಿಂದ ಸಂತೋಷವಾಗುವುದು. ಸಂತಾನದ ವಿಚಾರಕ್ಕೆ ವಾಗ್ವಾದ ಆಗಲಿದೆ. ನಿಮ್ಮ ಸ್ನೇಹಿತರಿಗೆ ಪ್ರತ್ಯುಪಕಾರವನ್ನು ಮಾಡಲು ಇಚ್ಛಿಸುವಿರಿ. ಕೆಲವು ಸನ್ನಿವೇಶಗಳ ನಿಮಗೆ ಪರೀಕ್ಷೆಯ ಕಾಲವಾಗಲಿದೆ. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸನ್ನು ಹಾಳುಮಾಡಬಹುದು.
ಮಿಥುನ ರಾಶಿ : ನಿಮಗಿಂತ ಕೆಳಮಟ್ಟದವರಲ್ಲಿ ಅಧೀನರಾಗಲು ಒಪ್ಪಲಾರಿರಿ. ನೀವು ಇಂದು ಆಡಿದ ದುಡುಕಿನ ಮಾತಿನಿಂದ ನಿಮ್ಮ ನೆಮ್ಮದಿ ಕೆಡುವುದು. ಇಂದು ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ನಿಮಗೆ ಸಂಬಂಧಿಸಿದ ಕೆಲಸವಷ್ಟನ್ನೇ ಮಾಡಿ. ಇನ್ನೊಬ್ಬರ ಬಗ್ಗೆ ನಿಮ್ಮ ಮಾತುಗಳು ಬೇಡ. ಸಂದರ್ಭವನ್ನು ನೀವು ಸರಿಯಾಗಿ ನಿಭಾಯಿಸಲು ಕಷ್ಟವಾದೀತು. ನಿಮ್ಮ ಬಗ್ಗೆ ಅಸಂಬದ್ಧ ಮಾತುಗಳನ್ನು ಕೇಳಿ ಬೇಸರವಾಗುವುದು. ಅತಿಯಾದ ಕೋಪವು ನಿಮ್ಮ ಈ ದಿನವನ್ನು ಹಾಳುಮಾಡಬಹುದು. ಓಡಾಟವು ಇಂದು ಆಯಾಸದಾಯಕವೆನಿಸುವುದು. ಬೇಡವಾದ ಸಣ್ಣ ಸಣ್ಣ ವಿಚಾರಗಳೇ ನಿಮಗೆ ತೊಂದರೆ ಕೊಡುವುದು. ಬಂಧುಗಳು ನಿಮಗೆ ಕೆಲವು ಹಿತ ನುಡಿಗಳನ್ನು ಹೇಳುವರು. ಸಮಾಜದಲ್ಲಿ ಬೆರೆಯಲು ನೀವು ಇಷ್ಟಪಡುವಿರಿ. ಅಲ್ಲಿ ಆತಂಕದ ಸಂದರ್ಭಗಳು ಬರಬಹುದು. ತಾಳ್ಮೆಯಿಂದ ಸರಿಮಾಡಿಕೊಳ್ಳಿ. ಅತಿಥಿಗಳು ನಿಮ್ಮ ಜೀವನದ ಬಗ್ಗೆ ನಕಾರಾತ್ಮಕವಾಗಿ ಹೇಳಬಹುದು.
ಕರ್ಕಾಟಕ ರಾಶಿ : ಮಕ್ಕಳ ಯಶಸ್ಸಿನ ಪಾಲುದಾರರು ಇಬ್ಬರೂ ಆಗುವಿರಿ. ನಿಮ್ಮ ಬದಲಾವಣೆಯನ್ನು ಕುಟುಂಬವು ಸ್ವೀಕರಿಸುವುದು ಕಷ್ಟ. ಇಂದು ನೀವು ದುಶ್ಚಟದಿಂದ ದೂರವಿರಲು ದಾರಿ ಹುಡುಕುವಿರಿ. ನಿಮ್ಮ ಗಾಂಭಿರ್ಯವು ಮನೆಯಲ್ಲಿ ಹೆದರಿಕೆಯನ್ನು ತರಿಸೀತು. ಹಳೆಯ ದಾಖಲೆಗಳನ್ನು ಇಂದು ಹುಡುಕುವ ಪ್ರಯತ್ನ ಮಾಡುವಿರಿ. ಧೈರ್ಯದಿಂದ ಮುನ್ನಡದರೆ ಬರುವ ಸಂಕಷ್ಟಕ್ಕೆ ದಾರಿಯೂ ಸಿಗಲಿದೆ. ಅಶುಭ ವಾರ್ತೆಯನ್ನು ಕೇಳುವ ಮನಸ್ಸಿರದು. ಅನೇಕ ವರ್ಷಗಳ ಅನಂತರ ಆದ ಸಂತಾನವು ನಿಮಗೆ ಸಂತೋಷವನ್ನು ಕೊಡಬಹುದು. ಮನೆಗೆ ಬೇಕಾದ ವಿದ್ಯುತ್ ಉಪಕರಣಗಳ ಖರೀದಿಯಾಗಲಿದೆ. ಸಹೋದರನ ಕಾರಣದಿಂದ ಇಂದು ನಿಮ್ಮ ವಿವಾಹವು ಆಗಬಹುದು. ಸುಳ್ಳುವಾರ್ತೆಯನ್ನು ಕೇಳಿ ಮೋಸ ಹೋಗಬಹುದು. ಸರಿಯಾದ ನಿರ್ಧಾರವು ನಮಗೆ ಉತ್ತಮ ಫಲವನ್ನೇ ಕೊಡಬಹುದು. ಯಾವುದನ್ನೂ ಆಗದು ಎಂಬ ಮಾತು ನಿಮ್ಮಿಂದ ಬರುವುದು ಬೇಡ. ನೀವು ಗೌಪ್ಯವಾಗಿ ಮಾಡುವ ಧನಸಂಪಾದನೆಯು ವ್ಯಕ್ತವಾಗಬಹುದು.
ಸಿಂಹ ರಾಶಿ : ಪವಿತ್ರ ಸ್ಥಳದಲ್ಲಿ ಅಧ್ಯಾತ್ಮದ ಆಸಕ್ತಿ ಬರಲಿದೆ. ವ್ಯವಹಾರವನ್ನು ತೂಗಿಸಿಕೊಂಡು ಹೋಗುವ ತಂತ್ರಗಳನ್ನು ಅರಿಯುವುದು ಉತ್ತಮ. ನೀವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಿಶ್ವಾಸವನ್ನು ಪಡೆಯಲು ನೀವು ಬಹಳ ಶ್ರಮವನ್ನು ವಹಿಸಬೇಕಾದೀತು. ಸರ್ಕಾರಿ ಉದ್ಯೋಗಿಗಳಾಗಿದ್ದರೆ ತೊಂದರೆಯಾಗಬಹುದು. ಬಂಧುಗಳ ಮಾತು ನಿಮ್ಮ ಉತ್ಸಾಹವು ಕುಗ್ಗಿಸಬಹುದು. ನಿಮ್ಮ ಮಕ್ಕಳಿಂದ ನೀವು ಪ್ರತ್ಯುತ್ತರವನ್ನು ಕೇಳುವಿರಿ. ಸಮಾಜದ ಜೊತೆ ಉತ್ತಮ ಬಾಂಧವ್ಯವು ಇರಲಿದೆ. ಬೋಧಕ ವರ್ಗದವರಿಗೆ ಕಿರಿಕಿರಿ ಸನ್ನಿವೇಶಗಳು ಇರಬಹುದು. ಮನೆಯ ಕೆಲಸದಲ್ಲಿ ನೀವು ಹೆಚ್ಚು ಸಮಯವನ್ನು ಕಳೆಯುವಿರಿ. ಹೊರಗಿನ ಶುಚಿತ್ವವೇ ಗಣನೀಯವಾಗಲಿದೆ. ಖರ್ಚುಗಳು ಸ್ವಲ್ಪ ಕಡಿಮೆ ಆಗಲಿದೆ. ಅಡುಗೆಯಲ್ಲಿ ಹೆಚ್ಚು ಆಸಕ್ತಿಯು ಇರಬಹುದು. ಇಂದು ನಿಮ್ಮ ಮುಖ್ಯ ವಿಷಯವೇ ಮರೆತುಹೋಗುವ ಸಾಧ್ಯತೆ ಇದೆ. ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡುವಿರಿ. ಅಕಾರಣವಾಗಿ ದುಃಖದ ಸನ್ನಿವೇಷಗಳು ಬರಬಹುದು. ಮನಸ್ಸಿಗೆ ಹಿಡಿಸುವ ಕೆಲಸವನ್ನು ಮಾಡಿ.
ಕನ್ಯಾ ರಾಶಿ : ಉನ್ನತ ವಿದ್ಯಾಭ್ಯಾಸಕ್ಕೆ ಸಂದರ್ಶನ ನಡೆಯಲಿದೆ. ವಿಶ್ವಾಸವನ್ನು ಗಳಿಸದೇ ನೀವು ವ್ಯವಹಾರದಲ್ಲಿ ಯಶಸ್ಸು ಸಾಧ್ಯವಾಗದು. ನಿಮ್ಮದಲ್ಲದ ವಸ್ತುವನ್ನು ಜೋಪಾನಮಾಡುವುದು ಅತ್ಯವಶ್ಯಕ. ಉದ್ಯೋಗದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ. ಮಕ್ಕಳ ಜೊತೆ ಎಲ್ಲಿಗಾದರೂ ಹೋಗಿಬರುವಿರಿ. ವಿದೇಶಕ್ಕೆ ಹೋಗಿಬರಬೇಕಾಗಿಯೂ ಬರಬಹುದು. ಕ್ರೀಡೆಯಲ್ಲಿ ಹೆಚ್ಚಿನ ಉತ್ಸಾಹವು ಇರಲಿದೆ. ಸ್ವಲ್ಪ ಆಸ್ತಿಯನ್ನು ಕಳೆದುಕೊಳ್ಳಬೇಕಾದೀತು. ಅಧಿಕಾರಿಗಳ ಸಹಾಯದಿಂದ ನಿಮ್ಮ ಕೆಲಸವನ್ನು ಸಾಧ್ಯ ಮಾಡಿಕೊಳ್ಳುವಿರಿ. ಸತ್ಯವಾದ ಮಾತುಗಳಿಂದ ಸಂತೋಷವಾಗಲಿದೆ. ಆಹಾರದ ಉದ್ಯಮದಲ್ಲಿ ನೀವು ಲಾಭವನ್ನು ಪಡೆಯುವಿರಿ. ಧಾರ್ಮಿಕ ವಿಚಾರಕ್ಕೆ ಹೆಚ್ಚಿನ ಸಮಯವನ್ನು ಕೊಡುವಿರಿ. ಆಪದ್ಧನವನ್ನು ಸಂಗ್ರಹಿಸಿಡಲು ಯೋಚಿಸುವಿರಿ. ಸಕಾರಾತ್ಮಕ ಬದಲಾವಣೆಗಳು ನಿಮ್ಮಲ್ಲಿ ಆಗಬಹುದು. ಪೆಟ್ಟು ತಿನ್ನದ ಶಿಲೆಯು ಶಿಲ್ಪವಾಗದು ಎಂಬ ಮಾತು ನೆನಪಿರಲಿ.
ತುಲಾ ರಾಶಿ : ವಿರೋಧಿಗಳ ಎದುರು ಅಬ್ಬರಿಸುವಿರಿ. ಇಂದು ನಿಮ್ಮ ಮನಸ್ಸನ್ನು ಒಂದೇ ಕಾರ್ಯದಲ್ಲಿ ನಿಲ್ಲಿಸಲಾಗದು. ನಿಮಗೆ ಶತ್ರುಗಳ ಕಡೆಯಿಂದ ಭೀತಿ ಇರುವುದು. ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ನಿಮ್ಮ ನಡೆಯು ಕೆಲವರಿಗೆ ಅಸಮಾಧಾನವನ್ನು ಉಂಟುಮಾಡಲಿದೆ. ಪುಣ್ಯಸ್ಥಳಗಳಿಗೆ ಹೋಗಬೇಕು ಎಂದು ಅನಿಸಬಹುದು. ಹಿರಿಯರ ಒತ್ತಾಯಕ್ಕೆ ಓದುವ ವಿಷಯವು ನಿಮಗೆ ಕಷ್ಟಕರ ಎನಿಸಬಹುದು. ಹೊಸ ಕೆಲಸದಲ್ಲಿ ನಿಮಗೆ ಗೊಂದಲಗಳು ಆಗಬಹುದು. ಅಭಿಪ್ರಾಯ ಬದಲಾಣೆಯೂ ವೈಮನಸ್ಯಕ್ಕೆ ಕಾರಣವಾಗಲಿದೆ. ವಿರೋಧವನ್ನು ನೀವು ಎದುರಿಸಲು ಸಿದ್ಧರಾಗಿರುವಿರಿ. ನೈಪುಣ್ಯತೆಯನ್ನು ಕರಗತಮಾಡಿಕೊಳ್ಳುವ ಅಗತ್ಯವಿದೆ. ಬಂಧುಗಳ ಜೊತೆ ನಿಮ್ಮ ವ್ಯವಹಾರವು ಒತ್ತಡ ಪೂರ್ವಕವಾಗಿ ಇರಲಿದೆ. ಇಂದು ನೀಬು ನಿಮ್ಮದೇ ಯಾವುದೋ ಗುಂಗಿನಲ್ಲಿ ಇರುವಿರಿ. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾನಸಿಕತೆ ನಿಮ್ಮನ್ನು ಖುಷಿಯಿಂದ ಇಡಲಿದೆ.
ವೃಶ್ಚಿಕ ರಾಶಿ : ಕೆಲವು ಅವಕಾಶಗಳು ತಪ್ಪಿದರೂ ಮತ್ತೆ ಸಿಗಲಿದೆ. ಭೂ ವ್ಯವಹಾರದಲ್ಲಿ ಒಬ್ಬರಿಗೂ ಹೊಂದಾಣಿಕೆ ಆಗದೇ ತಪ್ಪು ಹೋಗಬಹುದು. ನಿಮ್ಮ ಬಳಿ ಇರುವ ಸಂಪತ್ತಿನಲ್ಲಿ ಅಲ್ಪವನ್ನಾದರೂ ಸಹಾಯಕ್ಕಾಗಿ ನೀಡಿ. ಮುಂದೆ ಅದೇ ಮರಳಿ ಬರಬಹುದು. ನಿಮ್ಮನ್ನು ಸಮಾರಂಭಗಳಿಗೆ ಅತಿಥಿಯಾಗಿ ಆಹ್ವಾನಿಸಬಹುದು. ಯಂತ್ರಗಳ ವಿಚಾರದಲ್ಲಿ ತಿಳಿವಳಿಕೆ ಇದ್ದರೂ ಎಚ್ಚರಿಕೆ ಇರಲಿ. ನಿಮ್ಮ ಯೋಚನೆಯನ್ನು ಇತರರು ಲಾಭವನ್ನು ಪಡೆದುಕೊಳ್ಳಬಹುದು. ಭವಿಷ್ಯವನ್ನು ಆಲೋಚಿಸಿ ನೀವು ಮಂಕಾಗಬಹುದು. ಅಂತರಂಗದ ಕಲಹವು ಇಂದು ಪ್ರಕಡವಾದೀತು. ನಿಮ್ಮ ಪರಿಶ್ರಮವನ್ನು ಯಾರೂ ತಿಳಿಯಲಾರರು. ಒಳ್ಳೆಯ ಪದವಿಯನ್ನು ಅಲಂಕರಿಸುವ ಮನಸ್ಸಿರಲಿದೆ. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾದೀತು. ಒಳ್ಳೆಯ ಕೆಲಸದ ಕಡೆ ನಿಮ್ಮ ಗಮನವಿರಲಿದೆ. ಮಕ್ಕಳ ದುಂದುವೆಚ್ಚವನ್ನು ನೋಡಿ ಸಹಿಸಲಾಗದು. ತಾನು ಕಂಡಿದ್ದು ಮಾತ್ರವೇ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು.
ಧನು ರಾಶಿ : ಹಿತಶತ್ರುಗಳ ಷಡ್ಯಂತ್ರಕ್ಕೆ ಬಲಿಯಾಗುವಿರಿ. ಈಗ ಮಾಡುತ್ತಿರುವ ಉದ್ಯೋಗದಲ್ಲಿ ನಿಮಗೆ ಪೂರ್ಣ ತೃಪ್ತಿ ಇರದು. ಉನ್ನತ ಅಧಿಕಾರಕ್ಕಾಗಿ ಅಪೇಕ್ಷೆ ಪಟ್ಟಿದ್ದರೆ ಇಂದು ಸಿಗಬಹುದು. ನೂತನ ಸಂಸ್ಥೆಯೊಂದರ ಮುಖ್ಯಸ್ಥರೂ ಆಗಬಹುದು. ನೀವಾಡಿದ ಸುಳ್ಳಿನಿಂದ ನಿಮಗೇ ತೊಂದರೆಯಾಗಲಿದೆ. ನಿಮ್ಮ ವಿಚಾರವಾಗಿ ಕೆಲವು ಸಮಸ್ಯೆಗಳನ್ನು ಮನೆಯಲ್ಲಿ ಎದುರಿಸಬೇಕು. ಕಾರ್ಯಕ್ಕಿಂತ ಹೆಚ್ಚಾಗಿ ಅಂತಸ್ತಿನ ಬಗ್ಗೆ ನೀವು ಹೆಚ್ಚು ಒತ್ತುಕೊಡುವಿರಿ. ನ್ಯಾಯಾಲಯದಲ್ಲಿ ಇರುವ ದೂರನ್ನು ಪುನಃ ಮೇಲೆ ತರುವ ಕೆಲಸ ಮಾಡುವಿರಿ. ಪಶ್ಚಾತ್ತಾಪದಿಂದ ಮಾಡಿದ ತಪ್ಪನ್ನು ಸರಿಮಾಡಿಕೊಳ್ಳುವಿರಿ. ಮನೆಯ ಸ್ವಚ್ಛತೆಗೆ ಆದ್ಯತೆ ಕೊಡುವಿರಿ. ಹದ ತಪ್ಪಿದ ಆರೋಗ್ಯದಿಂದ ಕಷ್ಟವಾದೀತು. ಯಾರನ್ನೂ ನಂಬದವರು ಇಂದು ನಂಬಿ ಮೋಸ ಹೋಗಬಹುದು. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು. ನಿಮ್ಮ ಉದ್ದೆಶವು ದಾರಿ ತಪ್ಪುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾಧ್ಯತೆ ಇದೆ.
ಮಕರ ರಾಶಿ : ಪರಸ್ಪರ ನಂಬಿಕೆ ಬಂದಾಗ ಮಾತ್ರ ವಿನಿಮಯ ಹಾಗೂ ಉದ್ಯಮದಲ್ಲಿ ಪಾಲ್ಗೊಳ್ಳುವಿಕೆಯನ್ನು ಮಾಡಿ. ಪ್ರಯತ್ನಿಸಿದ ಕಾರ್ಯದಲ್ಲಿ ನಿಮಗೆ ಸಮಾಧಾನ ಇರುವುದು. ಮನೆಯನ್ನು ಬಿಟ್ಟು ಬರಲು ನಿಮಗೆ ಬಹಳ ನೋವಾದೀತು. ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡುವಿರಿ. ಉತ್ಸಾಹದಿಂದ ಮುಗ್ಗರಿಸುವ ಸಾಧ್ಯತೆ ಇದೆ. ಕೆಲಸದಿಂದ ನಿಮ್ಮ ವ್ಯಕ್ತಿತ್ವ ಗೊತ್ತಾಗಲಿದೆ. ಸಣ್ಣ ನೋವನ್ನೂ ನೀವು ನಿರ್ಲಕ್ಷ್ಯ ಮಾಡುವುದು ಬೇಡ. ದೇವರಿಗೆ ಅರ್ಪಿಸುವ ವಿಚಾರವನ್ನು ನೀವು ಮುಂದೂಡಬೇಡಿ. ನಿಮಗೆ ಹೊಸದಾದ ಹೆಜ್ಜೆ ಇಡುವ ಸಂಭ್ರಮ. ಆರ್ಥಿಕವಾಗಿ ಇದು ನಿಮ್ಮಲ್ಲಿ ಸುಧಾರಣೆ ಕಾಣುವಿರಿ. ಮಕ್ಕಳ ವಿವಾಜದ ಬಗ್ಗೆ ಹಿರಿಯರ ಜೊತೆ ಮಾತನಾಡುವಿರಿ. ವ್ಯಾಪಾರವು ಹೆಚ್ಚಿನ ಲಾಭವನ್ನು ಕೊಡಬಹುದು. ನಿಮ್ಮ ಚಿಂತನೆಯನ್ನು ಸರಿಯಾದ ಕ್ರಮದಲ್ಲಿ ಮುಂದುವಿರಿಸಿ. ಸಂಕಷ್ಟ ಬಂದಾದ ಎಲ್ಲದಕ್ಕೂ ಏನೋ ಒಂದು ಕಾರಣವಿರಬಹುದು ಎಂದು ಸಮಾಧಾನವನ್ನು ತಂದುಕೊಳ್ಳುವಿರಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು.
ಕುಂಭ ರಾಶಿ : ಜೀವನದ ದಿಕ್ಕನ್ನು ಪ್ರಭಾವಿಗಳ ಮಾತು ಬದಲಿಸುವುದು. ಉದ್ಯೋಗಕ್ಕಾಗಿ ದೂರ ತೆರಳುವುದು ನಿಮ್ಮವರಿಗೆ ಇಷ್ಟವಾಗದು. ಅದಕ್ಕಾಗಿ ನಿಮ್ಮ ನಿರ್ಧಾರವನ್ನು ಬದಲಿಸುವ ಪ್ರಯತ್ನ ಮಾಡುವರು. ನಿಮ್ಮ ಯಶಸ್ಸು ಕಂಡು ನಿಮ್ಮವರೇ ಸಂಕಟ ಪಡುತ್ತಾರೆ. ನಿಮ್ಮವರ ನೋವಿಗೆ ಸ್ಪಂದಿಸಲು ನಿಮಗೆ ಸಮಯ ಸಿಗದೇ ಹೋಗಬಹುದು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ವಿವಾಹಕ್ಕೆ ಬೇಕಾದ ತಯಾರಿಯನ್ನು ಮಾಡುವಿರಿ. ಪ್ರಯಾಣವನ್ನು ನೀವು ಪುಣ್ಯಸ್ಥಳಗಳಿಗೆ ಮಾಡುವಿರಿ. ವರ್ಗಾವಣೆಯನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವಿರಿ. ಪರಿಚಿತರ ಜೊತೆ ಹೋಗುವಿರಿ. ಆಪ್ತರ ಸಲಹೆಯನ್ನು ಪಡೆಯುವು ಒಳ್ಳೆಯದು. ಸಂಭನೀಯ ವಿಷಯವನ್ನು ನೀವು ಊಹಿಸುವಿರಿ. ಆಪ್ತರ ಭೇಟಿಯಿಂದ ಸಂತೋಷವಾಗಲಿದೆ. ನಿರುತ್ಸಾಹಕ್ಕೆ ಮದ್ದು ಅವಶ್ಯಕ. ಸಾಲದ ಮುಕ್ತಾಯವು ಕಷ್ಟವಾಗಬಹುದು. ಯಾವುದಾದರೂ ಘಟನೆಯು ನಿಮ್ಮನ್ನು ಇಂದು ಹೆಚ್ಚು ಕಾಡಬಹುದು. ತಾಯಿಯಿಂದ ನಿಮಗೆ ಏನಾದರೂ ಉಡುಗೊರೆಯಾಗಿ ಸಿಗಬಹುದು.
ಮೀನ ರಾಶಿ : ಎರಡು ದೋಣಿಯಲ್ಲಿ ಕಾಲು ಹಾಕಲು ಹೋಗಬೇಡಿ ಒಂದು ದೋಣಿಯ ಹುಟ್ಟನ್ನು ಬಲಮಾಡಿಕೊಳ್ಳಿ. ಇಂದು ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣುವುದು ಬೇಡ. ನಿಮ್ಮ ಸ್ಥಿರಾಸ್ತಿಯು ನಿಮ್ಮ ಕಠಿಣ ಸಮಯದಲ್ಲಿ ನೆರವಾಗಲಿದೆ. ಆರಾಮಾಗಿ ಇರಬೇಕೆಂದುಕೊಂಡರೂ ಅನೇಕ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗಬಹುದು. ಸಂಗಾತಿಯ ಜೊತೆ ಕಲಹವಾಗಬಹುದು. ಒತ್ತಡದಿಂದ ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಗಮನ ಕೊಟ್ಟರೂ ಪ್ರಯೋಜನವಾಗದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಣವನ್ನು ಖರ್ಚುಮಾಡುವಿರಿ. ಇಂದಿನ ಪ್ರಯಾಣವನ್ನು ನೀವು ಇಷ್ಟಪಡುವುದಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ವಿವೇಕದಿಂದ ವರ್ತಸಿ. ಪೂರ್ವನಿರ್ಧಾರಿತ ಪ್ರಯಾಣದಲ್ಲಿ ಬದಲಾವಣೆ ಸಾಧ್ಯ. ಸುಳ್ಳಾಡುವವರ ಬಗ್ಗೆ ಅತಿಯಾದ ಕೋಪವಿರಲಿದೆ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಆದಷ್ಟು ಬೇರೆ ಚಟುವಟಿಕೆಗಳ ಮೂಲಕ ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ.
– ಲೋಹಿತ ಹೆಬ್ಬಾರ್ – 8762924271 (what’s app only)




