Horoscope: ನಿತ್ಯ ಭವಿಷ್ಯ; ಈ ರಾಶಿಯವರಿಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ

|

Updated on: Apr 15, 2024 | 12:10 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 15 ಏಪ್ರಿಲ್​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ಈ ರಾಶಿಯವರಿಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:26ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:59 ರಿಂದ 12:33 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:06 ರಿಂದ 05:39ರ ವರೆಗೆ.

ಮೇಷ ರಾಶಿ: ಇಂದು ಯಾರ ಜೊತೆಗಾದರುಯ ಸ್ಪರ್ಧೆಗಿಳಿದರೆ ಸೋಲಾಗಬಹುದು. ಜನರ ಮಾತಿಗೆ ನಿಮ್ಮ ಪ್ರತಿಕ್ರಿಯೆ ಬೇಡ. ಗುರಿಯೇ ನಿಮಗೆ ಮುಖ್ಯವಾಗಿರಲಿ. ನಿಮ್ಮ ಕಾರ್ಯದ ಶಿಸ್ತಿಗೆ ಸಹೋದ್ಯೋಗಿಗಳ ಸಹಾಯ ಪಡೆಯಿರಿ. ಮನೆಯ ಹಿರಿಯರ ಜೊತೆ ವಾಗ್ವಾದವನ್ನು ಮಾಡುವುದು ಸರಿ ಕಾಣದು. ಯಾವುದೇ ಕೆಲಸವು ತಪ್ಪಾಗಿದ್ದರೆ, ಅನಂತರ ನಿಧಾನವಾಗಿ ವಿವರಿಸಿ. ಯಂತ್ರದ ವ್ಯಾಪಾರವು ಲಾಭದಾಯಕವಾಗುವುದು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ಹಣಕಾಸಿನ ವಿಚಾರದಲ್ಲಿ ನೀವು ನಾಜೂಕುತನವನ್ನು ಇಟ್ಟುಕೊಳ್ಳುವಿರಿ. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು. ಅದನ್ನು ಕ್ಷಮಾಪಣೆಯಿಂದ ಸರಿಮಾಡಿಕೊಳ್ಳಿ.

ವೃಷಭ ರಾಶಿ: ಇಂದು ನೀವಂದುಕೊಂಡಂತೆ ವೇಗವಾಗಿ ಸಮಯಕ್ಕೆ ಸರಿಯಾಗಿ ಕೆಲಸ ಆಗಲಿದ್ದು, ಅನಂತರ ಸ್ವಲ್ಪ ವಿಶ್ರಾಂತಿಯನ್ನೂ ಪಡೆಯುವಿರಿ. ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ವಿವಾದಿತ ವಿಷಯಗಳಲ್ಲಿ ಸದ್ಯಕ್ಕೆ ಶಾಂತವಾಗಿದ್ದು, ನೀವದನ್ನು ಪುನಃ ಆರಂಭಿಸುವುದು ಬೇಡ. ಇತರರ ತಪ್ಪುಗಳು ನಿಮಗೆ ತೊಂದರೆಯನ್ನು ಹೆಚ್ಚಿಸಬಹುದು. ಕಡಿಮೆ ಪ್ರಯತ್ನದಲ್ಲಿ ಹೆಚ್ಚಿನ ಯಶಸ್ಸು ಪಡೆಯುವ ಸಾಧ್ಯತೆಗಳಿವೆ. ಮಕ್ಕಳು ಮತ್ತು ಕುಟುಂಬದವರ ಜೊತೆಗೆ ಉತ್ತಮ ಸಮಯವನ್ನು ಕಳೆಯುವಿರಿ. ಸಂಗಾತಿಯ ಅಪನಂಬಿಕೆಯನ್ನು ಪ್ರಶ್ನಿಸುವ ಮನಸ್ಸು ಮಾಡುವಿರಿ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ದುಃಸ್ವಪ್ನವು ನಿಮ್ಮ ನಿದ್ರೆಯನ್ನು ಕೆಡಿಸೀತು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು.

ಮಿಥುನ ರಾಶಿ: ಹೊಸದಾಗಿ ವೃತ್ತಿಯನ್ನು ಆರಂಭಿಸಿದವರಿಗೆ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲ ಉಂಟಾಗುವುದು.  ಹೊಸ ಕೆಲಸವನ್ನು ಪ್ರಾರಂಭಿಸಲು ಸಹ ಇದು ಉತ್ತಮ ಸಮಯ. ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಪರಿಣಾಮಗಳನ್ನು ಪರಿಗಣಿಸಿ ಮುನ್ನಡೆಯಬೇಕು. ಅಸಂಬದ್ಧ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಿ ಇರುವುದು. ಸಂಗಾತಿಯನ್ನು ಎಲ್ಲಿಗಾದರೂ ದೂರ ಕರೆದುಕೊಂಡು ಹೋಗಲು ಆಸೆಯಾಗುವುದು. ಹಣಕಾಸಿನ ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಿಕೊಳ್ಳಿ. ಸಾಲವನ್ನು ಹಿಂದಿರುಗಿಸಲು ನಿಮ್ಮ ಹೂಡಿಕೆಯನ್ನು ತೆಗೆಯಬೇಕಾಗುವುದು. ಕೆಲವು ವ್ಯವಹಾರದಲ್ಲಿ ನೀವು ಹಿಂದುಳಿದಂತೆ ನಿಮಗೆ ಅರಿವಾಗುವುದು. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಸಂಗಾತಿಯ ವರ್ತನೆಯು ಹಿಡಿಸದೇ ಇದ್ದೀತು. ವಿದೇಶದಲ್ಲಿ ಇರವವರಿಗೆ ಅಸಮಾಧಾನ ಹೆಚ್ಚಿರುವುದು.

ಕರ್ಕ ರಾಶಿ: ಇಂದು ಯಾವುದೇ ವಿಘ್ನಗಳು ಬಾರದೇ ನಿಮ್ಮ ಕಾರ್ಯಗಳು ಸುಲಭದಲ್ಲಿ ಪೂರ್ಣಗೊಳ್ಳುವುದು. ಪದೇ ಪದೇ ಒಂದರ ಬಗ್ಗೆ ಯೋಚಿಸಿ ಮಾನಸಿಕವಾಗಿ ಹಿಂಸೆ ಮಾಡಿಕೊಳ್ಳಬೇಡಿ. ನಿಮ್ಮ ಇಷ್ಟದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತಿರುವಿರಿ. ಶೀಘ್ರದಲ್ಲೇ ಸಂಬಂಧಗಳನ್ನು ಸುಧಾರಿಸುವ ಅವಕಾಶವನ್ನು ನೀವು ಪಡೆಯಬಹುದು. ಪೂರಕ ವಾತಾವಾರಣದಿಂದ ಆತ್ಮವಿಶ್ವಾಸ ಬಲಗೊಳ್ಳಲಿದೆ. ಇಂದು ನೀವು ಕಾನೂನಾತ್ಮಕ ವಿಚಾರಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ಮಕ್ಕಳ‌ ವಿಚಾರದಲ್ಲಿ ನಿಮಗೆ ಸರಿಯಾದ ಮಾಹಿತಿ ದೊರಕದೇ ಬೇಸರಿಸುವಿರಿ. ಮನಸ್ಸಿಗೆ ನೆಮ್ಮದಿಯು ಬೇಕೆಂದು ಅನ್ನಿಸುವುದು. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಯಾರಾದರೂ ಪ್ರಾಬಲ್ಯವನ್ನು ಸಾಧಿಸಬಹುದು. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಕಾಣಿಸುವುದು.