ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯಾಪಾರ ಆದಾಯ ಮತ್ತು ವ್ಯಯಗಳು ಸಮನಾಗಿರಲಿವೆ
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯ ಸೋಮವಾರದಂದು ಹೂಡಿಕೆಯಲ್ಲಿ ಇಳಿತ, ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ, ರಾಜಕೀಯದ ನಂಟು, ಸಕಾರಾತ್ಮಕತೆ, ಮಿತ್ರತ್ವ, ದುರಸ್ತಿ, ಪ್ರಾಣಿಗಳಿಂದ ಭಯ, ವಾಗ್ವಾದಕ್ಕೆ ಜಯ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಭರಣೀ, ಯೋಗ : ವಜ್ರ, ಕರಣ : ಬಾಲವ, ಸೂರ್ಯೋದಯ – 06 – 12 am, ಸೂರ್ಯಾಸ್ತ – 05 – 54 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:40 – 09:08, ಯಮಗಂಡ ಕಾಲ 10:36 – 12:03, ಗುಳಿಕ ಕಾಲ 13:31 – 14:59.
ಮೇಷ ರಾಶಿ: ಮನಃಕ್ಲೇಶವನ್ನು ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯವಾಗುವುದು. ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡುವುದಿಲ್ಲ. ಸೇವಾಮನೋಭಾವದ ಕಾರ್ಯಕ್ಕೆ ತೃಪ್ತಿ ಕಂಡುಕೊಳ್ಳಿ. ಇದರಿಂದ ಸ್ವಲ್ಪ ನಷ್ಟವೇನೂ ಆಗದು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಅಶುಭವಾರ್ತೆಯು ಬರಬಹುದು. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ. ಇನ್ನೊಬ್ಬರ ವಸ್ತುವನ್ನು ಕೇಳಿ ಪಡೆಯಿರಿ.
ವೃಷಭ ರಾಶಿ: ಸುಲಭವಾಗಿ ಸಿಗುವ ಸಂಪತ್ತು ನಿಮಗೆ ಧಕ್ಕದು. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದು. ನಿಮ್ಮ ನೆಚ್ಚಿನ ವ್ಯಕ್ತಿಗಳನ್ನು ಆಕಸ್ಮಾತ್ತಾಗಿ ಭೇಟಿಯಾಗುವಿರಿ. ಭೂ ವ್ಯವಹಾರಕ್ಕೆ ರಾಜಕೀಯದ ನಂಟು ಬರುವುದು. ಕುಟುಂಬದ ಜೊತೆ ಪ್ರಯಾಣವನ್ನೂ ಮಾಡುವ ಆಲೋಚನೆಯು ಇರಲಿದೆ. ಸಂಗಾತಿಯ ದೌರ್ಬಲ್ಯಗಳನ್ನು ಎತ್ತಿ ಆಡುವಿರಿ. ಇರುವ ಸ್ಥಳವನ್ನು ಬಿಟ್ಟು ಬೇರೆಡೆಗೆ ಹೋಗಲು ಇಷ್ಟವಾಗದು.
ಮಿಥುನ ರಾಶಿ: ಎಷ್ಟೇ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹದಿಂದ ಕೂಡಿರಬಹುದು. ಸಾಮಾಜಿಕ ಕಾರ್ಯಗಳತ್ತ ಮನಸ್ಸು ಮಾಡುವಿರಿ. ಉದ್ಯಮದ ವಿಸ್ತಾರಕ್ಕೆ ಪಾಲುದಾರರಿಂದ ಸಹಕಾರ ಸಿಗದು. ವಿದ್ಯಾದಾನ ಮಾಡಲು ಅವಕಾಶ ತೆರೆಯಲಿದೆ. ಸಹೋದ್ಯೋಗಿಗಳು ಕಿರಿಕಿರಿಯನ್ನು ನೀಡಬಹುದು. ಕಛೇರಿಯಲ್ಲಿ ಇಂದು ನೀವು ಸ್ವತಂತ್ರರು. ಅನಾಸಕ್ತಿಗೆ ಕಳ್ಳದಾರಿಯನ್ನು ಹುಡುಕುವಿರಿ. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು.
ಕರ್ಕಾಟಕ ರಾಶಿ: ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸುವಿರಿ. ಗೆಲುವಿಗೆ ಬಹಳ ಪ್ರಯತ್ನಪಡುವಿರಿ. ವ್ಯಕ್ತಿಗಳನ್ನು ನೋಡಿ ನಿಮ್ಮ ಮಾತು ಇರಲಿ. ನಿಮ್ಮ ಸಾಧನೆಗೆ ಗೌರವವು ಸಿಗಬಹುದು. ನಿಮ್ಮ ಸ್ಥಾನದ ಬಗ್ಗೆ ನಿಮಗೆ ಭಯವಿರುವುದು. ಹಳೆಯ ಪ್ರೇಯಸಿಯಿಂದ ಪೀಡಿತರಾಗಬಹುದು. ವಿವಾಹಕ್ಕೆ ಬರುವ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಮಾತುಗಳಿಂದ ನೋವಾಗಲಿದೆ. ಕ್ಷುಲ್ಲಕ ಕಾರಣವನ್ನು ಬಿಟ್ಟು ಖುಷಿಯಿಂದ ಮಾತನಾಡಿ.
ಸಿಂಹ ರಾಶಿ: ಬಂದ ಹಣವು ಸಾಲವನ್ನು ತೀರಿಸಲಿಕ್ಕೇ ಸರಿಯಾಗುವುದು. ಅವ್ಯವಹಾರವನ್ನು ಮಾಡಲು ಸಹೋದ್ಯೋಗಿಗಳು ಪ್ರೇರಿಸಬಹುದು. ಪರೀಕ್ಷೆಯ ಫಲಿತಾಂಶದಿಂದ ನಿಮಗೆ ಸಂತೋಷವಾಗಲಿದೆ. ವ್ಯರ್ಥ ಎಂದುಕೊಂಡ ವಿದ್ಯೆಯು ಇಂದು ಪ್ರಯೋಜನಕ್ಕೆ ಬರಲಿದೆ. ಪೂರ್ವಾಗ್ರಹ ಬುದ್ಧಿಯಿಂದ ಸರಿ ತಪ್ಪುಗಳನ್ನು ನಿರ್ಣಯಿಸುವುದು ಸಾಧ್ಯವಾಗದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರ.
ಕನ್ಯಾ ರಾಶಿ: ಸಮಾಧಾನಚಿತ್ತವು ನಿಮಗೆ ಅನೇಕ ಸುಂದರ ಸಮಯವನ್ನು ಅನುಭವಿಸುವಿರಿ. ಮಕ್ಕಳಿಗೆ ಏನನ್ನೂ ಕೊಡಬಾರದು ಎಂಬ ನಿಶ್ಚಯ ಮಾಡುವಿರಿ. ಭೂಮಿಯ ವ್ಯವಹಾರದಿಂದ ಹಣವನ್ನು ಕಳೆದುಕೊಳ್ಳಬೇಕಾಗಬಹುದು. ಮನೆಯ ವಾತಾವರಣವು ನಿಮಗೆ ಹಿತವೆನಿಸುವುದು. ಬೇಡವೆನ್ನುವುದನ್ನು ಬಲದಿಂದಲೇ ಮಾಡುವಿರಿ. ನೀವಾಡುವ ಮಾತು ಇನ್ನೊಬ್ಬರ ಕೋಪವನ್ನು ಕರಗಿಸೀತು. ನಿಮ್ಮ ಬಗ್ಗೆ ಬರುವ ಆರೋಪವನ್ನು ಸುಳ್ಳು ಮಾಡಿ ತೋರಿಸಲು ಮುಂದಾಗುವಿರಿ.
ತುಲಾ ರಾಶಿ: ವಿದ್ಯಾರ್ಥಿಗಳು ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವಿರಿ. ಸಂಗಾತಿಯ ಮಾತಿಗೆ ಮರುಳಾಗುವ ಸಾಧ್ಯತೆ ಹೆಚ್ಚು. ಮಾನಸಿಕ ನೋವನ್ನು ಯಾರ ಬಳಿಯಾದರೂ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳಿ. ಗೌರವವನ್ನು ಪಕ್ಕಕ್ಕಿರಿಸಿ ಕೆಲಸ ಮಾಡಿದರೆ ಸಫಲತೆ ಸಾಧ್ಯ. ಯಾರ ಮಾತನ್ನೂ ಕೇಳುವ ಸ್ಥಿತಿ ಇಂದು ಇರುವುದಿಲ್ಲ. ಉಪಕಾರದ ಸ್ಮರಣೆ ನಿಮಗೆ ಯಶಸ್ಸನ್ನು ಕೊಟ್ಟೀತು. ಯಾರದೋ ಕಾರಣದಿಂದ ನಿಮ್ಮ ಇಂದಿನ ಗುರಿಯೇ ಬದಲಾಗಬಹುದು.
ವೃಶ್ಚಿಕ ರಾಶಿ: ಕೃಷಿಯಲ್ಲಿ ನೀವು ಬಹಳ ಆಯ್ಕೆ ಸ್ವಭಾವವುಳ್ಳವರು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಸದಾ ಯಾವುದೋ ಆಲೋಚನೆಯಲ್ಲಿ ಇರುವಿರಿ. ಹುಂಬುತನದಿಂದ ಮುನ್ನುಗ್ಗುವ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕಾದೀತು. ಅನಿರೀಕ್ಷಿತ ಘಟನೆಗಳು ನಿಮ್ಮನ್ನು ಹೆದರಿಸಬಹುದು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ. ವಿರೋಧಿಸದೇ ಒಳ್ಳೆಯ ರೀತಿಯಲ್ಲಿ ಮಾತನಾಡಿ.
ಧನು ರಾಶಿ: ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗೆ ನೀವು ಮಾನಸಿಕವಾಗಿ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ನಿಮಗೆ ಧೈರ್ಯವು ಕಡಿಮೆ ಇರುವುದು. ಏನಾದರೂ ಒಂದು ಅಸಂಬದ್ಧವನ್ನು ಮಾಡುವರು ಎಂಬ ಹಣೆಪಟ್ಟಿ ಬೀಳಬಹುದು. ಕೆಲಸದ ಬದಲಾವಣೆಯನ್ನು ಮಾಡಿಕೊಳ್ಳಿ. ಮನಸ್ಸು ಬೇಸರದಿಂದ ಯಥಾಸ್ಥಿತಿಗೆ ಮರಳಲಿದೆ. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು.
ಮಕರ ರಾಶಿ: ವಿದ್ಯಾರ್ಥಿಗಳು ಅನಗತ್ಯ ವ್ಯವಹಾರಗಳತ್ತ ಗಮನ ಹರಿಸುತ್ತಿದ್ದು ಪೋಷಕರು ಇದರ ಬಗ್ಗೆ ವಿಚಾರಿಸುವ ಅಗತ್ಯವೂ ಬರಬಹುದು. ಕೆಟ್ಟ ಆಹಾರವನ್ನು ಬಿಡುವುದು ಸೂಕ್ತ. ಕೆಲವರ ಮಾತುಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ಆಸ್ತಿಯ ವಿಚಾರದಲ್ಲಿ ನೀವು ಸೊಪ್ಪು ಹಾಕದೇ ಇರುವುದು ಅದು ಅಲ್ಲಿಯೇ ಶಾಂತವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.
ಕುಂಭ ರಾಶಿ: ಸಂಕೀರ್ಣವಾದ ಕೆಲಸವನ್ನು ಸುಲಭ ಮಾಡಿಕೊಳ್ಳುವ ಕಲೆಯಿಂದ ಪ್ರಶಂಸೆಯು ಸಿಗಲಿದೆ. ಹಿರಿಯರ ಜೊತೆ ಮಾತಿನ ಚಕಮಕಿ ಆಗಬಹುದು. ಸ್ನೇಹಿತರ ಜೊತೆ ಬೇರೆ ಪ್ರದೇಶಗಳಿಗೆ ಹೋಗುವಿರಿ. ಇಂದು ನಿಮ್ಮ ವಿದ್ಯೆಯ ಪರೀಕ್ಷೆಯೂ ಆಗುವುದು. ಧಾರ್ಮಿಕ ಆಚರಣೆಯಿಂದ ಮನಸ್ಸಿಗೆ ಸಮಾಧಾನ. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.
ಮೀನ ರಾಶಿ: ನಿಮ್ಮ ಅಭಿಮಾನಕ್ಕೆ ಘಾಸಿಯಾಗುವ ಮಾತುಗಳನ್ನು ಕೇಳಬೇಕಾಗಬಹುದು. ಎಲ್ಲ ಮಾತುಗಳೂ ಇಂದು ನಿಮಗೆ ನಕಾರಾತ್ಮಕವಾಗಿಯೇ ಕೇಳಿಸುವುದು. ಅತಿಥಿ ಸತ್ಕಾರಕ್ಕೆ ಹೆಚ್ಚಿನ ಮಹತ್ತ್ವವನ್ನು ಕೊಡುವಿರಿ. ಇಂದು ಮಕ್ಕಳ ವಿವಾಹದ ಚಿಂತೆ ಕಾಡಬಹುದು. ಕೃಷಿಗೆ ಭೂಸಮೀಕ್ಷೆ ಬೇಕಾಗುವುದು. ವಂಚನೆಯಿಂದ ನೀವು ತಪ್ಪಿಸಿಕೊಳ್ಳುವಿರಿ. ನೆಮ್ಮದಿಗೆ ಅವಕಾಶಗಳನ್ನು ಹುಡುಕುವಿರಿ. ನಿಮ್ಮ ಕೇಳಿಕೊಂಡು ಬಂದವರಿಗೆ ಸಹಾಯವನ್ನು ಮಾಡಲು ಒಪ್ಪಿಕೊಳ್ಳುವಿರಿ.
ಲೋಹಿತ್ ಹೆಬ್ಬಾರ್ – 8762924271 (what’s app only)
Published On - 1:05 am, Mon, 26 October 26




