
ಸೂರ್ಯನು ಸುಮಾರು ನವೆಂಬರ್ 17ರಿಂದ ಒಂದು ತಿಂಗಳ ಕಾಲ ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಬುಧನು ತುಲಾದಲ್ಲಿರುವ ಪ್ರಭಾವವೂ ಸೇರುತ್ತದೆ. ಡಿಸೆಂಬರ್ 3 ರವರೆಗೆ ಬುಧನು ತುಲಾದಲ್ಲಿ ಇರುವನು. ಎರಡೂ ಗ್ರಹರೂ ಸಾಮಾನ್ಯವಾಗಿ ಒಟ್ಟಿಗೆ ಸಂಚಾರ ಮಾಡುತ್ತವೆ. ರವಿಯೂ ನೀಚ ಸ್ಥಾನದಿಂದ ಹೊರಬಂದು ಬಲಿಷ್ಠನಾಗುವನು. ಈ ಎರಡು ಗ್ರಹರ ಫಲಗಳು ಹೀಗಿವೆ.
ಕನ್ಯಾ, ಮಕರ ರಾಶಿಯವರಿಗೆ ಶುಭ.
ಕನ್ಯಾ:
ಸೂರ್ಯ ಮೂರನೆಯಲ್ಲಿ, ಬುಧ ಎರಡನೆಯಲ್ಲಿ. ಧೈರ್ಯ, ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. ಧನಾಗಮನ ಮತ್ತು ಮಾತಿನಿಂದ ಲಾಭವಿದೆ. ಒಡಹುಟ್ಟಿದವರ ಸಹಕಾರ ದೊರೆಯುತ್ತದೆ.
ಮಕರ:
ಸೂರ್ಯ ಹನ್ನೊಂದರಲ್ಲಿ, ಬುಧ ಹತ್ತರಲ್ಲಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ, ಆದಾಯ ವೃದ್ಧಿ, ಹಿರಿಯರಿಂದ ಮನ್ನಣೆ ಸಿಗುತ್ತದೆ.
ಮಿಥುನ, ಕುಂಭ, ವೃಷಭ, ಕರ್ಕಾಟಕ, ಧನು, ಮೀನ ರಾಶಿಗಳಿಗೆ ಮಿಶ್ರಫಲ
ಮಿಥುನ:
ಸೂರ್ಯ ಆರರಲ್ಲಿ ಶುಭ, ಬುಧ ಐದರಲ್ಲಿ ಅಶುಭ. ಶತ್ರುಗಳ ಮೇಲೆ ಜಯ ಮತ್ತು ಆರೋಗ್ಯ ಸುಧಾರಣೆ ಇದೆ. ಆದರೆ ಮಕ್ಕಳ ವಿಷಯದಲ್ಲಿ ಮತ್ತು ವಿದ್ಯಾಭ್ಯಾಸದಲ್ಲಿ ಚಿಂತೆ ಇರಬಹುದು.
ಕುಂಭ:
ಸೂರ್ಯ ಹತ್ತರಲ್ಲಿ ಶುಭ, ಬುಧ ಒಂಬತ್ತರಲ್ಲಿ ಅಶುಭ. ವೃತ್ತಿಯಲ್ಲಿ ಉನ್ನತಿ ಇದೆ, ಆದರೆ ಭಾಗ್ಯದಲ್ಲಿ ಅಡೆತಡೆ ಮತ್ತು ಪ್ರಯಾಣದಲ್ಲಿ ವಿಳಂಬ ಸಾಧ್ಯ.
ವೃಷಭ:
ಸೂರ್ಯ ಏಳರಲ್ಲಿ ಅಶುಭ, ಬುಧ ಆರರಲ್ಲಿ ಶುಭ. ದಾಂಪತ್ಯ ಮತ್ತು ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಬರಬಹುದು. ಆದರೆ ಸಾಲ, ಶತ್ರುಬಾಧೆಗಳಿಂದ ಮುಕ್ತಿ ಸಿಗುತ್ತದೆ.
ಕರ್ಕಾಟಕ:
ಸೂರ್ಯ ಐದರಲ್ಲಿ ಅಶುಭ, ಬುಧ ನಾಲ್ಕರಲ್ಲಿ ಶುಭ. ಮಕ್ಕಳ ಬಗ್ಗೆ ಮತ್ತು ಮನಸ್ಸಿನ ಅಶಾಂತಿ ಇರುತ್ತದೆ. ಮನೆ, ವಾಹನ ಹಾಗೂ ಸುಖ ಸೌಕರ್ಯ ಲಾಭವಿದೆ.
ಧನು:
ಸೂರ್ಯ ಹನ್ನೆರಡರಲ್ಲಿ ಅಶುಭ, ಬುಧ ಹನ್ನೊಂದರಲ್ಲಿ ಶುಭ. ಖರ್ಚು ಹೆಚ್ಚಾಗುತ್ತದೆ, ನಿದ್ರಾಭಂಗ ಸಾಧ್ಯ. ಆದರೂ ಆದಾಯ ಮತ್ತು ಸ್ನೇಹಿತರ ಸಹಕಾರದಿಂದ ಸಮತೋಲನ ಇರುತ್ತದೆ.
ಮೀನ:
ಸೂರ್ಯ ಒಂಬತ್ತರಲ್ಲಿ ಅಶುಭ, ಬುಧ ಎಂಟರಲ್ಲಿ ಶುಭ. ತಂದೆ ಅಥವಾ ಹಿರಿಯರ ವಿಷಯದಲ್ಲಿ ಜಾಗ್ರತೆ ಬೇಕು. ಅನಿರೀಕ್ಷಿತ ಧನಲಾಭದ ಸೂಚನೆ ಇದೆ.
ಇದನ್ನೂ ಓದಿ: ಜಾತಕದಲ್ಲಿ ಶುಕ್ರ ದೋಷವಿದೆಯೇ? ಈ ಲಕ್ಷಣಗಳಿದ್ದರೆ ಎಚ್ಚರ, ಇಲ್ಲಿದೆ ಸರಳ ಪರಿಹಾರ!
ಮೇಷ, ಸಿಂಹ, ತುಲಾ, ವೃಶ್ಚಿಕ ಅಶುಭ.
ಮೇಷ:
ಸೂರ್ಯ ಎಂಟರಲ್ಲಿ, ಬುಧ ಏಳರಲ್ಲಿ. ಆರೋಗ್ಯದಲ್ಲಿ ಏರುಪೇರು, ಉಷ್ಣದ ತೊಂದರೆ ಬರಬಹುದು. ವ್ಯವಹಾರದಲ್ಲಿ ಆತುರ ಬೇಡ.
ಸಿಂಹ:
ಸೂರ್ಯ ನಾಲ್ಕರಲ್ಲಿ, ಬುಧ ಮೂರರಲ್ಲಿ. ಮನೆಯಲ್ಲಿ ಅಶಾಂತಿ, ತಾಯಿಯ ಆರೋಗ್ಯದ ಬಗ್ಗೆ ಗಮನ ಬೇಕು. ಮಾತಿನಲ್ಲಿ ಸಂಯಮ ಅಗತ್ಯ.
ತುಲಾ:
ಸೂರ್ಯ ಎರಡರಲ್ಲಿ, ಬುಧ ಒಂದರಲ್ಲಿ. ಕುಟುಂಬದಲ್ಲಿ ಮಾತಿನ ಜಗಳ, ಧನ ನಷ್ಟ, ಕಣ್ಣು ಅಥವಾ ಮುಖದ ತೊಂದರೆ ಸಾಧ್ಯ.
ವೃಶ್ಚಿಕ :
ಸೂರ್ಯ ಒಂದರಲ್ಲಿ, ಬುಧ ಹನ್ನೆರಡರಲ್ಲಿ. ದೇಹಾಯಾಸ, ಖರ್ಚು ಹೆಚ್ಚು, ಆತ್ಮವಿಶ್ವಾಸದ ಕೊರತೆ ಕಾಣಬಹುದು.
ಅಶುಭ ಮತ್ತು ಮಿಶ್ರಫಲ ರಾಶಿಯವರು ಪ್ರತಿದಿನ ಪ್ರಾತಃಕಾಲದಲ್ಲಿ ಆದಿತ್ಯ ಹೃದಯ ಅಥವಾ ಪಾರಾಯಣ ಮಾಡುವುದು ಬುಧವಾರ ವಿಷ್ಣು ಸಹಸ್ರನಾಮ ಪಾರಾಯಣ, ಹಸಿರು ಹೆಸರುಕಾಳು ದಾನ ಶುಭ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ