Astrology: ಈ ನಾಲ್ಕು ರಾಶಿಯವರಿಗೆ ಜನರನ್ನು ಮೂರ್ಖರನ್ನಾಗಿ ಮಾಡುವುದು ನೀರು ಕುಡಿದಷ್ಟೇ ಸಲೀಸು

| Updated By: Srinivas Mata

Updated on: Jun 12, 2021 | 11:34 AM

ಮತ್ತೊಬ್ಬರಿಗೆ ವಂಚನೆ ಮಾಡುವುದಕ್ಕೆ ತಮ್ಮ ಬುದ್ಧಿಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ಶುರು ಮಾಡಿದರೆ ಈ ನಾಲ್ಕು ರಾಶಿಯವರು ಅಸಾಧ್ಯರಾಗಿ ಬಿಡುತ್ತಾರೆ. ಆದ್ದರಿಂದ ಇವರು ತಮ್ಮ ಸದ್ಗುಣಗಳನ್ನು ಹೆಚ್ಚು ಮಾಡಿಕೊಂಡು, ದೋಷಗಳಿಂದ ಬಿಡಿಸಿಕೊಳ್ಳಬೇಕು.

Astrology: ಈ ನಾಲ್ಕು ರಾಶಿಯವರಿಗೆ ಜನರನ್ನು ಮೂರ್ಖರನ್ನಾಗಿ ಮಾಡುವುದು ನೀರು ಕುಡಿದಷ್ಟೇ ಸಲೀಸು
ರಾಶಿ ಚಕ್ರ
Follow us on

ಪ್ರತಿ ವ್ಯಕ್ತಿಯ ಆಲೋಚನೆ, ತಿಳಿವಳಿಕೆ ಮತ್ತು ಕಲಿಕೆ ವಿಧಾನ ವಿಭಿನ್ನವಾಗಿರುತ್ತದೆ. ಅದೇ ರೀತಿ ಜ್ಯೋತಿಷದ ಪ್ರಕಾರ, ಪ್ರತಿ ವ್ಯಕ್ತಿಯು ವಿಭಿನ್ನ ನಕ್ಷತ್ರ ಮತ್ತು ಸಮಯದದಲ್ಲಿ ಜನಿಸಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರ ವಿಶೇಷತೆ ಮತ್ತು ನ್ಯೂನತೆಗಳು ಸಹ ಭಿನ್ನವಾಗಿರುತ್ತವೆ. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಗುಣಗಳು ಮತ್ತು ದೋಷಗಳು ಕಂಡುಬರುತ್ತವೆ. ಆ ಪೈಕಿ ದೋಷಗಳನ್ನು ತಿದ್ದುಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ. ಕೆಲವರು ಕಷ್ಟಪಟ್ಟು, ದೋಷಗಳನ್ನು ಸದ್ಗುಣಗಳಾಗಿ ಪರಿವರ್ತಿಸುತ್ತಾರೆ. ಆದರೆ ಕೆಲವರು ಅದೃಷ್ಟದ ಸಹಾಯದಿಂದ ಕುಳಿತಲ್ಲೇ ತಮ್ಮ ದೋಷಗಳನ್ನು ಹೆಚ್ಚಿಸಿಕೊಳ್ಳುತ್ತಾರೆ.

ಜ್ಯೋತಿಷ ರೀತಿಯಲ್ಲಿ ಹೇಳಬೇಕೆಂದರೆ, ಒಬ್ಬರು ಮತ್ತೊಬ್ಬರಂತೆ ಅಲ್ಲ ಅಂದರೂ ಒಂದೇ ರಾಶಿಚಕ್ರಕ್ಕೆ ಸೇರಿದ ಜನರ ಗುಣಗಳು ಮತ್ತು ದೋಷಗಳಲ್ಲಿ ಹೋಲಿಕೆಯನ್ನು ಕಾಣಬಹುದು. ಈ ಜಗತ್ತಿನಲ್ಲಿನ ಇರುವ ಪ್ರತಿಯೊಬ್ಬರೂ ತಮ್ಮ ಒಂದಲ್ಲಾ ಒಂದು ಗುಣ, ಅವಗುಣದ ಮೂಲಕ ಆ ರಾಶಿಯ ಮತ್ತೊಬ್ಬ ವ್ಯಕ್ತಿಯೊಂದಿಗೆ ತಳುಕು ಹಾಕಿಕೊಂಡಿಯೇ ಇರುತ್ತಾರೆ. ಹಾಗೆ ನೋಡಿದರೆ ಇಡೀ ಜಗತ್ತಿನಲ್ಲಿ ಕಾಣಲಿಕ್ಕೆ ಸಿಗುವುದ ಈ ಹನ್ನೆರಡು ರಾಶಿ ಚಕ್ರದ- ಹನ್ನೆರಡು ಬಗೆಯ ಜನರೇ. ಹಾಗಂತ ಇದೇ ಅಂತಿಮ ಅಂತ ಅಲ್ಲ. ಒಬ್ಬ ವ್ಯಕ್ತಿ ಅದೆಷ್ಟು ಕಠಿಣ ಪರಿಶ್ರಮ ಹಾಕುತ್ತಾರೋ, ಎಂಥ ಪರಿಸರ ಸಿಗುತ್ತದೋ ಮತ್ತು ಆ ವ್ಯಕ್ತಿ ಸಂಸ್ಕಾರದ ಮೇಲೂ ಅವಲಂಬಿಸಿರುತ್ತದೆ.

ಆದರೆ, ಜ್ಯೋತಿಷದ ಪ್ರಕಾರ ಈ ನಾಲ್ಕು ರಾಶಿಚಕ್ರ ಚಿಹ್ನೆಗಳ ಜನರು ಮಾನಸಿಕವಾಗಿ ತುಂಬಾ ತೀಕ್ಷ್ಣರಾಗಿರುತ್ತಾರೆ. ಅವರ ಮನಸ್ಸು ನಾವೆಲ್ಲರೂ ತಂತ್ರ ಬುದ್ಧಿಗೆ ಉದಾಹರಣೆಯಾಗಿ ನೀಡುವ ನರಿಗಿಂತ ವೇಗವಾಗಿ ಚಲಿಸುತ್ತದೆ. ಇಂತಹ ಜನರು ತಮ್ಮ ಮಾತಿನ ಮೂಲಕ ಯಾರನ್ನೂ ಸುಲಭವಾಗಿ ಗೊಂದಲಕ್ಕೆ ಈಡು ಮಾಡಬಲ್ಲರು. ಯಾವುವು ಆ ನಾಲ್ಕು ರಾಶಿಗಳು ಎಂಬ ಬಗ್ಗೆ ಇಲ್ಲಿದೆ ವಿವರ, ತಿಳಿಯಿರಿ.

ಮೇಷ ರಾಶಿ:
ಮೇಷ ರಾಶಿಯ ಜನರು ತೀಕ್ಷ್ಣವಾದ ಬುದ್ಧಿಶಕ್ತಿ ಹೊಂದಿರುತ್ತಾರೆ. ಈ ಜನರು ಬಹಳ ಸ್ವತಂತ್ರ ಮನಸ್ಸಿನವರು ಮತ್ತು ಅವರ ಮನಸ್ಸಿಗೆ ಬೇಕಾದುದನ್ನೇ ಮಾಡುತ್ತಾರೆ. ಈ ರಾಶಿಚಕ್ರದ ಜನರು ತುಂಬಾ ಮಾತನಾಡುವವರಾಗಿರುತ್ತಾರೆ ಮತ್ತು ಜನರನ್ನು ಬಹಳ ಸುಲಭವಾಗಿ ಆಕರ್ಷಿಸಿಕೊಳ್ಳುತ್ತಾರೆ. ಜನರು ಸುಲಭವಾಗಿ ನಂಬುವಷ್ಟು ಆತ್ಮವಿಶ್ವಾಸದಿಂದ ಅವರು ಈ ಕೆಲಸಗಳನ್ನು ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಯಾರನ್ನಾದರೂ ಮರುಳು ಮಾಡುವುದು ಅಂದರೆ ಇವರಿಗೆ ನೀರು ಕುಡಿದಷ್ಟೇ ಸಲೀಸಾಗಿರುತ್ತದೆ.

ವೃಶ್ಚಿಕ:
ವೃಶ್ಚಿಕ ರಾಶಿಯ ಜನರು ಕೂಡ ಬಹಳ ಬುದ್ಧಿವಂತರು. ಅವರ ಮಾತನಾಡುವ ವಿಧಾನವು ತುಂಬಾ ಪರಿಣಾಮಕಾರಿಯಾಗಿದೆ. ಈ ಕಾರಣದಿಂದಾಗಿಯೇ ಜನರು ಸುಲಭವಾಗಿ ಪ್ರಭಾವಿತರಾಗುತ್ತಾರೆ. ಈ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಜನರ ಮೇಲೆ ಅಂತಹ ಪ್ರಭಾವ ಬೀರುತ್ತಾರೆ. ಅದ್ಯಾವ ಪರಿಯ ಪ್ರಭಾವ ಅಂದರೆ, ಅವರು ಸುಳ್ಳು ಹೇಳಿದರೂ ಯಾರೂ ಸುಲಭವಾಗಿ ಅನುಮಾನಿಸುವುದಿಲ್ಲ.

ಸಿಂಹ:
ಸಿಂಹ ರಾಶಿಯ ಜನರು ತಮ್ಮ ರಾಶಿ ಚಕ್ರದ ಚಿಹ್ನೆಯಂತೆ ನಿರ್ಭಯರು. ಇವರು ಯಾರಿಗೂ ಸುಲಭವಾಗಿ ಹೆದರುವುದಿಲ್ಲ. ತಮ್ಮದೇ ಆದ ಪ್ರಕಾರದಲ್ಲಿ ಕೆಲಸವನ್ನು ಮಾಡುವುದರ ಮೂಲಕ ತಮಗೆ ಬೇಕಾದುದನ್ನೇ ಮಾಡಿ ತೋರಿಸುತ್ತಾರೆ. ಈ ಜನರು ಮಾತನಾಡುವಲ್ಲಿ ನಿಸ್ಸೀಮರು ಮತ್ತು ಯಾರ ಹೃದಯವನ್ನೂ ಸುಲಭವಾಗಿ ಗೆಲ್ಲುತ್ತಾರೆ. ಆದ್ದರಿಂದ ಯಾರನ್ನಾದರೂ ಮಾತಿನಲ್ಲಿ ಬಲೆಗೆ ಕೆಡವೋದು ಇವರಿಗೆ ತುಂಬಾ ಸುಲಭ.

ಕನ್ಯಾರಾಶಿ:
ಕನ್ಯಾರಾಶಿ ರಾಶಿಯ ಜನರನ್ನು ಬಹಳ ಬುದ್ಧಿವಂತರು ಎಂದು ಹೇಳಲಾಗುತ್ತದೆ. ಸಮಯಕ್ಕೆ ಅನುಗುಣವಾಗಿ ಪ್ರೀತಿ ಮತ್ತು ವಾತ್ಸಲ್ಯ ಎರಡನ್ನೂ ಹೇಗೆ ಬಳಸಬೇಕೆಂದು ಅವರಿಗೆ ತಿಳಿದಿದೆ. ಯಾರಿಂದಾದರೂ ಕೆಲಸ ತೆಗೆಸುವುದು ಅಂದರೆ ಇವರಿಗೆ ಚಿಟಿಕೆ ಹೊಡೆದಷ್ಟೇ ಸಲೀಸು. ಇವರು ಸ್ವಭಾವತಃ ಸ್ವಲ್ಪ ಹಠಮಾರಿ. ಆದ್ದರಿಂದ ಏನು ಮಾಡಲು ನಿರ್ಧರಿಸುತ್ತಾರೋ ಅದನ್ನು ಪೂರೈಸುವ ಮೂಲಕವೇ ಸುಮ್ಮನಾಗುತ್ತಾರೆ. ಮಾತಿನಲ್ಲಿ ಚಾಣಾಕ್ಷರಾದ ಇವರಿಗೆ ಎಂಥ ಜನರೂ ಸುಲಭವಾಗಿ ಬಲೆಗೆ ಬೀಳುತ್ತಾರೆ.

ಇದನ್ನೂ ಓದಿ: Astrology: ಏನಿದು ಪಂಚ ಮಹಾಪುರುಷ ಯೋಗ? ಏನಿದರ ಶುಭ ಫಲಗಳು ಎಂಬುದನ್ನು ತಿಳಿಯಿರಿ

ಇದನ್ನೂ ಓದಿ: Astrology: ಯಾವ ರಾಶಿಗೆ ಯಾವ ಗ್ರಹ ಅಧಿಪತಿ; ಯಾವ ಗ್ರಹಕ್ಕೆ ಎಲ್ಲಿ ಉಚ್ಚ ಸ್ಥಿತಿ ನೀಚ ಸ್ಥಿತಿ ಇಲ್ಲಿದೆ ಮಾಹಿತಿ

(Aries, Scorpio, Leo and Virgo these 4 zodiac sign natives are very intelligent. They can use talent and cheat people easily)