Astrology: ಈ ನಾಲ್ಕು ರಾಶಿಯವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ಬಹಳ ತಡ, ಏಕೆ ಗೊತ್ತೆ?
ಜ್ಯೋತಿಷ್ಯದ ಪ್ರಕಾರ ಈ 5 ರಾಶಿಯವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ಬಹಳ ತಡವಾಗಿ. ಏಕೆ ಹೀಗಾಗುತ್ತದೆ ಎಂಬುದರ ವಿವರ ಇಲ್ಲಿದೆ.
ಕೆಲವರಿಗೆ ಯಶಸ್ಸು ಎಂಬುದು ಬಹಳ ಸಲೀಸು. ಮತ್ತೆ ಕೆಲವರಿಗೆ ಅದೊಂದು ತಪಸ್ಸು. ಯಾವಾಗ ದಕ್ಕುತ್ತದೆ ಎಂಬುದು ಖಾತ್ರಿ ಇಲ್ಲ; ಹಾಗಂತ ನಿಲ್ಲಿಸುವಂತಿಲ್ಲ. ಇಷ್ಟೆಲ್ಲ ಶ್ರಮಪಟ್ಟು ಇನ್ನೇನು ಕೈಗೆ ದಕ್ಕುವಾಗ ಕಳೆದುಕೊಂಡು ಬಿಟ್ಟರೆ ಎಂಬ ಆತಂಕ ಅದು. ನಿಮಗೆ ಗೊತ್ತಿರಲಿ, ಈ ನಾಲ್ಕು ರಾಶಿಯ ಜನರಿಗೆ ಯಶಸ್ಸು ಬಹಳ ಅಂದರೆ ಬಹಳ ಕಷ್ಟ ಮೇಲೆ ದೊರೆಯುತ್ತದೆ. ಅಷ್ಟರಲ್ಲಿ ಇವರು ಅದನ್ನು ಎಂಜಾಯ್ ಮಾಡುವಂಥ ಮನಸ್ಥಿತಿಯಲ್ಲೂ ಇರುವುದಿಲ್ಲ. ಏಕೆಂದರೆ, ಅಷ್ಟೆಲ್ಲ ನೋವು ಪಡಬೇಕಿತ್ತಾ ಇದಕ್ಕೆ ಎಂಬ ಭಾವ ಇವರಲ್ಲಿ ಆಳವಾಗಿ ಬೇರೂರಿ ಬಿಟ್ಟಿರುತ್ತದೆ. ಒಂದು ವೇಳೆ ನಿಮ್ಮದೂ ಈ ನಾಲ್ಕು ರಾಶಿಯ ಪೈಕಿ ಒಂದಾಗಿದ್ದರೆ ಬೇಸರಿಸಿಕೊಳ್ಳಬೇಡಿ, ಏಕೆಂದರೆ ನಿಮ್ಮ ಪಾಲಿಗೆ ಯಶಸ್ಸು ಎಂಬುದು ಸ್ವಲ್ಪ ತಡವಾಗಿಯೇ ಬರುತ್ತದೆ. ಅಲ್ಲಿಯವರೆಗೆ ಕಾಯುವ ತಾಳ್ಮೆ ನಿಮ್ಮದಾಗಿರಲಿ.
ಮಕರ ತನ್ನ ಶ್ರಮವನ್ನು ಯಾರಾದರೂ ಗುರುತಿಸಲಿ, ನಾಲ್ಕು ಒಳ್ಳೆಯ ಮಾತಾಡಲಿ ಎಂದು ಹಂಬಲಿಸುವ ಜನ ಇವರು. ಆದರೆ ಇವರಿಗೆ ತಮ್ಮ ಕೆಲಸದ ಮಾರ್ಕೆಟಿಂಗ್ ಹೇಗೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಇನ್ನು ಪಾರ್ಟಿಗಳಲ್ಲಿ ಇದ್ದುಕೊಂಡು, ಎಲ್ಲರ ಗಮನ ಸೆಳೆಯುತ್ತಾ ಇರುವುದಂತೂ ಇನ್ನೂ ದೂರವಾಯಿತು. ತಮಗೆ ಗೊತ್ತಿರುವ ಸರಿಯಾದ ಸಂಗತಿಯನ್ನೇ ನಾಲ್ಕು ಜನರ ಮುಂದೆ ಹೇಳುವಾಗ ಹಿಂಜರಿಯುವ ಸ್ವಭಾವದ ಮಕರ ರಾಶಿಯವರಿಗೆ ತಮಗೆ ಸಿಗಬೇಕಾದ್ದನ್ನು ಬಾಯಿ ಬಿಟ್ಟು ಕೇಳುವುದಕ್ಕೂ ಸಂಕೋಚ. ಜತೆಗೆ ಇನ್ಯಾರೋ ಇವರ ಪಾಲಿನ ಕ್ರೆಡಿಟ್ ತಗೊಂಡು ಬಿಡ್ತಾರೆ. ಆದ್ದರಿಂದ ಈ ರಾಶಿಯವರಿಗೆ ಯಶಸ್ಸು ದೊರೆಯುವುದು ವಿಳಂಬ ಆಗುತ್ತದೆ.
ವೃಷಭ ಸುತ್ತಲೂ ಏನಾಗುತ್ತಿದೆ ಎಂದು ಕತ್ತು ಎತ್ತಿ ಸಹ ನೋಡದೆ ದುಡಿಯುವ ಇವರಿಗೆ ಇತರರು ಗಮನಿಸಿ, ಏನನ್ನಾದರೂ ಅನುಕೂಲ ಮಾಡಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಕಂಫರ್ಟ್ ಝೋನ್ನಿಂದ ಹೊರಬರಲಾಗದ ಇವರನ್ನು ಎಲ್ಲರೂ ಬಳಸಿಕೊಳ್ಳುವವರೇ ಆಗಿರುತ್ತಾರೆ. ಜತೆಗೆ ಅಷ್ಟೇನೂ ಮಹತ್ವಾಕಾಂಕ್ಷಿಗಳಲ್ಲದ ಇವರನ್ನು ಉದ್ಯೋಗ ಸ್ಥಳದಲ್ಲಿ ಕೂಡ ಗಂಭೀರವಾಗಿ ಪರಿಗಣಿಸುವುದಿಲ್ಲ. ಇವರ ಗೈರು ಹಾಜರಿಯಲ್ಲಿ ಮಾತ್ರ ಪ್ರಾಮುಖ್ಯ ಏನು ಎಂದು ಗೊತ್ತಾಗುವುದಕ್ಕೆ ಸಾಧ್ಯ ಇರುತ್ತದೆ. ಆದರೆ ಅದಕ್ಕೂ ಅವಕಾಶ ಸಿಗದಂತೆ ಕೆಲಸ ಮಾಡಿಕೊಂಡು ಹೋಗುತ್ತಾರೆ ಈ ವೃಷಭ ರಾಶಿಯವರು.
ವೃಶ್ಚಿಕ ಸಾಮರ್ಥ್ಯದ ಬಗ್ಗೆ ತಮಗೇ ಅನುಮಾನ ಇಟ್ಟುಕೊಂಡಿರುವ ವೃಶ್ಚಿಕ ರಾಶಿಯವರು ಪದೇಪದೇ ಕೆಲಸ ಬದಲಾಯಿಸುತ್ತಾ ಅವಕಾಶ ಕಳೆದುಕೊಳ್ಳುತ್ತಿರುತ್ತಾರೆ. ಇನ್ನೇನು ಕೈಗೆ ಸಿಕ್ಕಿತು ಎನ್ನುವಾಗ ಎಂಥದ್ದೋ ಯಡವಟ್ಟು ಮಾಡಿಕೊಳ್ಳುತ್ತಾರೆ. ಎಲ್ಲಿ- ಏನನ್ನು ಮಾತನಾಡಬಾರದೋ ಅದನ್ನೇ ಮಾತನಾಡಿ, ಅವಕಾಶ ವಂಚಿತರಾಗುತ್ತಾರೆ. ಇನ್ನು ಮೇಲಧಿಕಾರಿಗಳ ಬಗ್ಗೆ ಹಗುರವಾದ ಮಾತನಾಡಿ, ಅವರ ಕಿವಿಗೇ ಅದು ಬೀಳುವಂತಾಗಿ ತಾವು ಹಿನ್ನಡೆ ಅನುಭವಿಸುತ್ತಾರೆ. ಇವರಿಗೆ ತಮ್ಮ ಮೇಲೆ ತಮಗೆ ಯಾವಾಗ ಪೂರ್ಣ ಪ್ರಮಾಣದಲ್ಲಿ ಭರವಸೆ ಬರುತ್ತದೋ ಆಗಲೇ ಉನ್ನತ ಸ್ಥಿತಿಗೆ ತಲುಪ, ಯಶಸ್ಸು ಕಾಣಲು ಸಾಧ್ಯ.
ಮೀನ ಇವರಿಗೆ ಎಷ್ಟೇ ಸಾಮರ್ಥ್ಯ ಇದ್ದರೂ ಜವಾಬ್ದಾರಿ ಮೈ ಮೇಲೆ ಹಾಕಿಕೊಂಡು ಮುಂದುವರಿಯಲ್ಲ. ತಮಗಿಂತ ಜೂನಿಯರ್ಗಳು, ಕಡಿಮೆ ಅನುಭವಸ್ಥರ ಕೈಲಿ ಜವಾಬ್ದಾರಿಯನ್ನು ಬಿಟ್ಟು, ತಾವು ಯಾವುದಕ್ಕೆ ಸಿಲುಕಬಾರದು ಎಂದುಕೊಳ್ಳುತ್ತಾರೆ. ಅದೇ ಕಾರಣಕ್ಕೆ ಇವರಿಗೆ ಜವಾಬ್ದಾರಿ ಇಲ್ಲ ಎಂದು ಮೇಲಧಿಕಾರಿಗಳು ಅಂದುಕೊಳ್ಳುತ್ತಾರೆ. ಆದರೆ ವಾಸ್ತವ ಏನೆಂದರೆ, ಇವರಿಗೆ ತಾವು ತಪ್ಪು ಮಾಡಿದೆವು ಎಂಬ ಮಾತು ಕೇಳುವುದು ಅವಮಾನದ ಸಂಗತಿ. ಅದರಲ್ಲೂ ನಾಲ್ಕು ಜನರ ಎದುರು ಏನನ್ನಾದರೂ ಅಂದರೆ ಸಹಿಸಿಕೊಳ್ಳಲಾರರು. ಆ ಸಹಿಷ್ಣುತೆ ಬಂದ ಮೇಲೆ, ಅಂದರೆ ವಯಸ್ಸಾಗಿ ಪಕ್ವವಾಗುತ್ತಾ ಬಂದ ಮೇಲೆ ಯಶಸ್ಸು ಸಿಗುತ್ತದೆ.
ಇದನ್ನೂ ಓದಿ: Marriage Astrology: ವಿಚಿತ್ರ ಕಾರಣಗಳಿಂದಾಗಿ ಈ 5 ರಾಶಿಯವರು ಮದುವೆ ಆಗದೆ ಉಳಿದು ಬಿಡುವ ಸಾಧ್ಯತೆ ಹೆಚ್ಚು!
ಇದನ್ನೂ ಓದಿ: Money management: ಈ 5 ರಾಶಿಯವರು ದುಡ್ಡು- ಕಾಸಿನ ನಿರ್ವಹಣೆಯಲ್ಲಿ ಬಲು ಗಟ್ಟಿಗರು
(These 4 Zodiac Sign People Achieve Late Success In Life According To Astrology Know Why)