Asset Purchase Astrology: 2023ರ ಏಪ್ರಿಲ್​ ತನಕ ಈ 4 ರಾಶಿಯವರಿಗೆ ವಾಹನ, ಆಸ್ತಿ ಖರೀದಿ ಯೋಗ

ಈ 4 ರಾಶಿಯವರು 2023ರ ಏಪ್ರಿಲ್​ನೊಳಗೆ ಆಸ್ತಿ, ವಾಹನ ಖರೀದಿ ಮಾಡುವ ಯೋಗ ಇದೆ ಎಂದು ಜ್ಯೋತಿಷಿಗಳು ಮಾಹಿತಿ ನೀಡಿದ್ದಾರೆ.

Asset Purchase Astrology: 2023ರ ಏಪ್ರಿಲ್​ ತನಕ ಈ 4 ರಾಶಿಯವರಿಗೆ ವಾಹನ, ಆಸ್ತಿ ಖರೀದಿ ಯೋಗ
ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ
Follow us
TV9 Web
| Updated By: Srinivas Mata

Updated on:May 07, 2022 | 6:11 PM

ಈಗ ತಿಳಿಸಲು ಹೊರಟಿರುವ ಮಾಹಿತಿ ಬಹಳ ನಿರೀಕ್ಷೆ ಹುಟ್ಟಿಸುವಂಥದ್ದು. ಏಕೆಂದರೆ, ತಮ್ಮ ಜೀವಮಾನದ ಸಾಧನೆ ಎಂದು ಇದನ್ನು ಹಲವರು ಅಂದುಕೊಂಡಿರುತ್ತಾರೆ. ತಾವು ಇರುವುದಕ್ಕೆ ಒಂದು ಮನೆ ಕಟ್ಟಬೇಕು ಎಂಬುದು ಹಲವರಿಗೆ ಇರುತ್ತದೆ, ಅದೇ ರೀತಿ ಸೈಟ್​ – ಜಮೀನು ಖರೀದಿ ಮಾಡಬೇಕು ಅಂತಿರುತ್ತದೆ. ಇನ್ನು ವಾಹನ, ಅದರಲ್ಲೂ ಕಾರು ಖರೀದಿಸಬೇಕು ಎಂಬುದು ಅಪೇಕ್ಷೆ ಆಗಿರುತ್ತದೆ. ಎಷ್ಟೋ ಬಾರಿ ಹಣ ಇದ್ದರೂ ಇವುಗಳನ್ನು ಖರೀದಿಸುವುದಕ್ಕೆ ಆಗುವುದಿಲ್ಲ. ಮತ್ತೆ ಕೆಲವರಿಗೆ ಅಚಾನಕ್ ಆಗಿ ಕೂಡಿ ಬಂದುಬಿಡುತ್ತದೆ. ಈಗ ಹೇಳಲು ಹೊರಟಿರುವುದು ಸಹ ಅಂಥ ಸಂಗತಿಯನ್ನೇ. ಜ್ಯೋತಿಷ್ಯದ (Astrology) ಪ್ರಕಾರ, ಇಲ್ಲಿ ಉಲ್ಲೇಖಿಸಿರುವ ನಾಲ್ಕು ರಾಶಿಯವರು ಈ ವರ್ಷ ಮನೆ, ಸೈಟ್- ಜಮೀನು, ವಾಹನಗಳನ್ನು ಖರೀದಿ ಮಾಡುತ್ತಾರೆ. ಅದರಿಂದ ಸುಖ ಪಡುವಂಥ ಯೋಗ ಇದೆ.

ಮೊದಲಿಗೆ ಯಾವ ರಾಶಿಯವರಿಗೆ ಈ ಯೋಗ ಇದೆ ಎನ್ನುವುದರ ಬಗ್ಗೆ ನೋಡುವುದಾದರೆ, ಮೇಷ, ಮಿಥುನ, ಸಿಂಹ ಹಾಗೂ ಧನುಸ್ಸು ರಾಶಿಯವರು ಈ ಯೋಗವನ್ನು ಕಾಣುತ್ತಾರೆ. ಆದರೆ ಎಲ್ಲರಿಗೂ ಒಂದೇ ಬಗೆಯಲ್ಲಿ ಅನುಭವಕ್ಕೆ ಬರುತ್ತದೆಯೇ ಅಂದರೆ, ಇಲ್ಲ ಎಂಬ ಉತ್ತರ ನೀಡಬೇಕಾಗುತ್ತದೆ. ಏಕೆಂದರೆ ಗ್ರಹಗಳ ದೃಷ್ಟಿ ಅನುಸಾರವಾಗಿ ಇದು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತದೆ. ಮೇಷ- ಮಿಥುನ ರಾಶಿಯವರು ಸಾಲ ಮಾಡಿಯಾದರೂ ವಾಹನ- ಆಸ್ತಿ ಖರೀದಿ ಮಾಡುತ್ತಾರೆ. ಆದರೆ ಸಿಂಹ- ಧನು ರಾಶಿಯವರಿಗೆ ಈ ರೀತಿಯಾಗಿ ಸಾಲ ಮಾಡಬೇಕಾಗಿ ಬರುವುದಿಲ್ಲ. ಹಾಗೊಂದು ವೇಳೆ ಬಂದರೂ ಅದನ್ನು ಬಹಳ ಬೇಗ ತೀರಿಸುವುದಕ್ಕೆ ಅವಕಾಶ ಸಿಗುತ್ತದೆ.

ಇನ್ನು ಮೇಷ ಮತ್ತು ಮೀನ ರಾಶಿಯವರು ವ್ಯವಹಾರ ಮಾಡುವಾಗ ಸೂಕ್ತ ಕಾನೂನು ಸಲಹೆ ಪಡೆಯುವುದು ಅತಿ ಮುಖ್ಯವಾಗುತ್ತದೆ. ಯಾಕೆಂದರೆ ಭೂಮಿ, ವಾಹನ ಖರೀದಿಯಲ್ಲಿ ಕಾನೂನು ವ್ಯಾಜ್ಯಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಸರಿಯಾದ, ಅಗತ್ಯ ದಾಖಲೆಗಳು ಇಲ್ಲ ಎಂದಾದಲ್ಲಿ, ಸಣ್ಣ ಅಪನಂಬಿಕೆ ಮೂಡಿದರೂ  ಕಾನೂನು ತಜ್ಞರ ಸಲಹೆ ಪಡೆದು, ವ್ಯವಹಾರ ಮುಂದುವರಿಸಬೇಕು.

ಸಿಂಹ- ಧನು ರಾಶಿಯವರು ತಮಗೆಲ್ಲಿ ನಷ್ಟವಾಗುತ್ತದೋ ಎಂದು ಬಹಳ ಅಂಜಿಕೆಯಲ್ಲೇ ಇರುತ್ತಾರೆ. ಆದರೂ ಅದನ್ನು ತೋರಗೊಡಬಾರದು. ಬೇಜವಾಬ್ದಾರಿ ತೋರಿಸದೆ ಮುಂದುವರಿದು ವ್ಯವಹಾರ ಮುಗಿಸಿಕೊಳ್ಳಬೇಕು. 2022ರ ಮೇ ತಿಂಗಳಿಂದ 2023ರ ಏಪ್ರಿಲ್​ ತನಕ ಇರುವ ಅವಕಾಶ ಬಳಸಿದರೆ ವಾಹನ- ಆಸ್ತಿ ಖರೀದಿ ಮಾಡುತ್ತಾರೆ.

ಇನ್ನೂ ಹೆಚ್ಚಿನ ಜ್ಯೋತಿಷ್ಯ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Marriage Astrology: ಮದುವೆ ವಿಳಂಬ ಆಗುತ್ತಿದೆಯೇ? ಇಲ್ಲಿವೆ ಪ್ರಮುಖ ಜ್ಯೋತಿಷ್ಯ ಕಾರಣಗಳು

Published On - 4:51 pm, Sat, 7 May 22

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು