ಸದಾ ಸಿಟ್ಟಿನಲ್ಲಿ‌ ಅಥವಾ ಎಲ್ಲದಕ್ಕೂ ಸಿಟ್ಟು‌ ಮಾಡುವವರ ನಕ್ಷತ್ರ ಇದು…!!

ರಾತ್ರಿಯ ಸಮಯದಲ್ಲಿ ಖಗೋಳವನ್ನು ಕಂಡರೆ ಆಶ್ಲೇಷಾ ನಕ್ಷತ್ರವು ಐದು‌ ನಕ್ಷತ್ರಗಳ ಗುಂಪಿನಿಂದ ಕೂಡಿರಲಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಅವಗುಣಗಳೇ ಹೆಚ್ಚು ಎಂಬ ಮಾತೂ ಇದೆ. ಹೇಗಿರುತ್ತಾರೆ ಅವರು ನೋಡೋಣ

ಸದಾ ಸಿಟ್ಟಿನಲ್ಲಿ‌ ಅಥವಾ ಎಲ್ಲದಕ್ಕೂ ಸಿಟ್ಟು‌ ಮಾಡುವವರ ನಕ್ಷತ್ರ ಇದು...!!
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 26, 2024 | 10:44 AM

ನಕ್ಷತ್ರ ಪುಂಜಗಳಲ್ಲಿ ಒಂಭತ್ತನೇ ನಕ್ಷತ್ರವಿದು. ಇದರ ದೇವತೆ ಸರ್ಪ. ಈ ನಕ್ಷತ್ರದಲ್ಲಿ ನಾಗದೋಷದ‌ ನಿವಾರಣೆ ಸಂಬಂಧಪಟ್ಟ ಆಚರಣೆ ಮಾಡಿದರೆ ಶೀಘ್ರವಾಗಿ ಫಲವು ಪ್ರಾಪ್ತಿಯಾಗುವುದು. ಆದರೆ ಇದು ಅತಿ ವಿಚಿತ್ರವೂ ವಿಶಿಷ್ಟವೂ ಆದ ನಕ್ಣತ್ರ. ಕರ್ಕಾಟಕ ರಾಶಿಯಲ್ಲಿ ಬರುವ ಕೊನೆಯ ನಕ್ಷತ್ರ ಇದು. ರಾಮಾಯಣದಲ್ಲಿ ಲಕ್ಷ್ಮಣನ ನಕ್ಷತ್ರವೂ ಇದೇ ಆಗಿತ್ತು.

ರಾತ್ರಿಯ ಸಮಯದಲ್ಲಿ ಖಗೋಳವನ್ನು ಕಂಡರೆ ಆಶ್ಲೇಷಾ ನಕ್ಷತ್ರವು ಐದು‌ ನಕ್ಷತ್ರಗಳ ಗುಂಪಿನಿಂದ ಕೂಡಿರಲಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಅವಗುಣಗಳೇ ಹೆಚ್ಚು ಎಂಬ ಮಾತೂ ಇದೆ. ಹೇಗಿರುತ್ತಾರೆ ಅವರು ನೋಡೋಣ

ಹಠಮಾರಿ :

ಇವರಿಗೆ ಅನ್ಯರ ಮಾತು, ಅನ್ಯರು‌ ಮಾಡಿದ ತೀರ್ಮಾನಗಳು‌ ಸರಿಯಾಗದು. ತಾವು ಮಾತ್ರ ಸರಿ,‌ ತಮ್ಮದು ಮಾತ್ರವೇ ಸರಿ ಎನ್ನುವ ಹಠದ ಸ್ವಭಾವವಿರಲಿದೆ. ಅದನ್ನು ಬದಲಿಸದ ಹೊರತೂ ಸಮಾಧಾನವಿರದು.

ಎಲ್ಲವನ್ನೂ ತಿನ್ನುವರು :

ಆರೋಗ್ಯದ ಬಗ್ಗೆ ಕಾಳಜಿ‌ ಕಡಿಮೆ. ಎಲ್ಲವನ್ನೂ ತಿನ್ನಬೇಕು ಎನ್ನುವ ಚಪಲತೆ ಹೆಚ್ಚು. ಅಷ್ಟೇ ಅಲ್ಲ ತಾವು ಮಾತ್ರ ತಿನ್ನಬೇಕು, ಬೇರೆ ಯಾರಿಗೂ ಪ್ರವೇಶ ಕೊಡಬಾರದು ಎನ್ನುವುದು ಇವರ ಮುಖ್ಯ ಉದ್ದೇಶ.

ಪಾಪಕಾರ್ಯ :

ಇನ್ನೊಬ್ಬರಿಗೆ ನೋವನ್ನು ಕೊಡತ್ತ ಸದಾ ಪಾಪ‌ಕಾರ್ಯದಲ್ಲಿ ಇರುವವರು. ಒಳ್ಳೆಯ ಕೆಲಸಗಳು ಇವರ ಬುದ್ಧಿಗೆ ಬರದು.‌ ಬೇರೆಯವರಿಂದ ಒಳ್ಳೆಯ ಪ್ರೇರಣೆಯನ್ನೂ ಪಡೆಯಲಾರರು.

ಕೃತಘ್ನತೆ :

ಉಪಕಾರ ಸ್ಮರಣೆಯಿಂದ ಇವರು ಎಂದಿಗೂ ದೂರ. ಇವರಾಗಿಯೇ ಯಾರಿಗೂ ಉಪಕಾರವನ್ನು ಮಾಡುವರಲ್ಲ ಮತ್ತು ಉಪಕಾರ ಮಾಡಿದವರಿಗೂ ಪ್ರತ್ಯುಪಕಾರ ಮಾಡುವವರಲ್ಲ.

ಧೂರ್ತ :

ಮಾತಿನಿಂದಲೋ ಕೃತಿಯಿಂದಲೋ ಹೇಗೋ ಇನ್ನೊಬ್ಬರಿಗೆ ವಂಚನೆ ಮಾಡುವುದು ಇವರ ನಿರಂತರ ಕಾರ್ಯ. ದುರಭ್ಯಾಸದಲ್ಲಿ ಆಸಕ್ತಿ ಅಧಿಕ.

ನಿಷ್ಠೆ :

ಯಾವುದಾದರೂ ಒಂದನ್ನು ಒಪ್ಪಿದರೆ, ಅವರನ್ನು ಬದಲಿಸಲಾಗದು. ಕಪಿಮುಷ್ಟಿಯಂತೆ ಯಾವ ಕಾಲಕ್ಕೂ ಬದಲಾಗರು. ವಿಶೇಷ ಗುಣಗಳಲ್ಲಿ‌ ಇದು ಒಂದು.

ಗೌಪ್ಯ ಗುರಿ :

ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಆದರೆ ಅದನ್ನು ಎಲ್ಲರೆದುರೂ ಹೇಳುತ್ತ ಇರಲಾರರು.‌ ಗೌಪ್ಯವಾಗಿ ತಮ್ಮ ಗುರಿಯನ್ನು ಸಾಧಿಸಿ, ಅನಂತರ‌ ಹೇಳುವರು. ಸರ್ಪವೂ ಕೂಡ ಹಾಗೆಯೇ. ಎಲ್ಲಯೂ ತನ್ನನ್ನು ತೋರಿಸಿಕೊಳ್ಳದು.‌ ಸಮಯ ಬಂದಾಗ ಅದರಿಂದ‌ ಆಗುವ ದುಃಖ‌ ಸುಖಗಳು ಗೊತ್ತಾಗುತ್ತವೆ.

ಇದು ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರ ವಿಶೇಷ.

ಲೋಹಿತ ಹೆಬ್ಬಾರ್ – 8762924271

ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ