Daily Horoscope: ಕಳೆದುಕೊಂಡಿರುವುದರ ಬಗ್ಗೆ ಚಿಂತೆ ಬೇಡ, ಮುಂದಿನ ಕಾರ್ಯಗಳ ಬಗ್ಗೆ ಗಮನಹರಿಸುವುದು ಉತ್ತಮ
6 ಫೆಬ್ರವರಿ 2025: ಗುರುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ವೃತ್ತಿಪರರು ಇಂದು ಉತ್ತಮ ಅವಕಾಶಗಳನ್ನು ಕಂಡುಕೊಳ್ಳಬಹುದು. ಹಳೆಯ ಬಂಧುಗಳನ್ನು ಭೇಟಿ ಮಾಡುವುದು ಇಂದಿನ ಉತ್ಸಾಹಕ್ಕೆ ಕಾರಣವಾಗುವುದು. ಹಾಗಾದರೆ ಫೆಬ್ರವರಿ 6 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ನವಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಶುಕ್ಲ, ಕರಣ : ಬವ, ಸೂರ್ಯೋದಯ – 07 – 00 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:13 – 15:40, ಯಮಘಂಡ ಕಾಲ 07:01 – 08:27, ಗುಳಿಕ ಕಾಲ 09:54 – 11:20.
ಮೇಷ ರಾಶಿ: ನೀವು ಕೊಟ್ಟ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡು ಕೆಂಗಣ್ಣಿಗೆ ಗುರಿಯಾಗುವಿರಿ. ಇಂದು ಯೋಜನೆಯಿಂದ ಆರಂಭಿಸುವ ಮೊದಲು ಅದರ ಪ್ರತಿಯೊಂದು ಹಂತದ ಬಗ್ಗೆಯೂ ಸರಿಯಾದ ಕಲ್ಪನೆ ಬೇಕು. ಇದರಿಂದ ನಿಮ್ಮ ಕಾರ್ಯಕ್ಷಮತೆ ಅಧಿಕವಾಗುವುದು. ದಾಂಪತ್ಯದಲ್ಲಿ ಪ್ರಣಯ ಕಾಣಿಸುವುದು. ನಿಮಗೆ ಇಂದು ವೃತ್ತಿ ಕ್ಷೇತ್ರದಲ್ಲಿ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸಲು ಜೊತೆಗಾರರ ಬೆಂಬಲ ಸಿಗುವುದು. ಭೂಮಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ಮಹಿಳೆಯರು ಯಾವುದೇ ಆಹಾರ ಉತ್ಪನ್ನದ ವ್ಯವಹಾರವನ್ನು ಆರಂಭಿಸಬಹುದು. ಸುಮ್ಮನೆ ಕುಳಿತಿರುವುದು ನಿಮಗೆ ಆಗದ ಸಂಗತಿ. ಎಲ್ಲರ ಜೊತೆ ಬೆರೆಯುವುದೂ ಆಗದು.
ವೃಷಭ ರಾಶಿ: ನೀವು ಕಳೆದುಕೊಂಡಿದ್ದರ ಬಗ್ಗೆ ಅತಿಯಾದ ಶೋಕ ಬೇಡ. ಮುಂದಿನ ಕಾರ್ಯಗಳ ಬಗ್ಗೆ ಗಮನಹರಿಸಿದರೆ ಎಲ್ಲವೂ ಮರಡಯಾಗುವುದು. ಬಹಳ ದಿನಗಳಿಂದ ತೊಂದರೆಗೀಡಾದ ಕೆಲಸಗಳು ಪುನಃ ಒಂದು ಮಾರ್ಗಕ್ಕೆ ಬರುತ್ತವೆ. ಇಂದು ನಿರ್ಧಾರ ತೆಗೆದುಕೊಳ್ಳುವಾಗ ಆತ್ಮಸಾಕ್ಷಿಯೂ ಅದಕ್ಕೆ ಬೆಂಬಲಿಸಬಹುದು. ಒಡಹುಟ್ಟಿದವರ ಜೊತೆ ಸಂಬಂಧದಲ್ಲಿ ಸವಿಯನ್ನು ಕಾಪಾಡಿಕೊಳ್ಳಿ. ಯಾವುದೇ ರೀತಿಯ ದೂರ ಪ್ರಯಾಣ ಮಾಡುವುದು ಬೇಡ. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ಯಾರನ್ನೋ ಸೋಲಿಸುವುದಕ್ಕೆ ನಿಮ್ಮ ಪ್ರಯತ್ನ ಬೇಡ. ನಿಮ್ಮ ವ್ಯಾಯಾಮದಲ್ಲಿ ಮಿತಿ ಇರಲಿ. ಉತ್ತಮ ಆರೋಗ್ಯದಿಂದ ಆನಂದಿಸುವಿರಿ. ನಿಮ್ಮ ಈ ದಿನವು ಆತ್ಮವಿಶ್ವಾಸದಿಂದ ಇರುತ್ತದೆ. ಕುಟುಂಬದ ಯುವ ಸದಸ್ಯರ ಯಶಸ್ಸಿನಲ್ಲಿ ಹೆಮ್ಮೆ ಪಡುವಿರಿ. ಉದ್ವೇಗದಿಂದ ಕಾರ್ಯಗಳನ್ನು ಮಾಡುವುದಕ್ಕಿಂತ ಏಕಾಗ್ರತೆ ಇರಲಿ.
ಮಿಥುನ ರಾಶಿ: ಇಂದು ಎಂದೋ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ಅದೇ ನಿಮ್ಮ ತಲೆಯಲ್ಲಿ ದಿನವಿಡೀ ಕೊರೆಯಬಹುದು. ವಿದ್ಯಾರ್ಥಿಗಳು ನಿರೀಕ್ಷೆಯಂತೆ ಫಲಿತಾಂಶ ಪಡೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವರು. ಕನಸುಗಳೆಲ್ಲವೂ ನನಸಾಗಿಲ್ಲ ಎಂದು ಹತಾಶರಾಗದೇ ಅದಕ್ಕೆ ಸಮಯವಿದೆ ಎಂದು ಸಕಾರಾತ್ಮಕ ಯೋಚನೆ ಮಾಡಿ. ಸ್ತ್ರೀಯರಿಗೆ ಅನಾರೋಗ್ಯದ ಅಧಿಕವಾಗುವುದು. ಇಂದು ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ಆಸ್ತಿ ವ್ಯವಹಾರವು ನಿಮ್ಮ ಆಲೋಚನೆಗೆ ತಕ್ಕಂತೆ ನಡೆಯುವುದು. ಸುಲಭದ ಕೆಲಸವನ್ನು ಮೊದಲು ಮಾಡಿ, ಯಾರದ್ದಾದರೂ ಸಹಕಾರವನ್ನು ಪಡೆದುಕೊಳ್ಳಿ. ನೀವು ಎಲ್ಲರ ಜೊತೆ ಸಭ್ಯತೆಯನ್ನು ಮೀರದೇ ಮಾತನಾಡಬೇಕು. ನಿಮ್ಮದೇ ಕೆಲಸದ ಒತ್ತಡಗಳು ನಿಮಗೆ ಬರುವುದು. ಓಡಾಟವು ಹೆಚ್ಚಾಗಿದ್ದು, ಉತ್ಸಾಹವನ್ನು ಕಳೆದುಕೊಂಡು ಸುಮ್ಮನೆ ಕುಳಿತುಕೊಳ್ಳುವಿರಿ.
ಕರ್ಕಾಟಕ ರಾಶಿ: ಭವಿಷ್ಯದ ಆರ್ಥಿಕತೆಯ ಬಗ್ಗೆ ಅತಿಯಾದ ಚಿಂತೆಯು ಕಾಡುವುದು. ನಿಮ್ಮ ನಡವಳಿಕೆಯು ಇತರರಿಗೆ ಇಷ್ಟವಾಗದೇ ಇರಬಹುದು. ಇಂದು ನೀವು ಆರಾಮವಾಗಿ ಇರಬೇಕೆಂದುಕಳ್ಳುವಿರಿ. ಹತ್ತಿರದ ಸಂಬಂಧಿಕರ ಜೊತೆ ಸಮಯ ಕಳೆಯುವಿರಿ. ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ಎಂತ ಸಮಸ್ಯೆಗೂ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಳ ಆಗಬಹುದು. ತಂತ್ರಜ್ಞರಿಗೆ ಈ ದಿನವು ಅನುಕೂಲಕರವಾಗಿರುತ್ತದೆ. ಖರೀದಿಯ ಉತ್ಸಾಹದಲ್ಲಿ ಮಾತು ಅತಿಯಾಗುವುದು ಬೇಡ. ಆದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ದೈಹಿಕ ದಾರ್ಢ್ಯವನ್ನು ನೀವು ಚೆನ್ನಾಗಿರಿಸಿಕೊಳ್ಳುವಿರಿ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನಿಮ್ಮ ತಿಳುವಳಿಕೆ ಮತ್ತು ಸಭ್ಯತೆಯಿಂದ ಎಲ್ಲರೂ ಬಹಳ ಪ್ರಭಾವಿತರಾಗಬಹುದು. ಕೌಟುಂಬಿಕ ಜೀವನ ಸುಖಕರವಾಗಿರಬಹುದು. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಸಂಗಾತಿಯಿಂದ ಅನಿರೀಕ್ಷಿತ ಕೊಡುಗೆಯನ್ನು ಪಡೆಯುವಿರಿ.
ಸಿಂಹ ರಾಶಿ: ಇತರರು ಮಾಡುವ ಪ್ರಶಂಸೆಯಿಂದ ನಿಮಗೆ ಸಂಕೋಚವಾಗುವುದು. ಕೆಲಸವನ್ನು ನಿರ್ವಿಘ್ನವಾಗಿ ಪೂರ್ಣಮಾಡುವಿರಿ. ಇಂದು ವೃತ್ತಿಯಲ್ಲಿ ಕೆಲವು ಸಮಸ್ಯೆಗಳು ಬರುತ್ತವೆ. ಇತರರ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡಬೇಡಿ. ವ್ಯವಹಾರದಲ್ಲಿ ಕೆಲವು ಸಮಸ್ಯೆಗಳು ಮತ್ತು ತೊಂದರೆಗಳು ಉಂಟಾಗುತ್ತವೆ. ಇಂದು ಕೆಲಸದ ಸ್ಥಳದ ಸಮಸ್ಯೆಗಳಿಗೆ ನಿಮ್ಮ ನಿಷ್ಪಕ್ಷಪಾತ ವಿಧಾನವು ನಿಮ್ಮನ್ನು ಜನಪ್ರಿಯಗೊಳಿಸುವುದು. ಇಂದು ಯಾವುದೇ ಕೆಲಸ ಮಾಡುವಾಗ, ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಆಪ್ತರ ಮಾತುಗಳು ನಿಮ್ಮ ತಲೆಯಲ್ಲಿ ಕೊರೆಯಬಹುದು. ಹೊಸ ಯೋಜನೆಯನ್ನು ಪಡೆದುಕೊಳ್ಳುವಿರಿ. ನೀವು ಇಂದು ಎಲ್ಲರ ಜೊತೆ ವಿನಯದಿಂದ ಮಾತನಾಡಬೇಕು. ರಾಜಕೀಯದಲ್ಲಿ ಸಂಪರ್ಕ ಪ್ರದೇಶವು ವಿಶಾಲವಾಗಿರುತ್ತದೆ. ಕೆಲವು ಹೊಸ ಅವಕಾಶಗಳು ಸಿಗುವ ಲಕ್ಷಣಗಳಿವೆ. ಉತ್ತಮ ಕಾರ್ಯಕ್ಕೆ ಎಲ್ಲ ಕಡೆಯಿಂದ ಅಭಿನಂದನೆಗಳು ಹರಿದುಬರಬಹುದು. ಸರ್ಕಾರಿ ಯೋಜನೆಗೆ ಹಣ ಹೂಡುವ ಸಾಧ್ಯತೆಗಳಿವೆ. ಹಣದ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ. ನಿಮ್ಮ ಮಿತವಾದ ಮಾತಿನಿಂದ ಇತರರಿಗೆ ಅಚ್ಚರಿಯಾದೀತು.
ಕನ್ಯಾ ರಾಶಿ: ಇಂದು ನಿಮ್ಮ ಪ್ರಭಾವವು ಕಡಿಮೆಯಾದಂತೆ ತೋರುತ್ತದೆ. ಯಾವ ಕಾರಣಕ್ಕೆಂದು ತಿಳಿಯುವ ಕುತೂಹಲ. ಸ್ನೇಹಿತರಿಂದ ನಿಮ್ಮ ಉದ್ಯೋಗವು ಬದಲಾದೀತು. ನಿಮ್ಮ ಗಮನವನ್ನು ಬೇಡದ ಕಾರ್ಯಗಳಿಂದ ದೂರವಿಡಿ. ಮುಖ್ಯವಾದುದರ ಮೇಲೆ ಗಮನಿರಲಿ. ಆತುರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ತಪ್ಪು ನಿಮಗೇ ಗೊತ್ತಾದೀತು. ಉದ್ಯೋಗ ಕ್ಷೇತ್ರಗಳಲ್ಲಿ ಕೆಲವು ರೀತಿಯ ರಾಜಕೀಯವನ್ನು ಎದುರಿಸುವಿರಿ. ವೃತ್ತಿಪರರು ಇಂದು ಉತ್ತಮ ಅವಕಾಶಗಳನ್ನು ಕಂಡುಕೊಳ್ಳಬಹುದು. ಹಳೆಯ ಬಂಧುಗಳನ್ನು ಭೇಟಿ ಮಾಡುವುದು ಇಂದಿನ ಉತ್ಸಾಹಕ್ಕೆ ಕಾರಣವಾಗುವುದು. ನೀವು ಹೊಸ ಗುರಿಗಳನ್ನು ಹೊಂದಿದ್ದು ನಿಮ್ಮ ಪ್ರಯತ್ನಗಳನ್ನು ಪ್ರಾರಂಭಿಸುವಿರಿ. ಹಿತೈಷಿಗಳ ಸಹಾಯದಿಂದ ನಿಮ್ಮ ಯಾವುದೇ ಆಸೆಗಳನ್ನು ಈಡೇರಿಸಲಾಗುವುದು. ಸಣ್ಣ ವ್ಯಾಪಾರಿಗಳು ಅಲ್ಪ ಲಾಭವನ್ನು ಗಳಿಸಿ, ಖುಷಿಪಡುವರು. ನೀವು ಕೆಲವು ವ್ಯವಹಾರ ವಿಷಯಗಳನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಸಂಪತ್ತಿನ ಹೆಚ್ಚಳವಾಗಬಹುದು.