Daily Horoscope: ಈ ರಾಶಿಯವರಿಗೆ ಹೊಸತರ ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗುವುದು

18 ನವೆಂಬರ್​​ 2024: ಸೋಮವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ಹಾಗಾದರೆ ನವೆಂಬರ್​ 18ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರಿಗೆ ಹೊಸತರ ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗುವುದು
ಈ ರಾಶಿಯವರಿಗೆ ಹೊಸತರ ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗುವುದು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:02 ರಿಂದ 09:27ರವರೆಗೆ, ಯಮಘಂಡ ಕಾಲ 10:52 ರಿಂದ ಮಧ್ಯಾಹ್ನ 12:18 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43ರಿಂದ 03:09 ರವರೆಗೆ.

ಮೇಷ ರಾಶಿ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇ ಇಂದು ನಿಮಗೆ ಲಾಭವಾಗುವುದು. ಸ್ಥಿರಾಸ್ತಿಯನ್ನು ಖರೀದಿಸುವ ಸಂದರ್ಭದಲ್ಲಿ ನಾನಾ ತೊಂದರೆಗಳು ಬರಬಹುದು. ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ನೆಲೆಸುವುದು. ಆಸ್ತಿಯನ್ನು ಖರೀದಿಸುವ ಕುರಿತು ಚರ್ಚೋಪಚರ್ಚೆಗಳನ್ನು ಮಾಡುವಿರಿ. ಆರ್ಥಿಕ ಒತ್ತಡದಿಂದ ನೀವು ಹೊರಬರಲು ದಾರಿಯನ್ನು ಹುಡುಕುವಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು. ಹಣದ ಹರಿವು ಸಾಧಾರಣವಾಗಿ ಇರಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು. ಹೇಳಲಾಗದ ಮರೆಯಲಾಗದ ಸ್ಥಿತಿ ಇರಲಿದೆ. ನೀವೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಉಚಿತವಲ್ಲ.‌ ಇದು ನಿಮ್ಮವರಿಗೆ ಮುಜುಗರದ ಸಂದರ್ಭವಾಗುವುದು. ಉದ್ಯೋಗದಲ್ಲಿ ಆಲಸ್ಯದಿಂದ ಇರುವ ಕಾರಣ ಅಧಿಕಾರಿಗಳಿಂದ ಸೂಚನೆ ಬರಬಹುದು. ವ್ಯಾಪಾರದ ನಷ್ಟವನ್ನು ಬೇರೆ ರೀತಿಯಿಂದ ಸರಿಮಾಡಿಕೊಳ್ಳುವಿರಿ. ಯಾರ ಜೊತೆಯೂ ನಿರ್ದಯೆಯಿಂದ ವ್ಯವಹರಿಸುವುದು ಬೇಡ.

ವೃಷಭ ರಾಶಿ: ಇಂದು ನಿಮಗೆ ಸಿಕ್ಕ ಸಂತೋಷವನ್ನು ಇತರರಿಗೂ ಹಂಚುವಿರಿ. ನಿಮಗೆ ಪ್ರಾಪ್ತವಾದ ಸ್ಥಾನದಿಂದ ನಿಮ್ಮ ಆಲೋಚನಾ ಕ್ರಮಗಳೂ ವ್ಯತ್ಯಾಸವಾಗುವುದು. ಸಂಗಾತಿಯ ಮಾತಿನಂತೆ ನಡೆದುಕೊಳ್ಳುವಿರಿ. ಮನೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಲಿದ್ದು ಸಣ್ಣ ವಾಗ್ವಾದವೂ ನಡೆಯಬಹುದು. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ವಾಹನದಿಂದ ಬಿದ್ದು ಪೆಟ್ಟಾಗಬಹುದು. ಆತುರದ ಚಾಲನೆ ಬೇಡ. ಇಂದು ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಮನಸ್ಸಿನ ನೋವನ್ನು ಮರೆಯಲು ಒಂಟಿಯಾಗಿ ದೂರ ಹೋಗುವಿರಿ. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ಯಾರದೋ ಮಾತನ್ನು ಕೇಳಿ ನಿಮ್ಮವರ ಬಗ್ಗೆ ತೀರ್ಮಾನ ಮಾಡಬೇಡಿ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.

ಮಿಥುನ ರಾಶಿ: ನಿಮ್ಮನ್ನು ನಿಯಂತ್ರಿಸಲಾಗದಿದ್ದರೂ ಸಲ್ಲದ ಪ್ರಯತ್ನಗಳು ಸಾಗುವುದು. ಕಾರ್ಯದ ಸ್ಥಳದಲ್ಲಿ ನಿಮಗೆ ಕಹಿಯಾದ ಅನುಭವವಾಗಲಿದೆ. ಹಿತಶತ್ರುಗಳು ಸಕಾಲಕ್ಕೆ ಕಾರ್ಯದಲ್ಲಿ ತೊಂದರೆಯನ್ನು ಕೊಡುವರು. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಒತ್ತಡದ ನಿವಾರಣಡಗೆ ಸಭೆ-ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಅತಿಯಾದ ಕೋಪದಿಂದ ಎಲ್ಲ ಕೆಲಸವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ಆಲಂಕಾರಿಕ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಅಧಿಕಾರಿಯ ವಿಶ್ವಾಸವನ್ನು ಪಡೆದು ಹೆಚ್ಚಿನ ಸ್ಥಾನ ಪಡೆಯುವಿರಿ. ಅನಿರೀಕ್ಷಿತ ರಾಜಕಾರಿಣಿಗಳ ಭೇಟಿಯಿಂದ ಕೆಲವು ಬದಲಾವಣೆಯನ್ನು ಕಾಣುವಿರಿ. ಇಂದು ದೂರ ಪ್ರವಾಸದಿಂದ ನಿಮಗೆ ತೊಂದರೆಯಾಗಲಿದೆ. ಹೂಡಿಕೆಯ ಹಣವನ್ನು ತೆಗೆಯುವ ನಿರ್ಧಾರಕ್ಕೆ ಬರಬೇಕಾದೀತು.‌ ಪರಿಸ್ಥಿತಿಯನ್ನು ನೋಡಿ ತೀರ್ಮಾನಿಸಿ. ಮೆತ್ತಗಿದ್ದಷ್ಟು ಆಕಾರ ಬದಲಾಗಬೇಕಾಗುತ್ತದೆ.

ಕಟಕ ರಾಶಿ: ಧಾರ್ಮಿಕ ಕಾರ್ಯಗಳ ಸಿದ್ಧತೆಯಲ್ಲಿ ನೀವಿರುವಿರಿ. ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಎಲ್ಲರಿಗೂ ಇಷ್ಟವಾಗುತ್ತದೆ ಎನ್ನಲಾಗದು. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಅಧಿಕಾರದಿಂದ ಕೆಲವು ತೊಂದರೆಯನ್ನು ಎದುರಿಸಬೇಕಾದೀತು. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮನೆಯಿಂದ ದೂರವಿರಲಿದ್ದು ಆಹಾರದ ತೊಂದರೆಯನ್ನು ಅನುಭವಿಸುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅವಶ್ಯಕತೆ ಅಧಿಕವಾಗಿ ಇರಲಿದೆ. ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತನ್ನು ಕಳೆದುಕೊಳ್ಳುವಿರಿ. ನಿಮಗೆ ಇಂದು ಪ್ರೀತಿ ಪಾತ್ರರಿಂದ ಉಡುಗೊರೆ ಬರಲಿದೆ. ವಿದ್ಯಾಭ್ಯಾಸವನ್ನು ಯೋಗ್ಯರೀತಿಯಲ್ಲಿ ನಡೆಸಲು ಕಷ್ಟವಾದೀತು. ತಾಯಿಯ ಆಸೆಯನ್ನು ಸ್ವಲ್ಪವಾದರೂ ತೀರಿಸುವಿರಿ. ನೀವು ಇಂದು ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗಬಹುದು.

ಸಿಂಹ ರಾಶಿ: ಗೌರವವನ್ನು ಕೊಡುವವರಿಗೆ ಅಗೌರವ ತೋರಿಸಿದರೆ ಶತ್ರುಗಳಾಗುವರು. ಇಂದು ವಾಹನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ‌ ಮೇಲೆ ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ. ಒತ್ತಾಯದಿಂದ‌ ಸ್ನೇಹಿತರ ಮನೆಗೆ ಹೋಗುವಿರಿ. ಆದಾಯದ ಬಗ್ಗೆ ಗಮನಹರಿಸಿ ಆರೋಗ್ಯವನ್ನು ನಿರ್ಲಕ್ಷ್ಯದಿಂದ ನೋಡುವಿರಿ. ನಿಮ್ಮ ಪ್ರತಿಕ್ರಿಯೆ ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಬಳಸಿಕೊಳ್ಳುವ ಸಂಬಂಧವು ಹಾಳಾಗುವುದು.

ಕನ್ಯಾ ರಾಶಿ: ಪ್ರೀತಿಯ ಪರವಶತೆಯಲ್ಲಿ ನೀವು ಇಂದು ಇರುವಿರಿ. ಹಣದ ಆಸೆಗೆ ಅನ್ಯ ಮಾರ್ಗವನ್ನು ಹಿಡಿಯುವ ಸಾಧ್ಯತೆ ಇದೆ. ಇಂದು ಯಾರ ಬಳಿಯೂ ಸಹಾಯವನ್ನು ಕೇಳುವ ಮನಸ್ಸು ಇರದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವರು. ಕಳೆದು ಹೋದ ಪ್ರೇಮ ವಿಚಾರವು ಮತ್ತೆ ಕಾರಣಾಂತರಗಳಿಂದ ನೆನಪಾಗುವುದು. ತಪ್ಪನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರಿಸುವಿರಿ. ನಿಮ್ಮ ಬಗ್ಗೆ ಬೇರೆಯವರಿಗೆ ಔದಾರ್ಯಭಾವವು ಇರಲಿದೆ. ಹಿರಿಯರ ಭಾವನೆಯನ್ನು ನೀವು ಪೂರ್ಣ ಮಾಡುವಿರಿ.‌ ನಿಮ್ಮ‌ ಅಸಾಮಾನ್ಯ ಚಿಂತನೆಯು ನಿಮ್ಮನ್ನು ದೊಡ್ಡವರನ್ನಾಗಿ ಮಾಡಿದ್ದು. ಹೊಸ ಉದ್ಯೋಗದ ಬಗ್ಗೆ ಆಪ್ತರ‌ ಜೊತೆ ಮಂಥನ ನಡೆಸುವಿರಿ. ಸಂಗಾತಿಯ ಬಗ್ಗೆ ಇರುವ ನಿಮ್ಮ ಅಭಿಪ್ರಾಯ ಬದಲಾಗುವುದು.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?