Daily Horoscope: ಈ ರಾಶಿಯವರು ಚರ್ಮ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಬಹುದು, ನಿರ್ಲಕ್ಷ್ಯ ಬೇಡ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 26, 2024 | 12:10 AM

26 ಡಿಸೆಂಬರ್​​ 2024: ಗುರುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನೀವು ಮಾಡಿದ್ದೆಲ್ಲವೂ ಸರಿ ಎಂಬ ಭ್ರಮೆ ಬಿಟ್ಟು ಬೇರೆಯವರ ಮಾತನ್ನೂ ಕೇಳಿ. ಇಂದು ಮಕ್ಕಳ ವಿಚಾರಕ್ಕೆ ಹಣವು ವ್ಯಯವಾಗಬಹುದು. ಹಾಗಾದರೆ ಡಿಸೆಂಬರ್ 26ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಚರ್ಮ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಬಹುದು, ನಿರ್ಲಕ್ಷ್ಯ ಬೇಡ
ಈ ರಾಶಿಯವರು ಚರ್ಮ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಬಹುದು, ನಿರ್ಲಕ್ಷ್ಯ ಬೇಡ
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸುಕರ್ಮ​, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:58 ರಿಂದ 03:22ರ ವರೆಗೆ,
ಯಮಘಂಡ ಕಾಲ ಬೆಳಗ್ಗೆ 06:57 ರಿಂದ 08:21 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 09:45 ರಿಂದ 11:09 ರವರೆಗೆ.

ಮೇಷ ರಾಶಿ: ಇಂದು ದೈವಭಕ್ತಿಗೆ ನಿಮಗೆ ಅನುಕೂಲಕರ ವಾತಾವರಣವು ಸಿಗಲಿದೆ. ಚಲಿಸುವ ವಾಹನದಿಂದ ಬೀಳುವ ಸಾಧ್ಯತೆ ಇದೆ. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ನಿಮಗೆ ಆಗದು. ಇಂದು ನೀವು ಹೇಗೇ ಸಮಜಾಯಿಷಿ ಕೊಟ್ಟರೂ ತಪ್ಪು ನಿಮ್ಮದೇ ಆಗಿರುತ್ತದೆ. ಒಂದಿಲ್ಲೊಂದು ಆಲೋಚನೆಗಳು ಬರುತ್ತಲೇ ಇರುತ್ತವೆ. ನಿಮ್ಮ ವಸ್ತುವು ಕಳ್ಳತನವಾಗಬಹುದು ಎಂಬ ಭೀತಿಯು ಉಂಟಾಗಬಹುದು. ಇಂದು ನೀವು ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡರು. ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆಯಾಗುವುದು. ಇದರಿಂದ ನಿಮ್ಮ ಆದಾಯಕ್ಕೆ ಹೊಡೆತ ಬೀಳಬಹುದು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸುವುದು ಬೇಡ. ಹಳೆಯ ಸಂಗಾತಿಯ ನೆನಪು ಮತ್ತೆ ಕಾಡಬಹುದು.‌ ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ಮಾಡಲು ಯೋಚಿಸುವಿರಿ. ಬಂಧುಗಳ ಕಡೆಯಿಂದ ವಿವಾಹ ಸಂಬಂಧವು ಬರಬಹುದು.

ವೃಷಭ ರಾಶಿ: ಇಂದು ದೇವರು ಕೊಟ್ಟರೂ ಪೂಜಾರಿ ಕೊಡನು ಎಂಬ ಭಾವ ಬರಬಹುದು. ದುರಭ್ಯಾಸದಿಂದ ನಿಮಗೆ ಸಿಗುವ ಉನ್ನತ ಸ್ಥಾನವು ತಪ್ಪಬಹುದು. ಮಕ್ಕಳ ಕಾರಣದಿಂದ ನೀವು ವಿದೇಶ ಪ್ರಯಾಣ ಮಾಡಬೇಕಾಗಬಹುದು. ಆತ್ಮಸಾಕ್ಷಿ ಒಪ್ಪಿದರೆ ಮತ್ತೆ ಬೇಸರಿಸಬೇಕಿಲ್ಲ. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಏನಾದರೂ ಹೇಳಬಹುದು, ಕೇಳಿ ಸುಮ್ಮನಾಗಿ. ಉತ್ತರದಿಂದ ಮತ್ತೇನಾದರೂ ಆದೀತು. ಸುಲಭವಾಗಿ ಸಿಗುವ ಸಂಪತ್ತಿಗೆ ಆಸೆಪಡುವುದು ಬೇಡ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ಅಪರೂಪದ ವ್ಯಕ್ತಿಗಳು ಆಕಸ್ಮಾತ್ತಾಗಿ ಭೇಟಿಯಾಗುವರು. ನಿಮಗೆ ಕೊಟ್ಟ ಕಾರ್ಯವನ್ನು ಮರೆತು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ಹಣವನ್ನೂ ಕೊಟ್ಟು ವಸ್ತುವನ್ನೂ ಕಳೆದುಕೊಳ್ಳಬೇಕಾಗಬಹುದು ಎಚ್ಚರ. ಕಛೇರಿಗೆ ವಿರಾಮವಿದ್ದರೂ ಅದರ ಕಾರ್ಯವನ್ನೇ ನೀವು ಮಾಡಬೇಕಾಗುವುದು. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ.

ಮಿಥುನ ರಾಶಿ: ನಿಮ್ಮ ಬಳಿ ಮಾತನಾಡಲು ಇಷ್ಟಪಡದೇ ಇರಬಹುದು. ನಿಮ್ಮ ಇಂದಿನ ಹೊಸ ಪ್ರಯತ್ನಗಳು ಕಾರ್ಯಕ್ಕೆ ಬೇಕಾದ ಉತ್ಸಾಹವನ್ನು ಕೊಡುವುದು. ಲೆಕ್ಕಾಚಾರವನ್ನು ಸರಿಯಾಗಿ ಇಟ್ಟುಕೊಳ್ಳದೇ ಎಲ್ಲರಿಗೂ ಗೊಂದಲವನ್ನು ಉಂಟುಮಾಡುವಿರಿ. ಬಹಳ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹದಂತೆ ಆಗುವುದು. ಸಾಮಾಜಿಕ ಕಾರ್ಯಗಳತ್ತ ಒಲವು ಮೂಡಬಹುದು. ಯಾವುದಕ್ಕೂ ಆರೋಗ್ಯವನ್ನು ಸುಧಾರಿಸಿಕೊಂಡು ಮುನ್ನಡೆಯುವುದು ಉತ್ತಮ.‌ ಗೊತ್ತಿರುವ ಕೆಲಸವನ್ನಷ್ಟೇ ಮಾಡಿ. ಮಕ್ಕಳ ಭವಿಷ್ಯಕ್ಕೆ ನೀವು ಸ್ವಲ್ಪ ಹಣವನ್ನು ಇಡುವ ಅವಕಾಶ ಸಿಗಲಿದೆ. ನಿಮ್ಮ ಓಡಾಟಕ್ಕೆ ಸ್ವಂತ ವಾಹನವು ಬೇಕು ಎನಿಸಬಹುದು. ದಾಂಪತ್ಯದಲ್ಲಿ ಮೌನವೇ ಸಂಭಾಷಣೆ ಆಗುವುದು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ.

ಕರ್ಕಾಟಕ ರಾಶಿ: ಇಂದು ನೀವು ಶತ್ರುಗಳನ್ನು ತಂತ್ರದಿಂದ ಸೋಲಿಸಬಹುದು. ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನವು ಇರುವುದು. ಮಾನಸಿಕ ಕಿರಿಕಿರಿಯಿಂದ ಕುಳಿತಲ್ಲಿ ಕುಳಿತುಕೊಳ್ಳುವುದು ಕಷ್ಟವಾದೀತು. ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸಬೇಕಾಗುವುದು. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ನಿಮ್ಮ ಸ್ಥಾನದ ಬಗ್ಗೆ ಭಯ ಉಂಟಾಗಬಹುದು. ಪವಿತ್ರಕ್ಷೇತ್ರಗಳಿಗೆ ತೆರಳುವ ಅವಕಾಶ ಸಿಗಬಹುದು. ಬಿಟ್ಟುಕೊಳ್ಳುವುದು ಬೇಡ. ಶುಭ ಅವಸರದಲ್ಲಿ ಸದುಪಯೋಗ ಮಾಡಿಕೊಳ್ಳಿ. ಹೆಚ್ವಿನ ಸಮಯವನ್ನು ಧಾರ್ಮಿಕ ಆಚರಣೆಗೆ ಮೀಸಲಿಡುವಿರಿ. ನಿಮ್ಮ ಮಾತುಗಳಿಂದ ನೋವಾಗಲಿದೆ. ಕ್ಷುಲ್ಲಕ ಕಾರಣವನ್ನು ಬಿಟ್ಟು ಖುಷಿಯಿಂದ ಮಾತನಾಡಿ.

ಸಿಂಹ ರಾಶಿ: ಇಂದು ಮಹಿಳೆಯರಿಗೆ ಖಾಸಗಿ ಸಂಸ್ಥೆಯಲ್ಲಿ‌ ಉದ್ಯೋಗಕ್ಕೆ‌ ಕರೆ‌ಬರುವುದು. ಎಲ್ಲರಿಂದ ಕಾರ್ಯಕ್ಕೆ ನಿಮಗೆ ಪ್ರಶಂಸೆ ಸಿಕ್ಕರೂ ನಿಮಗೆ ಕಾರ್ಯದಲ್ಲಿ ಸಮಾಧಾನ ಸಿಗದು. ಸಹೋದ್ಯೋಗಿಗಳ ಸಹಕಾರ ನಿಮಗೆ ಸಿಗದೇ ಹೋಗಬಹುದು. ಛಲದಿಂದ ಒಂಟಿಯಾಗಿ ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಕೃಷಿಯಲ್ಲಿ ಕೆಲವು ತೊಂದರೆಯಾಗಬಹುದು. ಅದನ್ನು ಲೆಕ್ಕಿಸದೇ ನಿಮ್ಮ ಪೂರ್ಣ ಶ್ರಮವನ್ನು ಹಾಕುವಿರಿ. ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕರೂ ನಿಮ್ಮ ಕೆಲಸವು ಸಮಾಧಾನ ಕೊಡದು. ಇಂದು ಬಂದ ಹಣವು ಸಾಲಕ್ಕೆ ಸರಿಯಾಗುವುದು. ಅವ್ಯವಹಾರವನ್ನು ಮಾಡಲು ಸಹೋದ್ಯೋಗಿಗಳು ಪ್ರೇರಿಸಬಹುದು. ಅಪ್ರಯೋಜಕ ಎಂದುಕೊಂಡ ವಿದ್ಯೆಯಿಂದ ಪ್ರಯೋಜನವಾಗುವುದು. ಮನೆಗೆ ಬೇಕಾದ ಬಂಧುಗಳು ಬಾರದೇ ಹೋಗಬಹುದು. ಸಜ್ಜನರನ್ನು ನೀವು ದೂರ ಮಾಡಿಕೊಳ್ಳುವಿರಿ. ಯಾರ ಮೇಲೂ ಪೂರ್ವಾಗ್ರಹ ಬೇಡ. ವಿದೇಶದವರ ಜೊತೆ ನಿಮ್ಮ ವ್ಯವಹಾರವು ನಡೆಯುವುದು.

ಕನ್ಯಾ ರಾಶಿ: ನೀವು ಮಾಡಿದ್ದೆಲ್ಲವೂ ಸರಿ ಎಂಬ ಭ್ರಮೆ ಬಿಟ್ಟು ಬೇರೆಯವರ ಮಾತನ್ನೂ ಕೇಳಿ. ಇಂದು ಮಕ್ಕಳ ವಿಚಾರಕ್ಕೆ ಹಣವು ವ್ಯಯವಾಗಬಹುದು. ಆಸ್ತಿಯ ಮೇಲೆ ಸಾಲವನ್ನು ಪಡೆಯುವ ಸಂದರ್ಭವು ಬರಬಹುದು. ಅನಿವಾರ್ಯವಾದುದನ್ನು ಮಾತ್ರ ಸಾಲ ಮಾಡಿ. ಅತಿಯಾಗಿ ಬೇಡ. ಸಂಗಾತಿಯ ಮನೋಭಾವವು ಬದಲಾದಂತೆ ಅನ್ನಿಸುವುದು. ಚರ್ಮಕ್ಕೆ ಸಂಬಂಧಿಸಿದಂತೆ ಏನಾದರೂ ಆಗಬಹುದು. ಸಮಾಧಾನಚಿತ್ತದಿಂದ ನೀವು ಇಂದಿನ ಮಧುರ ಕ್ಷಣಗಳನ್ನು ಆನಂದಿಸುವಿರಿ. ಭೂಮಿಯ ವ್ಯವಹಾರದಿಂದ ಅಲ್ಪ ಹಣವು ನಷ್ಟವಾಗುವುದು. ಮನೆಯ ವಾತಾವರಣವು ನಿಮಗೆ ಹಿತವೆನಿಸಲಿದ್ದು ಮನೆಯಿಂದ ದೂರವಿರಲು ಕಷ್ಟವಾಗುವುದು. ಸ್ವಾಭಿಮಾನಕ್ಕೆ ಆಪ್ತರಿಂದ ತೊಂದರೆಯಾಗಬಹುದು. ಸಂಗಾತಿಯ ಮೌನವು ನಿಮಗೆ ಕಷ್ಟವಾಗಬಹುದು. ಅಧಿಕ ಪ್ರಯಾಣದಿಂದ ಆಯಾಸವಾಗಬಹುದು. ನಿಮ್ಮ ಬಗ್ಗೆ ಬರುವ ಆರೋಪವನ್ನು ಸುಳ್ಳು ಮಾಡಿ ತೋರಿಸುವ ಕಾರ್ಯಕ್ಕೆ ಮುಂದಾಗುವಿರಿ.