ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಭರಣೀ, ಯೋಗ: ವ್ಯತಿಪಾತ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:52 ರಿಂದ ಮಧ್ಯಾಹ್ನ 12:17ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:34ರವರೆಗೆ, ಗುಳಿಕ ಕಾಲ ಬೆಳಿಗ್ಗೆ 08:00ರಿಂದ 09:26 ರವರೆಗೆ.
ಮೇಷ ರಾಶಿ: ಆಯಾಸವು ಕಡುಮೆಯಾಗದೇ ಕಷ್ಟವಾಗುವುದು. ನಿಮ್ಮನ್ನು ಯಾರೊಂದಿಗೆ ಹೋಲಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಸಂತೋಷವು ಇರುವುದು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊರತೆಯು ಹೆಚ್ಚು ಕಂಡುಬರುವುದು. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಅಪರಿಚಿತರ ವ್ಯಕ್ತಿತ್ವವನ್ನು ಸಂಶಯವಿಲ್ಲದೇ ಒಪ್ಪಬಹುದು. ಇಂದು ಬಂಧುಗಳ ಕಾರಣಕ್ಕಾಗಿ ಧನವ್ಯಯವಾಗುವುದು. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ನೀವು ಕ್ರಮಿಸಿದ ದೂರ ನಿಮಗೆ ಅಚತಚರಿಯಾಗಬಹುದು. ಉದ್ಯೋಗದಲ್ಲಿ ಆಯ್ಕೆ ಸಮಸ್ಯೆಯು ಬರಬಹುದು. ಶತ್ರುಗಳ ಸಂಚಿಗೆ ಬಲಿಯಾಗುವಿರಿ. ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಜವಾಬ್ದಾರಿಯುತ ಸ್ಥಾನವು ನಿಮಗೆ ಬೇಸರ ತರಿಸುವುದು. ನಿಮಗೆ ಆಗದೇ ಇರುವುದನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾರಿರಿ.
ವೃಷಭ ರಾಶಿ: ಅನಿರೀಕ್ಷಿತ ಸುದ್ದಿಗಳಿಂದ ಮನಸ್ಸು ಭಾರವಾಗುವುದು. ನಿಮ್ಮ ಮನಸ್ಸಿಗೆ ಬಂದಿದ್ದನ್ನು ಯಾರು ಏನೇ ಅಂದರೂ ಬದಲಿಸಲಾರಿರಿ. ಬರುವ ಹಣವು ಕೈಸೇರಿದರೂ ಖರ್ಚಿನ ದಾರಿ ನಿಮಗೆ ತೆರೆದಿರುವುದು. ಭಯಗೊಂಡಷ್ಟೂ ಸರಿದಾರಿಯಿಂದ ದೂರಾಗುವಿರಿ. ಮಕ್ಕಳಿಗೆ ಸಿಗುವ ಪುರಸ್ಕಾರದಿಂದ ನಿಮಗೆ ಸಂತೋಷವಾಗುವುದು. ಸಹೋದರರ ಬಾಂಧವ್ಯವು ಸಡಿಲಾಗಬಹುದು. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು. ಸಂಗಾತಿಯಿಂದ ಪ್ರೀತಿಯು ಸಿಗಲಿದೆ. ವಿದೇಶಪ್ರಯಾಣದ ನಿರೀಕ್ಷೆಯಲ್ಲಿಯೇ ಇರುವಿರಿ. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ವಿಶ್ರಾಂತಿಯು ಹೆಚ್ಚು ಬೇಕೆನಿಸಬಹುದು.
ಮಿಥುನ ರಾಶಿ: ತಪ್ಪಿನಿಂದಾಗಿ ಭಯವುಂಟಾಗುವುದು. ಸುಮ್ಮನಿದ್ದಾಗ ಕಳೆದ ಘಟನೆಗಳನ್ನೇ ಮತ್ತೆ ಮತ್ತೆ ನೆನಪುಮಾಡಿಕೊಳ್ಳುವಿರಿ. ನಮ್ರತೆಯು ನಿಮ್ಮನ್ನು ಎತ್ತರಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ದುರಾಸೆ ಇದ್ದಷ್ಟೂ ಸಿಗಬೇಕಾದುದು ದೂರಾಗಬಹುದು. ಪ್ರಭಾವಿ ಗಣ್ಯರ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವ್ಯವಹಾರದಲ್ಲಿ ಚುರುಕು ಸಾಲದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋವಿಸುವಿರಿ. ಯಂತ್ರೋಪಕರಣದ ಮಾರಾಟಗಾರರಿಗೆ ಅಧಿಕ ಲಾಭವಾಗುವುದು. ಮನೆತನದ ಕಾರಣದಿಂದ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳನ್ನು ಮೆಚ್ಚಿಸುವಿರಿ. ಹಣವನ್ನು ವ್ಯಯಿಸಿ ಉನ್ನತ ಅಧಿಕಾರವನ್ನು ಪಡೆಯುವಿರಿ. ಸಂಗಾತಿಯ ಮೇಲಿನ ಕೋಪವನ್ನು ಕಡಿಮೆ ಮಾಡಿಕೊಂಡರೆ ನಿರಾಳವಾಗಬಹುದು. ನಿಮ್ಮ ಕಾರ್ಯಕ್ಕೆ ಅಭಿನಂದನೆ ಬರುವುದು.
ಕರ್ಕಾಟಕ ರಾಶಿ: ನಿಮಗೆ ಮಾಡುವ ಅವಮಾನವು ಬಹಳ ಕೆಳಮಟ್ಟದ್ದಾಗಿರಬಹುದು. ಇನ್ಮೊಬ್ಬರ ವಾಹನವನ್ನು ಚಲಾಯಿಸುವಾಗ ಭಯವಾಗುವುದು. ಧಾರ್ಮಿಕ ವಿಚಾರವಾಗಿ ನೀವು ದೂರ ಪ್ರಯಾಣವನ್ನು ಮಾಡುವಿರಿ. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ಪರಿಶ್ರಮದಿಂದ ಧನಾರ್ಜನೆ ಮಾಡಿದ್ದು ನಿಮಗೆ ಅಧಿಕ ಸಂತೋಷವಾಗುವುದು. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಇಂದಿನ ಸಮಯವನ್ನು ನಿಮಗೆ ಬೇಕಾದಂತೆ ಹೊಂದಿಸಲು ಕಷ್ಟವಾಗಬಹುದು. ನಿಮ್ಮ ನಿಯಮಗಳನ್ನು ನೀವೇ ದಾಟುವಿರಿ. ರಾಜಕೀಯ ಜೀವನವು ನಿಮಗೆ ಅತಂತ್ರ ಸ್ಥಿತಿಯನ್ನು ತರಬಹುದು. ಹಣಕಾಸಿನ ಕೊರತೆಯನ್ನು ನೀವು ಕುಟುಂಬಕ್ಕೆ ಗೊತ್ತಾಗದಂತೆ ನಿರ್ವಹಿಸುವಿರಿ. ಕೆಲವನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಸೇಡನ್ನು ಮುಂದುವರಿಸದೇ ಯಥಾಸ್ಥಿತಿಯಲ್ಲಿ ಇರಿ.
ಸಿಂಹ ರಾಶಿ: ಬಂಧನದಿಂದ ಮುಕ್ತರಾದಂತಹ ಅನುಭವವಾಗುವುದು. ಯಾರ ಜೀವನವನ್ನೂ ಸಣ್ಣದಾಗಿ ಕಾಣುವುದು ಬೇಡ. ನಿಮ್ಮ ವಿದ್ಯೆಗೆ ಉಪಯುಕ್ತವಾದ ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುವುದು. ಆಸ್ತಿಯಲ್ಲಿ ಸಮ ಪಾಲು ಸಿಗದೇ ನಿಮಗೆ ವಾದಕ್ಕಿಳಿಯುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಸಣ್ಣ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ತಿಳಿದವರ ಜೊತೆ ವಾದಕ್ಕೆ ಇಳಿಯುವುದು ಬೇಡ. ಮಕ್ಕಳಿಂದ ಆರ್ಥಿಕ ಸಹಾಯವು ಸಿಗುವುದು. ಮಕ್ಕಳ ವಿವಾಹದ ಬಗ್ಗೆ ಬಂಧುಗಳ ಜೊತೆ ಗಂಭೀರವಾಗಿ ಚರ್ಚಿಸುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಶುಭಸಮಾಚಾರವು ಗೊತ್ತಾಗುವುದು. ಇಂದಿನ ನಿಮ್ಮ ಪ್ರಯಾಣವು ನಿಮಗೆ ಹಿತಕರವಾದ ಅನುಭವವನ್ನು ನೀಡಬಹುದು. ಇಂದು ನೀವು ಮನೋರಂಜನೆಯ ಜೊತೆ ಕಾಲ ಕಳೆಯುವಿರಿ. ಪರರಿಂದ ಸಿಗುವ ಹಣವನ್ನು ಸಮರ್ಪಕವಾಗಿ ಬಳಸುವಿರಿ. ಮಾತಿನಲ್ಲಿ ಮಾರ್ದವ ಇರಲಿ. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ.
ಕನ್ಯಾ ರಾಶಿ: ನಿಮ್ಮ ಗೌಪ್ಯತೆಯ ಉಪಕಾರಗುಣವು ಪ್ರಕಾಶವಾಗುವುದು. ನಿಮ್ಮ ಇಂದಿನ ಮೌನವೂ ಇನ್ನೊಬ್ಬರಿಗೆ ಚಿಂತೆಯಾಗುವುದು. ನಿಮ್ಮ ಸುಳ್ಳು ಯಾರಿಂದಲಾದರೂ ತಿಳಿದುಬರುವುದು. ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ಪ್ರವೇಶವನ್ನು ಪಡೆಯುವುದು ಬೇಡ. ಸರ್ಕಾರದ ಕಾರ್ಯಗಳನ್ನು ಬೇಗ ಮುಗಿಸಿಕೊಳ್ಳಲಿದ್ದೀರಿ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳುವಿರಿ. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು. ಯಾವುದೇ ನಿರ್ಧಾರವನ್ನು ಸಮಾಲೋಚನೆಯ ಅನಂತರವೇ ಪಡೆಯಿರಿ. ಪ್ರೇಮದಲ್ಲಿ ಸಿಕ್ಕಿಕೊಂಡು ಕಷ್ಟಪಡುವಿರಿ. ನಿಮ್ಮ ತೀರ್ಮಾನವನ್ನು ಒಪ್ಪುವುದು ಕಷ್ಟವಾದೀತು. ಮಕ್ಕಳ ವಿಚಾರವಾಗಿ ನಿಮಗೆ ದೂರಬರಬಹುದು. ನಿಮ್ಮ ಸ್ವಂತ ಕೆಲಸಕ್ಕೆ ಉದ್ಯೋಗಿಗಳನ್ನು ಬಳಸಿಕೊಳ್ಳುವಿರಿ. ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ. ವೈಯಕ್ತಿಕ ವಿಚಾರದಲ್ಲಿ ಯಾರ ಮಧ್ಯಪ್ರವೇಶವನ್ನೂ ಸಹಿಸಲಾರಿರಿ.