Daily Horoscope: ವಿವಿಧ ಕಡೆಗಳಿಂದ ಧನಾಗಮನ, ನೂತನ ವಾಹನ ಖರೀದಿ ಮಾಡುವಿರಿ
05 ಡಿಸೆಂಬರ್ 2024: ಗುರುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ವಸ್ತುಗಳು ಕಾಣೆಯಾಗಬಹುದು. ಮಾತಿನ ಬಿರುಸು ಅಧಿಕವಾಗಿ ಇರುವುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ನಿಮ್ಮ ಆದಾಯವನ್ನು ಇತರರು ಲೆಕ್ಕ ಹಾಕಬಹುದು. ಹಾಗಾದರೆ ಡಿಸೆಂಬರ್ 05ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ವೃದ್ಧಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:48 ರಿಂದ 03:13ರ ವರೆಗೆ, ಯಮಘಂಡ ಕಾಲ ಸಂಜೆ 06:45 ರಿಂದ 08:10 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 09:34ರಿಂದ 10:59 ರವರೆಗೆ.
ಮೇಷ ರಾಶಿ: ನಿಮಗೆ ಇಂದು ಬಂಧನದಿಂದ ಮುಕ್ತವಾದಂತೆ ಅನ್ನಿಸಬಹುದು. ನಿಮ್ಮ ವಸ್ತುಗಳು ಕಾಣೆಯಾಗಬಹುದು. ಮಾತಿನ ಬಿರುಸು ಅಧಿಕವಾಗಿ ಇರುವುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ನಿಮ್ಮ ಆದಾಯವನ್ನು ಇತರರು ಲೆಕ್ಕ ಹಾಕಬಹುದು. ಶತ್ರುಗಳ ತೊಂದರೆಯಿಂದ ನಿರ್ಮಾಣ ಕಾರ್ಯವು ನಿಧಾನವಾಗಲಿದೆ. ನೌಕರರ ವರ್ತನೆಯ ಮೇಲೆ ನಿಮ್ಮ ಕಣ್ಣಿಡಿ. ಬಂಧುಗಳ ಜೊತೆ ಕಲಹವಾಗುವುದು. ಸಂಗಾತಿಯ ನೆರವನ್ನು ನೀವು ನಿರೀಕ್ಷಿಸುವಿರಿ. ಆದ್ಯತೆಯ ಮೇಲೆ ನಿಮ್ಮ ಕಾರ್ಯಗಳು ಇರಬಹುದು. ಅಧಿಕಾರಿಗಳ ಮನವನ್ನು ಒಲಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮಕ್ಕಳಿಂದ ಶುಭ ಸಮಾಚಾರವು ನಿಮಗೆ ಬರಲಿದೆ. ಆಯ್ಕೆಯನ್ನು ವಿಳಂಬವಾಗಿ ಮಾಡುವಿರಿ. ಮಾತು ನೇರವಾಗಿದ್ದರೂ ಮೃದುವಾಗಿ ಬಳಸಿಕೊಳ್ಳುವಿರಿ. ಯಾರಾದರೂ ನೀವು ಕೊಟ್ಟ ಸಲುಗೆಯನ್ನು ದುರುಪಯೋಗ ಮಾಡಿಕೊಳ್ಳಬಹುದು. ಗೆಲುವಿಗೆ ಬಹಳ ಶ್ರಮವಹಿಸುವಿರಿ.
ವೃಷಭ ರಾಶಿ: ಶ್ರಮದಿಂದ ಎಲ್ಲ ಕಾರ್ಯವೂ ಆಗದು. ಉಪಾಯದಿಂದ ಮಾಡುವುದನ್ನು ಹಾಗೆಯೇ ಮಡುವುದು ಸೂಕ್ತ. ಇರುವ ಹಣವನ್ನು ಬೇಕಾದ ಸಮಯಕ್ಕೆ ಪಡೆಯಲು ಕಷ್ಟವಾಗಬಹುದು. ಆರೋಗ್ಯದಲ್ಲಿ ಅಸಮಾಧಾನವು ಇರಲಿದೆ. ಸಮರದ ರೀತಿಯಲ್ಲಿ ಇಂದಿನ ದಿನ ಕಳೆದಂತಾಗುವುದು. ಮಾತಾನಾಡುವ ಭರದಲ್ಲಿ ಏನಾದರೂ ಹೇಳಬಹುದು. ಕೇವಲ ಬಾಯಿ ಮಾತಿನಲ್ಲಿ ವ್ಯವಹಾರವನ್ನು ಮಾಡಿ ಮುಂದುವರಿಸುವುದು ಬೇಡ. ನಿಮ್ಮ ರಹಸ್ಯವನ್ನು ಯಾರಾದರೂ ತಿಳಿದುಕೊಳ್ಳಲು ಬಯಸುವರು. ಅವರಸದಲ್ಲಿ ಏನನ್ನೂ ಖರೀದಿ ಮಾಡುವುದು ಬೇಡ. ನಿಮ್ಮ ಸಲಹೆಯನ್ನು ಅಧಿಕಾರಿಗಳು ಸ್ವೀಕರಿಸದೇ ಇರಬಹುದು. ನೀವು ಇಂದು ಎಲ್ಲರ ಜೊತೆ ಅಲ್ಪವಾಗಿ ಮಾತನಾಡುವಿರಿ. ಸ್ಮರಣಶಕ್ತಿಯ ಕೊರತೆಯು ಅಧಿಕವಾಗಿ ಕಾಡಡಬಹುದು. ಗೌರವವನ್ನು ಕಾಪಾಡಿಕೊಳ್ಳಲು ಗಂಭೀರವಾಗಿ ಇರುವಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಅತಿಯಾದ ನಿರೀಕ್ಷೆಯಿಂದ ಸೋಲಬಹುದು.
ಮಿಥುನ ರಾಶಿ: ಬಿಗುಮಾನವು ನಿಮ್ಮನ್ನು ತೆರೆಯಲು ಬಿಡದು. ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ವಿವಿಧ ಕಡೆಗಳಿಂದ ಧನಾಗಮನವಾಗಬಹುದು. ನಿಮ್ಮ ಹಳೆಯ ವಾಹನವನ್ನು ಮಾರಾಟ ಮಾಡಿ ನೂತನ ವಾಹನವನ್ನು ಖರೀದಿ ಮಾಡುವಿರಿ. ದೇವರಲ್ಲಿ ಭಕ್ತಿಯು ಅಧಿಕವಾದೀತು. ಮಕ್ಕಳಿಗೆ ಶಿಸ್ತನ್ನು ಹೇಳುವಿರಿ. ನಿಮ್ಮ ಕಲ್ಪನೆಗೆ ಒಂದು ಚೌಕಟ್ಟು ಇರಲಿ. ನಿಮ್ಮ ಮನಸ್ಸನ್ನು ಬಹಳ ವಿಚಲಿತವಾಗಿದ್ದು ಸ್ಥಿರತ್ವವನ್ನು ತಂದುಕೊಳ್ಳುವುದು ಕಷ್ಟವಾದೀತು. ನಿಮ್ಮಅಲ್ಪ ಜ್ಞಾನವನ್ನು ಎಲ್ಲರೆದುರು ತೋರಿಸುವುದು ಬೇಡ. ನಿಮ್ಮ ಆಸ್ತಿಯನ್ನು ಇನ್ನೊಬ್ಬರು ಪಡೆಯಲು ಕಾನೂನು ರೀತಿಯಲ್ಲಿ ಹೋಗುವರು. ಮನೆಗೆ ದಂಪತಿಗಳನ್ನು ಕರೆದು ಸತ್ಕಾರ ಮಾಡಿ. ಸಹೋದರನ ಬೆಂಬಲವಿದ್ದರೂ ನಿಮಗೆ ನಿಮ್ಮ ಸ್ವಾಭಿಮಾನದಿಂದ ಹೊರಬರಲು ಆಗದು. ಸುಮ್ಮನೆ ಕುಳಿತಿರುವುದು ನಿಮಗೆ ಕಷ್ಟ. ನಿಮ್ಮನ್ನು ಯಾರಾದರೂ ಅಸ್ತ್ರವಾಗಿ ಬಳಸಿಕೊಳ್ಳಬಹುದು.
ಕರ್ಕಾಟಕ ರಾಶಿ: ನಿಮ್ಮ ಉದ್ಯಮವು ಇಚ್ಛೆಗೆ ಅನುಸಾರವಾಗಿ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸುವಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಸಾಲವನ್ನು ಮಾಡಬೇಕಾಗುವುದು. ಕಾರಣಾಂತರದಿಂದ ನಿಮ್ಮ ಪ್ರಯಾಣವು ಸ್ಥಗಿತವಾಗಬಹುದು. ಯಂತ್ರಗಳ ಮಾರಾಟದಿಂದ ನಿಮಗೆ ಆದಾಯವು ಹೆಚ್ಚಾಗುವುದು. ಮಕ್ಕಳನ್ನು ಖುಷಿಯಿಂದ ಇಡಲು ನಾನಾ ಪ್ರಯತ್ನವನ್ನು ಮಾಡುವಿರಿ. ಹಿರಿಯರ ಮಾತನ್ನು ಪಾಲಿಸುವಿರಿ. ನಿಮಗೆ ಇಂದು ಕೈ ಹಾಕಿದ ಕಾರ್ಯದಲ್ಲಿ ಜಯ ಸಿಗುವುದು. ಪೂರ್ವಜನ್ಮದ ಪುಣ್ಯವು ರಕ್ಷಿಸುವುದು. ಸ್ವಂತ ಉದ್ಯೋಗದಿಂದ ಒತ್ತಡವು ಅಧಿಕವಾಗಿ ಬರಬಹುದು. ಮನೆಯ ಕೆಲಸವನ್ನು ಮಾಡಿಕೊಳ್ಳಲು ನಿಮಗೆ ಸಮಯ ಸಾಕಾಗದು. ನಿಮ್ಮ ಮಾತುಗಳಿಂದ ಅನರ್ಥವಾಗಬಹುದು. ಇನ್ನೊಬ್ಬರಿಂದ ನಿಮಗೆ ಉತ್ತೇಜನ ಸಿಗಲಿದೆ. ಇಂದು ಸಹೋದ್ಯೋಗಿಗಳ ಬಗ್ಗೆ ನಿಮಗೆ ಅನಾದರ ಬರಬಹುದು.
ಸಿಂಹ ರಾಶಿ: ಇಂದು ನಿಮ್ಮ ವ್ಯಕ್ತಿತ್ವದಿಂದ ಯಾರಾದರೂ ಆಕರ್ಷಿತರಾಗಹುದು. ನಿಮ್ಮ ಪ್ರೇಮದ ವಿಚಾರವನ್ನು ತಾಯಿಯ ಬಳಿ ಹೇಳಿಕೊಳ್ಳುವಿರಿ. ನಿಮಗೆ ಇಂದು ಸಮಯವು ವ್ಯರ್ಥವಾದಂತೆ ತೋರುವುದು. ಅನುಕಂಪವನ್ನು ಪಡಯುವ ನಾಟಕ ನಡೆಯಬಹುದು. ಆರೋಪವನ್ನು ತಡಡದುಕೊಳ್ಳುವ ಶಕ್ತಿ ಇರದು. ಆಸ್ತಿಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಕಾಗಬಹುದು. ಹಿಂದೆ ಮುಂದೆ ಆಲೋಚಿಸದೇ ಧೈರ್ಯವನ್ನು ಮಾಡುವುದು ಬೇಡ. ಪ್ರಯಾಣದ ವಿಚಾರದಲ್ಲಿ ಇಂದು ಮನೆಯವರ ಮಾತಿನಂತೆ ನಡೆದುಕೊಳ್ಳಿ. ನಿಮ್ಮ ಜೊತೆ ವೃತ್ತಿಯನ್ನು ನಿರ್ವಹಿಸುವವರು ನಿಮ್ಮ ಮಾತನ್ನು ಸಹಿಸಲಾರರು. ಸಂಗಾತಿಯು ದೂರ ಪ್ರಯಾಣ ಹೋಗಲು ಆಹ್ವಾನಿಸಬಹುದು. ಮೊದಲು ಮಾಡಿದ ತಪ್ಪನ್ನೇ ಪುನಃ ಮಾಡಲು ಹೋಗುವಿರಿ. ನಿಮ್ಮ ವಸ್ತುಗಳನ್ನು ಯಾರಾದರೂ ಕಳ್ಳತನ ಮಾಡಬಹುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ಹಾಗೆಯೇ ಉಳಿಯದು.
ಕನ್ಯಾ ರಾಶಿ: ಇಂದು ನಿಮ್ಮ ಔಷದೀಯ ವ್ಯಾಪಾರದಲ್ಲಿ ಗಣನೀಯ ಪ್ರಗತಿಯು ಕಾಣಿಸುವುದು. ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ಭೂಮಿಯ ಖರೀದಿಯಲ್ಲಿ ಗೊಂದಲವು ಹೆಚ್ಚಿರಬಹುದು. ನಿಮ್ಮ ಭಾವನೆಗಳನ್ನು ನೀವೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಹಳೆಯ ನೋವುಗಳು ಮತ್ತೆ ಕಾಣಿಸಿಕೊಳ್ಳುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಇಚ್ಛೆ ಇರುವುದು. ಇಂದಿನ ನಿಮ್ಮ ಕಾರ್ಯದಿಂದ ಮೆಚ್ಚುಗೆ ಸಿಗುವುದು. ಸಾಕಷ್ಟು ಕಿರಿಕಿರಿ ಇದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯದಲ್ಲಿ ನೀವು ನಿರತರಾಗುವಿರಿ. ಪ್ರಭಾವೀ ವ್ಯಕ್ತಿಗಳ ಸಹಕಾರದಿಂದ ನಿಮಗೆ ಜೀವನದ ಉತ್ತಮ ಮಾರ್ಗವು ಕಾಣಿಸುವುದು. ಇಂದು ಯಾರನ್ನೂ ನೋಯಿಸಲು ಮನಸ್ಸಾಗದು. ಭವಿಷ್ಯದ ಕನಸು ಕಾಣುವಿರಿ. ಭೋಗವಸ್ತುಗಳ ಮಾರಾಟದಿಂದ ನಿಮಗೆ ಲಾಭವಾಗುವುದು. ಮಕ್ಕಳ ತೀರ್ಮಾನಕ್ಕೆ ನೀವು ಬದ್ಧರಾಗಬೇಕಾಗುವುದು. ಅಪರಿಚಿತರ ಜೊತೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಿರಿ.