Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 18ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 18ರ ಸೋವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 18ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 9ರ ದಿನಭವಿಷ್ಯ
Follow us
ಸ್ವಾತಿ ಎನ್​ಕೆ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2024 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 18ರ ಸೋವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಣಕಾಸು ವಿಚಾರದಲ್ಲಿ ಕಾಡುತ್ತಿರುವ ಗೊಂದಲಗಳು ಬಗೆಹರಿಯುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ನಿಮ್ಮೊಬ್ಬರಿಂದ ಏನಾದೀತು ಎಂಬಂತೆ ಇತರರು ಆಡಿದ ಮಾತುಗಳಿಗೆ ಉತ್ತರ ಎಂಬಂತೆ ಕೆಲವು ಅಸಾಧ್ಯವಾದ ಕೆಲಸ- ಕಾರ್ಯಗಳನ್ನು ಮಾಡಿ, ಮುಗಿಸುವುದಕ್ಕೆ ಸಫಲರಾಗುತ್ತೀರಿ. ವಿದೇಶಗಳಿಗೆ ಉದ್ಯೋಗ ನಿಮಿತ್ತವಾಗಿ ತೆರಳಬೇಕು ಎಂದಿರುವವರಿಗೆ ಈ ತನಕ ಏನಾದರೂ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವುಗಳನ್ನು ನಿವಾರಿಸಿಕೊಳ್ಳುವುದಕ್ಕೆ ಅವಕಾಶಗಳಿವೆ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಅವಕಾಶಗಳು ಹೆಚ್ಚಿವೆ. ತರಕಾರಿ, ಹೂವು- ಹಣ್ಣಿನ ವ್ಯವಹಾರ, ಬ್ಯಾಂಗಲ್ ಸ್ಟೋರ್ಸ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರಬಹುದು. ಇನ್ನು ದೀರ್ಘಾವಧಿಯ ಆರ್ಡರ್ ಗಳು ಸಹ ದೊರೆಯುವ ಅವಕಾಶಗಳು ಹೆಚ್ಚಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಕುಟುಂಬದ ವ್ಯವಹಾರದಲ್ಲಿ ಪಾಲ್ಗೊಂಡಿರುವವರಿಗೆ ಸ್ವತಂತ್ರವಾಗಿ ವ್ಯಾಪಾರ- ವ್ಯವಹಾರ ಆರಂಭಿಸುವ ಬಗ್ಗೆ ಆಲೋಚನೆ ಮೂಡಬಹುದು. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ನಿಮಗೆ ಇಷ್ಟ ಇಲ್ಲದ ವಿಭಾಗಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ. ಅಥವಾ ನಿಮಗೆ ಯಾರ ಜತೆಗೆ ಈಗಾಗಲೇ ವೈಮನಸ್ಯ ಇರುತ್ತದೋ ಅಂಥ ವ್ಯಕ್ತಿಗಳ ಕೈಕೆಳಗೆ ಅಥವಾ ಜತೆಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ನೀವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ತಡ ಮಾಡಿದ್ದರಿಂದಾಗಿ ಕೆಲವು ಉದ್ಯೋಗಾವಕಾಶಗಳು ಕೈ ತಪ್ಪಿ ಹೋಗುವಂಥ ಸಾಧ್ಯತೆಗಳಿದ್ದು, ಅತಿ ಮುಖ್ಯವಾದ ವಿಚಾರಗಳು ಇದ್ದಲ್ಲಿ ತಡ ಮಾಡದೆ ತೀರ್ಮಾನಗಳನ್ನು ತೆಗೆದುಕೊಳ್ಳಿ. ಇನ್ನು ಮದುವೆ ನಿಶ್ಚಯ ಆಗಿರುವಂಥವರು ಸಣ್ಣ- ಪುಟ್ಟ ವಿಚಾರಗಳಿಗೂ ಸಿಟ್ಟು ಮಾಡುವುದು, ಮಾತು ಬಿಡುವುದು ಇಂಥದ್ದನ್ನು ಮಾಡಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ವೃತ್ತಿಗೆ ಸಂಬಂಧಿಸಿದ ವಸ್ತುಗಳನ್ನು ಅಥವಾ ಗ್ಯಾಜೆಟ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಮೊದಲಾದವುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗಿದೆ. ಒಂದು ವೇಳೆ ಇದಕ್ಕಾಗಿ ಹಣಕಾಸಿನ ಕೊರತೆ ಕಂಡುಬಂದಲ್ಲಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳು ನೆರವಿಗೆ ನಿಲ್ಲಲಿದ್ದಾರೆ. ಒಂದು ವೇಳೆ ನೀವೇನಾದರೂ ಈಗ ಇರುವಂಥ ಮನೆಯನ್ನು ಖಾಲಿ ಮಾಡಿ, ಹೊಸ ಮನೆಗೆ ಹೋಗಬೇಕು ಎಂದುಕೊಳ್ಳುತ್ತಿದ್ದಲ್ಲಿ ಅಂದುಕೊಂಡಂಥ ಮನೆ ದೊರೆಯುವ ಅವಕಾಶ ಹೆಚ್ಚಿಗೆ ಇದೆ. ಸಾಲ ಹಾಗೂ ಮನೆಯ ಬಜೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಗಂಭೀರವಾದ ಚರ್ಚೆಗಳು ಆಗಲಿವೆ. ಈ ಹಿಂದೆ ನೀವಾಡಿದ್ದ ಮಾತುಗಳು ಹಾಗೂ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುವ ಸಾಧ್ಯತೆಗಳು ಹೆಚ್ಚಿವೆ. ಇಂಥ ಯಾವುದೇ ಬೆಳವಣಿಗೆಯಾದರೂ ಧೈರ್ಯಗುಂದಬೇಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸುಮ್ಮನೆ ಇದ್ದಿದ್ದರೆ ಆಗುತ್ತಿತ್ತು ಎಂದೆನಿಸುವಂಥ ಹಲವು ಘಟನೆಗಳು ಈ ದಿನ ನಡೆಯಲಿವೆ. ಅಂತರಂಗದ ವಿಚಾರವನ್ನು ಯಾರ ಬಳಿಯಾದರೂ ಹೇಳಿಕೊಂಡಿದ್ದಲ್ಲಿ ಅವರು ಅದನ್ನು ಹಲವರ ಬಳಿಗೆ ಹೇಳಿಕೊಂಡು ಬಂದು, ನಿಮಗೆ ಮುಜುಗರದ ಸನ್ನಿವೇಶವನ್ನು ತಂದೊಡ್ಡಲಿದ್ದಾರೆ. ಸಂಗಾತಿಯು ನಿಮ್ಮ ಧೋರಣೆ ಬಗ್ಗೆ ಬೇಸರ ವ್ಯಕ್ತಪಡಿಸಬಹುದು. ನೀವು ಬಳಸುವ ಭಾಷೆ, ಅದನ್ನು ಆಡಿದ ರೀತಿ ಹಾಗೂ ಇತರ ವಿಚಾರಗಳನ್ನು ಮುಂದು ಮಾಡಿಕೊಂಡು, ಹೀಯಾಳಿಸಬಹುದು. ಆದ್ದರಿಂದ ಗುಂಪು ಗುಂಪಾಗಿ ಜನರು ಇರುವ ಕಡೆಗೆ, ಅದರಲ್ಲೂ ಸಣ್ಣ ತಪ್ಪು ಮಾತು ಕೂಡ ದೊಡ್ಡ ಅವಮಾನಕ್ಕೆ ಕಾರಣ ಆಗುವಂಥ ಕಡೆಗೆ ಸುಮ್ಮನೆ ಇದ್ದರೆ ಒಳಿತು. ಪ್ರೀತಿ- ಪ್ರೇಮ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿದ್ದು, ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಲಿವೆ. ನೀವಾಗಿಯೇ ಕರೆ ಮಾಡುವುದರ ಮೂಲಕ ಸಮಸ್ಯೆಯೊಂದನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮನೆಗೆ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂಥ ಯೋಗ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವಂಥವರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು, ಕಂಪನಿಗಳ ಸಿಇಒ, ಸಿಒಒ ಇಂಥ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಬಹಳ ಒಳ್ಳೆ ದಿನ ಇದು. ನಿಮ್ಮಲ್ಲಿ ಯಾರಾದರೂ ಸ್ಟಾರ್ಟ್ ಅಪ್ ಶುರು ಮಾಡುವುದಕ್ಕಾಗಿ ಸಿದ್ಧತೆ ನಡೆಸುತ್ತಿದ್ದೀರಿ ಅಂತಾದಲ್ಲಿ ಅದಕ್ಕೆ ಬೇಕಾದ ಹಣಕಾಸಿನ ಅನುಕೂಲಗಳು ಒದಗಿ ಬರಲಿವೆ. ಅಥವಾ ಕಾನೂನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಸಣ್ಣ- ಪುಟ್ಟ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವುಗಳನ್ನು ನಿವಾರಿಸಿಕೊಂಡು, ಮುಂದಕ್ಕೆ ಸಾಗಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಅವುಗಳ ವಿಸ್ತರಣೆಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ಇನ್ನು ಸರಿಯಾದ ಸಂಪನ್ಮೂಲ ವ್ಯಕ್ತಿಗಳು, ಕೆಲಸಗಾರರನ್ನು ಹುಡುಕಾಡುತ್ತಿದ್ದೀರಿ ಅಂತಾದಲ್ಲಿ ಅಂಥವರು ಸಹ ದೊರೆಯಲಿದ್ದಾರೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮಕ್ಕಳ ಆರೋಗ್ಯ, ಶಿಕ್ಷಣ, ಭವಿಷ್ಯ, ಮದುವೆ, ಉದ್ಯೋಗ ಇಂಥ ವಿಚಾರಗಳು ಈ ದಿನ ವಿಪರೀತ ಆದ್ಯತೆ ಪಡೆಯುತ್ತವೆ. ದೈನಂದಿನ ಕೆಲಸ- ಕಾರ್ಯಗಳಲ್ಲಿ ಹೆಚ್ಚು ಉತ್ಸಾಹದಿಂದ ತೊಡಗಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಾಗದೇ ಹೋಗಬಹುದು. ನಿಮ್ಮಲ್ಲಿ ಕೆಲವರು ವಿಪರೀತ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ನೀವು ಇತರರನ್ನು ನಂಬಿಕೊಂಡು ವಹಿಸಿದ್ದ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದ ಕಾರಣಕ್ಕೆ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವಂಥವರು, ಚಾರ್ಟರ್ಡ್ ಅಕೌಂಟೆಂಟ್ ಗಳು, ವಕೀಲಿಕೆ ವೃತ್ತಿಯನ್ನು ಮಾಡುತ್ತಿರುವವರಿಗೆ ವರ್ಚಸ್ಸಿಗೆ ಪೆಟ್ಟು ಬೀಳುವಂಥ ಕೆಲವು ಘಟನೆಗಳು ನಡೆಯಲಿವೆ. ನೀವು ಈ ಹಿಂದೆ ಯಾವಾಗಲೋ ಹೇಳಿದ್ದ ಸುಳ್ಳು, ಆಡಿದ್ದ ಮಾತು, ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನು ಮುಂದೆ ಮಾಡಿಕೊಂಡು ಈಗ ನಿಮ್ಮ ವಿರುದ್ಧ ಕೆಲವರು ಅಪಪ್ರಚಾರ ಮಾಡಲಿದ್ದಾರೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮಗಿಂತ ವಯಸ್ಸಿನಲ್ಲಿ ಚಿಕ್ಕವರು, ಹುದ್ದೆಯಲ್ಲಿ ಕಡಿಮೆ ಇರುವವರು, ಅನುಭವದಲ್ಲಿಯೂ ಕಡಿಮೆ ಇರುವವರಿಂದ ಕೆಲವು ಮುಜುಗರದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಾಲ್ಕು ಜನರ ಮಧ್ಯೆಯೇ ಭಾರೀ ಅವಮಾನ ಆಗುವಂಥ ಸನ್ನಿವೇಶ ಎದುರಾಗಲಿದೆ. ಆದ್ದರಿಂದ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು, ಆ ನಂತರ ಸರಿಯಾಗಿ ಆಲೋಚನೆ ಮಾಡಿ, ಮಾತನಾಡಿದರೆ ಒಳ್ಳೆಯದು. ಇನ್ನೇನು ಪ್ರಮುಖ ಹುದ್ದೆಯೊಂದು ನಿಮಗೆ ದೊರೆಯಲಿದೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು ಕೊನೆ ಕ್ಷಣದಲ್ಲಿ ಕೈ ತಪ್ಪಿದೆ ಎಂಬ ಮಾಹಿತಿ ನಿಮಗೆ ಬರಬಹುದು. ನಿಮಗೆ ಇಷ್ಟು ಸಮಯ ಬಹಳ ಹತ್ತಿರವಾಗಿದ್ದ ಮೇಲಧಿಕಾರಿ ಒಬ್ಬರು ನಿಮ್ಮ ಸಾಮರ್ಥ್ಯದ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸುವಂತಹ ಸನ್ನಿವೇಶಕ್ಕೆ ಎದುರಾಗಲಿದ್ದೀರಿ. ಹಳೇ ದ್ವೇಷ ಸಾಧನೆಗೆ ಕೆಲವರು ಗಟ್ಟಿಯಾಗಿ ಪ್ರಯತ್ನಿಸುತ್ತಿರುವುದು ನಿಮ್ಮ ಗಮನಕ್ಕೆ ಬರಲಿದ್ದು, ಇದಕ್ಕೆ ಏನೂ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿ ನೀವಿರುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಸಮಯ ಪ್ರಜ್ಞೆ, ಮುಂಜಾಗ್ರತೆಯಿಂದ ತೆಗೆದುಕೊಂಡ ಎಚ್ಚರಿಕೆಗಳು, ಹಣಕಾಸು ವಿಷಯದಲ್ಲಿ ವಹಿಸಿದ ಜಾಗ್ರತೆ ಬಗ್ಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಲಿದೆ. ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮೇಲಧಿಕಾರಿಗಳಿಂದ ಖುಷಿ, ಸಂತೋಷ ವ್ಯಕ್ತವಾಗಲಿದ್ದು, ವೇತನ ಹೆಚ್ಚಳ, ಬಡ್ತಿಯನ್ನು ನಿರೀಕ್ಷೆ ಮಾಡುತ್ತಿರುವವರಿಗೆ ಆ ಬಗ್ಗೆ ಮಾಹಿತಿ ದೊರೆಯಬಹುದು. ಅಥವಾ ಜವಾಬ್ದಾರಿ ಹೊರುವುದಕ್ಕೆ ಸಿದ್ಧವಾಗುವಂತೆ ಸೂಚನೆ ಸಹ ನೀಡಬಹುದು. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳಿಬರಲಿದೆ. ಈಗಾಗಲೇ ವಧು ಅಥವಾ ವರನನ್ನು ನೋಡಿಕೊಂಡು ಬಂದಿದ್ದೇವೆ, ಒಪ್ಪುತ್ತಾರಾ ಇಲ್ಲವೋ ಎಂದು ಉತ್ತರದ ನಿರೀಕ್ಷೆಯಲ್ಲಿ ಇದ್ದೇವೆ ಎಂಬುವವರಿಗೆ ಮನಸ್ಸು ಬಯಸುವಂಥ ಉತ್ತರ ದೊರೆಯಲಿದೆ. ಮಧುಮೇಹ ಅಥವಾ ರಕ್ತದೊತ್ತಡದ ಸಮಸ್ಯೆ ಇರುವಂಥವರು ಔಷಧೋಪಚಾರದ ವಿಷಯದ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ನಿಧಾನಗತಿಯ ಧೋರಣೆ, ಆಲೋಚನೆ ಬಗ್ಗೆ ಉದ್ಯೋಗ ಸ್ಥಳದಲ್ಲಿ ಹೀಯಾಳಿಸುವುದು, ಮೂದಲಿಕೆಯ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಇತರರ ಜತೆಗೆ ನಿಮ್ಮನ್ನು ಹೋಲಿಸಿ, ಸಾಮರ್ಥ್ಯದ ಬಗ್ಗೆ ಹೀಗಳೆಯಬಹುದು. ಈ ದಿನ ಇಂಥ ಮಾತುಗಳಿಗೆ ಬಿರುಸಾದ ಉತ್ತರವನ್ನು ನೀಡುತ್ತೇನೆ ಎಂದು ಹೊರಡಬೇಡಿ. ಏಕೆಂದರೆ ನಿಮ್ಮಿಂದಲೇ ಕೆಲವು ತಪ್ಪುಗಳಾಗಿ, ಬಹಳ ಸುಲಭವಾಗಿ ಅವಮಾನಕ್ಕೆ ಈಡಾಗುವ ಸಾಧ್ಯತೆಗಳಿವೆ. ಸಾಧ್ಯವಾದಷ್ಟೂ ತಾಳ್ಮೆ, ಸಂಯಮ ಹಾಗೂ ಸಮಾಧಾನದಿಂದ ಇರುವುದಕ್ಕೆ ಪ್ರಯತ್ನಿಸಿ. ಇತರರಿಂದ ಪಡೆದುಕೊಂಡಂಥ ಸಾಲದ ಮೊತ್ತವನ್ನು ಹೇಳಿದ ಸಮಯಕ್ಕೆ ಹಿಂತಿರುಗಿಸುವುದಕ್ಕೆ ಪ್ರಯತ್ನಿಸಿ. ಇನ್ನು ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸಾಲದ ಕಂತುಗಳನ್ನು ನಿಗದಿತ ದಿನಾಂಕಕ್ಕೆ ಪಾವತಿಸುವ ಕಡೆಗೆ ಲಕ್ಷ್ಯ ನೀಡಿ. ನೀವು ಅದನ್ನು ಮರೆತು, ಆ ನಂತರ ಪರಿತಪಿಸುವಂತಾಗುತ್ತದೆ, ಎಚ್ಚರ.

ಲೇಖನ- ಎನ್‌.ಕೆ.ಸ್ವಾತಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?