ಶುಕ್ರನ ಸಂಚಾರ: ಅಬ್ಬಾಬ್ಬ ಈ 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಮಕರ ರಾಶಿಯ ಶ್ರವಣ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಕೆಲ ದಿನಗಳ ಕಾಲ ಇರಲಿದೆ. ಇದು ಭಾವನಾತ್ಮಕ ಬದಲಾವಣೆಗಳನ್ನು ತರುತ್ತದೆ. ವೃಷಭ, ಕನ್ಯಾ, ಮಕರ, ಮೀನ ರಾಶಿಯವರಿಗೆ ಶುಭ ಫಲವಿದ್ದು, ಅದೃಷ್ಟ ಒಲಿಯಲಿದೆ. ಮಿಥುನ, ತುಲಾ, ಧನು ರಾಶಿಯವರಿಗೆ ಮಿಶ್ರ ಫಲವಿದ್ದು ಎಚ್ಚರಿಕೆ ಅಗತ್ಯ. ಕರ್ಕಾಟಕ, ಸಿಂಹ, ವೃಶ್ಚಿಕ ರಾಶಿಯವರು ಸವಾಲುಗಳನ್ನು ಎದುರಿಸಬಹುದು. ಪರಿಹಾರವಾಗಿ ಮಹಾಲಕ್ಷ್ಮಿ ಪೂಜೆ ಮಾಡುವುದು ಉತ್ತಮ.

ಇನ್ನು ಕೆಲವು ದಿನ ಮಕರ ರಾಶಿಯ ಶ್ರವಣ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಆಗಲಿದೆ. ಮಕರ ರಾಶಿಯ ಅಧಿಪತಿ ಶನಿ ಮತ್ತು ಶ್ರವಣ ನಕ್ಷತ್ರದ ಅಧಿಪತಿ ಚಂದ್ರ. ಶುಕ್ರ ಮತ್ತು ಶನಿ ಮಿತ್ರರಾಗಿದ್ದರೂ, ಮನಸ್ಸಿಗೆ ಕಾರಕನಾದ ಚಂದ್ರನ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಭಾವನಾತ್ಮಕ ಬದಲಾವಣೆಗಳನ್ನು ತರುತ್ತದೆ. ನಕಾರಾತ್ಮಕ ಬದಲಾವಣೆಗೆ ಕುಗ್ಗದೇ, ಬುದ್ಧಿಯಿಂದ ಅದನ್ನು ಸರಿಮಾಡಿಕೊಳ್ಳಿ.
ಈ ಸಂಚಾರದಿಂದ ಯಾವ ರಾಶಿಯವರಿಗೆ ಲಾಭ ಮತ್ತು ಯಾರಿಗೆ ಎಚ್ಚರಿಕೆ ಅಗತ್ಯ ಎಂಬ ವಿವರ ಇಲ್ಲಿದೆ:
ಶುಭ ಫಲ
ವೃಷಭ ರಾಶಿ:
ಭಾಗ್ಯ ಸ್ಥಾನದಲ್ಲಿ ಶುಕ್ರನ ಸಂಚಾರವಿರುವುದರಿಂದ ಅದೃಷ್ಟ ಒಲಿಯಲಿದೆ. ದೀರ್ಘಕಾಲದ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.
ಕನ್ಯಾ ರಾಶಿ:
ಪಂಚಮ ಸ್ಥಾನದಲ್ಲಿ ಶುಕ್ರನಿರುವುದರಿಂದ ಪ್ರೇಮ ಸಂಬಂಧಗಳು ಮಧುರವಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಆಕಸ್ಮಿಕ ಧನ ಲಾಭದ ಯೋಗವಿದೆ.
ಮಕರ ರಾಶಿ:
ನಿಮ್ಮದೇ ರಾಶಿಯಲ್ಲಿ ಶುಕ್ರನಿರುವುದರಿಂದ ವ್ಯಕ್ತಿತ್ವದಲ್ಲಿ ಸುಧಾರಣೆ ಕಂಡುಬರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಮತ್ತು ವಿವಾಹದ ಮಾತುಕತೆಗಳು ಯಶಸ್ವಿಯಾಗುತ್ತವೆ.
ಮೀನ ರಾಶಿ:
ಲಾಭ ಸ್ಥಾನದಲ್ಲಿ ಶುಕ್ರನಿರುವುದರಿಂದ ಆರ್ಥಿಕ ಸ್ಥಿತಿ ಭದ್ರವಾಗುತ್ತದೆ. ಹಿರಿಯ ಸಹೋದರರಿಂದ ಅಥವಾ ಸ್ನೇಹಿತರಿಂದ ಬೆಂಬಲ ಸಿಗಲಿದೆ. ಮಿಶ್ರ ಫಲ
ಮಿಥುನ ಮತ್ತು ತುಲಾ:
ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ, ಆದರೆ ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಕುಟುಂಬದವರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು.
ಧನು ರಾಶಿ:
ಆರ್ಥಿಕವಾಗಿ ಹೂಡಿಕೆ ಮಾಡಲು ಒಳ್ಳೆಯ ಸಮಯ, ಆದರೆ ಮಾತಿನ ಮೇಲೆ ನಿಗಾ ಇರಲಿ. ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಅಶುಭ ರಾಶಿ
ಕರ್ಕಾಟಕ ರಾಶಿ:
ಸಪ್ತಮ ಸ್ಥಾನದಲ್ಲಿ ಶುಕ್ರನಿರುವುದರಿಂದ ಸಂಗಾತಿಯೊಂದಿಗೆ ಸಣ್ಣಪುಟ್ಟ ವಾಗ್ವಾದಗಳು ಉಂಟಾಗಬಹುದು. ವ್ಯವಹಾರದಲ್ಲಿ ಪಾಲುದಾರರೊಂದಿಗೆ ಪಾರದರ್ಶಕವಾಗಿರಿ.
ಸಿಂಹ ರಾಶಿ:
ಶತ್ರುಗಳ ಕಾಟ ಹೆಚ್ಚಾಗಬಹುದು ಅಥವಾ ಅನಗತ್ಯ ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು. ಆರೋಗ್ಯದ ಕಡೆ ಗಮನಹರಿಸಿ.
ವೃಶ್ಚಿಕ ರಾಶಿ:
ಅತಿಯಾದ ಆತ್ಮವಿಶ್ವಾಸದಿಂದ ಕೆಲಸಗಳು ಕೆಡಬಹುದು. ಸಹೋದರರೊಂದಿಗೆ ಮನಸ್ತಾಪವಾಗದಂತೆ ನೋಡಿಕೊಳ್ಳಿ.
ಶುಕ್ರವಾರದಂದು ಮಹಾಲಕ್ಷ್ಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ಅಥವಾ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ಫಲಗಳು ಹೆಚ್ಚುತ್ತವೆ. – ಲೋಹಿತ ಹೆಬ್ಬಾರ್
