Weekly Career Horoscope 2026: ಈ ರಾಶಿಯವರು ಉದ್ಯೋಗದಲ್ಲಿ ಹೆಚ್ಚು ಶ್ರಮವಹಿಸಬೇಕು
ಉದ್ಯೋಗ ಭವಿಷ್ಯ 2026: ಫೆಬ್ರವರಿ 1 ರಿಂದ 7, 2026 ರವರೆಗಿನ ಈ ವಾರದಲ್ಲಿ ಉದ್ಯೋಗದಲ್ಲಿ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಆಯ್ಕೆಗಳಲ್ಲಿ ಎಚ್ಚರ, ರಕ್ಷಣೆ ಅನಿವಾರ್ಯ. ಕಲಾತ್ಮಕತೆಗೆ ಮಹತ್ವ. ಮೇಷದಿಂದ ಮೀನದವರೆಗೆ ಪ್ರತಿ ರಾಶಿಯ ವೃತ್ತಿ ಬದುಕಿನ ಭವಿಷ್ಯ, ಸವಾಲುಗಳು ಮತ್ತು ಯಶಸ್ಸಿನ ಮಾರ್ಗಗಳನ್ನು ಇಲ್ಲಿ ವಿವರಿಸಲಾಗಿದೆ. ನಿಮ್ಮ ಕಾರ್ಯಕ್ಷಮತೆ ಹೆಚ್ಚಿಸಲು, ಹೊಸ ಅವಕಾಶಗಳನ್ನು ಅರಿಯಲು ಇದು ಮಾರ್ಗದರ್ಶಿಯಾಗಿದೆ.

01-02-2026ರಿಂದ 07-02-2026 ರವರೆಗೆ ಉದ್ಯೋಗದಲ್ಲಿ ಶ್ರಮ ಹಾಕಬೇಕಾದ ಅನಿವಾರ್ಯತೆ ಇರಲಿದೆ. ಆಯ್ಕೆಗಳನ್ನು ಮಾಡುವಾಗ ಎಚ್ಚರಿಕೆ ಅಗತ್ಯ. ರಕ್ಷಣೆಯನ್ನು ನೀವು ಎಲ್ಲ ಕಡೆಯಿಂದ ಎಲ್ಲ ತರದಲ್ಲಿಯೂ ಮಾಡಕೊಳ್ಳಬೇಕಾಗುವುದು. ಕಲಾತ್ಮಕತೆಗೆ ಹೆಚ್ಚು ಮಹತ್ತ್ವ ಸಿಗಲಿದೆ. ಈ ವಾರ ಶುಭವಾಗಲಿ.
ಮೇಷ :
ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಮೇಲಧಿಕಾರಿಗಳ ಬೆಂಬಲದಿಂದ ಕಠಿಣ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಆರ್ಥಿಕ ಲಾಭದೊಂದಿಗೆ ವೃತ್ತಿಜೀವನದಲ್ಲಿ ಬಡ್ತಿಯ ಯೋಗವಿದೆ. ನಿಮ್ಮ ಶ್ರಮಕ್ಕೆ ತಕ್ಕ ಗೌರವ ಸಿಗುವ ಸಮಯವಿದು.
ವೃಷಭ :
ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಕಾರ್ಯಕ್ಷಮತೆ ಕುಂದುವುದಿಲ್ಲ. ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರವಹಿಸಿ. ವ್ಯವಹಾರದಲ್ಲಿ ಹೊಸ ಹೂಡಿಕೆಗೆ ಈ ವಾರ ಪೂರಕವಾಗಿದೆ. ತಾಳ್ಮೆ ನಿಮ್ಮ ಯಶಸ್ಸಿನ ಸೂತ್ರ.
ಮಿಥುನ :
ನಿರುದ್ಯೋಗಿಗಳಿಗೆ ಹೊಸ ಕೆಲಸದ ಆಫರ್ ಸಿಗಲಿದೆ. ಸೃಜನಶೀಲ ಕೆಲಸಗಳಲ್ಲಿರುವವರಿಗೆ ಉತ್ತಮ ಮನ್ನಣೆ ದೊರೆಯುತ್ತದೆ. ವಿದೇಶಿ ಕಂಪನಿಗಳೊಂದಿಗೆ ವ್ಯವಹರಿಸಲು ಇದು ಸಕಾಲ. ನಿಮ್ಮ ಸಂವಹನ ಕಲೆ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆ.
ಕರ್ಕಾಟಕ :
ಉದ್ಯೋಗ ಸ್ಥಳದಲ್ಲಿ ಶತ್ರುಗಳ ಬಗ್ಗೆ ಎಚ್ಚರವಿರಲಿ. ಅನಗತ್ಯ ವಾದಗಳಿಂದ ದೂರವಿರುವುದು ಒಳಿತು. ಕೆಲಸದ ಬದಲಾವಣೆಗಾಗಿ ಮಾಡುವ ಪ್ರಯತ್ನಗಳು ಸದ್ಯಕ್ಕೆ ಬೇಡ. ಶಿಸ್ತು ಮತ್ತು ಕಠಿಣ ಪರಿಶ್ರಮ ಮಾತ್ರ ನಿಮಗೆ ರಕ್ಷಣೆ ನೀಡಬಲ್ಲದು.
ಸಿಂಹ :
ಸರ್ಕಾರಿ ಕೆಲಸದಲ್ಲಿರುವವರಿಗೆ ಶುಭ ಕಾಲ. ಹೊಸ ಯೋಜನೆಗಳನ್ನು ಜಾರಿಗೆ ತರಲು ಅನುಕೂಲಕರ ವಾರವಿದು. ಆದರೆ, ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ಕಚೇರಿ ರಾಜಕೀಯದಿಂದ ದೂರವಿದ್ದು ನಿಮ್ಮ ಕೆಲಸದ ಮೇಲೆ ಗಮನಹರಿಸಿ.
ಕನ್ಯಾ :
ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶುಭ ಫಲ ಸಿಗಲಿದೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದ್ದು, ಹೊಸ ಪಾಲುದಾರಿಕೆ ಆರಂಭಿಸಲು ಇದು ಉತ್ತಮ ಸಮಯ. ತುಲಾ :
ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಕಲಾತ್ಮಕ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಕೆಲಸದ ನಿಮಿತ್ತ ಸಣ್ಣ ಪ್ರಯಾಣ ಮಾಡಬೇಕಾಗಬಹುದು. ಆರ್ಥಿಕ ವಿಷಯಗಳಲ್ಲಿ ಜಾಗರೂಕರಾಗಿರಿ ಮತ್ತು ಹಿರಿಯರ ಸಲಹೆಯನ್ನು ಪಡೆಯಲು ಹಿಂಜರಿಯಬೇಡಿ. ವೃಶ್ಚಿಕ :
ವೃತ್ತಿ ಬದಲಾವಣೆಯ ಯೋಚನೆ ಇದ್ದರೆ ಎಚ್ಚರಿಕೆಯಿಂದ ನಿರ್ಧರಿಸಿ. ವರ್ಗಾವಣೆ ಬಯಸುವವರಿಗೆ ಅನುಕೂಲಕರ ಫಲಿತಾಂಶ ಸಿಗಬಹುದು. ಉದ್ಯೋಗದಲ್ಲಿ ಅನಿಶ್ಚಿತತೆ ಕಾಡದಂತೆ ನೋಡಿಕೊಳ್ಳಿ. ನಿಮ್ಮ ಕೆಲಸದ ಬಗ್ಗೆ ಮೇಲಧಿಕಾರಿಗಳಿಗೆ ಪಾರದರ್ಶಕವಾಗಿ ಮಾಹಿತಿ ನೀಡುವುದು ಉತ್ತಮ. ಧನು :
ಉದ್ಯೋಗದಲ್ಲಿ ಅದೃಷ್ಟ ನಿಮ್ಮ ಪರವಾಗಿದೆ. ಹೊಸ ತಂತ್ರಜ್ಞಾನ ಕಲಿಕೆಗೆ ಆಸಕ್ತಿ ತೋರುವಿರಿ. ವ್ಯಾಪಾರಸ್ಥರಿಗೆ ದೊಡ್ಡ ಮೊತ್ತದ ಲಾಭದ ನಿರೀಕ್ಷೆಯಿದೆ. ನಿಮ್ಮ ನಾಯಕತ್ವ ಗುಣಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ವೃತ್ತಿ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಾಣುವಿರಿ. ಮಕರ :
ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲು ವಿಳಂಬವಾಗಬಹುದು. ದೃತಿಗೆಡಬೇಡಿ, ವಾರದ ಅಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ. ತಾಂತ್ರಿಕ ವಲಯದವರಿಗೆ ಹೊಸ ಪ್ರಾಜೆಕ್ಟ್ ಸಿಗಲಿದೆ. ಸಹೋದ್ಯೋಗಿಗಳ ಸಹಕಾರ ನಿಮ್ಮ ಕೆಲಸವನ್ನು ಸುಲಭಗೊಳಿಸಲಿದೆ. ಕುಂಭ :
ರಾಹುವಿನ ಪ್ರಭಾವದಿಂದ ಕೆಲಸದಲ್ಲಿ ಅನಿರೀಕ್ಷಿತ ಬದಲಾವಣೆಗಳು ಸಂಭವಿಸಬಹುದು. ಗೊಂದಲಗಳಿಗೆ ಕಿವಿಗೊಡದೆ ಗುರಿಯತ್ತ ಗಮನಹರಿಸಿ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ ಮಿಶ್ರ ಫಲ ಸಿಗಲಿದೆ. ನಿಮ್ಮ ಬುದ್ಧಿವಂತಿಕೆಯೇ ಸವಾಲುಗಳನ್ನು ಎದುರಿಸಲು ಪ್ರಮುಖ ಅಸ್ತ್ರವಾಗಲಿದೆ. ಮೀನ :
ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭದಾಯಕ ವಾರ. ಆದರೆ ಸ್ಥಳೀಯ ಉದ್ಯೋಗದಲ್ಲಿ ಅತೃಪ್ತಿ ಕಾಡಬಹುದು. ಕೆಲಸದ ನಿಮಿತ್ತ ಅತಿಯಾದ ಓಡಾಟದಿಂದ ದಣಿವಾಗಬಹುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಶಾಂತವಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಡಿ ಇಡಿ.
– ಲೋಹಿತ ಹೆಬ್ಬಾರ್ – 8762924271 (what’s app only)
