ವಾರದ ಭವಿಷ್ಯ: ಜುಲೈ 5ರಿಂದ 11ರವರೆಗೆ ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ? ಯಾರಿಗೆ ಒಲಿಯಲಿದೆ ವೃತ್ತಿ ಪ್ರಗತಿ

ಉದ್ಯೋಗ ಭವಿಷ್ಯ: ಜುಲೈ 05 ರಿಂದ 11 ರವರೆಗಿನ ಈ ವಾರವು ಎಲ್ಲಾ 12 ರಾಶಿಗಳಿಗೆ ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಸವಾಲುಗಳು ಹಾಗೂ ಅವಕಾಶಗಳನ್ನು ತರಲಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸೂಕ್ತ ಯೋಜನೆಯೊಂದಿಗೆ ಯಶಸ್ಸನ್ನು ಸಾಧಿಸಬಹುದು. ಹೊಸ ಜವಾಬ್ದಾರಿಗಳು, ಆರ್ಥಿಕ ಲಾಭಗಳು, ಮತ್ತು ಪ್ರಗತಿಯ ಸೂಚನೆಗಳೊಂದಿಗೆ ಕೆಲವು ರಾಶಿಗಳಿಗೆ ಉತ್ತಮ ವಾರವಾದರೆ, ಇನ್ನು ಕೆಲವರಿಗೆ ತಾಳ್ಮೆ ಮತ್ತು ವಿವೇಕ ಅತ್ಯಗತ್ಯವಾಗಿದೆ.

ವಾರದ ಭವಿಷ್ಯ: ಜುಲೈ 5ರಿಂದ 11ರವರೆಗೆ ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ? ಯಾರಿಗೆ ಒಲಿಯಲಿದೆ ವೃತ್ತಿ ಪ್ರಗತಿ
ಉದ್ಯೋಗ ಭವಿಷ್ಯ
Image Credit source: Getty Images
Edited By:

Updated on: Jul 04, 2026 | 10:53 PM

ಜುಲೈ 05ರಿಂದ 11ರವರೆಗಿನ ವಾರದಲ್ಲಿ 12 ರಾಶಿಗಳ ಉದ್ಯೋಗ ಮತ್ತು ವೃತ್ತಿಜೀವನ ಸುಖಮಯವೂ ಗೊಂದಲಮಯವೂ ಕ್ಲಿಷ್ಟವೂ ಅನೇಕ ಸಕಾರಾತ್ಮಕ ನಕಾರಾತ್ಮಕ ಅಂಶಗಳಿಂದ ಕೂಡಿದ್ದೂ ಆಗಿದೆ. ಹೇಗಾದರೂ ದಾಟುತ್ತೇನೆ ಎಂಬ ಹುಂಬುತನ ಬೇಡ. ಯೋಜನೆಯ ಮೂಲಕ ಕಾರ್ಯ ಸಾಧನೆಯಾಗಲಿ.

​ಮೇಷ ರಾಶಿ:

ವೃಷಭ ರಾಶಿಯಲ್ಲಿರುವ ಮಂಗಳ ಮತ್ತು ರೋಹಿಣಿ ನಕ್ಷತ್ರದ ಚಂದ್ರನ ಪ್ರಭಾವ ನಿಮ್ಮ ಮೇಲಿರಲಿದೆ. ಉದ್ಯೋಗದಲ್ಲಿ ಹೊಸ ಆವೇಗ ಮತ್ತು ಉತ್ಸಾಹ ಕಂಡುಬರಲಿದೆ. ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಈ ವಾರ ವೇಗವನ್ನು ಪಡೆದುಕೊಳ್ಳಲಿವೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ಆರ್ಥಿಕವಾಗಿ ಲಾಭದಾಯಕ ವಾರ ಇದಾಗಲಿದೆ.

​ವೃಷಭ ರಾಶಿ:

ನಿಮ್ಮದೇ ರಾಶಿಯಲ್ಲಿ ಚಂದ್ರ ಮತ್ತು ಮಂಗಳನ ಯುತಿಯು ರೋಹಿಣಿ ನಕ್ಷತ್ರದಲ್ಲಿ ಇರುವುದರಿಂದ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಉತ್ತಮ ಗೌರವ ಮತ್ತು ಪ್ರಶಂಸೆ ಲಭಿಸಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಕಠಿಣ ಪರಿಶ್ರಮದ ನಂತರ ಯಶಸ್ಸು ಸಿಗಲಿದೆ.

​ಮಿಥುನ ರಾಶಿ:

ಸೂರ್ಯ ಮತ್ತು ಬುಧನು ಪುನರ್ವಸು ನಕ್ಷತ್ರದಲ್ಲಿ ನಿಮ್ಮ ರಾಶಿಯಲ್ಲಿದ್ದಾರೆ. ನಿಮ್ಮ ಸಂವಹನ ಕೌಶಲ್ಯ ಹಾಗೂ ತೀಕ್ಷ್ಣ ಬುದ್ಧಿವಂತಿಕೆಯಿಂದ ಕಚೇರಿಯ ಪ್ರಮುಖ ಸಭೆಗಳಲ್ಲಿ ಜಯ ಸಾಧಿಸುವಿರಿ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದ್ದು, ನಿಮ್ಮ ಪ್ರಸ್ತಾಪಗಳಿಗೆ ಮನ್ನಣೆ ದೊರೆಯಲಿದೆ. ನಿರೀಕ್ಷಿತ ಪ್ರಗತಿ ಕಂಡುಬರಲಿದೆ.

​ಕರ್ಕಾಟಕ ರಾಶಿ:

ಗುರುವು ನಿಮ್ಮ ರಾಶಿಯಲ್ಲಿ ಪುಷ್ಯ ನಕ್ಷತ್ರದ ಎರಡನೇ ಪಾದದಲ್ಲಿ ಉಚ್ಛ ಸ್ಥಾನದಲ್ಲಿದ್ದಾನೆ. ವೃತ್ತಿಜೀವನದಲ್ಲಿ ಇದು ಅತ್ಯಂತ ಸುವರ್ಣ ಕಾಲ ಎನ್ನಬಹುದು. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಆಫರ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಯಶಸ್ಸು ಸಿಗಲಿದೆ.

​ಸಿಂಹ ರಾಶಿ:

ಶುಕ್ರ ಮತ್ತು ಕೇತು ಮಖಾ ನಕ್ಷತ್ರದಲ್ಲಿ ನಿಮ್ಮ ರಾಶಿಯಲ್ಲಿದ್ದಾರೆ. ಸೃಜನಶೀಲ, ಕಲಾತ್ಮಕ, ಐಟಿ ಮತ್ತು ಫ್ಯಾಶನ್ ರಂಗದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇದು ಅತ್ಯಂತ ಲಾಭದಾಯಕ ವಾರ. ಆದಾಗ್ಯೂ, ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡದಂತೆ ಮಾತನಾಡುವಾಗ ಜಾಗರೂಕತೆ ವಹಿಸುವುದು ಒಳಿತು.

​ಕನ್ಯಾ ರಾಶಿ:

ವೃತ್ತಿರಂಗದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕಡತಗಳು ವಿಲೇವಾರಿಯಾಗಲಿವೆ. ಹಿರಿಯ ಅಧಿಕಾರಿಗಳು ನಿಮ್ಮ ಶ್ರಮವನ್ನು ಗುರುತಿಸಲಿದ್ದು, ನಿಮ್ಮ ಗೌರವ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಸೇವಾ ವಲಯದಲ್ಲಿರುವವರಿಗೆ ಉತ್ತಮ ಪ್ರಗತಿ ಕಾಣಿಸಲಿದೆ.

​ತುಲಾ ರಾಶಿ:

ವೃತ್ತಿ ಮತ್ತು ವ್ಯಾಪಾರದಲ್ಲಿ ಸ್ಥಿರವಾದ ಪ್ರಗತಿ ಕಾಣಬಹುದು. ಹೊಸ ಯೋಜನೆಗಳು ಅಥವಾ ಜಂಟಿ ಉದ್ಯಮಗಳನ್ನು ಆರಂಭಿಸಲು ಈ ವಾರ ಅತ್ಯಂತ ಸೂಕ್ತವಾಗಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಶಾಂತಿಯುತ ವಾತಾವರಣ ಇರಲಿದ್ದು, ನಿಮ್ಮ ಗುರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪುವಲ್ಲಿ ಯಶಸ್ವಿಯಾಗುವಿರಿ.

​ವೃಶ್ಚಿಕ ರಾಶಿ:

ವಾರದ ಆರಂಭದಲ್ಲಿ ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಿರಬಹುದು. ಆದರೆ ವಾರದ ಮಧ್ಯಭಾಗದ ನಂತರ ಚಂದ್ರ ಮತ್ತು ಮಂಗಳನ ಶುಭ ದೃಷ್ಟಿಯಿಂದ ನಿಮ್ಮ ಕಾರ್ಯಕ್ಷಮತೆ ದುಪ್ಪಟ್ಟಾಗಲಿದೆ. ಹಠಾತ್ ಸವಾಲುಗಳನ್ನು ಎದುರಿಸಬೇಕಾಗಿ ಬಂದರೂ, ನಿಮ್ಮ ಚಾಕಚಕ್ಯತೆಯಿಂದ ಅದನ್ನು ನಿಭಾಯಿಸಿ ಸೈ ಎನಿಸಿಕೊಳ್ಳುವಿರಿ.

​ಧನು ರಾಶಿ:

ರಾಶಿಯ ಅಧಿಪತಿ ಪುಷ್ಯ ನಕ್ಷತ್ರದ ಎರಡನೇ ಪಾದದಲ್ಲಿ ಉಚ್ಛ ಸ್ಥಾನದಲ್ಲಿರುವ ಕಾರಣ ಉದ್ಯೋಗದಲ್ಲಿ ನಿಮ್ಮ ನಿರ್ಧಾರಗಳು ಅತ್ಯಂತ ನಿಖರ ಮತ್ತು ದೂರದೃಷ್ಟಿಯುಳ್ಳದ್ದಾಗಿರುತ್ತವೆ. ಕಷ್ಟದ ಕೆಲಸಗಳನ್ನು ಅತ್ಯಂತ ಸುಲಭವಾಗಿ ನಿಭಾಯಿಸುವಿರಿ. ಸ್ವತಂತ್ರ ಉದ್ಯೋಗಿಗಳಿಗೆ ಹಾಗೂ ಫ್ರೀಲಾನ್ಸರ್‌ಗಳಿಗೆ ಈ ವಾರ ಉತ್ತಮ ಆದಾಯ ತರಲಿದೆ.

​ಮಕರ ರಾಶಿ:

ಕಚೇರಿಯಲ್ಲಿ ನಿಮ್ಮ ಸ್ಥಾನಮಾನ ಮತ್ತು ಅಧಿಕಾರ ಹೆಚ್ಚಾಗುವ ಯೋಗವಿದೆ. ಸಂಬಳ ಹೆಚ್ಚಳ ಅಥವಾ ಬಡ್ತಿಗಾಗಿ ಕಾಯುತ್ತಿದ್ದವರಿಗೆ ಈ ವಾರದ ಕೊನೆಯಲ್ಲಿ ಶುಭ ವಾರ್ತೆ ಕೇಳಿಬರಬಹುದು. ವಿದೇಶಿ ಸಂಪರ್ಕಗಳಿಂದ ಲಾಭ ಪಡೆಯುವ ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.

ಇದನ್ನೂ ಓದಿ: ಸಿಂಹ ರಾಶಿಗೆ ಶುಕ್ರ ಪ್ರವೇಶ; ಜು.4 ರಿಂದ ಈ ರಾಶಿಗಳ ಜಾತಕದಲ್ಲಿ ಅದೃಷ್ಟದ ಮಳೆ!

​ಕುಂಭ ರಾಶಿ:

ರಾಹು ಶತಭಿಷ ನಕ್ಷತ್ರದಲ್ಲಿ ನಿಮ್ಮ ರಾಶಿಯಲ್ಲಿದ್ದಾನೆ. ರಾಜತಾಂತ್ರಿಕ ನಡೆ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಸಾಧಿಸಲು ರಾಹು ನೆರವಾಗುತ್ತಾನೆ. ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ನಿಮ್ಮ ಪರವಾಗಿ ತಿರುಗಿಸಿಕೊಳ್ಳುವಿರಿ. ಮಾರ್ಕೆಟಿಂಗ್ ಮತ್ತು ರಾಜಕೀಯ ರಂಗದಲ್ಲಿರುವವರಿಗೆ ಇದು ಯಶಸ್ಸಿನ ವಾರ.

​ಮೀನ ರಾಶಿ: 

ಶನಿ ರೇವತಿ ನಕ್ಷತ್ರದಲ್ಲಿ ನಿಮ್ಮ ರಾಶಿಯಲ್ಲಿದ್ದಾನೆ. ಆದ್ದರಿಂದ ಕೆಲಸದಲ್ಲಿ ಶಿಸ್ತು, ನಿರಂತರತೆ ಮತ್ತು ತಾಳ್ಮೆ ಅತ್ಯಗತ್ಯ. ಯಾವುದೇ ಶಾರ್ಟ್‌ಕಟ್‌ಗಳನ್ನು ಬಳಸದೆ ಪ್ರಾಮಾಣಿಕವಾಗಿ ಶ್ರಮಿಸಿದರೆ ದೀರ್ಘಕಾಲದ ಲಾಭಗಳು ನಿಶ್ಚಿತ. ತರಾತುರಿಯಲ್ಲಿ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us