Weekly Horoscope: ಆಗಸ್ಟ್ 31 ರಿಂದ ಸೆಪ್ಟೆಂಬರ್ 6ರ ತನಕ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ವಾರ ಭವಿಷ್ಯ: ಸಪ್ಟೆಂಬರ್ ತಿಂಗಳ ಮೊದಲನೇ ವಾರ ಅಂದರೆ ಆಸಗ್ಟ್ 31ರಿಂದ ಸೆ.6ರವರೆಗೆ ಇರಲಿದೆ. ಈ ವಾರ ಬುಧನು ಶತ್ರು ರಾಶಿಯಿಂದ ಮಿತ್ರನ ರಾಶಿಗೆ ಬರಲಿದ್ದಾನೆ. ಮಾತು, ಭೂವ್ಯವಹಾರದಲ್ಲಿ ವೇಗ ಹೆಚ್ಚಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಮನ್ನಣೆಗಳು ಸಿಗಲಿದೆ. ಉಚ್ಚಗಾಮಿಯಾದ ಬುಧ ಬಲವಾನ್ ಆಗಿದ್ದು ಸುಫಲವನ್ನೇ ಕೊಡುವನು. ಹರ ಜಾಗೂ ಹರಿಯರಿರುವ ದೇವಾಲಯ, ಅಥವಾ ವೀರಭದ್ರನ, ನರಸಿಂಹರ ಸನ್ನಿಧಾನದಲ್ಲಿ ಪೂಜೆಯನ್ನು ಮಾಡಿಸಿ.

ಮೇಷ ರಾಶಿ :ಈ ರಾಶಿಯವರಿಗೆ ಸಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಏನೇ ಆದರೂ ಏನನ್ನಾದರೂ ಗೆಲ್ಲಬೇಕು ಎನ್ನುವ ಉತ್ಕಟ ಇಚ್ಛೆ ಬರುವುದು. ಇದಕ್ಕೆ ಕಾರಣ ರಾಶಿಯ ಅಧಿಪತಿ ಕುಜ. ಪರಾಕ್ರಮವನ್ನೂ, ಉತ್ಸಾಹವನ್ನೂ ಕೊಡುವುಸೇ ಕಾರಣ. ಸೋತರೂ ಗೆದ್ದವರ ಜೊತೆ ಶುಷ್ಕವಾದವನ್ನು ಮಾಡುವಿರಿ. ಸಹೋದರಿಯ ಜೊತೆ ವಾಗ್ವಾದವನ್ನು ಮಾಡುವಿರಿ. ಹಣದ ವಿಚಾರದಲ್ಲಿ ನಿಮಗೆ ಮೋಹವು ಇರದು. ನೀವು ಯಾರ ಮಾತನ್ನೂ ನಂಬಲಾರಿರಿ. ಸ್ವತಃ ಅನುಭವವೇ ನಿಮಗೆ ಪ್ರಮಾಣವಾಗುವುದು. ಈ ವಾರ ಸ್ವಲ್ಪ ಆರ್ಥಿಕ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೇ ನಿಲ್ಲಿಸುವಿರಿ. ಕುಟುಂಬದ ಜೊತೆ ನಿಮ್ಮ ಭವಿಷ್ಯವನ್ನು ಹಂಚಿಕೊಳ್ಳುವಿರಿ. ಸಾಲಗಾರರ ಕಿರುಕುಳ ಹೆಚ್ಚಿರಲಿದೆ.
ವೃಷಭ ರಾಶಿ :ಶುಕ್ರಾಧಿಪತ್ಯದ ಈ ರಾಶಿಯವರಿಗೆ ಸ್ವಪ್ರತಿಷ್ಠೆಯನ್ನು ಬಿಟ್ಟು ಸಹಜವಾಗಿ ಇದ್ದರೆ ಚೆನ್ನಾಗಿರಬಹುದು ಎಂದನಿಸುವುದು. ಆರ್ಥಿಕ ವಿಚಾರಕ್ಕೆ ಬರುವ ಅಹಂಕಾರದಿಂದ ಜನರನ್ನು ದೂರಮಾಡಿಕೊಳ್ಳುವಿರಿ. ನಿಮ್ಮ ವಸ್ತುಗಳು ಕಾಣೆಯಾಗಬಹುದು. ಅವ್ಯಕ್ತ ಭೀತಿಯು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಮನೆಯ ಸದ್ಯರ ಜೊತೆ ಕಾಲಹರಣ ಮಾಡುವಿರಿ. ವಾರದಲ್ಲಿ ಶತ್ರುಗಳನ್ನು ನೀವು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಯಾರಿಗೋ ಆಸೆ ತೋರಿಸಿ, ಅವರಿಗೆ ನಿಮ್ಮ ಮೇಲೆ ಅಸೂಯೆ ಬರುವಂತೆ ಮಾಡಿಕೊಳ್ಳುವಿರಿ. ನಿಮ್ಮ ಹಾಸ್ಯದ ಮಾತು ಗಂಭೀರರೂಪಕ್ಕೆ ಬದಲಾಗುವುದು. ಅತಿಥಿಸತ್ಕಾರವನ್ನು ನೀವು ಮಾಡುವಿರಿ. ದೈವೋಪಾಸನೆಗೆ ಕಿಂಚಿತ್ ಸಮಯವನ್ನು ಕೊಡುವಿರಿ.
ಮಿಥುನ ರಾಶಿ :ಮೂರನೇ ರಾಶಿಯವರಿಗೆ ಬುಧನ ಆಧಿಪತ್ಯವಿರುವ ಕಾರಣ ಈ ವಾರ ಬಾಂಧವ್ಯದ ವಿಚಾರದಲ್ಲಿ ಶುಭ. ನಿಮ್ಮ ಕಾರ್ಯಗಳಿಗೆ ಇನ್ನೊಬ್ಬರಿಂದ ಅಪ್ರಯತ್ನ ಪೂರ್ವಕವಾಗಿ ಸಹಕಾರ ಸಿಗಲಿದೆ. ನೀವು ಖರೀದಿಸಿದ ಸ್ಥಿರಾಸ್ತಿ ದಾಖಲೆಗಳನ್ನು ಸರಿಯಾಗಿ ಆಪ್ತರ ಜೊತೆ ಚರ್ಚಿಸಿ. ಇನ್ನೊಬ್ಬರ ಸಂಕಷ್ಟವನ್ನು ಪರಿಹರಿಸಲು ಉತ್ಸಾಹದಿಂದ ಇರುವಿರಿ. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಸಂಗಾತಿಯ ಆರೋಗ್ಯವು ಕೆಡಲಿದ್ದು ಓಡಾಟಮಾಡಬೇಕಾಗುವುದು. ಅನಪೇಕ್ಷಿತ ದಾಖಲೆಗಳನ್ನು ಕೇಳಿ, ಸರ್ಕಾರಿ ಕೆಲಸದಲ್ಲಿ ತೊಡಕು ಮಾಡುವರು. ನೀವು ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಉನ್ನತ ಅಧ್ಯಯನಕ್ಕೆ ನೀವು ಬೇರೆ ಕಡೆಗೆ ಹೋಗುವ ಸ್ಥಿತಿಯು ಬರಬಹುದು. ಸಣ್ಣವರ ವಿಚಾರದಲ್ಲಿ ಕಾಳಜಿ ಇರಲಿ.
ಕರ್ಕಾಟಕ ರಾಶಿ :ಈ ವಾರ ನಿಮಗೆ ವೈಭೋಗದಲ್ಲಿ ಆಸಕ್ತಿ ಅಧಿಕವಾಗಲಿದೆ. ಏನನ್ನೇ ಆದರೂ ಅದನ್ನು ಸುಖದ ಸಾಧನವಾಗಿ ಪರಿವರ್ತಿಸಿಕೊಳ್ಳುವಿರಿ. ಯಾರದೋ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನಿಮ್ಮವರ ಮೇಲೆ ಸಿಟ್ಟುಗೊಳ್ಳುವಿರಿ. ಕಿವಿಗೆ ಬೀಳುವ ಎಲ್ಲ ವಿಚಾರದಲ್ಲಿಯೂ ಕಿರಿಕಿರಿ ಆಗಲಿದೆ. ಸಮಾಧಾನದಿಂದ ಆಲೋಚಿಸುವುದು ನಿಮಗೆ ಬಾರದು. ಬಂಧುಗಳ ಮನೆಗೆ ಹೋಗಲಿದ್ದೀರಿ. ಒಳ್ಳೆಯ ರೀತಿಯಲ್ಲಿ ನಿಮ್ಮನ್ನು ಸತ್ಕರಿಸುವರು. ಈ ವಾರ ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ನಿಮ್ಮ ಆರ್ಥಿಕ ಸ್ಥಿತಿಯೂ ಕ್ಷೀಣಿಸಬಹುದು. ಸಹೋದರರ ನಡುವೆ ಸಹಬಾಳ್ವೆ ಇರಲಿದೆ. ನಿಮಗೆ ಅಪರೂಪವಾದ ಪುಣ್ಯಕ್ಷೇತ್ರಗಳಿಗೆ ಹೋಗುವಿರಿ. ಅಂದುಕೊಂಡಿದ್ದನ್ನು ಸಾಧಿಸುವ ಛಲ ಬೇಕಾಗಲಿದೆ.
ಸಿಂಹ ರಾಶಿ :ಐದನೇ ರಾಶಿಯವರಿಗೆ ಈ ವಾರ ಶುಭಾಶುಭ. ರಾಶಿಯ ಅಧಿಪತಿ ಸೂರ್ಯ ನಿಮ್ಮದೇ ರಾಶಿಯಲ್ಲಿದ್ದರೂ ಕೇತುವಿನ ಸಂಯೋಗ ಹೋಂದಿರುವ ಕಾರಣ ತಂದೆಯ ಕಡೆಯಿಂದ ಒತ್ತಡ ಅಥವಾ ತಂದೆಯ ವಿಚಾರಕ್ಕೆ ಬರಲಿದೆ. ಸ್ನೇಹಿತರಿಗಾಗಿ ನಿಮ್ಮ ಕಡೆಯಿಂದ ಸಾಲವನ್ನು ಕೊಡಿಸಿದ್ದು ಈಗ ನಿಮ್ಮ ತಲೆಗೇ ಅದು ಸುತ್ತಿಕೊಳ್ಳಲಿದೆ. ವಿಜ್ಞಾನಿಗಳಿಗೆ ಉತ್ತಮ ಅವಕಾಶಗಳು ಸಿಗುವುದು. ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನ ಮಾನಗಳು ಹೆಚ್ಚಾಗಬಹುದು. ಈ ವಾರ ಅನಪೇಕ್ಷಿತ ಸ್ಥಳದಲ್ಲಿ ನೀವು ಇರಲು ಇಷ್ಟಪಡುವುದಿಲ್ಲ. ಅಗ್ನಿ ಭೀತಿಯು ನಿಮ್ಮನ್ನು ಕಾಡಬಹುದು. ಎಲ್ಲ ವಿಚಾರಗಳಿಗೆ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವುದು ಯೋಗ್ಯವಾಗದು. ಮಕ್ಕಳ ಹಠದ ಸ್ವಭಾವಕ್ಕೆ ನೀವು ಮಣಿಯಲೇ ಬೇಕು. ಈ ವಾರ ಯೋಜಿತ ಕಾರ್ಯವನ್ನು ಪೂರೈಸಲು ನಡುವೆ ತೊಂದರೆಗಳು ಬರಬಹುದು. ಕೈಗೊಂಡ ಕಾರ್ಯದಲ್ಲಿ ಅಪಕೀರ್ತಿ ಬರಬಹುದು.
ಕನ್ಯಾ ರಾಶಿ :ರಾಶಿ ಅಧಿಪತಿಯು ಈ ವಾರ ದ್ವಾದಶದಲ್ಲಿದ್ದು ಬಂಧುಗಳಿಂದ ಆರ್ಥಿಕ ವ್ಯಯವಾಗಲಿದೆ. ನಿಮ್ಮ ನಿಜವಾದ ಗುಣವು ನಿಮಗೆ ಗೊತ್ತಾಗಲಿದೆ. ನಿದ್ರೆಯ ಕೊರತೆಯಿಂದ ನಿಮಗೆ ಆಲಸ್ಯವು ಇರಲಿದೆ. ನಿಮ್ಮ ಗೌರವಕ್ಕೆ ತೊಂದರೆಯಾಗಬಹುದು. ತುರ್ತು ಹಣಕಾಸಿನ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಈ ವಾರ ನಿಮ್ಮ ಬಗ್ಗೆ ನಿಂದನೆಯ ಮಾತುಗಳು ಕೇಳಿಬರಬಹುದು. ದುರ್ವಿಚಾರಗಳನ್ನು ಯೋಚಿಸಿಬಾರದು ಎಂದುಕೊಂಡರೂ ಅದೇ ಬಂದು ನಿಮ್ಮನ್ನು ಹಿಂಸಿಸಬಹುದು. ಈ ವಾರ ಮಾತುಗಾರರಿಗೆ, ಬರಹಗಾರಿಗೆ ಹಿನ್ನಡೆಯಾಗಲಿದೆ. ಕಲಾವಿದರು ಉತ್ತಮ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವರು. ಬಹಳ ದಿನಗಳಿಂದ ಉಳಿಸಿಕೊಂಡ ಸ್ವಂತ ಕಾರ್ಯವನ್ನು ಅನ್ಯರ ಸಹಾಯ ಪಡೆದು ಮಾಡಿ ಮುಗಿಸುವಿರಿ.
ತುಲಾ ರಾಶಿ :ಸಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ರಾಶಿಯ ಅಧಿಪತಿ ದಶಮದಲ್ಲಿ ಇರಲಿದ್ದು ವಿನ್ಯಾಸ ಅಥವಾ ಐಷಾರಾಮಿ ವಸ್ತುಗಳ ಉದ್ಯೋಗದಲ್ಲಿ ಸ್ತ್ರೀಯರ ನಡುವೆ ಕಲಹ. ರಾಜಕೀಯ ವ್ಯಕ್ತಿಗಳು ತಮ್ಮ ಲಾಭವನ್ನು ಪಡೆದುಕೊಳ್ಳುವರು. ಯಾರನ್ನೋ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಟ್ಟು ಪಶ್ಚಾತ್ತಾಪಪಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಏಳ್ಗೆಗೆ ಘಾಸಿ ನೀಡಬಹುದು. ಹೊಗಳಿಕೆಯ ಮೂಲಕ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿವಾಹದ ಬಗ್ಗೆ ಗೊಂದಲ ಇರಲಿದೆ. ಈ ವಾರ ನಿಮ್ಮ ಗೌಪ್ಯ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುವರು. ಆದಾಯಕ್ಕೆ ತಕ್ಕಹಾಗೆ ಖರ್ಚಿಗೂ ಸಿದ್ಧವಾಗಿರಬೇಕು. ನಿಮ್ಮ ವಿವಾಹದ ಬಗ್ಗೆ ತಂದೆಯವರೇ ನಿಮ್ಮ ಬಳಿ ಮಾತನಾಡಬಹುದು. ಉತ್ತಮ ಭೂಮಿಯ ಲಾಭಕ್ಕಾಗಿ ಓಡಾಟ ಮಾಡುವಿರಿ. ಒತ್ತಡದಿಂದ ನಿಮ್ಮ ಎಲ್ಲ ಚಿಂತೆಗಳೂ ಒಮ್ಮೆಲೆ ಕಾಣಿಸಿಕೊಳ್ಳುದು.
ವೃಶ್ಚಿಕ ರಾಶಿ :ಈ ತಿಂಗಳಲ್ಲಿ ರಾಶಿಯ ಅಧಿಪತಿ ಏಕಾದಶದಲ್ಲಿ ಇದ್ದು ಪ್ರಾಮಾಣಿಕತೆಗೆ ಬೆಲೆ ಇಲ್ಲದಂತೆ ಆಗುವುದು. ಉದ್ಯಮದ ವಿಸ್ತಾರ ಮಾಡುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸುವಿರಿ. ಉದ್ಯೋಗಕ್ಕಾಗಿ ಓಡಾಡುವುದು ನಿಮಗೆ ಕಷ್ಟವಾಗಲಿದೆ. ಆರ್ಥಿಕ ನಷ್ಟದ ಆತಂಕವೂ ಇರಲಿದೆ. ಈ ವಾರ ಯಾರದೋ ಮೂಲಕ ಅಪರಿಚಿತರ ವಿದ್ಯಾಭ್ಯಾಸಕ್ಕೆ ನೀವು ಸಹಾಯ ಮಾಡುವಿರಿ. ವೃತ್ತಿಯನ್ನು ಶುದ್ಧವಾಗಿ ಇಟ್ಟುಕೊಳ್ಳಲು ಬಯಸುವಿರಿ. ಒತ್ತಾಯದಿಂದ ಯಾರ ಸ್ನೇಹವನ್ನೂ ಬಯಸುವುದು ಬೇಡ. ಒಳ್ಳೆಯ ಕುಲದ ಸಂಗಾತಿಯನ್ನು ಮನ್ಸೂಚನೆ ಇಲ್ಲದೇ ಪಡೆಯುವಿರಿ. ವಾರದಲ್ಲಿ ದೇವರ ಮೇಲೆ ಶ್ರದ್ಧೆ ಇರಲಿದೆ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಒಂದೇ ಸ್ನೇಹವನ್ನು ಬಹಳ ಕಾಲ ಉಳಿಯದು.
ಧನು ರಾಶಿ :ಈ ರಾಶಿಯವರಿಗೆ ಮೊದಲ ವಾರದಲ್ಲಿ ನಿಮಗೆ ಬೇಕಾದವರೇ ನಿಮ್ಮ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುವರು. ನೀವೇ ಎಲ್ಲರ ಮಧ್ಯದಲ್ಲಿ ಬುದ್ಧಿವಂತರೆಂಬಂತೆ ತೋರಿಸಿಕೊಳ್ಳುವಿರಿ. ಅಧಿಕಾರದ ಮಾತುಗಳು ನಿಮ್ಮ ಕೆಲಸಕ್ಕೆ ಬಾರದು. ಸಂಗಾತಿಯ ಜೊತೆ ವಾಗ್ವಾದ ನಡೆದರೆ ಮೌನವಹಿಸುವುದು ಜಾಣ್ಮೆ. ನಿಮ್ಮ ಸ್ವಭಾವದ ಬದಲಾವಣೆಯು ಎಲ್ಲರಿಗೂ ಅಚ್ಚರಿಯನ್ನು ತಂದೀತು. ಉದ್ಯೋಗದಲ್ಲಿ ವಿರಾಮವನ್ನು ತೆಗೆದುಕೊಳ್ಳುವಿರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದೇ ವಾದಿಸುವಿರಿ. ತಾಯಿಯ ಜೊತೆ ವಾಗ್ವಾದ ನಡೆಸುವಿರಿ. ಈ ವಾರ ನಿಮಗೆ ಸೂಚನೆ ಕೊಟ್ಟೂ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ನಿಮ್ಮನ್ನು ತೆಗೆಯಬಹುದು. ನಿಮ್ಮ ಲಾಭಕ್ಕೆ ಯಾರನ್ನಾದರೂ ಬಳಸಿಕೊಳ್ಳುವಿರಿ.
ಮಕರ ರಾಶಿ :ಸಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ರಾಶಿಯ ಮೇಲೆ ಶುಕ್ರನ ದೃಷ್ಟಿ ಇರಲಿದ್ದು ವ್ಯಾಪಾರದಲ್ಲಿ ನಿಮ್ಮ ತಂತ್ರಗಾರಿಕೆಯು ಫಲಿಸುವುದು. ಅದಕ್ಕಾಗಿ ಆಡಿದ ಅಹಂಕಾರದ ಮಾತುಗಳು ನಿಮಗೆ ಮಾತ್ರ ಖುಷಿ ಕೊಡಬಹುದು. ತಾಯಿಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ನಿಮಗೆ ಕಷ್ಟವಾಗುವುದು. ಸ್ನೇಹಿತರಿಗೆ ಧನಸಹಾಯವನ್ನು ಮಾಡುವುದು ಅನಿವಾರ್ಯವಾಗಲಿದೆ. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಭೇಟಿಯಾಗವರು. ಈ ವಾರ ದೊಡ್ಡ ಅಪಾಯದಿಂದ ಸುರಕ್ಷಿತವಾಗುವಿರಿ. ಸಂಗಾತಿಯ ಇಂಗಿತವನ್ನು ತಿಳಿದುಕೊಳ್ಳುವುದು ನಿಮಗೆ ಕಷ್ಟವಾಗುವುದು. ಎಂದೋ ಆಡಿದ ಮಾತಿಗೆ ಪಶ್ಚಾತ್ತಾಪಪಡಬೇಕಾದೀತು. ಒಂಟಿಯಾಗಿ ಎಲ್ಲಿಗಾದರೂ ಹೋಗಬೇಕು ಎಂದು ಅನ್ನಿಸುವುದು.
ಕುಂಭ ರಾಶಿ :ಮೊದಲ ವಾರದಲ್ಲಿ ನಿಮಗೆ ಬುಧ ಹಾಗೂ ಸೂರ್ಯರ ದೃಷ್ಟಿ ಇರಲಿದೆ. ನಿಮ್ಮ ಬಗ್ಗೆ ತಂದೆಯನ್ನೂ ಸೇರಿ ಹಲವರು ನಿರೀಕ್ಷೆ ಇಟ್ಟುಕೊಳ್ಳುವರು. ಹಣವನ್ನು ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಸಾಮಾಜಿಕ ಕಾರ್ಯಗಳಿಗೆ ಹಣವನ್ನು ಕೊಡುವರು. ಆರೋಗ್ಯವು ಸರಿಯಾದರೂ ಮನಸ್ಸು ಸರಿಯಾಗಲು ದಿನಗಳನ್ನು ತೆಗದುಕೊಳ್ಳಬಹುದು. ಆಪ್ತರನ್ನು ನೀವು ಕಳೆದುಕೊಳ್ಳುವ ಸಂಭವವಿದೆ. ಈ ವಾರ ಉದ್ಯೋಗದಲ್ಲಿ ಉಂಟಾದ ಸಣ್ಣ ಅಡ್ಡಿಯನ್ನೇ ದೊಡ್ಡದಾಗಿ ಬಿಂಬಿಸುವಿರಿ. ನಿಮ್ಮವರು ನಿಮ್ಮನ್ನು ಅನ್ಯ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಾತೀತ ನಿಲುವು ಕೆಲವರಿಗೆ ಇಷ್ಟವಾಗದು. ನೀವು ವಹಿಸಿಕೊಂಡ ನಿರ್ಮಾಣ ಹಂತದ ಕೆಲಸಗಳು ಈ ವಾರ ಮಂದಗತಿಯಲ್ಲಿ.
ಮೀನ ರಾಶಿ :ಕೊನೆಯ ರಾಶಿಯವರಿಗೆ ಮೊದಲ ವಾರದಲ್ಲಿ ಕುಟುಂಬದ ಕಾರಣಕ್ಕೆ ಆಲ್ಪ ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ತಾಯಿಯ ಕಡೆಯಿಂದ ನಿಮಗೆ ಯಾವ ಸಹಕಾರವೂ ಸಿಗದೇ ಇರುವುದು ಕಿಂಚಿತ್ ಬೇಸರ. ನಿರಂತರ ಕೆಲಸದಿಂದ ನಿಮಗೆ ಮುಕ್ತಿಯ ಅವಶ್ಯಕತೆ ಇದೆ. ಸ್ವಲ್ಪ ಮನಸ್ಸು ಎಲ್ಲದರಿಂದ ಮುಕ್ತವಾಗಿರಲು ಈ ವಾರ ಬಯಸುವುದು. ಸಾಮರಸ್ಯದ ಕೊರತೆಯಿಂದ ದ್ವೇಷವೂ ಹುಟ್ಟಿಕೊಳ್ಳಬಹುದು. ವಿದ್ಯಾಭ್ಯಾಸದ ವಿಷಯದಲ್ಲಿ ನಿಮಗೆ ತೃಪ್ತಿ ಇರದು. ಸಿಕ್ಕ ವಸ್ತುವನ್ನು ಯೋಗ್ಯವಾದ ರೀತಿಯಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಕಡೆಗಣಿಸಿದ್ದು ನಿಮಗೆ ಪ್ರೇರಣೆಯಾಗಬಹುದು. ಕೆಲಸಗಳನ್ನು ಮುಂದೂಡುವುದು ನಿರಾಸಕ್ತಿಯನ್ನು ತೋರಿಸುವುದು.
– ಲೋಹಿತ ಹೆಬ್ಬಾರ್ 8762924271 (what’s app only)




