Weekly Horoscope: ಆಗಸ್ಟ್ 10 ರಿಂದ ಆಗಸ್ಟ್ 16 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಆಗಸ್ಟ್ ತಿಂಗಳ ಎರಡನೇ ವಾರ 10-08-2025 ರಿಂದ 16-08-2025ರವರೆಗೆ ಇರಲಿದೆ. ಹೂಡಿಕೆಯಲ್ಲಿ ಆಸಕ್ತಿ, ನೂತನ ಕೆಲಸದ ಅನ್ವೇಷಣೆ, ಸಂಪಾದನೆಯಲ್ಲಿ ಹಂಚಿಕೆ, ಸಾಮರ್ಥ್ಯ ಪ್ರದರ್ಶನ ಇವೆಲ್ಲ ಆಗಲಿದೆ. ಗ್ರಹಗತಿಗಳು ಪ್ರತಿಕೂಲವಾಗಿದ್ದರೂ ಅನುಕೂಲತೆಯೂ ಇರಲಿದೆ. ಅದನ್ನು ಆಲೋಚಿಸಿದರೆ ಕಳೆದುಕೊಳ್ಳುವ ನೆಮ್ಮದಿ ಸ್ವಲ್ಪ ಕಡಿಮೆಯಾಗಲಿದೆ. ಎಲ್ಲ ಗ್ರಹರೂ ಏಕಾದಶ ಸ್ಥಾನದ ಒಲವನ್ನು ಕೊಡಲಿ.

ಆಗಸ್ಟ್ ತಿಂಗಳ ಎರಡನೇ ವಾರ 10-08-2025 ರಿಂದ 16-08-2025ರವರೆಗೆ ಇರಲಿದೆ. ಹೂಡಿಕೆಯಲ್ಲಿ ಆಸಕ್ತಿ, ನೂತನ ಕೆಲಸದ ಅನ್ವೇಷಣೆ, ಸಂಪಾದನೆಯಲ್ಲಿ ಹಂಚಿಕೆ, ಸಾಮರ್ಥ್ಯ ಪ್ರದರ್ಶನ ಇವೆಲ್ಲ ಆಗಲಿದೆ. ಗ್ರಹಗತಿಗಳು ಪ್ರತಿಕೂಲವಾಗಿದ್ದರೂ ಅನುಕೂಲತೆಯೂ ಇರಲಿದೆ. ಅದನ್ನು ಆಲೋಚಿಸಿದರೆ ಕಳೆದುಕೊಳ್ಳುವ ನೆಮ್ಮದಿ ಸ್ವಲ್ಪ ಕಡಿಮೆಯಾಗಲಿದೆ. ಎಲ್ಲ ಗ್ರಹರೂ ಏಕಾದಶ ಸ್ಥಾನದ ಒಲವನ್ನು ಕೊಡಲಿ.
ಮೇಷ ರಾಶಿ: ಈ ತಿಂಗಳಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಅದನ್ನು ನೀವು ನಿರಾಕರಿಸುವರು. ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ಕಳೆಯುವಿರಿ. ನಿಮ್ಮ ಸಂಪತ್ತಿಗೆ ಇತರರ ದೃಷ್ಟಿಯು ಬೀಳಬಹುದು. ಬರಬೇಕಾದ ಹಣವು ವಿಳಂಬವಾಗಬಹುದು. ನೀವು ಎಲ್ಲ ಜವಾಬ್ದಾರಿಗಳಿಂದ ಹೊರಬರುವ ಮನಸ್ಸು ಬರುವುದು. ಯಾರಿಂದಲೂ ನೀವು ಸಹಾಯವನ್ನು ಪಡೆಯಲು ಇಚ್ಛಿಸುವುದಿಲ್ಲ. ಅತಿಯಾದ ನಿರೀಕ್ಷೆಯಿಂದ ನೀವು ಉಳಿದ ವಿಚಾರಗಳಲ್ಲಿ ಮೈ ಮರೆಯುವಿರಿ. ಈ ವಾರ ಹೆಚ್ಚಿದ ಕುಟುಂಬದ ಜವಾಬ್ದಾರಿಗಳಿಂದ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನ ಕಡಿಮೆ ಆಗುವುದು. ಗಣಪತಿಗೆ ದೂರ್ವಾಪತ್ರೆಯನ್ನು ಸಮರ್ಪಿಸಿ.
ವೃಷಭ ರಾಶಿ: ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ಧಾರ್ಮಿಕ ಆಚರಣೆಗೆ ಸಮಯ ಸಿಗುವುದು. ಕೆಲಸಕ್ಕೆ ಸಂಬಂಧಿಸಿದಂತೆ ಗೊಂದಲವನ್ನು ಯಾರಿಂದಲಾದರೂ ದೂರ ಮಾಡಿಕೊಳ್ಳುವಿರಿ. ಹೆಚ್ಚು ಒತ್ತಡವು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ಕಾರ್ಮಿಕರ ಜೊತೆ ವಾಗ್ವಾದವನ್ನು ಮಾಡುವಿರಿ. ನಿಮ್ಮ ಸಂತೋಷವನ್ನು ಕಂಡು ಕರುಬುವವರಿಗೆ ನೀವು ಯಾವ ಪ್ರತಿಕ್ರಿಯೆಯನ್ನು ನೀಡಬೇಕಾಗಿಲ್ಲ. ಅನಗತ್ಯ ವಿಚಾರಗಳ ನಡುವೆ ಪ್ರವೇಶವನ್ನು ಪಡೆಯುವುದು ಬೇಡ. ಈ ವಾರ ಹೊಸ ಉದ್ಯಮವನ್ನು ಅರಸುವವರು ಹೆಚ್ಚು ಅನ್ವೇಷಣೆಯನ್ನು ಮಾಡಬೇಕಾದೀತು. ಸಿಕ್ಕರೂ ನಿಮಗೆ ಅನುಕೂಲಕರವಾಗಿರದು. ಗುರುಗುಹನನ್ನು ಆರಾಧಿಸಿ.
ಮಿಥುನ ರಾಶಿ: ಈ ವಾರದಲ್ಲಿ ನಿಮಗೆ ಕಛೇರಿಯಲ್ಲಿ ಒತ್ತಡವು ಇದ್ದರೂ ಅದೆನ್ನೆಲ್ಲ ಮರೆತು ಆರಾಮಾಗಿ ಇರುವಿರಿ. ಯಾವುದನ್ನೂ ಮನಸ್ಸಿಗೆ ಅತಿಯಾಗಿ ತೆಗೆದುಕೊಳ್ಳಲಾರಿರಿ.ನಿಮ್ಮ ಮಾತು ಎಲ್ಲರಿಗೂ ಇಷ್ಟವಾದೀತು. ಸಮಯವನ್ನು ಕಳೆಯಲು ಸ್ನೇಹಿತರ ಜೊತೆ ವಿಹಾರಕ್ಕೆ ಹೋಗಬಹುದು. ಸಹೋದರರು ನಿಮ್ಮ ಸಹಾಯವನ್ನು ಕೇಳುವರು. ಇನ್ನೊಬ್ಬರನ್ನು ನಿಂದಿಸುವುದು ನಿಮಗೆ ಶೋಭೆ ತರದು. ಈ ವಾರ ಮನೆಯ ನಿರ್ಮಾಣಕ್ಕೆ ಕುಟುಂಬದ ಜೊತೆ ಚರ್ಚಿಸುವಿರಿ. ಯಾರ ಮಾತನ್ನೋ ಅನುಸರಿಸಿ ನೀವು ಕಾರ್ಯ ಪ್ರವೃತ್ತರಾಗುವುದು ಬೇಡ. ನಿಮ್ಮ ಮೇಲೆ ಬರುವ ಯಾವ ಅಪವಾದವನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ನೆಮ್ಮದಿಯಿಂದ ಇರಿ. ಹೆಚ್ಚು ಆಲಸ್ಯದ ಮನೋಭಾವವು ಇರುವುದು.
ಕರ್ಕಾಟಕ ರಾಶಿ: ಈ ರಾಶಿಯವರಿಗೆ ಅದೃಷ್ಟ ಬಹಳ ಕಡಿಮೆ ಇದ್ದು ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯು ಎದ್ದು ತೋರುವುದು. ಸಂಪಾದನೆಗಾಗಿ ಇಬ್ಬರೂ ಪ್ರಯತ್ನಿಸಬೇಕಾಗಬಹುದು. ಯಾರದೋ ಮೇಲಿನ ಬೇಸರವನ್ನು ಮತ್ಯಾರದೋ ಮೇಲೆ ಸಿಟ್ಟಾಗಿ ವ್ಯಕ್ತೊಡಿಸುವಿರಿ. ದ್ವೇಷವನ್ನು ನೀವು ಬೆಳೆಸಿಕೊಳ್ಳುವುದರಿಂದ ನಿಮ್ಮ ಮಾನಸಿಕ ಸ್ಥಿತಿ ಕಡುವುದು. ಸಾಲದ ವಿಚಾರವು ಮನೆಯಲ್ಲಿ ಕೆಲಹವಾಗುವಂತೆ ಮಾಡಬಹುದು. ಹಳೆಯ ಘಟನೆಗಳು ನಿಮಗೆ ಸಂತೋಷವನ್ನು ಕೊಡುವುದು. ಧಾರ್ಮಿಕ ಕಾರ್ಯಗಳಲ್ಲಿ ಇಂದು ನೀವು ತೊಡಗಿಕೊಳ್ಳುವಿರಿ. ಮಾನಸಿಕ ಒತ್ತಡದಿಂದ ನೀವು ಬೇಗ ವಿಶ್ರಾಂತಿಗೆ ತೆರಳಬಹುದು. ಕುಲದೇವರ ಸ್ಮರಣೆಯನ್ನು ಮಾಡಿ.
ಸಿಂಹ ರಾಶಿ: ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಪಡೆದು ಕುಟುಂಬಕ್ಕೆ ಸಮಯ ಕೊಡಲಾರಿರಿ. ಕೆಲವು ವಿಚಾರಗಳು ನಿಮಗೆ ಅನಗತ್ಯ ತಲೆಬಿಸಿಯನ್ನು ತರುವುದು. ಸ್ವಾವಲಂಬಿಯಾಗಿ ಇರಲು ಪ್ರಯತ್ನಿಸುವಿರಿ. ಅಂದುಕೊಂಡ ಸಮಯಕ್ಕೆ ನಿಮ್ಮ ಕೆಲಸಗಳು ಮುಕ್ತಾಯ ಆಗದೇ ಹೋಗಬಹುದು. ಬಂಧುಗಳಿಗೆ ನಿಮ್ಮ ಕಡೆಯಿಂದ ಸಹಾಯವು ಸಿಗಲಿದೆ. ಈ ವಾರ ಅಧಿಕಾರವನ್ನು ನೀವು ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವಿರಿ. ಹಣ ಸಂಪಾದನೆಯು ನಿಮಗೆ ಅನಿವಾರ್ಯ ಆಗಬಹುದು. ಸಂಶೋಧಕರು ಹೆಚ್ಚು ಶ್ರಮವಹಿಸಿದರೆ ಯಶಸ್ಸನ್ನು ಪಡೆಯಬಹುದು. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ತೊಂದರೆಗಳು ಆಗಬಹುದು.
ಕನ್ಯಾ ರಾಶಿ: ಎರಡನೇ ವಾರದಲ್ಲಿ ನಿಮ್ಮ ಸಹನೆಯ ಮಿತಿ ಮೀರುವುದು. ವಿದೇಶ ಪ್ರಯಾಣವು ಮುಂದೆ ಹೋಗಬಹುದು. ಬೇಕಾದ ವಿಷಯದಲ್ಲಿ ಆಸಕ್ತಿಯು ಕಡಿಮೆ ಆಗಬಹುದು. ನಿಮ್ಮ ಹಠದ ಸ್ವಭಾವವು ಇತರರಿಗೆ ಕಷ್ಟವಾದೀತು. ಅಗೌರವ ಸಿಗುವ ಕಡೆ ನೀವು ಹೋಗಲಾರಿರಿ. ಈ ವಾರ ಅಹಮ್ಮನ್ನು ಕಡಿಮೆ ಮಾಡಿಕೊಳ್ಳದೇ ಇದ್ದರೆ ಯಾವ ಸಹಕಾರವನ್ನೂ ಪಡೆಯುವುದು ಕಷ್ಟವಾದೀತು. ದಾನವನ್ನು ಹೆಚ್ಚು ನಿಮ್ಮ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ದೇವರನ್ನೇ ಸಂಪೂರ್ಣವಾಗಿ ನಂಬಿ ನಿಮ್ಮ ಕೆಲಸವನ್ನು ಮಾಡಿ. ಬಂಧುಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹಣ ಸಂಪಾದನೆಗೆ ಆರಿಸಿಕೊಂಡ ಮಾರ್ಗವು ಸರಿಯೆನಿಸದೇ ಇರಬಹುದು.
ತುಲಾ ರಾಶಿ: ಈ ವಾರ ನೀವು ಸಾಲದ ಬಾಧೆಯು ಕಡಿಮೆ ಇರುವುದರಿಂದ ಕೊಡಬೇಕಾದ ಹಣವನ್ನು ಯಾವುದಾರೂ ಮೂಲದಿಂದ ಸಂಗ್ರಹಿಸಿಕೊಳ್ಳುವಿರಿ. ಮನೆಯಿಂದ ಇಂದಯ ದೂರವಿರಬೇಕಾಗುವುದು. ಮನೋರಂಜನೆಗೆ ಅವಕಾಶಗಳಿದ್ದರೂ ಯಾವದೋ ಆಲೋಚನೆಯನ್ನು ಮಾಡುತ್ತ ಇರುವಿರಿ. ಈ ವಾರದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರಕಟಿಸಲು ಸೂಕ್ತ ವೇದಿಕೆಯು ನಿಮಗೆ ಲಭ್ಯವಾಗಲಿದೆ. ವಿವಾಹಯೋಗವು ಬಂದಿರುವುದರಿಂದ ಇನ್ನು ಹಿಂಜರಿಕೆ ಬೇಡ. ಕೃಷಿಯಲ್ಲಿ ಇಂದು ತೊಡಗಿಕೊಳ್ಳುವಿರಿ. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯು ಹೆಚ್ಚು ಇರುವುದು. ಕಲಾವಿದರು ಯಶಸ್ಸನ್ನು ಪಡೆಯುವರು. ದುರ್ಗಾ ಮಾತೆಯನ್ನು ಆರಾಧಿಸಿ.
ವೃಶ್ಚಿಕ ರಾಶಿ: ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ಕಛೇರಿಯಲ್ಲಿ ನಿಮ್ಮ ಮೇಲಿನ ನಂಬಿಕೆಯು ನಷ್ಟ ಮಾಡಿಕೊಳ್ಳುವಿರಿ. ಆಕಸ್ಮಿಕ ಸುದ್ದಿಯು ನಿಮ್ಮನ್ನು ವಿಚಲಿತ ಗೊಳಿಸಬಹುದು. ಕಾರ್ಮಿಕರಿಂದ ವೇತನ ಅಧಿಕ ಮಾಡಲು ಒತ್ತಡವು ಬರಬಹುದು. ಸುಲಭವಾಗಿ ಮಾಡುವ ಕೆಲಸವನ್ನು ನೀವು ಕ್ಲಿಷ್ಟಕರ ಮಾಡಿಕೊಳ್ಳುವಿರಿ. ಈ ವಾರ ಪೂರ್ವನಿರ್ಧಾರನ್ನು ಬದಲಿಸಿಕೊಳ್ಳಲು ನೀವು ಒಪ್ಪುವುದಿಲ್ಲ. ವಿವಾಹವನ್ನು ಆಗದೇ ಇರಲು ನಿಮಗೆ ಹತ್ತಾರು ಕಾರಣಗಳು ಇರಲಿದೆ. ಕೆಲಸಗಳನ್ನು ಮುಂದೂಡುವುದು ನಿರಾಸಕ್ತಿಯನ್ನು ತೋರಿಸುವುದು. ಉತ್ತಮವಾದ ಭೂಮಿಯನ್ನು ನೀವು ಖರೀದಿಸಲು ಮುಂದಾಗುವಿರಿ. ಈ ವಾರ ಮನೋರಂಜನೆ ಕಡೆ ಹೆಚ್ಚು ಗಮನವು ಇರಲಿ. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.
ಧನು ರಾಶಿ: ಈ ವಾರ ಅನಿರೀಕ್ಷಿತವಾಗಿ ನೀರಿನಿಂದ ನಿಮಗೆ ಭಯವುಂಟಾಗುವುದು. ಆಧಿಕ ತಿರುಗಾಟವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಉದ್ಯೋಗದ ಸ್ಥಳದಲ್ಲಿ ನಿಮ್ಮನ್ನೇ ಹೆಚ್ಚು ಗಮನಿಸಬಹುದು. ಹಿತಶತ್ರುಗಳಿಂದ ಹೆಚ್ಚು ವಿಘ್ನಗಳು ಬಂದರೂ ನಿಮಗೆ ಅದು ಗೊತ್ತಾಗದೇ ಇರಬಹುದು. ಈ ವಾರ ಉದ್ಯಮದಲ್ಲಿ ಸ್ವಲ್ಪ ಹಿನ್ನಡೆ. ಪುಣ್ಯಕ್ಷೇತ್ರಗಳಿಗೆ ನೀವು ಕುಟುಂಬ ಸಹಿತವಾಗಿ ಹೋಗುವಿರಿ. ಯಂತ್ರೋಪಕರಣಕ್ಕೆ ನೀವು ಬೆಲೆ ತೆರಬೇಕಾದೀತು. ನಿಮ್ಮ ದುಃಖವನ್ನು ಇತರರ ಜೊತೆ ಹಂಚಿಕೊಳ್ಳಿ. ದೂರ ಬಂಧುಗಳ ಭೇಟಿಯಾಗುವುದು. ಕಲಹವಾಗುವ ಸಂದರ್ಭದಲ್ಲಿ ನೀವು ಜಾಣ್ಮೆಯನ್ನು ವಹಿಸಿ ಸುಮ್ಮನಿರುವಿರಿ. ಹಣದ ಹರಿವು ಇದ್ದರೂ ಖರ್ಚಿನ ದಾರಿಯೂ ತೆರೆದಿರುತ್ತದೆ.
ಮಕರ ರಾಶಿ: ರಾಶಿ ಚಕ್ರದ ಹತ್ತನೇ ರಾಶಿಯವರು ಈ ವಾರ ವಿಶೇಷವಾಗಿಬಸ್ತ್ರೀಯರು ಖರೀದಿಯಲ್ಲಿ ದಿನವನ್ನು ಕಳೆಯುವರು. ಭೋಗವಸ್ತುಗಳಿಂದ ಧನನಷ್ಟವು ಆಗುವುದು. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಬಂಧುಗಳಿಂದ ತೊಂದರೆ ಬತಬಹುದು. ಹೊಸತನ್ನು ಮಾಡಲು ನಿಮಗೆ ಇಚ್ಛಾಶಕ್ತಿಯ ಕೊರತೆ ಇರಲಿ. ನಿಮಗೆ ಪ್ರೋತ್ಸಾಹದ ಕೊರತೆಯಿಂದ ಹಿಂದುಳಿಯಬೇಕಾಗುವುದು. ಸಹಾಯವನ್ನು ಕೇಳಿ ಬಂದರೆ ಇಲ್ಲ ಎನದೇ ಇರುವುದನ್ನು ಕೊಡಿ. ಸಾಮಾಜಿಕ ಕೆಲಸವು ನಿಮಗೆ ಸಾಕೆನಿಸಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ತಾಯಿಯ ಜೊತೆ ಕಲಹವಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ.
ಕುಂಭ ರಾಶಿ: ಇದು ಎರಡನೇ ವಾರವಾಗಿದ್ದು ಸಭೆ ಸಮಾರಂಭಗಳಿಗೆ ಹೆಚ್ಚು ಆಹ್ವಾನ ಬರಲಿದೆ. ಸಮಯ ಪಾಲನೆಯಲ್ಲಿ ನೀವು ಬಹಳ ನಿಷ್ಠುರರಾಗುವಿರಿ. ಕೆಲಸದಲ್ಲಿ ನಿಮಗೆ ತೊಡಕುಗಳು ಬಂದರೆ ಸಹೋದ್ಯೋಗಿಗಳ ಸಹಾಯವನ್ನು ಪಡೆಯಿರಿ. ಮನಸ್ಸು ಒತ್ತಡದಿಂದ ಆಚೆ ಬಂದಿದ್ದು ನಿಮಗೆ ನಿರಾಳ ಎನಿಸುವುದು. ಈ ವಾತ ನಿಮ್ಮವರಿಂದಲೇ ನಿಮಗೆ ಅಧಿಕ ಕಿರಿಕಿರಿ ಉಂಟಾಗಬಹುದು. ಹಳೆಯ ನೆನಪುಗಳು ನಿಮ್ಮನ್ನು ಕಾಡಬಹುದು. ಮನೆಗೆ ಬೇಕಾದ ವಸ್ತುಗಳನ್ನು ಇಂದು ನೀವು ಖರೀದಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ನಿಮಗೆ ಸಮ್ಮಾನಗಳನ್ನು ಪಡೆದುಕೊಳ್ಳಲು ಆಸೆಯಾಗುವುದು. ಉದ್ಯೋಗದ ಸ್ಥಳದಲ್ಲಿ ನೀವು ಉತ್ತಮ ಪ್ರದರ್ಶನ ನೀಡುವಿರಿ.
ಮೀನ ರಾಶಿ: ಈ ತಿಂಗಳ ಎರಡನೇ ವಾರ ವಿರೋಧಿಗಳು ನಿಮ್ಮ ಬೆನ್ನು ಬಿಡದೇ ಪೀಡಿಸಬಹುದು. ಯಾವುದಕ್ಕೂ ಉಪಯೋಗವಾಗದೇ ಹಣವು ವ್ಯರ್ಥವಾಗಲಿದೆ. ಈ ವಾರ ಸಾಲದ ಹೊರೆಯು ನಿಮಗೆ ದುಃಸ್ವಪ್ನದಂತೆ ಕಾಡಬಹುದು. ವಿದೇಶದಲ್ಲಿ ಕೆಲಸ ಮಾಡುವ ಬಗ್ಗೆ ಮೋಹ ಉಂಟಾಗುವುದು. ನ್ಯಾಯಾಲಯದ ತೀರ್ಪು ನಿಮಗೆ ಪೂರ್ಣ ಸಮಾಧಾನವನ್ನು ನೀಡದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಗೊಂದಲವಿರಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುವಿರಿ. ಸಾಹಿತ್ಯಾಸಕ್ತರು ಪ್ರಸಿದ್ಧಿಯನ್ನು ಹೆಚ್ಚು ಬಯಸುವರು. ಅಧ್ಯಾತ್ಮದ ಕಡೆ ಮನಸ್ಸು ಇದ್ದರೂ ಕುಟುಂಬವನ್ನು ನೆನಪಿಸಿಕೊಂಡು ಸುಮನಿರುವಿರಿ. ಜೀವನ ಸಂಗಾತಿಯ ಅನ್ವೇಷಣೆಯಲ್ಲಿ ನೀವು ಸೋಲುವಿರಿ. ಸ್ವಯಂವರ ಪಾರ್ವತಿಯನ್ನು ಉಪಾಸನೆ ಮಾಡಿ.
– ಲೋಹಿತ ಹೆಬ್ಬಾರ್ – 8762924271 (what’s app only)




