Weekly Horoscope: ವಾರ ಭವಿಷ್ಯ: ಮಾ 30 ರಿಂದ ಏಪ್ರಿಲ್ 5 ರವರೆಗೆ ವಾರ ಭವಿಷ್ಯ
ಏಪ್ರಿಲ್ ತಿಂಗಳ ಮೊದಲ ವಾರವು. ಮಾರ್ಚ್ 30 ರಿಂದ ಏಪ್ರಿಲ್ 05ರವರೆಗೆ ಇರಲಿದೆ. ಕುಜನು ಈಗಾಗಲೇ ಕರ್ಕಾಟಕ ರಾಶಿಯಲ್ಲಿ ನೀಚನಾಗಿ ಇರುವನು. ಶಶಿಮಂಗಳ ಯೋಗ ಎನ್ನುವುದು ಪ್ರಸಿದ್ಧವಾಗಿದ್ದು, ದೀರ್ಘಸೌಮಂಗಲ್ಯಕ್ಕೆ ಹೇಳಿದ್ದಾಗಿದೆ. ಇಲ್ಲಿಯೂ ಅಂತಹ ಸಂದರ್ಭ ಇದ್ದರೂ ಅದು ಪೂರ್ಣ ಫಲ ಕೊಡದು. ಅಂತಹವರು ಸಮೀಪದ ಸುಬ್ರಹ್ಮಣ್ಯನ ಮಂದಿರಕ್ಕೆ ಹೋಗಿ ಪ್ರಿಯವಾದ ಸೇವೆಯನ್ನು ಮಾಡಿಸಿ, ಕುಂಕುಮ ಪ್ರಸಾದವನ್ನು ಮನೆಯಲ್ಲಿ ಇರಿಸಿಕೊಂಡು ಪ್ರತಿನಿತ್ಯ ಬಳಸಿ.

ಏಪ್ರಿಲ್ ತಿಂಗಳ ಮೊದಲ ವಾರವು. ಮಾರ್ಚ್ 30 ರಿಂದ ಏಪ್ರಿಲ್ 05ರವರೆಗೆ ಇರಲಿದೆ. ಕುಜನು ಈಗಾಗಲೇ ಕರ್ಕಾಟಕ ರಾಶಿಯಲ್ಲಿ ನೀಚನಾಗಿ ಇರುವನು. ಶಶಿಮಂಗಳ ಯೋಗ ಎನ್ನುವುದು ಪ್ರಸಿದ್ಧವಾಗಿದ್ದು, ದೀರ್ಘಸೌಮಂಗಲ್ಯಕ್ಕೆ ಹೇಳಿದ್ದಾಗಿದೆ. ಇಲ್ಲಿಯೂ ಅಂತಹ ಸಂದರ್ಭ ಇದ್ದರೂ ಅದು ಪೂರ್ಣ ಫಲ ಕೊಡದು. ಅಂತಹವರು ಸಮೀಪದ ಸುಬ್ರಹ್ಮಣ್ಯನ ಮಂದಿರಕ್ಕೆ ಹೋಗಿ ಪ್ರಿಯವಾದ ಸೇವೆಯನ್ನು ಮಾಡಿಸಿ, ಕುಂಕುಮ ಪ್ರಸಾದವನ್ನು ಮನೆಯಲ್ಲಿ ಇರಿಸಿಕೊಂಡು ಪ್ರತಿನಿತ್ಯ ಬಳಸಿ.
ಮೇಷ ರಾಶಿ: ಏಪ್ರಿಲ್ ನ ಮೊದಲ ವಾರದಲ್ಲಿ ನಿಮಗೆ ಅಶುಭ. ರಾಶಿಯ ಅಧಿಪತಿ ಚತುರ್ಥದಲ್ಲಿ. ನಿಮ್ಮ ಸ್ಥಾನವನ್ನು ನೀವಾಗಿಯೇ ಬಿಟ್ಟುಕೊಡಬೇಕಾಗುವುದು. ಉದರ ಬಾಧೆಯಿಂದ ಬಳಲಿಕೆ ಇರುವುದು. ಬಂಧುಗಳಿಂದ ದುಃಖವು ಸಂಭವಿಸುವುದು. ಇದು ಸ್ತ್ರೀಯರಿಂದ ಹೆಚ್ಚು ಬರಲಿದೆ. ಏಕಾಂತವಾಗಿ ಇರಲು ಬಯಸದಿದ್ದರೂ ಏಕಾಂಗಿಯಾಗಿ ಇರುವಿರಿ. ನಿಮ್ಮೊಳಗೆ ಅತೃಪ್ತಭಾವವು ಇರಲಿದೆ. ಯಾರದೋ ಕೆಲಸದಲ್ಲಿ ಮಗ್ನರಾಗುವಿರಿ. ಆಲಸ್ಯವು ಮೈತುಂಬಿಕೊಂಡು ನಿದ್ರೆಯನ್ನು ಮಾಡುವ ಮನಃಸ್ಥಿತಿಯಲ್ಲಿ ಇರುವಿರಿ. ಹೊಸ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಯೋಚನೆ ದಟ್ಟವಾಗಿ ಮನದಲ್ಲಿ ಬೇರೂರಲಿದೆ. ಆಪ್ತರ ಜೊತೆ ಹೊಸ ಉದ್ಯೋಗದತ್ತ ಗಮನಹರಿಸುವಿರಿ. ಬೆನ್ನುನೋವು ಕಾಣಿಸಿಕೊಂಡೀತು.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಶುಭ. ಧೈರ್ಯದ ಮಾನಿಸಿಕತೆ ಇರಲಿದೆ. ಯಾವುದನ್ನೂ ಜಯಸಿಕೊಳ್ಳಲು ದೇಹ ಹಾಗೂ ಮನಸ್ಸು ಸಿದ್ಧವಿರಲಿದೆ. ಬಂಗಾರ ಆಭರಣದ ಖರೀದಿಗೆ ಆಸಕ್ತಿ ಹೆಚ್ಚು. ಅತಿ ಸಂತೋಷದಿಂದ ಕಳೆಯುವ ವಾರ ಇದು. ಯಾವ ವಿಚಾರಕ್ಕೂ ವಾದ–ವಿವಾದಗಳು ಮಾಡಿಕೊಳ್ಳಲು ಹೋಗಬೇಡಿ. ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಹೆಚ್ಚು ಕಳೆಯಬಹುದು. ಜೀವನದ ತೊಂದರೆಗಳನ್ನು ಸಂಬಂಧಿಕರೊಂದಿಗೆ ಹಂಚಿಕೊಳ್ಳಬೇಡಿ. ಸಣ್ಣ ಹುಣ್ಣನ್ನು ದೊಡ್ಡ ಗಾಯ ಮಾಡುವರು. ಗೃಹನಿರ್ಮಾಣ ಅಥವಾ ಗೃಹವನ್ನು ಖರೀದಿಸುವ ಯೋಚನೆ ಮಾಡಲಿದ್ದೀರಿ. ಸಣ್ಣ ಮೊತ್ತವನ್ನೂ ಹಣವೆಂದೇ ಭಾವಿಸಿ. ಇದೇ ನಿಮಗೆ ಮುಂದಿನ ಸಂಪತ್ತನ್ನು ಕೊಡಿಸುವುದು.
ಮಿಥುನ ರಾಶಿ: ಈ ರಾಶಿಯವರಿಗೆ ಮೊದಲ ವಾರ ಮಿಶ್ರ ಫಲ. ಒಳಗಿನಿಂದ ಅಳುಕು, ಯಾರಾದರೂ ಏನಾದರೂ ಹೇಳಿಯಾರು ಎಂಬುದು ಸದಾ ಇರಲಿದೆ. ಇವರ ಮಾತು ಸಿಟ್ಟಿನಿಂದ ಇರಬಹುದು ಅಥವಾ ಕೇಳುವ ಹಾಗೆ ಇರದು, ಸುಳ್ಳುಗಳನ್ನು ಹೇಳುವರು. ಆರ್ಥಿಕದ ಕ್ಷಯವಾಗಲಿದೆ. ನಿಮಗೆ ಅತ್ಯುತ್ಸಾಹವಿದ್ದು ದೇಹವು ಸಹಕರಿಸುವುದೋ ಎಂದು ನೋಡಿಕೊಳ್ಳಿ. ಮಕ್ಕಳ ತುಂಟಾಟಕ್ಕೆ ಅವರಿಗೆ ಬೈದು ಅವರ ದ್ವೇಷಕ್ಕೆ ಕಾರಣರಾಗುವಿರಿ. ದಾಂಪತ್ಯದಲ್ಲಿ ಆಪ್ತಭಾವವಿರಲಿದೆ. ಕಛೇರಿಯಲ್ಲಿ ಆದ ಒತ್ತಡವನ್ನು ಮನೆಗೆ ತರಬೇಡಿ. ವ್ಯವಹಾರದ ವಿಚಾರದಲ್ಲಿ ಶುದ್ಧತೆ ಮುಖ್ಯವಾಗಿ ಬೇಕಿದೆ. ನಿಮ್ಮ ಮೇಲೆ ನಿಮಗಾಗದವರು ಅಪವಾದವನ್ನು ತರಬಹುದು. ದೂರದಲ್ಲಿರುವ ನಿಮಗೆ ಮನೆಯ ವಾತಾವರಣ ಹಿತವೆನಿಸಬಹುದು. ಗುರಿಯ ಕಡೆಗೇ ಮನಸ್ಸು ಸ್ಥಿರವಾಗಿರಲಿ.
ಕರ್ಕಾಟಕ ರಾಶಿ: ಈ ರಾಶಿಯವರಿಗೆ ಈ ತಿಂಗಳ ಮೊದಲ ವಾರ ಅಶುಭ. ಮಡುಗಟ್ಟಿದ ಶೋಕ ನಿಮ್ಮೊಳಗೆ ಇರಲಿದೆ. ಯಾರ ಬಳಿ ಹೇಳಬೇಕು ಎಂಬ ಗೊಂದಲವಿರುವುದು. ತನ್ನವರೂ ತನ್ನವರಾಗಿ ಇರದುದು ಬಹಳ ದುಃಖದ ಸಂಗತಿಯಾಗಲಿದೆ. ನಿಮಗೆ ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಒಪ್ಪಿಕೊಂಡು ಮುಂದುವರಿಯುವುದು ಉತ್ತಮ. ಆರೋಗ್ಯ ಉತ್ತಮವಾಗಿದ್ಸು ಏನನ್ನಾದರೂ ತಿನ್ನುವುದು ಬೇಡ. ಹಣವನ್ನು ಸಾಲವಾಗಿ ಕೊಡುವಿರಿ. ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ನಿಮ್ಮ ಸಹಾಯಕ್ಕೆ ಸಹೋದ್ಯೋಗಿಗಳು ಬರುವರು. ಗಾಂಭೀರ್ಯವನ್ನು ಬಿಟ್ಟು ನಗುಮೊಗ ಚಂದ.
ಸಿಂಹ ರಾಶಿ: ಈ ರಾಶಿಯವರಿಗೆ ಏಪ್ರಿಲ್ ತಿಂಗಳ ಮೊದಲ ವಾರ ಶುಭವಲ್ಲ. ದ್ವಾದಶದಲ್ಲಿ ಇರುವ ಕುಜನು ನಿಮ್ಮ ಸಂಪತ್ತನ್ನು ಇಬ್ಬಾಗ ಮಾಡಿಸಬಹುದು. ಜ್ವರ ಮೊದಲಾದ ಉಷ್ಣ ಸಂಬಂಧದ ಖಾಯಿಲೆ ಅಧಿಕವಾಗಲಿದೆ. ಒತ್ತಡ, ಮನಸ್ಸಿಗೆ ಕಿರಿಕಿರಿ ಇವುಗಳೆಲ್ಲವೂ ಕಾಣಿಸುವುದು. ಮಾತು ಕಡಿಮೆ ಇದ್ದಷ್ಟೂ ಕುಟುಂಬಕ್ಕೇ ಒಳ್ಳೆಯದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ವಿಳಂಬವಾಯಿತು ಎಂದು ಬೇಸರಿಸದೇ ಖುಷಿಯಿರಿ. ಯಾವುದನ್ನು ಯಾವಾಗ ಮಾಡಿಸಬೇಕು ಎನ್ನುವುದು ವಿಧಿಗೆ ಗೊತ್ತಿದೆ. ಸ್ನೇಹಿತರ ಸಾಲವು ತೀರುವುದು. ಪ್ರೇಯಸಿ ಜೊತೆಯಲ್ಲಿ ಹೊರಗೆ ವಾಯುವಿಹಾರಕ್ಕೆ ಹೋಗುವಿರಿ. ಕೃಷಿಯು ನಿಮಗೆ ಇಷ್ಟವಲ್ಲದ ವಿಚಾರವಾದರೂ ಬೇರೆಯವರ ಒತ್ತಾಯಕ್ಕೆ ಒಪ್ಪಿಕೊಳ್ಳುವಿರಿ.
ಕನ್ಯಾ ರಾಶಿ: ಈ ರಾಶಿಯವರಿಗೆ ಈ ವಾರ ಶುಭ. ಏಕಾದಶದಲ್ಲಿ ಕುಜನಿದ್ದು ಹಣ ಅಥವಾ ಸುವಸ್ತುಗಳನ್ನು ಒದಗಿಸುವನು. ಕೆಟ್ಟ ಆರೋಗ್ಯ ಸುಧಾರಿಸಲಿದೆ. ಅನಾರೋಗ್ಯಕ್ಕೆ ಉತ್ತಮ ಚಿಕಿತ್ಸೆಯು ಸಮೀಪದಲ್ಲಿ ಗೊತ್ತಾಗುವುದು. ನೀರಿನ ಸೆಳವು ಹೆಚ್ಚಿರುವ ಭೂಮಿಯನ್ನು ಖರೀದಿಸುವಿರಿ. ವಿದ್ಯಾರ್ಥಿಗಳ ಚಂಚಲವಾದ ಮನಸ್ಸು ಸಲ್ಲದ್ದನ್ನು ಮಾಡಿಸಬಹುದು. ಎಂದೋ ಮಾಡಿದ ಸಹಾಯ ಇಂದು ನಿಮ್ಮ ಕೈ ಹಿಡಿಯುವುದು. ನೀವು ಆಗದಿರುವ ಕೆಲಸಗಳಿಂದ ನಿರಾಸೆಯನ್ನು ಅನುಭವಿಸುವುದು ಬೇಡ. ಅದು ದೈವೇಚ್ಛೆ ಎಂದು ಬಿಟ್ಟು ಮುಂದಿನ ಕೆಲಸಕ್ಕೆ ತೆರಳಿ. ದಾಂಪತ್ಯಜೀವನ ಅಪರೂಪದ ಕ್ಷಣಗಳನ್ನು ಸವಿಯುವಿರಿ. ಮಕ್ಕಳು ನಿಮ್ಮ ಜೊತೆ ಇರುವರು.
ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಮಿಶ್ರಫಲ. ನಿಮ್ಮ ಕೆಟ್ಟ ಸ್ವಭಾವು ಇತರರಿಗೂ ಗೊತ್ತಾಗುವುದು ಅಥವಾ ಕೆಟ್ಟ ವರ್ತನೆಯನ್ನು ತೋರಿಸುವಿರಿ. ಸ್ವಭಾವತಃ ಮುಂಗೋಪಿಯಾಗಿರುವ ನೀವು ಪೂರ್ವಾಪರ ಆಲೋಚನೆ ಇಲ್ಲದೇ ಕೋಪಗೊಳ್ಳುವಿರಿ. ಹೊರಟ ಕಾರ್ಯವು ನಿರ್ವಿಘ್ನವಾಗಿ ಮುಕ್ತಾಯವಾಗದು. ಅತಿಯಾದ ಬುದ್ಧಿ ಹಾಗೂ ದೈಹಿಕ ಶ್ರಮದಿಂದ ಕಾರ್ಯವನ್ನು ಸಾಧಿಸುವಿರಿ. ಉದ್ಯೋಗದಿಂದ ಹೊರನಡೆಯುವ ಸಾಧ್ಯತೆ ಇದೆ. ನೆಮ್ಮದಿಯನ್ನು ಕಾಣುವಾಗಲೇ ಈ ಘಟನೆ ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಪ್ರೇಮಕ್ಕೆ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಆಪ್ತರ ಜೊತೆ ಹೊಸ ಉದ್ಯೋಗವನ್ನು ಆರಂಭಿಸುವ ಆಲೋಚನೆ ಮಾಡುವಿರಿ. ಆದರೆ ಪಾಲುದಾರಿಕೆ ಜೊತೆ ಕೈಜೋಡಿಸುವಾಗ ಯೋಚಿಸಿ. ಹೆಚ್ಚು ಪ್ರಯತ್ನದಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.
ವೃಶ್ಚಿಕ ರಾಶಿ: ಈ ತಿಂಗಳ ಮೊದಲನೇ ವಾರದಲ್ಲಿ ಎಂಟನೇ ರಾಶಿಯವರಿಗೆ ಅಶುಭ. ರಾಶಿಯ ಅಧಿಪತಿ ನೀಚನಾಗಿ ನವಮದಲ್ಲಿ ಇದ್ದುದರಿಂದ ದುಃಖ, ಅಪಜಯಗಳಿಂದ ಆಯಾಸಗೊಳ್ಳುವಿರಿ. ಸ್ವಯಾರ್ಜಿತ ಸಂಪತ್ತು ನಷ್ಟವಾಗುವುದು. ಎಲ್ಲದರ ಮೇಲೆ ಜಿಗುಪ್ಸೆ ಉಂಟಾಗುವುದು. ದೈಹಿಕವಾದ ಬಲವು ಕ್ಷೀಣಿಸುವುದು. ನೀವು ಕಾರ್ಯ ಹೆಚ್ಚು ಮಾಡಿ, ಮಾತು ಕಡಿಮೆ ಮಾಡಲಿದ್ದೀರೊ. ಆದ ಕೆಲಸಗಳು ನಿಮಗೇ ಆಶ್ಚರ್ಯವನ್ನು ತರಬಹುದು. ಪ್ರಭಾವೀ ವ್ಯಕ್ತಿಗಳ ಭೇಟಿ ಉದ್ಯೋಗಕ್ಕೆ ಹೊಸ ದಾರಿ ತೆರೆದುಕೊಳ್ಳುವುದು. ಕುಟುಂಬದ ಹಿರಿಯರು ನಿಮ್ಮ ಜೊತೆ ಸಮಯವನ್ನು ಕಳೆಯಲು ಬಯಸುವರು. ಆಹಾರದ ಉದ್ಯೋಗವಿದ್ದರೆ ಅಧಿಕಲಾಭವಾಗುವುದು. ಹರಟೆ ಮಾಡುತ್ತ ನಿಮ್ಮ ಕೆಲವು ಸಮಯ ವ್ಯರ್ಥವಾಗಬಹುದು. ಸಮಯಕ್ಕೆ ಬೆಲೆ ಕೊಡುವುದು ಮುಖ್ಯವಾಗಿರಲಿ.
ಧನು ರಾಶಿ: ಈ ರಾಶಿಯವರಿಗೆ ಅಶುಭ ಈ ವಾರ. ಭೂಮಿಯಿಂದ ಗಾಯವಾಗುವುದು. ಜ್ವರವು ಆಗಾಗ ಕಾಣಿಸಿಕೊಳ್ಳುವುದು. ಸಂಪತ್ತು ಹರಣವಾಗಲಿದೆ ಮಾತ್ರವಲ್ಲ ಅಪಮಾನವನ್ನೂ ಎದುರಿಸಬೇಕಾಗಬಹುದು. ಎಲ್ಲರ ಖರ್ಚುಗಳಿಗೆ ಸ್ವಂತ ಹಣವನ್ನು ಬಳಸಬೇಕಾಗುವುದು. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲವಿದೆ. ಘಟನೆಗಳು ಉತ್ತಮ ಮತ್ತು ಗೊಂದಲಮಯವಾಗಿದ್ದು ಇದು ನಿಮ್ಮನ್ನು ದಣಿಸುವುದು. ಮಕ್ಕಳ ಆರೋಗ್ಯದ ಮೇಲೆ ಗಮನಬೇಕಿದೆ. ಎಲ್ಲ ಹತಾಶೆ, ನೋವು, ಸಂಕಟ, ತುಮುಲಗಳನ್ನು ನಿವಾರಿಸಿಕೊಳ್ಳಲು ಒಳ್ಳೆಯ ಸಮಯವಾಗಿದೆ. ಆಪ್ತರು ಎನಿಸಿದ ಸ್ನೇಹಿತರ ಜೊತೆ ಆಗಿದ್ದ ನೋವನ್ನು ಹೇಳಿಕೊಂಡು ಹಗುರಾಗಿ.
ಮಕರ ರಾಶಿ: ಈ ರಾಶಿಯವರಿಗೆ ಸಂಗಾತಿಯ ಜೊತೆ ಕಲಹವು ಆಗಾಗ ಆಗಲಿದೆ. ಕಣ್ಣಿನ ರೋಗಗಳು ಕಾಣಿಸುವುವು. ಅಸಮತೋಲನ ಆಹಾರದ ಸೇವನೆಯಿಂದ ಉದರಕ್ಕೆ ಸಂಬಂಧಪಟ್ಟ ರೋಗ ಕಾಣಿಸುವುದು. ನಿಮ್ಮ ಕುಟುಂಬ ಜೊತೆ ಆನಂದದಿಂದ ಕಾಲವನ್ನು ಕಳೆಯುವ ಮನಸ್ಸಿರಲಿದೆ. ಕಾರ್ಯದ ಒತ್ತಡದಿಂದ ಪೂರ್ತಿಯಾಗಿ ಆಗದೇ ಹೋಗಬಹುದು. ಸಹೋದರರಿಂದ ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಸಿಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣದ ಅಭಾವವಾಗಲಿದೆ. ಬ್ಯಾಂಕ್ ನಿಂದ ಸಾಲವನ್ನು ಪಡೆಯುವಿರಿ. ನಿಮ್ಮ ಸಾಮಾರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ನಿಮಗೆ ಛಲವಾಗಿಯೂ ಪರಿಣಾಮ ಬೀರಿ ಉತ್ತಮವಾದ ಯೋಜನೆಗಳನ್ನು ರೂಪಿಸಿ.
ಕುಂಭ ರಾಶಿ: ರಾಶಿ ಚಕ್ರದ ಈ ರಾಶಿಯವರಿಗೆ ಈ ವಾರ ಶುಭ. ಶತ್ರುಗಳ ಜೊತೆ ಕಲಹ ನಿಲ್ಲುವುದು ಮತ್ತು ಅವರಿಂದ ಬಿಡುಗಡೆಯಾಗಲಿದೆ. ರೋಗದ ಉಪಶಮನವಾಗುತ್ತ ಸ್ವಸ್ಥಸ್ಥಿತಿಗೆ ಬರುವಿರಿ. ಸಕಲ ಕಾರ್ಯದಲ್ಲಿಯೂ ನಿಮಗೇ ಜಯ. ಉದ್ಯೋಗದಿಂದ ಬರಬೇಕಾದ ಹಣ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಬಹಳ ಜಾಗರೂಕರಾಗಿರಿ. ಮೋಸ ಹೋಗುವ ಸಾಧ್ಯತೆ ಇದೆ. ಆತುರದ ತೀರ್ಮಾನ ಹಾಗೂ ಒತ್ತಡಗಳಿಗೆ ಸಿಲಿಕದೇ ಎಚ್ಚರಿಕೆಯಿಂದಿರಿ. ಕೊಟ್ಟ ಸಾಲ ಮರಳಿಬರಹುದು. ಸ್ನೇಹಿತರ ಒತ್ತಾಯ ಮೇರಗೆ ಸುತ್ತಾಟ ನಡೆಸುವಿರಿ. ಆಯಾಸವಾಗಿ ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮ ವಿರುದ್ಧ ಸಲ್ಲದ ಮಾತುಗಳು ಕೇಳಿಬರಬಹುದು. ಸಮರ್ಥನೆಯನ್ನು ಕೊಟ್ಟು ಸಮಯವನ್ನು ವ್ಯರ್ಥಮಾಡಬೇಡಿ.
ಮೀನ ರಾಶಿ: ಈ ರಾಶಿಯವರು ಈ ವಾರ ಯಾವ ಕೆಲಸಕ್ಕೂ ಬಾರದ ಚಿಂತೆ ಮಾಡುತ್ತ ಬುದ್ಧಿಯನ್ನು ಹಾಳು ಮಾಡಿಕೊಳ್ಳುವರು. ಮಕ್ಕಳ ಕಾರಣದಿಂದ ದುಃಖಿಸುವ ಕಾರಣವಿರಲಿದೆ. ಸಾಲಬಾಧೆಯಿಂದ ಕೆಟ್ಟ ಕೆಲಸವನ್ನು ಮಾಡಲು ಪ್ರೇರಣೆಯಾಗಬಹುದು. ಇದರಿಂದ ಇನ್ನಷ್ಟು ತೊಂದರೆ ಸಿಕ್ಕಿಹಾಕಿಕೊಳ್ಳುವ ಸ್ಥಿತಿ ಎದುರಾದೀತು. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ಆಗುಹೋಗುಗಳಿಗೂ ಜೊತೆಯಾಗುವರು. ಉದ್ವಿಗ್ನಗೊಳ್ಳದೇ ಸಮಾಧಾನದಿಂದ ಇರಬೇಕಾದ ಅವಶ್ಯಕತೆಯಿದೆ. ಕೆಲಸದಲ್ಲಿ ತನ್ನವರ ವೈರವನ್ನು ಕಟ್ಟಿಕೊಳ್ಳುವರು. ತೈಲ ಮುಂತಾದ ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಸರಿಯಾದ ಫಲವನ್ನು ಪಡೆಯಲಾರರು.