Weekly Horoscope: ಈ ವಾರ ಯಾವ ರಾಶಿಯವರ ಭವಿಷ್ಯ ಹೇಗಿರಲಿದೆ?
ಅಕ್ಟೋಬರ್ ತಿಂಗಳ ನಾಲ್ಕನೇ ವಾರ 26-10-2025 ರಿಂದ 01-11-2025 ರವರೆಗೆ ಇರಲಿದೆ. ಕುಜನು ಸ್ವಕ್ಷೇತ್ರದಲ್ಲಿ, ಶುಕ್ರನು ನೀಚನಾಗಿ, ಸೂರ್ಯನೂ ನೀಚನಾಗಿದ್ದು, ಗುರು ಮಾತ್ರ ಉಚ್ಚ ಸ್ಥಾನದಲ್ಲಿ ಇದ್ದು ಕರ್ಕಾಟಕ, ವೃಶ್ಚಿಕ, ಮಕರ, ಮೀನ ಈ ರಾಶಿಗಳಿಗೆ ವಿಶೇಷ ಶಕ್ತಿಯನ್ನೂ ಕೊಡುವನು. ಆರೋಗ್ಯ, ಅದೃಷ್ಟ ಕೆಲವು ರಾಶಿಗಳಿಗೆ ಸದ್ಯ ಸಿಗದೇ ಇರಬಹುದು, ಆದರೆ ನಿರಾಸೆಪಡಬೇಕಿಲ್ಲ. ಉತ್ತಮ ಕಾಲ ಯಾರನ್ನೂ ಬಿಡದು. ತಾಳ್ಮೆಯಿಂದ ಎದರಿಸುವ ಗಟ್ಟಿತನ ಬೇಕು.

ಮೇಷ ರಾಶಿ :
ಈ ವಾರ ಸಂಗಾತಿಯ ಮೇಲಿನ ಪ್ರೀತಿ ಕಡಿಮೆ ಆಗಲಿದೆ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ಕ್ರೀಡೆಗೆ ಸಂಬಂಧಿಸಿದಂತೆ ಮಾರ್ಗದರ್ಶನದ ಕೊರತೆ ಇರುವುದು. ಅನಿವಾರ್ಯವಾಗಿ ನೀವು ಹಣವನ್ನು ಕೊಡಬೇಕಾಗಬಹುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳನ್ನು ಆಗಾಗ ಕೇಳುವಿರಿ. ಆದರೆ ಎಲ್ಲ ಮಾತುಗಳನ್ನೂ ನೀವು ನಕಾರಾತ್ಮಕವಾಗಿಯೇ ತಿಳಿಯುವಿರಿ. ಈ ವಾರ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ಕಾಡುವುದು. ಕಳೆದ ಸುಖದ ಕಾಲದ ನೆನಪಾಗುವುದು. ಅರ್ಥಿಕ ವಿಷಯಕ್ಕೆ ಸಹೋದರರ ನಡುವೆ ಮಾತು ವಿತಂಡವಾಗುವುದು.
ವೃಷಭ ರಾಶಿ :
ಈ ವಾರದಲ್ಲಿ ಕುಟುಂಬದ ಆಸ್ತಿಯ ಮಾರಾಟದ ವಿಚಾರವು ಮತ್ತೆ ಮತ್ತೆ ಚರ್ಚೆಗೆ ಬರಲಿದೆ. ಉದ್ಯೋಗದಲ್ಲಿ ಬರುವ ಅವಕಾಶವನ್ನು ಬಿಟ್ಟುಬಿಡುವಿರಿ. ನಿಮ್ಮ ಊಹೆಯು ಸತ್ಯವಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಹಿರಿಯರ ಜೊತೆ ವಾಗ್ವಾದ ನಡೆಯಲಿದೆ. ವಿಶೇಷ ಆಹಾರದ ಸೇವನೆಯಿಂದ ಉದರಬಾಧೆ ಕಾಣಿಸುವುದು. ಈ ವಾರ ಅಪರಿಚಿತರು ನಿಮ್ಮನ್ನು ವಶ ಮಾಡಿಕೊಳ್ಳಲು ಉಪಾಯವನ್ನು ಮಾಡುವರು. ನಿಮ್ಮ ಮತ್ತೊಂದು ಮುಖದ ಪರಿಚಯವೂ ಆಪ್ತರಿಗೆ ಆಗಲಿದೆ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಸರಿಮಾಡಿಕೊಳ್ಳಿ. ನಿಮ್ಮದಲ್ಲದ ವಸ್ತುಗಳನ್ನು ಇತರರಿಗೆ ಕೊಟ್ಟುಬಿಡಿ.
ಮಿಥುನ ರಾಶಿ :
ನಾಲ್ಕನೇ ವಾರದಲ್ಲಿ ಎಲ್ಲ ರೀತಿಯ ನಿಮಗೆ ಒತ್ತಡವು ಅಧಿಕವಾಗಿ ಇರಲಿದ್ದು, ಭಯವು ಕಾಡುವುದು. ಆಪ್ತರಿಂದ ಸಮಯೋಚಿತ ಧೈರ್ಯವೂ ಸಿಗಲಿದೆ. ಈ ವಾರ ಆಭರಣಪ್ರಿಯರು ಹೆಚ್ಚಿನ ಹಣವನ್ನು ಹೂಡುವರು. ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ಈ ವಾರ ನಿಮ್ಮಲ್ಲಿ ಆದ ಬದಲಾವಣೆಯನ್ನು ಸಹೋದ್ಯೋಗಿಗಳು ಗಮನಿಸಬಹುದು. ವಿದ್ಯಾರ್ಥಿಗಳು ಮನೆಯ ಜವಾಬ್ದಾರಿಯನ್ನೂ ನಡೆಸುವ ಸಂದರ್ಭವು ಬರಲಿದೆ. ಕೆಲವರ ಮಾತುಗಳು ಉತ್ಸಾಹವನ್ನು ಕಡಿಮೆ ಮಾಡುವುದು. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ಈ ವಾರ ಆರ್ಥಿಕಸ್ಥಿತಿಯು ಯಥಾಸ್ಥಿತಿಯಲ್ಲಿ ಇರಲಿದೆ.
ಕರ್ಕಾಟಕ ರಾಶಿ :
ಈ ವಾರ ಅತಿಯಾದ ರಾಜಕೀಯವು ನಿಮ್ಮ ಮೇಲೆ ಪ್ರಯೋಗಕ್ಕೆ ಬಂದಾಗ ದೂರ ಸರಿಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಒಂದು ಕೆಲಸವನ್ನು ಮೈ ಮೇಲೆ ಬಿದ್ದು ಮಾಡಿಸಿಕೊಳ್ಳಬೇಕಾಗುವುದು. ಕಲಾವಿದರು ಗೌರವವನ್ನೂ ಯಶಸ್ಸನ್ನೂ ಗಳಿಸುವರು. ನಿಮಗೆ ಆಗುವಷ್ಟೇ ಕೆಲಸವನ್ನು ಮಾಡಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗಳಿಂದ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ಧೈರ್ಯ ಮಾಡುವುದು ಬೇಡ. ಏನಾದರೂ ಒಂದು ಅಸಂಬದ್ಧವನ್ನು ಮಾಡುವ ಹಣೆಪಟ್ಟಿ ಬರಬಹುದು. ಈ ವಾರದಲ್ಲಿ ಆಗುವ ಗೆಲುವು ವಂಚನೆಯದ್ದಾಗಲಿದೆ. ಶತ್ರುಗಳ ವ್ಯವಹಾರವನ್ನು ಇನ್ನೊಬ್ಬರ ಮೂಲಕ ತಿಳಿದುಕೊಳ್ಳುವಿರಿ. ನಿಮ್ಮ ಮೇಲೆ ಯಾರದ್ದಾದರೂ ದೃಷ್ಟಿಯು ಬೀಳಬಹುದು.
ಸಿಂಹ ರಾಶಿ :
ರಾಶಿ ಚಕ್ರದ ಈ ರಾಶಿಗೆ ಕುಟುಂಬದ ಭಿನ್ನಾಭಿಪ್ರಾಯಗಳು ನಿಮ್ಮ ಹಾದಿಯನ್ನು ತಪ್ಪಿಸಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುವುದು. ಆಗಾಗ ವ್ಯತ್ಯಾಸ ಆಗುವ ತಂದೆಯ ಆರೋಗ್ಯದ ಬಗ್ಗೆ ಗಮನ ಬೇಕು. ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ಸಂಬಂಧವಿಲ್ಲದ ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಈ ವಾರ ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮಾಡಲಾಗದು. ಕುರುಡಾಗಿ ಮುನ್ನುಗ್ಗುವುದು ಬೇಡ. ಮೊದಲೇ ನಿಶ್ಚಯಿಸಿದ ಕಾರ್ಯವನ್ನು ಆರಂಭಿಸಿ ಮುಂದುವರಿಸಿ. ನೀವು ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳುವಿರಿ. ಅಧ್ಯಯನದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುವುದು.
ಕನ್ಯಾ ರಾಶಿ :
ಅಕ್ಟೋಬರ್ ಮಾಸದ ಕೊನೆಯ ವಾರದಲ್ಲಿ ನಿಮಗೆ ವಿದ್ಯಾಭ್ಯಾಸದ ಹಿನ್ನಡೆಯ ಕಾರಣವನ್ನು ಎಲ್ಲರಿಂದ ಪಡೆಯುವಿರಿ. ಬೇರೆ ಬೇರೆ ರೀತಿಯ ಜನರು ನಿಮ್ಮನ್ನು ಆಡಿಕೊಳ್ಳಬಹುದು. ನಿಮಗೆ ಪ್ರೋತ್ಸಾಹದ ಕೊರತೆ ಅಧಿಕವಾಗಿ ಕಾಣಿಸುವುದು. ಪ್ರೀತಿಯಲ್ಲಿ ನಿಮಗೆ ನೋವಾಗುವ ಸಾಧ್ಯತೆ ಇದೆ. ಸಣ್ಣ ಸಣ್ಣ ವಿಚಾರಗಳೂ ದೊಡ್ಡದಾಗಿ ಕಾಣಿಸುವುದು. ಅಧಿಕಾರಿಗಳಿಂದ ನಿಮಗೆ ಮಾನಸಿಕ ಹಿಂಸೆ ಆಗಬಹುದು. ಮುಂದೇನೂ ತೋಚದೇ ಸ್ತಬ್ಧವಾಗುವಿರಿ. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಸಾಮಾಜಿಕ ಕೆಲಸದಿಂದ ಸಾಧಿಸುವಿರಿ. ನಕಾರಾತ್ಮಕ ಆಲೋಚನೆಗಳು ಬಾರದಂತೆ ನೋಡಿಕೊಳ್ಳಿ. ಯೋಗ ಧ್ಯಾನದ ಬಗ್ಗೆ ಒಲವು ಹೆಚ್ಚಾಗುವುದು. ಮಕ್ಕಳ ವಿವಾಹ ಚಿಂತೆಯನ್ನು ಬಿಡುವಿರಿ. ಯಾರ ಮಾತನ್ನೋ ಕೇಳಿ ಮಾಡುವ ಕೆಲಸಕ್ಕಿಂತ ನಿಮ್ಮ ಮನಸ್ಸಿಗೆ ಬಂದರೆ ಅನಾಯಾಸವಾಗಿ ಸಾಧ್ಯವಾಗುವುದು.
ತುಲಾ ರಾಶಿ :
ಶುಕ್ರನ ಆದಿತ್ಯದ ಈ ರಾಶಿಗೆ ಈ ವಾರ ಆಸ್ತಿಯ ಮೇಲೆ ಸಾಲವನ್ನು ಪಡೆಯುವ ಸಂದರ್ಭವು ಕೈಯ್ಯಾರೆ ತಂದುಕೊಳ್ಳುವಿರಿ. ಸಂಗಾತಿಯ ಮನೋಭಾವವು ಬದಲಾದಂತೆ ಅನ್ನಿಸುವುದು. ಚರ್ಮಕ್ಕೆ ಸಂಬಂಧಿಸಿದಂತೆ ಏನಾದರೂ ರೋಗ ಕಾಣಿಸಿಕೊಳ್ಳಲಿದೆ. ಸಮಾಧಾನಚಿತ್ತದಿಂದ ನೀವು ಮಧುರ ಕ್ಷಣಗಳನ್ನು ಆನಂದಿಸುವಿರಿ. ಭೂಮಿಯ ವ್ಯವಹಾರದಿಂದ ಮಧ್ಯವರ್ತಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಮನೆಯ ವಾತಾವರಣವು ನಿಮಗೆ ಹಿತವೆನಿಸಿದ್ದು ಮನೆಯಿಂದ ದೂರವಿರಲು ಕಷ್ಟವಾಗುವುದು. ಸ್ವಾಭಿಮಾನಕ್ಕೆ ಆಪ್ತರಿಂದ ತೊಂದರೆಯಾಗಬಹುದು. ಸಂಗಾತಿಯ ಮೌನವನ್ನು ಮುರಿಸುವಿರಿ.
ವೃಶ್ಚಿಕ ರಾಶಿ :
ಈ ರಾಶಿಯವರಿಗೆ ಕೊನೆಯ ವಾದದಲ್ಲಿ ಸಹೋದ್ಯೋಗಿಗಳ ಸಹಕಾರ ನಿಮಗೆ ಸಿಗುತ್ತದೆ ಎಂಬ ನಿರೀಕ್ಷೆ ಬೇಡ. ಮಾತಿನಿಂದಲಂತೂ ಇರುತ್ತದೆ. ಛಲದಿಂದ ಒಂಟಿಯಾಗಿ ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಕೃಷಿಯಲ್ಲಿ ಕೆಲವು ಕಷ್ಟಕ್ಕೆ ಉಪಾಯ ಸಿಗಲಿದೆ. ಅದಕ್ಕೆ ನಿಮ್ಮ ಪೂರ್ಣ ಶ್ರಮವನ್ನು ಹಾಕುವಿರಿ. ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕರೂ ನಿಮ್ಮ ಕೆಲಸವು ಸಮಾಧಾನ ಕೊಡದು. ಬಂದ ಹಣವು ಸಾಲಕ್ಕೆ ಸರಿಯಾಗುವುದು. ಅಪ್ರಯೋಜಕ ಎಂದುಕೊಂಡ ವಿದ್ಯೆಯಿಂದ ಪ್ರಯೋಜನವಾಗುವುದು. ಮನೆಗೆ ಬೇಕಾದ ಬಂಧುಗಳು ಬಾರದೇ ಹೋಗಬಹುದು. ಸ್ಥಾನಭ್ರಷ್ಟವಾಗದಂತೆ ಆರ್ಥಿಕ ವ್ಯವಹಾರವಿರಲಿ. ಸಜ್ಜನರನ್ನು ನೀವು ದೂರ ಮಾಡಿಕೊಳ್ಳುವಿರಿ. ಯಾರ ಮೇಲೂ ಪೂರ್ವಾಗ್ರಹ ಬೇಡ. ಸ್ವತಂತ್ರವಾಗಿ ಆಲೋಚಿಸಿ.
ಧನು ರಾಶಿ :
ಈ ವಾರ ಹಠದ ಸ್ವಭಾವದವರ ಜೊತೆ ಅತಿಯಾದ ಮಾತು ಬೇಡ. ಮಾನಸಿಕ ಕಿರಿಕಿರಿಯಿಂದ ಕುಳಿತಲ್ಲಿ ಕುಳಿತುಕೊಳ್ಳುವುದು ಕಷ್ಟವಾದೀತು. ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ಯಾರದೋ ಕೋಪವನ್ನು ಇನ್ನಾರದೋ ಮೇಲೆ ತೋರಿಸಬೇಡಿ. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ನಿಮ್ಮ ಸ್ಥಾನದ ಬಗ್ಗೆ ಭಯ ಉಂಟಾಗಬಹುದು. ಸತ್ಯವನ್ನೇ ಹೇಳಿದರೂ ಅದು ಪ್ರಿಯವಾಗಿರಲಿ. ಪವಿತ್ರಕ್ಷೇತ್ರಗಳಿಗೆ ತೆರಳುವ ಅವಕಾಶ ಸಿಗಬಹುದು. ಬಿಟ್ಟುಕೊಳ್ಳುವುದು ಬೇಡ. ಈ ವಾರದ ಶುಭ ಅವಸರದಲ್ಲಿ ಸದುಪಯೋಗ ಮಾಡಿಕೊಳ್ಳಿ. ಹೆಚ್ವಿನ ಸಮಯವನ್ನು ಧಾರ್ಮಿಕ ಆಚರಣೆಗೆ ಮೀಸಲಿಡುವಿರಿ.
ಮಕರ ರಾಶಿ :
ಹತ್ತನೇ ರಾಶಿಯವರಿಗೆ ಈ ವಾರ ಕಾರ್ಯದ ಸ್ಥಳದಲ್ಲಿ ಹಿತಶತ್ರುಗಳು ಏನಾದರೂ ಕಿರಿಕಿರಿ ಮಾಡಿ ನಿಮ್ಮ ಕೆಲಸವು ಪೂರ್ಣ ಮಾಡುವರು. ಲೆಕ್ಕಾಚಾರವನ್ನು ಸರಿಯಾಗಿ ಇಟ್ಟುಕೊಳ್ಳದೇ ಎಲ್ಲರಿಗೂ ಗೊಂದಲವನ್ನು ಉಂಟುಮಾಡುವಿರಿ. ಬಹಳ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹದಂತೆ ಆಗುವುದು. ಹಣವೇ ಕೆಲವೊಮ್ಮೆ ಭಾರವೆನಿಸಬಹುದು. ಸಾಮಾಜಿಕ ಕಾರ್ಯಗಳತ್ತ ಒಲವು ಮೂಡಬಹುದು. ನಿಮ್ಮ ನಂಬಿಕೆಗಳನ್ನು ಪರೋಕ್ಷವಾಗಿ ವಿರೋಧಿಸುವರು. ಯಾವುದಕ್ಕೂ ಆರೋಗ್ಯವನ್ನು ಸುಧಾರಿಸಿಕೊಂಡು ಮುನ್ನಡೆಯುವುದು ಉತ್ತಮ. ಒಡೆದ ಸಂಸಾರವನ್ನು ಇನ್ನಷ್ಟು ಒಡೆಯುವುದು ಬೇಡ, ಹಾಗೆಯೇ ಇರಲಿ. ಗೊತ್ತಿರುವ ಕೆಲಸವನ್ನಷ್ಟೇ ಮಾಡಿ. ಮಕ್ಕಳ ಭವಿಷ್ಯಕ್ಕೆ ನೀವು ಸ್ವಲ್ಪ ಹಣವನ್ನು ಇಡುವಿರಿ. ನಿಮ್ಮ ಓಡಾಟಕ್ಕೆ ಸ್ವಂತ ವಾಹನವು ಬೇಕು ಎನಿಸಬಹುದು. ದಾಂಪತ್ಯದಲ್ಲಿ ಮೌನವೇ ಸಂಭಾಷಣೆ ಆಗಬಹುದು.
ಕುಂಭ ರಾಶಿ :
ಶನಿಯು ಅಧಿಪತಿಯಾದ ಈ ರಾಶಿಗೆ ಈ ವಾರ ಹಿರಿಯರ ಅನುಭವಿಗಳ ಸಂಪರ್ಕವೇ ಹೆಚ್ಚು ಸಿಗಲಿದೆ. ಮಕ್ಕಳ ಕಾರಣದಿಂದ ನೀವು ವಿದೇಶ ಪ್ರಯಾಣ ಮಾಡಬೇಕಾಗಬಹುದು. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಏನಾದರೂ ಹೇಳಬಹುದು, ಕೇಳಿ ಸುಮ್ಮನಾಗಿ. ಉತ್ತರದಿಂದ ಮತ್ತೇನಾದರೂ ಆದೀತು. ಸುಲಭವಾಗಿ ಸಿಗುವ ಸಂಪತ್ತಿಗೆ ಆಸೆಪಡುವುದು ಬೇಡ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ಅಪರೂಪದ ವ್ಯಕ್ತಿಗಳು ಆಕಸ್ಮಾತ್ತಾಗಿ ಭೇಟಿಯಾಗುವರು. ಈ ವಾರ ನೀವು ಹಣವನ್ನೂ ಕೊಟ್ಟು ವಸ್ತುವನ್ನೂ ಕಳೆದುಕೊಳ್ಳುವಿರಿ. ಕಛೇರಿಗೆ ವಿರಾಮವಿದ್ದರೂ ಕಾರ್ಯವನ್ನು ನೀವು ಮಾಡಬೇಕಾಗುವುದು.
ಮೀನ ರಾಶಿ :
ರಾಶಿ ಚಕ್ರದ ಕೊನೆಯ ರಾಶಿಗೆ ಈ ವಾರ ಸಣ್ಣ ವ್ಯಾಪಾರ ಮಾಡಿ ಅಧಿಕ ಲಾಭವನ್ನು ಗಳಿಸುವರು. ವಿವಾಹದ ವಾತಾವರಣವು ಮನೆಯಲ್ಲಿ ಇದ್ದರೂ ನೀವು ನೆಮ್ಮದಿಯಿಂದ ಓಡಾಡುವಿರಿ. ಚಲಿಸುವ ವಾಹನದಿಂದ ಬೀಳುವ ಸಾಧ್ಯತೆ ಇದೆ. ಏನೇ ನಿರ್ಧಾರ ಮಾಡಿದರೂ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ನಿಮಗೆ ಆಗದು. ಒಂದಿಲ್ಲೊಂದು ನಕಾರಾತ್ಮಕ ಆಲೋಚನೆಗಳು ಬರುತ್ತಲೇ ಇರುತ್ತವೆ. ನಿಮ್ಮ ವಸ್ತುವು ಕಳ್ಳತನವಾಗಬಹುದು ಅಥವಾ ಅದೃಶ್ಯವಾಗಬಹುದು. ನೀವು ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡರು. ಈ ವಾರ ಸ್ವಂತ ಉದ್ಯೋಗದ ಮೇಲಿನ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆಯಾಗಿ, ನಿಮ್ಮ ಆದಾಯಕ್ಕೆ ಹೊಡೆತ ಬೀಳಲಿದೆ.
– ಲೋಹಿತ ಹೆಬ್ಬಾರ್ – 8762924271 (what’s app only)
