Job Horoscope: ಅ.26ರಿಂದ ನ.1ರವರೆಗೆ ನಿಮ್ಮ ಉದ್ಯೋಗ ಭವಿಷ್ಯ ಹೇಗಿದೆ?
ವಾರದ ಉದ್ಯೋಗ ಭವಿಷ್ಯ 2025: ಅಕ್ಟೋಬರ್ 26 ರಿಂದ ನವೆಂಬರ್ 1, 2025 ರವರೆಗಿನ ಎಲ್ಲಾ ರಾಶಿಗಳ ವಾರದ ಉದ್ಯೋಗ ಮತ್ತು ಉದ್ಯಮ ಭವಿಷ್ಯ ಇಲ್ಲಿದೆ. ಈ ರಾಶಿಯವರಿಗೆ ಕೆಲವು ಬದಲಾವಣೆಗಳು, ಆರ್ಥಿಕ ಸುಧಾರಣೆಗಳು, ಹೊಸ ಜವಾಬ್ದಾರಿಗಳು ಮತ್ತು ಬೆಳವಣಿಗೆಯ ಅವಕಾಶಗಳು ಬರಬಹುದು. ಶ್ರಮಕ್ಕೆ ದೈವಾನುಕೂಲ ಹೇಗೆ ಸ್ಪಂದಿಸುತ್ತದೆ ಮತ್ತು ವೃತ್ತಿ ಪ್ರಗತಿ, ವ್ಯಾಪಾರ ಲಾಭ ಹಾಗೂ ವೈಯಕ್ತಿಕ ಅಭಿವೃದ್ಧಿಯಲ್ಲಿ ಪ್ರತಿಯೊಂದು ರಾಶಿಯು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

26-10-2025ರಿಂದ 01-11-2025ರವರಗೆ ಅಕ್ಟೋಬರ್ ನಾಲ್ಕನೇ ವಾರವಾಗಿದ್ದು ಉದ್ಯೋಗ, ಉದ್ಯಮಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳಾಗಲಿದ್ದು ಅನಿರೀಕ್ಷಿತ ಅಥವಾ ನಿರೀಕ್ಷಿತ ಎರಡನ್ನೂ ಒಪ್ಪಿಕೊಳ್ಳದೇ ವಿಧಿಯಿಲ್ಲ. ಉದ್ಯೋಗಿಯ ಮೊದಲ ಲಕ್ಷಣ ಲಾಭ. ಅದನ್ನು ಬೇರೆ ಏನನ್ನೇ ನೋಡಿದರೂ ಯಶಸ್ಸು ಸಿಗದು. ಕಾಲಕಾಲಕ್ಕೆ ನೌಕರಿಗೆ ಉತ್ತೇಜನ ಕೊಡುವ ಕೆಲಸವೂ ಆದಾಗ ಸ್ವಂತ ಉದ್ಯಮ ಸರಿಯಾದ ದಿಕ್ಕಿನ ಕಡೆ ಹೋಗಲು ಸಾಧ್ಯ. ದೈವಾನುಕೂಲವೂ ಶ್ರಮಕ್ಕೆ ಸ್ಪಂದಿಸುವುದು. ಒಟ್ಟಿನಲ್ಲಿ ಈ ವಾರದ ಉದ್ಯೋಗದಲ್ಲಿ ಲಾಭಾಂಶವೇ ಅಧಿಕವಾಗಿರಲಿ.
ಮೇಷ ರಾಶಿ :
ಅಕ್ಟೋಬರ್ ತಿಂಗಳ ಈ ವಾರ ನಿಮ್ಮ ವೃತ್ತಿಯ ಸ್ಥಳದಲ್ಲಿ ಹೊಣೆಗಾರಿಕೆಗಳು ಅಧಿಕ. ನಾಯಕತ್ವದ ಪಾತ್ರವನ್ನೂ ನಿರ್ವಹಿಸಬೇಕಾಗುವುದು. ನಿಮ್ಮ ನಿರ್ಧಾರಗಳು ಸಹೋದ್ಯೋಗಿಗಳಿಗೂ ಪ್ರೇರಣೆಯಾಗುತ್ತವೆ. ಕೆಲವರಿಗೆ ಹೊಸ ಪ್ರಾಜೆಕ್ಟ್ ನೇತೃತ್ವ ಸಿಗಬಹುದು. ಹಣಕಾಸಿನಲ್ಲಿ ಸುಧಾರಣೆಯಾಗಿ ಆತ್ಮವಿಶ್ವಾಸ ಬಂದು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯೋಗ ಬದಲಾವಣೆಗೂ ಒಮ್ಮೆ ಯೋಚಿಸುತ್ತಿದ್ದರೆ ಶುಭ ಸಮಯ.
ವೃಷಭ ರಾಶಿ :
ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ನಿಮ್ಮ ಪರಿಶ್ರಮಕ್ಕೆ ಫಲ ಪ್ರಾಪ್ತಿ. ಹಿರಿಯರಿಂದ ಮೆಚ್ಚುಗೆ, ಕೆಲಸದ ಉತ್ತೇಜನ ಹಾಗೂ ಬಡ್ತಿಯ ಸಾಧ್ಯತೆ. ಹೊಸ ಜವಾಬ್ದಾರಿಗಳು ಬಂದರೂ ಸಮಯ ಕೊಡುವುದು ಕಷ್ಟ. ಆರ್ಥಿಕ ಸುಧಾರಣೆಯ ದೃಷ್ಟಿಯಿಂದ ಮಾಡಬಹುದು. ವ್ಯಾಪಾರಿಗಳಿಗೆ ಉತ್ತಮ ಮಾರಾಟ ಮತ್ತು ಗ್ರಾಹಕರಿಂದಲೂ ಬೆಂಬಲ ಸಿಗುತ್ತದೆ. ಆದರೆ ಕೆಲಸದ ಒತ್ತಡದಿಂದ ಮನಸ್ಸು ವಿಚಲಿತವಾಗದಂತೆ ನೋಡಿಕೊಳ್ಳಿ.
ಮಿಥುನ ರಾಶಿ :
ಮೂರನೇ ರಾಶಿಯವರು ಈ ವಾರ ಕೆಲಸದಲ್ಲಿ ಚುರುಕರನ ತೋರಿಸುವರು. ಯಾವುದೇ ಬಂದರು ಧೈರ್ಯವಾಗಿ ಮಾಡುತ್ತೇನೆ ಎಂಬ ವಿಶ್ವಾಸವಿರುವುದು. ಹೊಸ ಆಲೋಚನೆಗಳು ಬಂದರೂ ಅವುಗಳನ್ನು ಸರಿಯಾಗಿ ಪ್ರಸ್ತುತ ಪಡಿಸಿ. ಕಚೇರಿಯಲ್ಲಿ ಸಂವಹನ ಕೌಶಲದಿಂದ ಸಹೋದ್ಯೋಗಿಗಳ ಸಹಕಾರ ಪಡೆಯಬಹುದು. ಹಿರಿಯರು ನಿಮ್ಮ ಸಲಹೆಗಳನ್ನು ಪರಿಗಣಿಸಲಿದ್ದಾರೆ. ತರಬೇತಿಗೆ ಸಂಬಂಧಿತ ಅವಕಾಶ ಬರಲಿದೆ.
ಕರ್ಕಾಟಕ ರಾಶಿ :
ಈ ರಾಶಿಯವರಿಗೆ ಅಕ್ಟೋಬರ್ ಕೊನೆಯ ವಾರ ಶ್ರಮ ಹಾಗೂ ನಿಷ್ಠೆ ಯಾರಿಂದಲಾದರೂ ಬೆಳಕಿಗೆ ಬರುತ್ತದೆ. ಭೌತಿಕವಾಗಿ ನೀವು ಇಲ್ಲದೇ ಇದ್ದರೂ ನೀವು ಹಾಕಿಕೊಟ್ಟ ದಾರಿ ಸರಿಯಾಗಿರುವುದು. ಸಂಸ್ಥೆಗೆ ಕೊಡುವ ಕೊಡುಗೆ ಸ್ಮರಣೀಯವಾಗಲಿದೆ. ರತ್ನಗಳ ಮಾರಾಟದಲ್ಲಿ ನಷ್ಟ ಬರಲಿದೆ. ನಿಮ್ಮ ಅಧಿಕಾರವನ್ನು ಯಾರಾದರೂ ಬಳಸಿಕೊಳ್ಳುವಿರಿ.
ಸಿಂಹ ರಾಶಿ :
ರವಿಯ ಆಧಿಪತ್ಯದ ಈ ರಾಶಿಯವರಿಗೆ ಈ ವಾರ ನಿಮ್ಮ ನಾಯಕತ್ವ ಕೌಶಲವನ್ನು ಅಗತ್ಯ ಸಂದರ್ಭದಲ್ಲಿ ತೋರಿಸುವಿರಿ. ಉದ್ಯಮದ ಕೌಶಲಕ್ಕೆ ವಿದೇಶಕ್ಕೆ ಹೋಗಬೇಕಾಗುವುದು. ವಹಿವಾಟು ಹೆಚ್ಚಿಸಲು ಕೆಲವು ಆಪರ್ ಗಳನ್ನು ಕೊಡುವಿರಿ. ಅಂತರ್ಜಾಲೀಯ ಮಾರುಕಟ್ಟೆಗೆಯು ಅರ್ಥಮಾಡಿಕೊಳ್ಳುವುದು ಕಷ್ಟ. ನಿಮ್ಮ ಧೋರಣೆಯನ್ನು ಬಿಡಲಾರಿರಿ. ಸೃಜನಾತ್ಮಕತೆಯಿಂದ ಸ್ಥಾನ ಉಳಿಯುವುದು.
ಕನ್ಯಾ ರಾಶಿ :
ಈ ರಾಶಿಯವರಿಗೆ ಕೊನೆಯ ವಾರದಲ್ಲಿ ಉದ್ಯೋಗದ ಗಹನ ವಿಚಾರಗಳು ಅರಿವಿಗೆ ಬರಲಿದೆ. ರಿಪೇರಿ ಮೊದಲಾದ ದುರಸ್ತಿ ಕಾರ್ಯಗಳನ್ನು ಮಾಡುವವರಿಗೆ ಒತ್ತಡ ಮತ್ತು ಮಾನಸಿಕ ದಣಿವು ಹೆಚ್ಚಾಗಬಹುದು, ಆದರೆ ನಿಮ್ಮ ಶಿಸ್ತಿನಿಂದ ಎಲ್ಲವೂ ಸುಗಮವಾಗುತ್ತದೆ. ಹಿರಿಯರಿಂದ ಉಪದೇಶ ಅಥವಾ ಮಾರ್ಗದರ್ಶನ ಬೇಕೆನಿಸುವುದು. ಹಣೆಗಾರಿಕೆಯ ಯೋಜನೆಗಳನ್ನು ಪೂರೈಸಿದರೆ ಫಲಪ್ರಾಪ್ತಿ.
ತುಲಾ ರಾಶಿ :
ಏಳನೇ ರಾಶಿಯವರಿಗೆ ಈ ವಾರ ಕಲಾತ್ಮಕತೆಗೆ ಅವಕಾಶವಿರಲಿದ್ದು ಸರಿಯಾಗಿ ಬಳಕೆಮಾಡಿಕೊಳ್ಳಬಹುದು. ನಿಮ್ಮ ಕ್ರಿಯಾತ್ಮಕತೆ ಸಾಮಾಜಿಕ ಪ್ರಶಂಸೆ ಪಡೆಯಲಿದೆ. ಆಹಾರ ವಿತರಣೆ ಮಾಡುವವರಿಗೆ ಬೇಡಿಕೆ ಅಧಿಕ. ಬಾಡಿಗೆ ವಾಹನ ಓಡಿಸುವವರಿಗೆ ಒಂದಾದಮೇಲೊಂದು ಕಾರ್ಯ ಸಿಗುತ್ತ ಹೋಗುವುದು. ದೇಹಾಯಸವೂ ಗೊತ್ತಿರಲಿ. ದುಡಿಮೆಯೇ ಜೀವನವಲ್ಲ.
ವೃಶ್ಚಿಕ ರಾಶಿ :
ಕುಜನ ಆಧಿಪತ್ಯದ ಈ ರಾಶಿಯವರಿಗೆ ಮಾಡುತ್ತಿರುವ ಕಾರ್ಯದಲ್ಲಿ ಏನಾದರೂ ಬದಲಾವಣೆಗಳ ಬೇಕೆನಿಸುವುದು. ತಂಡದೊಂದಿಗೆ ಕೆಲಸ ಮಾಡುವ ಉತ್ಸಾಹ ಹೆಚ್ಚು. ಆತ್ಮವು ಎಲ್ಲದಕ್ಕಿಂತ ಗಟ್ಟಿ ಇರುವಾಗ ಭಯಪಡುವ ಅವಶ್ಯಕತೆ ಬರದು. ಅಪರೂಪಕ್ಕೆ ಸಿಗುವ ಮರಗೆಲಸದಿಂದ ಸಣ್ಣ ಸಂಪಾದನೆಯಾಗಲಿದೆ. ಓಡಾಟ ಹೆಚ್ಚು ವ್ಯಾಪಾರ ಕಡಿಮೆ ಎನಿಸುವುದು.
ಧನು ರಾಶಿ :
ಹತ್ತನೇ ರಾಶಿಯವರಿಗೆ ಈ ವಾರ ಬರವಣಿಕೆಯ ಸಾಮಗ್ರಿ ಮಾರಾಟಗಾರರಿಗೆ ಲಾಭ. ಕುಳಿತು ಮಾಡುವ ಕೆಲಸ ಈ ವಾರದಂದು ಲಾಭವಾಗದು. ಪದೋನ್ನತಿಗಾಗಿ ನೀವು ಸಾಹಸ ಕಾರ್ಯಗಳನ್ನು ಮಾಡುವಿರಿ. ಸರ್ಕಾರಿ ಉದ್ಯೋಗದ ಕನಸು ದೃಢವಾಗಲಿದರ. ಈ ವಾರ ನೀವು ಹಾಕಿಕೊಂಡ ಗುರಿಯನ್ನು ತಲುಪುವಿರಿ.
ಇದನ್ನೂ ಓದಿ: ಈ ರಾಶಿಯವರಿಗೆ ಪ್ರೇಮ ಸಂಬಂಧದಲ್ಲಿ ಎದುರಾಗಲಿದೆ ಸವಾಲುಗಳು
ಮಕರ ರಾಶಿ :
ಈ ವಾರ ನಿಮಗೆ ಬೌದ್ಧಿಕ ಸ್ಥಿರತೆ ಮತ್ತು ಗೌರವ ತಂದುಕೊಡಲಿದೆ. ಉದ್ಯಮವನ್ನು ಇರುವಲ್ಲಿಯೇ ವಿಸ್ತರಿಸಬಹುದು ಅಥವಾ ಹೊರಗೂ ಅದನ್ನು ಬೆಳೆಸಬಹುದು. ನೀವು ಶೋಧಿಸಿದ, ತಯಾರಿಸಿದ ವಸ್ತುಗಳಿಗೆ ಬೇಡಿಕೆ ಬರಲಿದೆ. ವಸ್ತ್ರವಿನ್ಯಾಸಕ್ಕೆ ಜನರನ್ನು ನೇಮಕ ಮಾಡಿಕೊಳ್ಳುವಷ್ಟು ಅಭಿವೃದ್ಧಿ ಆಗಲಿದೆ.
ಕುಂಭ ರಾಶಿ :
ಶನಿಯ ಆಧಿಪತ್ಯದ ಈ ರಾಶಿಗೆ ಈ ರಾಶಿಯವರಿಗೆ ಸೃಜನಶೀಲ ಆಲೋಚನೆಗಳು ಆಕರ್ಷಕವಾಗಿ ಇರಲಾರದು. ಗ್ರಾಮೀಣ ಭಾಗದ ಉದ್ಯಮಕ್ಕೆ ಲಾಭವಾಗಲಿದೆ. ತರಬೇತಿ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ. ಯಂತ್ರವನ್ನು ಬಳಸಿಕೊಂಡು ಮಾಡುವ ಕೆಲಸ ತಾತ್ಕಾಲಿಕ ಸ್ಥಗಿತವಾಗಲಿದೆ. ಕಾರ್ಯಕ್ರಮದ ಪೂರ್ವತಯಾರಿಯು ನಿಮ್ಮ ನೇತೃತ್ವದಲ್ಲಿ ಆಗುವುದು.
ಮೀನ ರಾಶಿ :
ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಕರ್ಮದ ಫಲಗಳು ಸ್ಪಷ್ಟವಾಗಿ ಗೊತ್ತಾಗಲಿದೆ. ನೀವು ಶ್ರಮಕ್ಕೆ ಪ್ರಶಂಸೆ ಅಪೇಕ್ಷಿಸಲಾರಿರಿ. ಉದ್ಯಮಕ್ಕಾಗಿ ಕೆಲವರ ಬಳಿ ಸಾಲ ಮಾಡಬೇಕಾಗುವುದು. ದ್ರವ ಉದ್ಯಮಕ್ಕೆ ಉತ್ತೇಜನ ಸಿಗುವುದು. ಧಾರ್ಮಿಕ ಕಾರ್ಯಗಳಿಂದ ಆದಾಯದ ವರ್ಧಿಸಲಿದೆ. ಬಾಡಿಗೆ ವಸ್ತುಗಳನ್ನು ಇಟ್ಟುಕೊಂಡು ನೆಮ್ಮದಿಯ ಜೀವನ ನಡೆಸುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Sat, 25 October 25
