AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಈ ರಾಶಿಯವರಿಗೆ ಪ್ರೇಮ ಸಂಬಂಧದಲ್ಲಿ ಎದುರಾಗಲಿದೆ ಸವಾಲುಗಳು

ಅಕ್ಟೋಬರ್ 26 ರಿಂದ ನವೆಂಬರ್ 1 ರ ವರೆಗಿನ ವಾರದ ಪ್ರೇಮ ರಾಶಿ ಭವಿಷ್ಯ ಇಲ್ಲಿದೆ. ಈ ವಾರ ಪ್ರೀತಿಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಗ್ರಹಗಳ ಸ್ಥಿತಿ ಪ್ರೇಮಕ್ಕೆ ಅನಾನುಕೂಲಕರವಾಗಿದ್ದು, ದುಡುಕುವ ನಿರ್ಧಾರಗಳಿಂದ ಪಶ್ಚಾತ್ತಾಪ ಪಡಬಹುದು. ಪ್ರತಿ ರಾಶಿಯ ಪ್ರೀತಿ, ಸಂಬಂಧಗಳು ಹೇಗೆ ಸಾಗಲಿವೆ, ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

Weekly Love Horoscope: ಈ ರಾಶಿಯವರಿಗೆ ಪ್ರೇಮ ಸಂಬಂಧದಲ್ಲಿ ಎದುರಾಗಲಿದೆ ಸವಾಲುಗಳು
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on:Oct 23, 2025 | 2:46 PM

Share

ಅಕ್ಟೋಬರ್ 26 ರಿಂದ ನವೆಂಬರ್ 1 ವರೆಗೆ ಪ್ರೀತಿಯ ವಿಚಾರದಲ್ಲಿ (Love Predictions) ಸರಿಯಾಗಿ ನಡೆದುಕೊಳ್ಳುವುದು ಸಾಧ್ಯವಾಗದು. ಅದನ್ನು ಒಪ್ಪಿಕೊಳ್ಳುವುದೂ ಮುಖ್ಯವೇ. ಮನೋನಿಗ್ರಹವೂ ನಿಮ್ಮ ಮಾನಸಿಕ ದೃಢತೆಯನ್ನು ಹೇಳುತ್ತದೆ. ಗ್ರಹಗಳು ಸದ್ಯ ಪ್ರೇಮ ವಿಷಯಕ್ಕೆ ಅನನುಕೂಲವಾಗಿವೆ. ಅನ್ಯರ ಪ್ರೇರಣೆಯಿಂದ ದುಡುಕಿ ಪಶ್ಚಾತ್ತಾಪ ಪಡಬೇಕಾಗುವುದು.

ಮೇಷ ರಾಶಿ :

ಅಕ್ಟೋಬರ್ ತಿಂಗಳ ಈ ವಾರ ನಿಮ್ಮ ಪ್ರೇಮಜೀವನ ಬಹಳ ಉತ್ಸಾಹದಿಂದ ಇರಲಿದೆ. ಸಂಗಾತಿಯೊಂದಿಗೆ ಕಳೆದ ಸಮಯ ಸಂತೋಷಕರವಾಗಿರುತ್ತದೆ. ಈ ವಾರ ಮನಸ್ಸಿನ ಮಾತುಗಳನ್ನು ನೇರವಾಗಿ ಹೇಳುವ ಧೈರ್ಯ ತೋರುವಿರಿ. ಸಿಂಗಲ್ ಆಗಿರುವವರು ಇಷ್ಟವಾದ ವ್ಯಕ್ತಿತ್ವಕ್ಕೆ ಆಕರ್ಷಿತರಾಗುವರು. ಆದರೆ ತುರ್ತು ನಿರ್ಧಾರವನ್ನು ಪ್ರಕಟಿಸುವುದು ಬೇಡ. ಪರಸ್ಪರ ಅರ್ಥಮಾಡಿಕೊಳ್ಳುವುದು ಮೊದಲಾಗಲಿ.

ವೃಷಭ ರಾಶಿ :

ಈ ತಿಂಗಳ‌ ಕೊನೆಯ ವಾರದಲ್ಲಿ ನಿಮ್ಮ ಪ್ರೇಮ ಸ್ಥಿರತೆಯ ಕಡೆ ಬರುವಂತೆ ಮಾಡಿ. ಕೆಲವು ಪರೀಕ್ಷೆಗಳೂ ಅವಶ್ಯಕ‌‌. ಕಳೆದ ದಿನಗಳಲ್ಲಿ ಉಂಟಾದ ಸಣ್ಣ ತೊಂದರೆಗಳನ್ನು ಹಲವು ಪ್ರಯತ್ನಗಳಿಂದ ಸರಿ ಮಾಡಿಕೊಳ್ಳಬಹುದು. ಸಂಗಾತಿಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚುವಂತೆ ನೋಡಿಕೊಳ್ಳಿ. ಪ್ರೀತಿಯಲ್ಲಿ ಸಹನೆ ತೋರಿಸಿದರೆ, ಸಂಬಂಧ ಗಟ್ಟಿಯಾಗುತ್ತದೆ. ಮನಸ್ಸಿನ ಒತ್ತಡವನ್ನು ಹಂಚಿಕೊಳ್ಳಲು ಸಾಧ್ಯ.

ಮಿಥುನ ರಾಶಿ :

ಮೂರನೇ ರಾಶಿಯವರಿಗೆ ಈ ವಾರ ಪ್ರೀತಿಯಿಂದ ಸಂವಹನ ಮಾಡುವ ಕ್ರಮ ಗೊತ್ತಿರದು. ಎರಡೆರಡು ಅರ್ಥ ಬರುವ ಸಂಗಾತಿಯ ಮಾತುಗಳನ್ನು ಸರಿಯಾಗಿ ತಿಳಿಯಲು ಆಗದು. ಸಣ್ಣ ವಿಷಯಕ್ಕೇ ಚರ್ಚೆ ಉಗ್ರವಾದ ರೂಪ ಪಡೆಯುವ ಸಾಧ್ಯತೆ ಇದೆ. ಆದರೆ ನೀವು ನಿಶ್ಚಲವಾಗಿ, ಲಘುವಾಗಿ ಸ್ವೀಕರಿಸಿದರೇ ಸುಲಭವಾಗಿ ಸರಿಯಾಗುತ್ತದೆ. ಸಂಗಾತಿಗೆ ಇದು ಗೊತ್ತಾಗಬಾರದು. ಅವಿವಾಹಿತರಿಗೆ ಸಾಮಾಜಿಕ ಸಂಪರ್ಕದಿಂದ ಹೊಸ ವ್ಯಕ್ತಿಯ ಪರಿಚಯ.

ಕರ್ಕಾಟಕ ರಾಶಿ :

ಚಂದ್ರನ ಆಧಿಪತ್ಯದ ಈ ರಾಶಿಯವರಿಗೆ ಕೊನೆಯ ವಾರ ಪ್ರೇಮ ಭಾವನೆಗಳು ಹೆಚ್ಚಾಗುವುದು. ಸಂಗಾತಿಯ ಪ್ರೀತಿ ನಿಮಗೆ ಭರವಸೆಯನ್ನೂ ನೀಡುತ್ತದೆ. ನಿಮ್ಮ ಮನಸ್ಸಿನಲ್ಲಿ ಇರೋ ಕಾಳಜಿ ಅಥವಾ ಹಿಂಜರಿಕೆಗೆ ತೆರ ಬೀಳುವುದು. ಹಳೆಯ ಕಠಿಣ ಘಟನೆಗಳು ಸಡಿಲಗೊಳ್ಳುತ್ತವೆ. ಅವಿವಾಹಿತರಾದ ಕಾರಣಕ್ಕೆ ಸ್ನೇಹಿತರಿಂದಲೂ ದೂರಾಗುವ ಸಾಧ್ಯತೆ ಇದೆ.

ಸಿಂಹ ರಾಶಿ :

ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ವಾರ ಪ್ರೀತಿಯು ಕಹಿಯಾದ ಅನುಭವ ನೀಡುವುದು. ಶುಕ್ರನು ದ್ವಿತೀಯದಲ್ಲಿ ನೀಚಸ್ಥಾನದಲ್ಲಿ ಇರುವ ಕಾರಣ ಪ್ರೇಮ ಭಾವ ಇದ್ದರೂ ಅದನ್ನು ವ್ಯಕ್ತಿಪೆಡಿಸಲು ಆಗದು. ಸಂಗಾತಿಯು ನಿಮ್ಮ ಪ್ರಾಮಾಣಿಕ ಕಾಳಜಿಯಿಂದ ಸಂತೋಷ ಪಡುತ್ತಾರೆ. ಪ್ರೀತಿಯಲ್ಲಿ ಮಾನಸಿಕ ಆಘಾತಗಳು ಆತಂಕ ತರುವುದು. ವಿಶೇಷ ಉಡುಗೊರೆ ಅಥವಾ ಸಂದೇಶಗಳು ಬರಬಹುದು. ಒಂದು ಕಡೆ ಪ್ರೀತಿಯಲ್ಲಿ ಇರಬೇಕಾಗುವುದು.

ಇದನ್ನೂ ಓದಿ: ಚಿನ್ನದ ಉಂಗುರ ಯಾವ ಬೆರಳಿಗೆ ಧರಿಸುವುದರಿಂದ ಏನು ಲಾಭ?

ಕನ್ಯಾ ರಾಶಿ :

ಬುಧಾಧಿಪತ್ಯದ ಈ ರಾಶಿಯವರು ಪ್ರೀತಿಯಲ್ಲಿ ಸ್ವಲ್ಪ ಸಂಕೋಚ ಸ್ವಭಾವವನ್ನು ಇಟ್ಟುಕೊಳ್ಳುವರು. ಆದರೆ ಸಂಗಾತಿಯ ಇತರ ವಿಷಯಗಳನ್ನು ಹಂಚಿಕೊಳ್ಳಲು ನಿರ್ಬಂಧವಿರದು. ಪ್ರೇಯಸಿಯ ಮೌನ ನಿಮಗೆ ದಿಗಿಲನ್ನು ತಂದೀತು. ಉದ್ಯೋಗದ ಒತ್ತಡವಿರುವ ಕಾರಣ ಈ ವಾರ ಜೊತೆಯಾಗಿ ಸುತ್ತಾಡುವುದು ಕಷ್ಟ. ಒಳ ಮನಸ್ಸನ್ನು ಅರಿಯಲಾಗದು.

ತುಲಾ ರಾಶಿ :

ಈ ರಾಶಿಯವರಿಗೆ ಈ ತಿಂಗಳ ಕೊನೆಯ ವಾರ ಪ್ರೀತಿಯನ್ನು ನಿಭಾಯಿಸುವುದು ಸಾಧ್ಯವಾಗದು. ಯಾವುದು ಪ್ರಾಮುಖ್ಯ ಎನ್ನುವ ಚಿಂತೆ ಕಾಡುವುದು. ಪ್ರೇಯಸಿಯ ಅಗತ್ಯವನ್ನು ಪೂರ್ಣವಾಗಿ ಪೂರೈಸಲಾಗದು. ಬೇರೆ ಕಡೆ ತೋರಿಸಿದ ಅಹಂಕಾರವನ್ನು ಪ್ರೇಯಸಿಗೆ ತೋರಿಸಲಾಗದು. ಕೆಲವನ್ನು ಮರೆಯುವುದು ಪ್ರೀತಿಯ ದೃಢತೆಗೆ ಕಾರಣ.

ವೃಶ್ಚಿಕ ರಾಶಿ :

ಕುಜನ ಆಧಿಪತ್ಯದ ಈ ರಾಶಿಯವರಿಗೆ ಹಳೆಯ ಪ್ರೇಮ ಮತ್ತೆ ನಿಮ್ಮ ಜೀವನಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ವಿಪರೀತ, ಅಸಹನೆ ಹೆಚ್ಚಾಗುವುದು. ಹಳೆಯ ತಪ್ಪುಗಳನ್ನು ಪುನಃ ಆಗದಂತೆ ನೋಡಿಕೊಳ್ಳಿ. ಇರುವ ಸಂಗಾತಿಯೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳಿ. ಪ್ರೇಮ ಪ್ರಾರಂಭವಾದರೆ ಅದು ನಿಧಾನವಾಗಿ ಗಂಭೀರವಾಗುವುದು. ಬಾಗುವುದನ್ನು ಅಧಿಕವಾಗಿ ರೂಢಿಸಿಕೊಳ್ಳುವುದು ಬೇಡ.

ಧನು ರಾಶಿ :

ಅಕ್ಟೋಬರ್ ತಿಂಗಳ ಕೊನೆಯ ವಾರ ಈ ರಾಶಿಯವರಿಗೆ ಸಂಗಾತಿ ಅಥವಾ ಪ್ರೇಯಸಿಯ ಜೊತೆ ಇರಲಾಗದು. ಪ್ರೇಯಸಿಯ ವರ್ತನೆಯ ಬಗ್ಗೆ ಹಲವಾರು ಗೊಂದಲಗಳು ಏಕಕಾಲಕ್ಕೆ ಬಂದರೆ ಕೆಲವು ಸಮಯ ಸುಮ್ಮನಿದ್ದುಬಿಡಿ. ತಾನಾಗಿಯೇ ಸ್ಫುರಿಸುವುದನ್ನು ಮಾತ್ರ ಒಪ್ಪಿಕೊಳ್ಳಿ. ಒಂದು ನಿಶ್ಚಯ ಆದ ಮೇಲೆ ಮತ್ತೆ ಇಬ್ಬಗೆಗೆ ಅಸ್ಪದ ಬೇಡ.

ಮಕರ ರಾಶಿ :

ಹತ್ತನೇ ರಾಶಿಗೆ ಈ ವಾರ ಸಂಬಂಧದಲ್ಲಿ ಸ್ಥಿರತೆ ಮತ್ತು ನಂಬಿಕೆ ಬೆಳೆಯಲಿದೆ. ಸಂಗಾತಿಯು ನಿಮ್ಮ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವರು. ಯಾರಿಗೂ ಗೊತ್ತಾಗದಂತೆ ದೂರ ಪ್ರಯಾಣ ಮಾಡುವಿರಿ. ಸುಖ ದುಃಖಗಳನ್ನು ಹೇಳಿಕೊಳ್ಳುವಷ್ಟು ಆಪ್ತತೆ ಇರದು. ಪ್ರವಾಸದಲ್ಲಿ ಮೈ ಮರೆಯು ಸಾಧ್ಯತೆ ಹೆಚ್ಚು.

ಕುಂಭ ರಾಶಿ :

ಶನಿಯ ಆಧಿಪತ್ಯದ ಈ ರಾಶಿಗೆ ಭಾವನಾತ್ಮಕ ಸ್ಪಷ್ಟತೆ ಈ ವಾರ ಅತಿ ಮುಖ್ಯ. ಸಂಗಾತಿಯ ಮನಸ್ಸು ಸ್ವಲ್ಪ ಅಸ್ಥಿರವಾದರೂ ಅದನ್ನು ಬೀಳದೇ ಇರುವಂತೆ ಕಾಯ್ದುಕೊಳ್ಳಬಹುದು. ಆದರೆ ನೀವು ತೋರಿಸುವುದು ಮುಖ್ಯ. ಪ್ರೀತಿಯ ವಿಚಾರದಲ್ಲಿ ಟೀಕೆಗಳು ಬರಬಹುದು. ಅದನ್ನು ಬಾಲಿಶವಾಗಿ ಕಂಡು ಬಿಟ್ಟು ಬಿಡುವಿರಿ.

ಮೀನ ರಾಶಿ :

ಈ ವಾರ ನಿಮಗೆ ಶುಕ್ರನು ನೀಚನಾಗಿ ದೃಷ್ಟಿ ಇಟ್ಟ ಕಾರಣ ಪ್ರೀತಿಯು ಅನನುಕೂಲ ಸ್ಥಿತಿ ತಲುಪುವುದು. ಮಾತಿನಲ್ಲಿ ಅಥವಾ ಕೃತಿಯಲ್ಲಿ ಪ್ರೇಮವನ್ನು ಹೇಳುವ ಅಪೇಕ್ಷೆ ಇದ್ದರೂ ಅದು ಆಗದು. ಅಪಾರ್ಥವೂ ಆಗಲಿದೆ. ನಾಯಕತ್ವದ ಗುಣವನ್ನು ತೋರಿಸಲು ಇಷ್ಟವಾಗುವುದು. ಒರಟು ಮಾತು ಪ್ರೇಯಸಿಗೆ ದುಃಖ ಕೊಡುವುದು. ಸಿಟ್ಟಿನಿಂದ ಪ್ರಮಾಣವನ್ನು ಮಾಡಿ ಅನಂತರ ಆತಂಕಗೊಳ್ಳುವಿರಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Thu, 23 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ