
ಮೇ 31ರಿಂದ ಜೂನ್ 06ರವರೆಗಿನ ಮೊದಲ ವಾರದಲ್ಲಿ ಉದ್ಯೋಗ ಅವಕಾಶಗಳು ಬರಲಿದ್ದು, ಅದನ್ನು ದೂರಸರಿಸದೇ ಅನುಭವಕ್ಕಾಗಿ ಸೇರಿಕೊಳ್ಳುವುದು ಸೂಕ್ತ. ನಿಮ್ಮ ಮಾರ್ಗವನ್ನು ತಪ್ಪಿಸಲು ಹಲವರು ಪ್ರಯತ್ನಶೀಲರಾದರೂ ಅದನ್ನು ಮೀರುವ ಸಾಮರ್ಥ್ಯ ಬೇಕಾಗಲಿದೆ. ಉದ್ಯಮವನ್ನು ಯಶಸ್ಸನ್ನು ಕಾಣಲಿ.
ಮೇಷ ರಾಶಿ :
ನಿಮ್ಮ ರಾಶಿಯಲ್ಲಿ ಮಂಗಳನಿರುವುದರಿಂದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ದಕ್ಷತೆಗೆ ಮೆಚ್ಚುಗೆ ದೊರೆಯುತ್ತದೆ. ಆದರೆ, ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಆತುರ ಅಥವಾ ಸಿಟ್ಟಿನ ನಿರ್ಧಾರಗಳು ಬೇಡ, ತಾಳ್ಮೆ ಇರಲಿ.
ವೃಷಭ ರಾಶಿ :
ರಾಶಿಯಲ್ಲಿ ಸೂರ್ಯನಿರುವುದರಿಂದ ಸರ್ಕಾರಿ ವಲಯದ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಆದರೆ ಅಹಂಕಾರದ ನಡವಳಿಕೆಯಿಂದ ದೂರವಿರಿ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಉತ್ತಮ ಅವಕಾಶಗಳು ಕೈಸೇರಲಿವೆ.
ಮಿಥುನ ರಾಶಿ :
ಬುಧ ಮತ್ತು ಶುಕ್ರರು ನಿಮ್ಮ ರಾಶಿಯಲ್ಲಿರುವುದರಿಂದ ಬುದ್ಧಿವಂತಿಕೆಯಿಂದ ಕಾರ್ಯ ಸಾಧಿಸುವಿರಿ. ವ್ಯಾಪಾರ ಮತ್ತು ಕಲಾ ರಂಗದಲ್ಲಿರುವವರಿಗೆ ಅತ್ಯುತ್ತಮ ಲಾಭವಿದೆ. ನಿಮ್ಮ ಸಂಪರ್ಕ ಕೌಶಲ್ಯದಿಂದ ಉದ್ಯೋಗದಲ್ಲಿ ಹೊಸ ಒಪ್ಪಂದಗಳನ್ನು ಪಡೆದುಕೊಳ್ಳುವಿರಿ.
ಕರ್ಕಾಟಕ ರಾಶಿ :
ಗುರು ಉಚ್ಛಸ್ಥಿತಿಯಲ್ಲಿರುವುದರಿಂದ ಉದ್ಯೋಗದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಉನ್ನತ ಸ್ಥಾನ ಅಥವಾ ಸಂಬಳ ಹೆಚ್ಚಳದ ಸುದ್ದಿ ಕೇಳುವಿರಿ. ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರ ವಾತಾವರಣವಿರಲಿದ್ದು, ಗೌರವ ವೃದ್ಧಿಸಲಿದೆ.
ಸಿಂಹ ರಾಶಿ :
ರಾಶಿಯಲ್ಲಿ ಕೇತು ಇರುವುದರಿಂದ ಕೆಲಸದಲ್ಲಿ ಕೆಲವು ಗೊಂದಲಗಳು ಅಥವಾ ತೃಪ್ತಿಯಿಲ್ಲದ ಭಾವನೆ ಮೂಡಬಹುದು. ಸಹೋದ್ಯೋಗಿಗಳ ರಾಜಕೀಯಕ್ಕೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸದ ಮೇಲೆ ಮಾತ್ರ ಗಮನವಿಟ್ಟರೆ ವಾರಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ.
ಕನ್ಯಾ ರಾಶಿ :
ಉದ್ಯೋಗದಲ್ಲಿ ಈ ವಾರ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಜಾಗರೂಕರಾಗಿರಿ. ವೃತ್ತಿಜೀವನದಲ್ಲಿ ಸಣ್ಣ ಬದಲಾವಣೆಗಳನ್ನು ನಿರೀಕ್ಷಿಸಬಹುದು, ಹಿರಿಯರ ಮಾರ್ಗದರ್ಶನ ನಿಮಗೆ ಧನಾತ್ಮಕ ದಾರಿ ತೋರಿಸುತ್ತದೆ.
ತುಲಾ ರಾಶಿ :
ವೃತ್ತಿರಂಗದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ನಿಮ್ಮ ಕ್ರಿಯಾಶೀಲತೆಗೆ ತಕ್ಕ ಮನ್ನಣೆ ದೊರೆಯಲಿದ್ದು, ಹೊಸ ಆಫರ್‌ಗಳು ಬರಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ದೀರ್ಘಾವಧಿಯ ಹೂಡಿಕೆಗಳಿಗೆ ಈ ವಾರ ಅತ್ಯಂತ ಸೂಕ್ತವಾಗಿದೆ.
ವೃಶ್ಚಿಕ ರಾಶಿ :
ಕೆಲಸದ ಒತ್ತಡ ಹೆಚ್ಚಾಗಿದ್ದರೂ ನಿಮ್ಮ ಕಾರ್ಯದಕ್ಷತೆಯಿಂದ ಎಲ್ಲವನ್ನೂ ನಿಭಾಯಿಸುವಿರಿ. ಕಚೇರಿಯಲ್ಲಿ ರಹಸ್ಯ ಶತ್ರುಗಳ ಬಗ್ಗೆ ಎಚ್ಚರವಿರಲಿ. ಸಹನೆ ಕಳೆದುಕೊಳ್ಳದೆ ಕೆಲಸ ಮಾಡಿದರೆ, ಮೇಲಧಿಕಾರಿಗಳು ನಿಮ್ಮ ಪರಿಶ್ರಮವನ್ನು ಗುರುತಿಸಿ ಪುರಸ್ಕರಿಸುತ್ತಾರೆ.
ಧನು ರಾಶಿ :
ಈ ವಾರ ಬಲದಿಂದ ಉದ್ಯೋಗದಲ್ಲಿ ನಾಯಕತ್ವದ ಗುಣಗಳು ಹೊರಹೊಮ್ಮಲಿವೆ. ಹೊಸ ಉದ್ಯಮ ಆರಂಭಿಸಲು ಯೋಚಿಸುತ್ತಿದ್ದರೆ ಈ ವಾರ ಶುಭಪ್ರದವಾಗಿದೆ. ಉದ್ಯೋಗಿಗಳಿಗೆ ಅಪೇಕ್ಷಿತ ವರ್ಗಾವಣೆ ಅಥವಾ ಹೊಸ ಹುದ್ದೆ ಸಿಗುವ ಯೋಗವಿದೆ.
ಮಕರ ರಾಶಿ :
ಉದ್ಯೋಗ ಕ್ಷೇತ್ರದಲ್ಲಿ ಹಠಾತ್ ಸವಾಲುಗಳು ಎದುರಾಗಬಹುದು. ಕೆಲಸದಲ್ಲಿ ಯಾವುದೇ ಶಾರ್ಟ್‌ಕಟ್ ಬಳಸಬೇಡಿ. ದಾಖಲೆಗಳಿಗೆ ಸಹಿ ಮಾಡುವ ಮುನ್ನ ಎಚ್ಚರವಿರಲಿ. ಸಹೋದ್ಯೋಗಿಗಳೊಂದಿಗೆ ವಾದ ಮಾಡದೆ, ಶಾಂತವಾಗಿ ಕಾರ್ಯ ನಿರ್ವಹಿಸುವುದು ಪ್ರಗತಿಗೆ ಪೂರಕ.
ಕುಂಭ ರಾಶಿ :
ರಾಶಿಯಲ್ಲಿ ಚಂದ್ರ ಮತ್ತು ರಾಹು ಇರುವುದರಿಂದ ಕೆಲಸದ ಜಾಗದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಭ್ರಮೆಯ ಆಧಾರದ ಮೇಲೆ ಕೆಲಸ ಬಿಡುವ ನಿರ್ಧಾರ ಬೇಡ. ಸ್ಥಿರತೆಯಿಂದ ಕಾರ್ಯನಿರ್ವಹಿಸಿದರೆ ವಾರದ ಕೊನೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಇದನ್ನೂ ಓದಿ: ಮಾಸ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಜೂನ್ ತಿಂಗಳ ಭವಿಷ್ಯ ಇಲ್ಲಿ ತಿಳಿಯಿರಿ
ಮೀನ ರಾಶಿ :
ನಿಮ್ಮ ರಾಶಿಯಲ್ಲಿ ಶನಿ ಇರುವುದರಿಂದ ಉದ್ಯೋಗದಲ್ಲಿ ಜವಾಬ್ದಾರಿಗಳು ಮತ್ತು ಶ್ರಮ ಹೆಚ್ಚಾಗಲಿದೆ. ಶಿಸ್ತು ಮತ್ತು ಸಮಯ ಪಾಲನೆ ನಿಮಗೆ ಯಶಸ್ಸು ತರಲಿದೆ. ನಿಧಾನಗತಿಯಲ್ಲಾದರೂ ನಿಮ್ಮ ವೃತ್ತಿಜೀವನದಲ್ಲಿ ಸ್ಥಿರವಾದ ಪ್ರಗತಿ ಮತ್ತು ಆರ್ಥಿಕ ಭದ್ರತೆ ಕಂಡುಬರಲಿದೆ.
– ಲೋಹಿತ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ