
ನವೆಂಬರ್ ೮ರಿಂದ ೧೪ರವರೆಗಡ ಬುಧ ತುಲಾದಲ್ಲಿ ವಕ್ರಿ, ರಾಹು ಕುಂಭದಲ್ಲಿ, ಕೇತು ಸಿಂಹದಲ್ಲಿ, ಶನಿ ಮೀನದಲ್ಲಿ. ವಕ್ರಿ ಶುಕ್ರ ಮತ್ತು ವಕ್ರಿ ಬುಧರ ಕಾರಣ ಹಳೆಯ ಸಂಬಂಧ, ಹಳೆಯ ಮಾತು ಮತ್ತು ಹಳೆಯ ಪರಿಚಯಗಳು ಮತ್ತೆ ಮುನ್ನೆಲೆಗೆ ಬರುತ್ತವೆ. ಹೊಸ ವಾಗ್ದಾನಕ್ಕಿಂತ ಹಳೆಯ ಗೊಂದಲ ಬಗೆಹರಿಸಲು ಈ ವಾರ ಉತ್ತಮ.
ಮೇಷ ರಾಶಿ :
ಸಪ್ತಮದಲ್ಲಿ ವಕ್ರಿ ಶುಕ್ರ ಇರುವುದರಿಂದ ಸಂಗಾತಿ ಜೊತೆ ಹಳೆಯ ವಿಷಯ ಮತ್ತೆ ಚರ್ಚೆಗೆ ಬರಬಹುದು. ಅವಿವಾಹಿತರಿಗೆ ಹಳೆಯ ಪರಿಚಿತರಿಂದ ಪ್ರಸ್ತಾಪ ಬರುವ ಸಾಧ್ಯತೆ. ಗುರು ಪಂಚಮದಲ್ಲಿ ಇರುವುದರಿಂದ ಪ್ರೇಮದಲ್ಲಿ ಮೂಲ ಸಂತೋಷ ಉಳಿಯುತ್ತದೆ. ಶುಕ್ರ ಷಷ್ಠಕ್ಕೆ ಹೋಗುವುದರಿಂದ ಸಣ್ಣ ವಿಷಯಕ್ಕೆ ವಾದ ಬರಬಹುದು, ಮಾತಿನಲ್ಲಿ ಮೃದುತ್ವ ಇರಲಿ.
ವೃಷಭ ರಾಶಿ :
ಷಷ್ಠದಲ್ಲಿ ಶುಕ್ರ ಇರುವುದರಿಂದ ಪ್ರೇಮ ಭಾವನೆ ಸ್ವಲ್ಪ ಮಂದ. ಸಂಗಾತಿಯ ಆರೋಗ್ಯ ಅಥವಾ ದೈನಂದಿನ ಕೆಲಸದ ವಿಷಯದಲ್ಲಿ ಅಸಮಾಧಾನ ಸಾಧ್ಯ. ಶುಕ್ರ ಪಂಚಮಕ್ಕೆ ಬಂದು ಮನಸ್ಸು ಹಗುರವಾಗಿ ಪ್ರೇಮ ಚಿಗುರುತ್ತದೆ. ಆದರೆ ಶುಕ್ರ ದುರ್ಬಲನಾಗಿರುವುದರಿಂದ ಹೆಚ್ಚಿನ ನಿರೀಕ್ಷೆ ಇಟ್ಟರೆ ನಿರಾಶೆಯಾಗಬಹುದು.
ಮಿಥುನ ರಾಶಿ :
ಪಂಚಮದಲ್ಲಿ ಶುಕ್ರ ಇರುವುದರಿಂದ ಪ್ರೇಮ ಸಂಬಂಧಗಳಿಗೆ ಈ ವಾರ ಅನುಕೂಲ. ಹಳೆಯ ಪ್ರೀತಿ ಮರಳುವ ಅಥವಾ ಹಳೆಯ ಸ್ನೇಹ ಪ್ರೀತಿಯಾಗುವ ಸಾಧ್ಯತೆ ಇದೆ. ಮಂಗಳ ತೃತೀಯಕ್ಕೆ ಬಂದು ಮನಸ್ಸಿನ ಮಾತು ಹೇಳುವ ಧೈರ್ಯ ನೀಡುತ್ತಾನೆ. ಶುಕ್ರ ಚತುರ್ಥಕ್ಕೆ ಹೋಗಿ ಮನೆಯವರ ಅಭಿಪ್ರಾಯ ಮುಖ್ಯವಾಗುತ್ತದೆ.
ಕರ್ಕಾಟಕ ರಾಶಿ :
ಗುರು ದ್ವಿತೀಯದಲ್ಲಿ ಇರುವುದರಿಂದ ಕುಟುಂಬ ಬೆಂಬಲ ಸಿಗುತ್ತದೆ, ವಿವಾಹದ ಮಾತುಕತೆ ಮುಂದುವರಿಯಬಹುದು. ಮಂಗಳ ನಿಮ್ಮ ರಾಶಿಯಲ್ಲೇ ದುರ್ಬಲನಾಗಿರುವುದರಿಂದ ಕೋಪ, ಅಸಹನೆ ಮತ್ತು ಮನಃಸ್ಥಿತಿ ಬದಲಾವಣೆ ಹೆಚ್ಚು. ಸಂಗಾತಿಯ ಜೊತೆ ವಾಗ್ವಾದ ಬೇಡ. ವಾತಾವರಣ ತಿಳಿಯಾಗುತ್ತದೆ.
ಸಿಂಹ ರಾಶಿ :
ಗುರು ನಿಮ್ಮ ರಾಶಿಯಿಂದ ಸಪ್ತಮ ನೋಟ ಬೀರುವುದರಿಂದ ವಿವಾಹ ಸಂಬಂಧಗಳಿಗೆ ಅನುಕೂಲ. ಆದರೆ ಕೇತುವಿನ ಪ್ರಭಾವದಿಂದ ಮನಸ್ಸು ಕೆಲವೊಮ್ಮೆ ದೂರ ಸರಿದಂತೆ ಅನಿಸಬಹುದು. ಮಂಗಳ ಬಂದು ಭಾವನೆಗಳು ತೀವ್ರವಾಗುತ್ತವೆ, ಅಹಂ ಬಿಟ್ಟು ಮಾತನಾಡಿದರೆ ಸಂಬಂಧ ಗಟ್ಟಿಯಾಗುತ್ತದೆ.
ಕನ್ಯಾ ರಾಶಿ :
ಶುಕ್ರ ನಿಮ್ಮ ರಾಶಿಯಲ್ಲಿ ನೀಚನಾಗುವುದರಿಂದ ಆತ್ಮವಿಶ್ವಾಸ ಕುಸಿತ, ಸಂಶಯ ಅಥವಾ ಭಾವನಾತ್ಮಕ ಅಂತರ ಬರಬಹುದು. ಗುರು ದ್ವಾದಶದಲ್ಲಿರುವುದರಿಂದ ಏಕಾಂತ ಬೇಕೆನಿಸುತ್ತದೆ. ಸಂಗಾತಿಗೆ ನಿಮ್ಮ ಮನಸ್ಥಿತಿ ತಿಳಿಸಿ, ಮೌನವಾಗಿ ಕೊರಗಬೇಡಿ.
ತುಲಾ ರಾಶಿ :
ಶುಕ್ರ ನಿಮ್ಮ ರಾಶಿಯಲ್ಲಿ ವಕ್ರಿಯಾಗಿರುವುದರಿಂದ ಹಳೆಯ ಸಂಬಂಧಗಳ ಬಗ್ಗೆ ಆಲೋಚನೆ ಹೆಚ್ಚು. ಗುರು ಲಾಭದಲ್ಲಿರುವುದರಿಂದ ಸ್ನೇಹಿತರ ಮೂಲಕ ಸಂತೋಷ ಮತ್ತು ಹೊಸ ಪರಿಚಯ ಸಾಧ್ಯ. ಯಾವುದೇ ಹೊಸ ಬದ್ಧತೆಯನ್ನು ತೀರ್ಮಾನಿಸುವುದು ಲೇಸು.
ವೃಶ್ಚಿಕ ರಾಶಿ :
ದ್ವಾದಶದಲ್ಲಿ ಶುಕ್ರ ಇರುವುದರಿಂದ ಗುಟ್ಟಿನ ಭಾವನೆ ಮತ್ತು ಒಂಟಿತನ ಹೆಚ್ಚು. ಖಾಸಗಿ ಸಮಯದಲ್ಲಿ ಮನಸ್ಸು ಹಗುರ. ಶುಕ್ರ ಲಾಭಕ್ಕೆ ಬಂದು ಹೊಸ ಪರಿಚಯ ಅಥವಾ ಹಳೆಯ ಸ್ನೇಹ ಪ್ರೀತಿಯ ರೂಪ ತಾಳಬಹುದು.
ಧನು ರಾಶಿ :
ಲಾಭದಲ್ಲಿ ಶುಕ್ರ, ನವಮದಲ್ಲಿ ಗುರು ಇರುವುದರಿಂದ ಸ್ನೇಹದಿಂದ ಪ್ರೇಮ ಬೆಳೆಯುವ ಸಾಧ್ಯತೆ. ಹಿರಿಯರ ಆಶೀರ್ವಾದದಿಂದ ವಿವಾಹ ಮಾತುಕತೆ ಸುಗಮ. ಶುಕ್ರ ದಶಮಕ್ಕೆ ಹೋಗುವುದರಿಂದ ಕೆಲಸದ ಒತ್ತಡದಿಂದ ಸಂಗಾತಿಗೆ ಸಮಯ ಕಡಿಮೆಯಾಗದಂತೆ ನೋಡಿಕೊಳ್ಳಿ.
ಮಕರ ರಾಶಿ :
ಶುಕ್ರ ದಶಮದಲ್ಲಿರುವುದರಿಂದ ಕೆಲಸದ ಸ್ಥಳದ ಪರಿಚಯ ಆಪ್ತವಾಗಬಹುದು. ಆದರೆ ಗುರು ಮತ್ತು ಮಂಗಳ ಅಷ್ಟಮ ಪ್ರಭಾವದಲ್ಲಿ ಇರುವುದರಿಂದ ಅನಗತ್ಯ ವಿವಾದ ಅಥವಾ ಗುಟ್ಟು ಬಯಲಾಗುವ ಸಾಧ್ಯತೆ. ಸಂಬಂಧದಲ್ಲಿ ಪಾರದರ್ಶಕತೆ ಇರಲಿ.
ಕುಂಭ ರಾಶಿ :
ಈ ವಾರದ ಅತ್ಯುತ್ತಮ ರಾಶಿಗಳಲ್ಲಿ ಒಂದು. ಗುರು ಸಪ್ತಮ ನೋಟ ಬೀರುವುದರಿಂದ ವಿವಾಹ ನಿಶ್ಚಯ, ಪ್ರಸ್ತಾಪ ಮತ್ತು ಸಂಗಾತಿಯೊಡನೆ ಹೊಂದಾಣಿಕೆಗೆ ಶುಭ. ರಾಹು ನಿಮ್ಮ ರಾಶಿಯಲ್ಲಿರುವುದರಿಂದ ಮನಸ್ಸು ಚಂಚಲ ಮತ್ತು ಮಾತಿನಲ್ಲಿ ಅತಿಶಯೋಕ್ತಿ ಬರಬಹುದು. ಭರವಸೆ ಕೊಡುವ ಮೊದಲು ಯೋಚಿಸಿ.
ಮೀನ ರಾಶಿ :
ಅಷ್ಟಮದಲ್ಲಿ ಶುಕ್ರ ಇರುವುದರಿಂದ ಭಾವನೆಗಳು ಆಳವಾಗಿ, ಕೆಲವೊಮ್ಮೆ ಗೊಂದಲವಾಗಿ ಇರುತ್ತವೆ. ಶುಕ್ರ ಸಪ್ತಮದಲ್ಲಿ ನೀಚನಾಗುವುದರಿಂದ ಸಂಗಾತಿಯೊಡನೆ ತಪ್ಪು ತಿಳುವಳಿಕೆ ಆಗಬಹುದು. ಶನಿ ನಿಮ್ಮ ರಾಶಿಯಲ್ಲಿರುವುದರಿಂದ ಸಂಬಂಧದ ಬೆಳವಣಿಗೆ ನಿಧಾನ, ಆದರೆ ಸ್ಥಿರ.
– ಲೋಹಿತ್ ಹೆಬ್ಬಾರ್