ದಿನ ಭವಿಷ್ಯ: ಇಂದು ಈ ರಾಶಿಯವರು ಅಪರಾಧವನ್ನು ಒಪ್ಪಿಕೊಳ್ಳುವರು
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ದ್ವಾದಶೀ ತಿಥಿಯ ಶನಿವಾರದಂದು ಅವಶ್ಯಕತೆಯ ಪೂರೈಕೆ, ಅನುಕರಣೆ, ನಿಶ್ಚಿಂತೆ, ಹಣಸಂಗ್ರಹ, ಸಾಲದಿಂದ ಹಿಂಸೆ, ವಿಶೇಷ ಆದರ, ಮಹತ್ತವಾಕಾಂಕ್ಷೇ, ವೇತನದ ಭಡ್ತಿ, ದೊಡ್ಡ ಕನಸು, ಆತ್ಮವಿಶ್ವಾಸ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ದ್ಬಾದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವೈಧೃತಿ, ಕರಣ : ಗರಜ ಸೂರ್ಯೋದಯ – 06 – 16 am, ಸೂರ್ಯಾಸ್ತ – 05 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:10 – 10:36, ಯಮಗಂಡ ಕಾಲ 13:30 – 14:57 ಗುಳಿಕ ಕಾಲ 06:16 – 07:43.
ಮೇಷ ರಾಶಿ: ಗೆಳತಿಯೊಬ್ಬಳಿಂದ ನಿಮ್ಮಆಸಕ್ತಿಯ ಕ್ಷೇತ್ರವು ಬದಲಾಗುವುದು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ಇನ್ನೊಬ್ಬರನ್ನು ಅನುಕರಣೆ ಮಾಡುವುದಿಕ್ಕಿಂತ ನಿಮ್ಮದಾದ ಮಾರ್ಗವೇ ಇರಲಿ. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ನಿಮ್ಮ ಉತ್ತರವು ಸಮಾಧಾನಕರವಾಗಿರದು. ಆಸ್ತಿಯ ದಾಖಲೆಯನ್ನು ನೀವು ಊರ್ಜಿತಗೊಳಿಸಿ. ಹಂಚಿಕೆಯ ಬಗ್ಗೆಯೂ ಸರಿಯಾದ ಆಲೋಚನೆ ಮಾಡುವಿರಿ.
ವೃಷಭ ರಾಶಿ: ಯಾರದೋ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳಬೇಕಾದೀತು. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಬಹಳ ಶ್ರಮದಿಂದ ಇಂದು ನ್ಯಾಯಾಲಯದಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಕಲಿಕೆಯ ಹಂಬಲ ದೂರಾಗುವುದು ಸಾಧ್ಯತೆ ಇದೆ.
ಮಿಥುನ ರಾಶಿ: ಅತಿಯಾದ ಮರೆವಿನ ಸಮಸ್ಯೆಯಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವನ್ನು ಬೀರುವುದು. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಸೊಕ್ಕಿನಂತೆ ತೋರುವುದು. ನಿಮ್ಮ ಇಂದಿನ ಸ್ಥಾನವು ಬಹಳ ಪರಿಶ್ರಮದ ಫಲವಾಗಿದೆ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ.
ಕರ್ಕಾಟಕ ರಾಶಿ: ಸತತವಾದ ಸೋಲಿನಿಂದ ಉತ್ಸಾಹವೂ ಕುಗ್ಗಲಿದೆ. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಆರೋಗ್ಯದ ನಿರ್ಲಕ್ಷ್ಯವು ಮತ್ತೊಂದು ಪರಿಣಾಮವನ್ನು ಬೀರುವುದು. ನಿಮಗೆ ಗೌರವ ಸಿಗದೆ ಕಡೆ ಹೋಗುವುದಿಲ್ಲ. ನೌಕರರ ವಿಚಾರದಲ್ಲಿ ಒಂದು ಕಣ್ಣಿರಲಿ. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು.
ಸಿಂಹ ರಾಶಿ: ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಷ್ಪಕ್ಷಪಾತದ ನಿರ್ಧಾರದಿಂದ ನೀವು ದೊಡ್ಡವರಾಗಬಹುದು. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು.
ಕನ್ಯಾ ರಾಶಿ: ಹೊಸತನಕ್ಕೆ ನೀವು ಒಗ್ಗುವುದು ಕಷ್ಟವಾದೀತು. ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡುವಿರಿ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ನಿಮ್ಮ ಸ್ವಂತ ಕೆಲಸಗಳಿಗೆ ಇನ್ನೊಬ್ಬರ ಸಹಾಯವನ್ನು ನೀವು ಬಯಸುವುದಿಲ್ಲ. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ.
ತುಲಾ ರಾಶಿ: ಬೇರೆಯವರು ತಪ್ಪು ಮಾಡಿದ್ದಾರೆ ಎಂದು ನೀವೂ ಮಾಡಲು ಹೋದರೆ ಸಿಕ್ಕಿಬೀಳುವಿರಿ. ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವಿರಿ. ನಿಮ್ಮ ಸಂಕಟಕ್ಕೆ ಪರರನ್ನು ಜರಿದು ಪ್ರಯೋಜನವಾಗದು. ವಾಹನ ಓಡಾಡವು ಸುಖಕರವಲ್ಲ. ನಿಮ್ಮ ಬಗ್ಗೆ ಸಹೋದ್ಯೋಗಿಗಳು ಆಡುಕೊಳ್ಳುವರು. ಅನಿಸಿದ್ದನ್ನು ಪಡೆಯುವವರೆಗೂ ಮರಳಿ ಯತ್ನವ ಮಾಡುವಿರಿ. ಮನಸ್ಸುನ್ನು ಅಚಲವಾಗಿಸಿಕೊಳ್ಳಿ. ಭವಿಷ್ಯವನ್ನು ಕಟ್ಟಿಕೊಳ್ಳುವ ಕುರಿತು ಚಿಂತೆ ಬರಬಹುದು.
ವೃಶ್ಚಿಕ ರಾಶಿ: ಸ್ಪರ್ಧಾತ್ಮಕ ಪರೀಕ್ಷೆಯನ್ನು ಅನಾಯಾಸವಾಗಿ ಎದುರಿಸಬೇಕಾಗುವುದು. ಹಣ ಕೊಟ್ಟರೂ ಸಿಗದ ಸಂಪತ್ತನ್ನು ಗಳಿಸುವಿರಿ. ಗುರಿಯ ಕಡಗೆ ಮಾತ್ರ ನಿಮ್ಮ ಗಮನವಿರಲಿ. ಇಷ್ಟ ಪಟ್ಟವರನ್ನು ಮದುವೆಯಾಗುವ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವಿರಿ. ಹಳೆಯ ನಿಮ್ಮ ಸ್ನೇಹಿತವು ದೂರಾಗುವುದು. ಹೊಸ ಮನೆಯ ನಿರ್ಮಾಣದ ಬಗ್ಗೆ ದೊಡ್ಡ ಕನಸು ಕಾಣುವಿರಿ. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಯಾರೊಂದಿಗಾದರೂ ಸಲುಗೆಯು ಅತಿಯಾಗಬಹುದು.
ಧನು ರಾಶಿ: ಸರಳ ಎಂದುಕೊಂಡ ಕೆಲಸವೇ ಇಂದು ಕಷ್ಟವಾಗುವುದು. ಯಾರ ಮೇಲೋ ಹಠಸಾಧಿಸುವುದು ಬೇಡ. ನಿಮ್ಮ ಸಂಬಂಧಗಳ ಬಗ್ಗೆ ಇಂದು ಹೆಚ್ಚು ಆಲೋಚಿಸುವಿರಿ. ಸದ್ಭಾವದಿಂದ ಮಾಡುವ ಕಾರ್ಯವು ಸತ್ಫಲವನ್ನೇ ಕೊಡುವುದು. ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು. ನಿಗದಿತ ಸಮಯಕ್ಕೆ ನಿಮ್ಮ ಕಾರ್ಯವನ್ನು ಮುಗಿಸಿ. ಅಪ್ರಾಮಾಣಿಕರಂತೆ ನಿಮಗೇ ಅನ್ನಿಸಬಹುದು. ಕಟ್ಟಿಕೊಂಡ ಬುತ್ತಿ ಎಲ್ಲಿಯವರಗೆ ಬರಲು ಸಾಧ್ಯ? ಅತಿಯಾದ ವೇಗ ಬೇಡ.
ಮಕರ ರಾಶಿ: ಸ್ತ್ರೀಯರಲ್ಲಿ ಸಹಾಯವನ್ನು ಕೇಳಲು ಹಿಂಜರಿಕೆ ಆಗುವುದು. ನಿಮಗೆ ಇಷ್ಟವಾದದನ್ನು ಪಡೆಯುವ ಕಡೆಗೆ ನಿಮ್ಮ ಗಮನ ಇರಲಿ. ನಿಮ್ಮ ಕೆಲಸವನ್ನು ಬೇರೆಯವರ ಮೂಲಕ ಮಾಡಿಸಿಕೊಳ್ಳುಬಿರಿ. ಇಂದು ನಿಮಗೆ ಅವ್ಯಕ್ತ ಭಯವು ಇರಲಿದೆ. ಅಲಂಕಾರಕ್ಕೆ ಹೆಚ್ಚು ಸಮಯವನ್ನು ತೆಗೆದಿಡುವಿರಿ. ಸಂದರ್ಭ ಬಂದಾಗ ಮಾತ್ರ ನಿಮ್ಮನ್ನು ನೆನೆಸುವರು. ನಿಮ್ಮ ಸಂತೋಷವನ್ನು ಕಸಿದುಕೊಳ್ಳಲು ಯಾರಾದರೂ ಇರುತ್ತಾರೆ. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು.
ಕುಂಭ ರಾಶಿ: ನಿಮಗೆ ಆತ್ಮೀಯರ ಒಡನಾಡ ಅಧಿಕವಾಗಲಿದೆ. ನಿಮ್ಮ ಸ್ವಭಾವದಿಂದ ನಿಮಗೆ ಕಿರಿಕಿರಿಯಾಗಬಹುದು. ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಹಣವನ್ನು ನೀಡಬೇಕಾಗುವುದು. ಇನ್ನೊಬ್ಬರ ಮಾತುಗಳನ್ನು ನೀವು ಸಹಿಸುವುದು ಕಷ್ಟವಾದೀತು. ಸರಿಯಾದುದನ್ನು ಸರಿ ಎನ್ನಲು ಹಿಂದೇಟು ಬೇಡ. ನಿಮ್ಮ ತಿಳಿವಳಿಕೆಯನ್ನು ತೋರ್ಪಡಿಸಿ. ಸಾಮಾಜಿಕ ಕಳಕಳಿಯನ್ನು ತೋರಿಸುವಿರಿ. ವೃತ್ತಿಯಲ್ಲಿ ಸರಳತೆಯನ್ನು ಹುಡುಕುವಿರಿ. ಆಪ್ತರ ಮೇಲೆ ಕಿಡಿಕಾರುವುದು ಬೇಡ.
ಮೀನ ರಾಶಿ: ಸೋಲು ಗೆಲುವನ್ನು ನೀವು ಸಮಾನವಾಗಿ ಸ್ವೀಕರಿಸುವುದು ಮುಖ್ಯ. ಸಾಮಾಜಿಕ ಜಾಲತಾಣದಿಂದ ಸಮಸ್ಯೆಗೆ ಸಿಕ್ಕಿಕೊಳ್ಳುವಿರಿ. ಕೆಡಕು ಮಾಡುವ ಮನಸ್ಸು ನಿಮಗೆ ಶೋಭೆಯಲ್ಕ. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯ ಬೇಡ. ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ. ಹಳೆಯ ವಸ್ತುಗಳ ಮಾರಾಟದಿಂದ ಲಾಭವಿದೆ. ಏರುದನಿಯಲ್ಲಿ ಮಾತನಾಡುವುದು ಬೇಡ. ಆದಾಯದ ಮೂಲವನ್ನು ಸರಿಯಾಗಿ ಇಟ್ಟುಕೊಳ್ಳಿ.
ಲೋಹಿತ್ ಹೆಬ್ಬಾರ್-8762924271 (what’s app only)




