AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಸ್ಮರಣ್‌ಗೆ ನಾಯಕ ಪಟ್ಟ

2026-27ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೊದಲ ಮೂರು ಪಂದ್ಯಗಳ ತಂಡ ಪ್ರಕಟಿಸಿದೆ. ಯುವ ಆಟಗಾರ ಸ್ಮರಣ್ ರವಿಚಂದ್ರನ್‌ಗೆ ನಾಯಕತ್ವ ನೀಡಲಾಗಿದ್ದು, ಮನೀಷ್ ಪಾಂಡೆ, ಕರುಣ್ ನಾಯರ್ ಅನುಭವಿ ಆಟಗಾರರಾಗಿ ತಂಡದಲ್ಲಿದ್ದಾರೆ. ಪ್ರಮುಖ ಆಟಗಾರ ದೇವದತ್ ಪಡಿಕ್ಕಲ್‌ಗೆ ಸದ್ಯ ಭಾರತ ತಂಡದ ಕರ್ತವ್ಯದಿಂದಾಗಿ ಸ್ಥಾನವಿಲ್ಲ. ಅವರು ನಂತರ ಸೇರಿಕೊಳ್ಳುವ ಸಾಧ್ಯತೆಯಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಸ್ಮರಣ್‌ಗೆ ನಾಯಕ ಪಟ್ಟ
ದೇವದತ್ ಪಡಿಕ್ಕಲ್, ಸ್ಮರಣ್ ರವಿಚಂದ್ರನ್
ಪೃಥ್ವಿಶಂಕರ
|

Updated on: Nov 06, 2026 | 10:27 PM

Share

2026-27ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೊದಲ ಮೂರು ಪಂದ್ಯಗಳಿಗೆ ತನ್ನ ತಂಡವನ್ನು ಪ್ರಕಟಿಸಿದೆ. ಈ ಬಾರಿ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಅನುಭವಿ ಆಟಗಾರರಾದ ಮನೀಷ್ ಪಾಂಡೆ, ಕರುಣ್ ನಾಯರ್ ಮತ್ತು ಲವ್ನಿತ್ ಸಿಸೋಡಿಯಾ ತಂಡದಲ್ಲಿದ್ದರೂ ಯುವ ಆಟಗಾರ ಸ್ಮರಣ್ ರವಿಚಂದ್ರನ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಮತ್ತೊಂದೆಡೆ, ಕರ್ನಾಟಕ ತಂಡದ ಪ್ರಮುಖ ಆಟಗಾರ ದೇವದತ್ ಪಡಿಕ್ಕಲ್‌ಗೆ ಪ್ರಕಟಿತ ತಂಡದಲ್ಲಿ ಸ್ಥಾನ ನೀಡಿಲ್ಲ.

ನಾಯಕನಾಗಿ ಸ್ಮರಣ್ ರವಿಚಂದ್ರನ್ ಆಯ್ಕೆ

ಸದ್ಯಕ್ಕೆ ಟೂರ್ನಿಯ ಮೊದಲ ಮೂರು ಪಂದ್ಯಗಳಿಗೆ ಮಾತ್ರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಈ ಮೂರು ಪಂದ್ಯಗಳ ಬಳಿಕ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯೂ ಇದೆ. ತಂಡದ ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ಮಾರ್ಗದರ್ಶನ ನೀಡಲಿದ್ದು, ದೀಪಕ್ ಚೌಗುಲೆ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ತಂಡದ ಬ್ಯಾಟಿಂಗ್ ವಿಭಾಗವನ್ನು ನಾಯಕ ಸ್ಮರಣ್ ರವಿಚಂದ್ರನ್ ಮುನ್ನಡೆಸಲಿದ್ದಾರೆ. ಅವರಿಗೆ ಅನುಭವಿ ಬ್ಯಾಟರ್ ಕರುಣ್ ನಾಯರ್ ಉತ್ತಮ ಸಾಥ್ ನೀಡಲಿದ್ದಾರೆ. ಇದರ ಜೊತೆಗೆ ಮನೀಷ್ ಪಾಂಡೆ ಮತ್ತು ಅಭಿನವ್ ಮನೋಹರ್ ಅವರಂತಹ ಅನುಭವಿ ಬ್ಯಾಟರ್‌ಗಳು ತಂಡದಲ್ಲಿರುವುದರಿಂದ ಕರ್ನಾಟಕದ ಬ್ಯಾಟಿಂಗ್ ಪಡೆ ಸಾಕಷ್ಟು ಬಲಿಷ್ಠವಾಗಿ ಕಾಣುತ್ತಿದೆ.

ದೇವದತ್ ಪಡಿಕ್ಕಲ್‌ಗೆ ಸ್ಥಾನವಿಲ್ಲ

ಈ ಬಾರಿ ಪ್ರಕಟಿಸಿರುವ ತಂಡದಲ್ಲಿ ದೇವದತ್ ಪಡಿಕ್ಕಲ್ ಹೆಸರು ಕಾಣಿಸಿಕೊಂಡಿಲ್ಲ. ಸದ್ಯ ಅವರು ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಭಾರತ ತಂಡದ ಪರ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ನವೆಂಬರ್ 19ರಿಂದ ಆರಂಭವಾಗಿ ಡಿಸೆಂಬರ್ 1ರವರೆಗೆ ನಡೆಯಲಿದೆ. ಟೆಸ್ಟ್ ಸರಣಿ ಮುಗಿದ ಬಳಿಕ ದೇವದತ್ ಪಡಿಕ್ಕಲ್ ತಮ್ಮ ರಾಜ್ಯ ತಂಡವಾದ ಕರ್ನಾಟಕವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

ಒಂದು ವೇಳೆ ಪಡಿಕ್ಕಲ್ ತಂಡಕ್ಕೆ ಮರಳಿದರೆ ಕರ್ನಾಟಕದ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬರಲಿದೆ. ಈಗಾಗಲೇ ಮನೀಷ್ ಪಾಂಡೆ, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್ ಮತ್ತು ಅಭಿನವ್ ಮನೋಹರ್ ಅವರಂತಹ ಆಟಗಾರರನ್ನು ಹೊಂದಿರುವ ಕರ್ನಾಟಕ ತಂಡ ಮತ್ತಷ್ಟು ಬಲಿಷ್ಠವಾಗಲಿದೆ.

ರಣಜಿ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಅಂಪೈರ್‌ಗಳು! ಬಿಸಿಸಿಐನಿಂದ ಮಹತ್ವದ ನಿರ್ಧಾರ

ಮೊದಲ ಮೂರು ಪಂದ್ಯಗಳಿಗೆ ಕರ್ನಾಟಕ ತಂಡ: ರೋಹನ್ ಎ. ಪಾಟೀಲ್, ಲವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಮನೀಷ್ ಪಾಂಡೆ, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್ (ನಾಯಕ), ಅಭಿನವ್ ಮನೋಹರ್, ಶಿಖರ್ ಶೆಟ್ಟಿ, ಮನ್ವಂತ್ ಕುಮಾರ್ ಎಲ್., ಪ್ರವೀಣ್ ದುಬೆ, ವೈಶಾಕ್ ವಿಜಯ್ ಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಶ್ರೀಜಿತ್ ಕೆ.ಎಲ್. (ವಿಕೆಟ್ ಕೀಪರ್), ಅನೀಶ್ವರ್ ಗೌತಮ್ ಮತ್ತು ರಿತೇಶ್ ಭಟ್ಕಳ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More