ದಿನ ಭವಿಷ್ಯ: ಇಂದು ಈ ರಾಶಿಯವರನ್ನು ಹಣದ ವಿಚಾರದಲ್ಲಿ ಹಲವರು ನಂಬಲಾರರು
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ನವಮೀ ತಿಥಿಯ ಬುಧವಾರದಂದು ಸಾಮರಸ್ಯ, ಕಣ್ಣಿನ ಚಿಕಿತ್ಸೆ, ಪರಾವಲಂಬನೆ, ಅಪಘಾತದ ಸೂಚನೆ, ಆಮಿಷದಿಂದ ಗೊಂದಲ, ಉದ್ಯೋಗಕ್ಕಾಗಿ ಸ್ಪರ್ಧೆ, ಅಧಿಕ ವಿಶ್ರಾಂತಿ, ಆರೋಗ್ಯ ಹಾಳು ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಶುಕ್ಲ, ಕರಣ : ವಣಿಜ, ಸೂರ್ಯೋದಯ – 06 – 15 am, ಸೂರ್ಯಾಸ್ತ – 05 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:03 – 13:30, ಯಮಗಂಡ ಕಾಲ 07:42 – 09:09, ಗುಳಿಕ ಕಾಲ 10:36 – 12:03.
ಮೇಷ ರಾಶಿ: ಬಂಡವಾಳದ ವಿಚಾರದಲ್ಲಿ ಯಾರ ಮಾತೂ ಪಥ್ಯವಾಗದು. ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಖಾಸಗಿ ಕಂಪನಿ ಉದ್ಯೋಗಿಗಳ ವೇತನವು ಹೆಚ್ಚಾಗುವುದು. ಪ್ರಸಾರ ಮಾಧ್ಯಮದವರಿಗೆ ಅನವರತ ಕಾರ್ಯಗಳು ಇರುವುದು. ಸಾಹಿತಿಗಳಿಗೆ ಸನ್ಮಾನ ಸಿಗುವುದು. ಅವಿವಾಹಿತರಿಗೆ ಕಂಕಣಬಲ ಪ್ರಾಪ್ತವಾಗಬಹುದು. ಬಂಡವಾಳದಿಂದ ಹೆಚ್ಚಿನ ಲಾಭವಿದೆ.
ವೃಷಭ ರಾಶಿ: ಸಿಟ್ಟನ್ನು ಯಾವುದಾದರೂ ಒಂದು ದಾರಿಯಲ್ಲಿ ಹೊರಹಾಕಿದೆ ಸಮಾಧಾನಪಟ್ಟುಕೊಳ್ಳುವಿರಿ. ನಿಮ್ಮ ಬದುಕಿನಲ್ಲಿ ಬದಲಾವಣೆ ಅನಿವಾರ್ಯವಾಗಿ ಮಾಡಿಕೊಳ್ಳುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು. ಮಹಿಳಾ ಅಧಿಕಾರಿಗಳಿಂದ ಕಿರಿಕಿರಿ ಹೆಚ್ಚು. ಸಹೋದ್ಯೋಗಿಗಳಿಗೆ ಸಹಕರಿಸುವಿರಿ. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು.
ಮಿಥುನ ರಾಶಿ: ಹಳೆಯ ಪ್ರಣಯವು ಆರಂಭವಾಗುವ ಸೂಚನೆ ಸಿಗುವುದು. ಗೆಳೆತನದಲ್ಲಿ ಆಕಸ್ಮಿಕವಾಗಿ ದೂರಾಗುವುದು ಬರಲಿದೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಹೆಚ್ಚಲಿರುವ ಆದಾಯದಿಂದ ದುರಭ್ಯಾಸವನ್ನು ಬೆಳೆಸಿಕೊಳ್ಳುವಿರಿ. ಶಿಕ್ಷಕರಿಗೆ ವೇತನದಲ್ಲಿ ಹೆಚ್ಚಳವಾಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ತಂದೆಯ ಆರೋಗ್ಯವು ಹದ ತಪ್ಪಬಹುದು. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ.
ಕರ್ಕಾಟಕ ರಾಶಿ: ಮನೆಗೆ ಬೇಕಾದ ವಸ್ತುಗಳನ್ನು ತರಲು ಸಂಗಾತಿಯ ಅನುಮತಿ ಪಡೆಯದೇ ಮಾಡುವಿರಿ. ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಅನವಶ್ಯಕ ಸಾಲಗಳಿಂದ ದೂರವಿರಿ. ಸಾಮಾಜಿಕ ಕಾರ್ಯವನ್ನು ಸಮಯ ಹೊಂದಿಸಿ ಮಾಡುವರು. ನಿಮ್ಮ ಆಸೆಯನ್ನು ಈಡೇರಿಸಲು ಬಹಳಷ್ಟು ಪ್ರಯತ್ನವನ್ನು ಮಾಡಬೇಕಾಗುತ್ತದೆ. ಇಂದಿನ ದುಡಿಮೆಗೆ ಅಲ್ಪ ಶ್ರಮವಾದರೂ ಇರಲಿ.
ಸಿಂಹ ರಾಶಿ: ಮನೆಯಲ್ಲಿ ನಿಮ್ಮ ಆರ್ಥಿಕ ವ್ಯವಹಾರದ ಬಗ್ಗೆ ವಿಚಾರಿಸಬಹುದು. ಇಂದು ನೀವು ವಾಹನವನ್ನು ಚಲಾಯಿಸುವುದು ಬೇಡ. ಇಂದಿನ ನಿಮ್ಮ ಕಾರ್ಯದಲ್ಲಿ ತಾಳ್ಮೆ ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಜಯಿಸಿ. ಇಬ್ಬರ ಸ್ನೇಹವು ನಿಮ್ಮ ಕಾರಣದಿಂದ ದೂರಾಗಲಿದೆ. ಆರೋಗ್ಯವು ಚೆನ್ನಾಗಿ ಇರಲಿದ್ದು ಆಲಸ್ಯವನ್ನು ಬಿಡಬೇಕಾದೀತು. ಈ ದಿನ ತಂದೆ ತಾಯಿಯ ಬೆಂಬಲವು ಪೂರ್ಣವಾಗಿ ಇರುವುದು. ಅವರಿಂದ ಆರ್ಥಿಕ ಸಹಾಯವೂ ದೊರೆಯಬಹುದು.
ಕನ್ಯಾ ರಾಶಿ: ಮನೋರಂಜನೆ ನಿಮಗೆ ಅನಿವಾರ್ಯವಾಗುವುದು. ಹೂಡಿಕೆಯಲ್ಲಿ ಉತ್ಸಾಹವಿರುವ ನೀವು ವಿವೇಚನೆಯಿಂದ ಹೂಡಿಕೆ ಮಾಡಿ. ಪ್ರತಿ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುವುದು. ಹಳೆಯ ಸಂಗಾತಿಯ ಸ್ಥಿತಿಯನ್ನು ಕೇಳಿ ವಿಕೃತ ಆನಂದಪಡುವಿರಿ. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡಬೇಡಿ. ಆಚಾತುರ್ಯದಿಂದ ಅನಂತರ ಪಶ್ಚಾತ್ತಾಪ ಪಡುವಿರಿ.
ತುಲಾ ರಾಶಿ: ನಿಮಗೆ ಪರಿಚಿತರಿಂದ ಒಳ್ಳೆಯ ಭೂಮಿಯ ಲಾಭವಾಗುವುದು. ಆದರೆ ಅದನ್ನು ಖರೀದಿಸುವ ಶಕ್ತಿ ನಿಮಗೆ ಸಿಗದೇ ಕೈಬಿಡಬೇಕಾದೀತು. ನಿಮ್ಮ ಜಾಣ್ಮೆಯಿಂದ ಇಂದಿನ ಆದಾಯವನ್ನು ಹೆಚ್ಚುಮಾಡಿಕೊಳ್ಳುವಿರಿ. ನಿಮ್ಮ ವೈಯಕ್ತಿಕ ಜೀವನಕ್ಕೆ ಚ್ಯುತಿ ಬಾರದಂತೆ ವ್ಯವಹರಿಸುವಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಸಣ್ಣ ಲೆಕ್ಕಾಚಾರವೇ ನಿಮ್ಮ ಉಳಿತಾಯದ ಮೂಲವಾಗಿದೆ.
ವೃಶ್ಚಿಕ ರಾಶಿ: ವೃತ್ತಿಯ ವಿಚಾರದಲ್ಲಿ ಹಿರಿಯರಿಂದ ತಾತ್ಕಾಲಿಕ ಸಮಾಧಾನ ಸಿಗಲಿದೆ. ಬಹಳ ಒತ್ತಡವಿರುವ ಕಾರಣ ಬರುವ ಕಾರ್ಯವನ್ನು ಬಹಳ ಚಾಕಚಕ್ಯತೆಯಿಂದ ಮಾಡಬೇಕಾಗುವುದು. ಅಪಮಾನದಿಂದಾಗಿ ಆದ ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ಜೀವನ ಸಂಗಾತಿಯ ಜೊತೆ ಯಾವುದಾದರೂ ವಿಚಾರಕ್ಕೆ ಕಲಹವಾಗಬಹುದು. ನೂತನ ಕಾರ್ಯದ ಆರಂಭಕ್ಕೆ ಮೊದಲು ಯಾರಾದರೂ ಹಿರಿಯರ ಸಲಹೆಯನ್ನು ಪಡೆಯಿರಿ.
ಧನು ರಾಶಿ: ನಿಮ್ಮ ಔದಾಸೀನ್ಯವು ಮಕ್ಕಳಮೇಲೆ ಪರಿಣಾಮ ಬೀರುವುದು. ಮಾನಸಿಕವಾಗಿ ನಿಮಗೆ ಇಂದು ಏರಿಳಿತಗಳು ಹೆಚ್ಚಾಗುವುದು. ಎಲ್ಲವನ್ನೂ ನಕಾರಾತ್ಮಕವಾಗಿ ಭಾವಿಸುವಿರಿ. ಇಂದು ಸರ್ಕಾರಿ ನೌಕರರಿಗೆ ಹೆಚ್ಚಿನ ಲಾಭವಿದೆ. ಹಣಕಾಸಿನ ವ್ಯವಹಾರದಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿಡುವುದು ಉತ್ತಮ. ನಿಮ್ಮ ತಿಳುವಳಿಕೆಗಳಿಂದ ಬರುವ ತೊಂದರೆಯನ್ನು ಪರಿಹರಿಸಿಕೊಳ್ಳುವಿರಿ. ಯಾವುದೇ ರೀತಿಯಲ್ಲೂ ಅಪಘಾತವು ಆಗಬಹುದು. ಅತಿಯಾದ ಒತ್ತಾಯದಿಂದ ನಿಮಗೇ ತೊಂದರೆ.
ಮಕರ ರಾಶಿ: ಆಸ್ತಿ ಹಂಚಿಕೆಯ ಬಗ್ಗೆ ನಿಮಗೆ ಸಮಾಧಾನ ಸಿಗದು. ಯಾವ ಸೋಲಿಗೂ ಹತಾಶರಾಗುವುದು ಬೇಡ. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲ ಒಳಗಾಗುವಿರಿ. ಯಾವುದನ್ನೂ ಅತಿಯಾಗಿ ಮೈಮೇಲೆ ಎಳೆದುಕೊಳ್ಳುವುದು ಬೇಡ. ಪ್ರಯಾಣದಲ್ಲಿ ಎಚ್ಚರ ತಪ್ಪುವ ಸಾಧ್ಯತೆ ಇದೆ. ಮಾತಿನಿಂದ ಹತ್ತಿರದವರನ್ನು ದೂರಮಾಡಿಕೊಳ್ಳುವಿರಿ. ಕಾರ್ಯವನ್ನು ಹಾಳುಮಾಡಲು ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಬಹುದು.
ಕುಂಭ ರಾಶಿ: ನಿಮ್ಮ ಹಿಡಿತದಿಂದ ಜವಾಬ್ದಾರಿ ತಪ್ಪಿಹೋಗಬಹುದು. ಸುಮ್ಮನೇ ಇಂದು ಯಾರದೋ ಮೇಲೆ ದ್ವೇಷವನ್ನು ಸಾಧಿಸುತ್ತ ಇರುವುದು ಬೇಡ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡೆತಡೆಗಳು ಬರುವುದು. ಬಾಯಿ ತಪ್ಪಿ ಆಡಿದ ಮಾತಿಗೂ ಬೆಲೆ ಕೊಡುವಿರಿ. ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಇದೆ. ಆಸೆ ಆಮಿಷಗಳಿಗೆ ಬಲಿಯಾಗದೇ ನಿಮ್ಮ ಗುರಿಯತ್ತ ಗಮನ ನೀಡಿರಿ. ಸ್ನೇಹಿತರ ಕಾರಣಕ್ಕೆ ತೊಂದರೆಯಲ್ಲಿ ಸಿಕ್ಕಿಬೀಳುವಿರಿ.
ಮೀನ ರಾಶಿ: ದೊಡ್ಡ ಉದ್ಯೋಗವನ್ನು ಪಡೆಯುವ ಆಸೆ ಇರುವುದು. ನೀವು ಬೇಕಾಗಿರುವುದನ್ನು ಮಾಡುವುದಕ್ಕಿಂತ ಬೇರೆಯದನ್ನೇ ಮಾಡುವಿರಿ. ಇಂದು ಹೆಚ್ಚುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಸಮಸ್ಯೆ ಸರಿಯಾಗುವುದು. ಸಂಗಾತಿಯ ಕೋಪಕ್ಕೆ ಕಾರಣವನ್ನು ಸಮಾಧಾನ ಮಾಡಲು ಪ್ರಯತ್ನಿಸಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸದ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ.
ಲೋಹಿತ್ ಹೆಬ್ಬಾರ್-8762924271 (what’s app only)
Published On - 1:00 am, Wed, 4 November 26




