AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 23 November: ಇಂದು ಈ ರಾಶಿಯವರು ಅತ್ಯಂತ ಪರಿಸ್ಥಿತಿಯನ್ನು ಚಾತುರ್ಯದಿಂದ ಎದುರಿಸುವರು

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಅನುರಾಧಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ಸಿದ್ಧಿ, ಕರಣ : ಗರಜ, ಸೂರ್ಯೋದಯ - 06 - 23 am, ಸೂರ್ಯಾಸ್ತ - 05 - 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:49 - 09:14, ಯಮಗಂಡ ಕಾಲ 10:40 - 12:06, ಗುಳಿಕ ಕಾಲ 13:32 - 14:57

Horoscope Today 23 November: ಇಂದು ಈ ರಾಶಿಯವರು ಅತ್ಯಂತ ಪರಿಸ್ಥಿತಿಯನ್ನು ಚಾತುರ್ಯದಿಂದ ಎದುರಿಸುವರು
Dina Bhavishya Nov 23
ಭಾವನಾ ಹೆಗಡೆ
|

Updated on: Nov 23, 2026 | 7:45 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಸೋಮವಾರದಂದು ವಿನಮ್ರತೆ, ದುರುಪಯೋಗ, ದುರ್ಜನ ಸಂಗ, ಖರೀದಿ ಹೆಚ್ಚು, ಮಕ್ಕಳ ಮೇಲೆ ಪ್ರೀತಿ, ಸಾಮಾಜಿಕ ಕಾರ್ಯ, ಅಮೂಲ್ಯ ವಸ್ತುಗಳ ಖರೀದಿ, ಉದ್ಯೋಗದ ಓಡಾಟ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ : ನಿಮಗೆ ಹಲವು ವರ್ಷಗಳ ಗೌರವವು ಪ್ರಾಪ್ತವಾಗುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆಯಾದೀತು. ಶತ್ರುಗಳನ್ನು ಬೌದ್ಧಿಕವಾಗಿ ಸೋಲಿಸಬಹುದು. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ಕನಸನ್ನು ಕಾಣುವುದು ಯಥಾರ್ಥವಾಗಿರಿಸಿಕೊಳ್ಳಿ. ಸಂಪತ್ತಿನ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದು ಅಸಾಧ್ಯವಾಗುವುದು. ನಿಮ್ಮ ಅಮೂಲ್ಯ ವಸ್ತುವನ್ನು ನಿಮಗೆ ಗೊತ್ತಿಲ್ಲದೇ ಇನ್ನೊಬ್ಬರಿಗೆ ಕೊಟ್ಟು ಬಿಡುವಿರಿ.

ವೃಷಭ ರಾಶಿ : ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿವುದು. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಕನ್ನಡ ಶುದ್ಧವಾಗಿದ್ದರೆ, ನೋಡುವ ವಸ್ತುವೂ ಶುದ್ಧವೇ. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ವಿವಾಹದ ಮಾತುಕತೆಯು ಗೊಂದಲದಲ್ಲಿ ಮುಕ್ತಾಯವಾಗಬಹುದು. ನಿಮ್ಮ ಅತಿಯಾದ ಉತ್ಸಾಹದಿಂದಲೇ ಇಂದಿನ ಕಾರ್ಯವು ಬೇಗ ಮುಗಿಯಬಹುದು.

ಮಿಥುನ ರಾಶಿ : ನಿಮ್ಮ ಬಾಲಿಶವಾದ ಮಾತುಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುವುದು. ವಿದ್ಯಾಭ್ಯಾಸದ ವಿಚಾರಕ್ಕೆ ವಾಗ್ವಾದವಾಗಬಹುದು. ಕೆಲಸದಲ್ಲಿ ಪಯತ್ನಪೂರ್ವಕ ಹಿನ್ನಡೆ ಮಾಡಿಸುವರು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ಸ್ನೇಹಿತರ ಜೊತೆ ಸುತ್ತಾಟದಿಂದ ಖರ್ಚು ಬರಬಹುದು. ತಮ್ಮ ಗುರುವನ್ನು ಶಿಷ್ಯರು ಭೇಟಿ ಮಾಡಲಿದ್ದು, ಉಡುಗೊರೆಯನ್ನು ನೀಡುವರು.

ಕರ್ಕಾಟಕ ರಾಶಿ : ನಿಮ್ಮಿಂದಾಗಿ ಕುಟುಂಬದ ಕಲಹವು ನಿಲ್ಲುವುದು. ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ತೋರಿಕೆಯನ್ನು ಹೆಚ್ಚು ಕಾಲ ಇಟ್ಟುಕೊಳ್ಳಲಾಗದು. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ನಿಮಗೆ ಅಧ್ಯಾತ್ಮಿದ ಅನುಭವ ಸಂಭವಿಸಬಹುದು. ನಿಮ್ಮ ಮಾತುಗಳು ಮಾರ್ಗದರ್ಶನದಂತೆ ಕೇಳಿಸಿಕೊಳ್ಳುವರು. ಸಾಲದಿಂದ ಮುಕ್ತರಾಗಲು ನಿಮಗೆ ಸಾಧ್ಯವಾಗದು. ತಾಳ್ಮೆಯನ್ನೂ ನೀವು ಕಳೆದುಕೊಳ್ಳುವಿರಿ.

ಸಿಂಹ ರಾಶಿ : ದೂರವಾಣಿಯ ಕರೆಯಿಂದ ನಿಮಗೆ ಆತಂಕ ಎದುರಾಗಬಹುದು. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದೇ ಮಾತಡುವುದು ಸರಿಯಾಗದು. ಉನ್ನತ ಸ್ಥಾನಮಾನವನ್ನು ಪಡೆಯಲು ಬಹಳ ಉತ್ಸಾಹವಿರಲಿದೆ.

ಕನ್ಯಾ ರಾಶಿ : ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ಪತ್ನಿಯ ಮಾತಿನಂತೆ ನಡೆಯುವುದು ಕಷ್ಟವಾಗಿ ಸಿಡುಕು ಮಾತುಗಳು ಬರಬಹುದು. ಕೆಲಸದಲ್ಲಿ ನಿಮ್ಮ ಸೂಚನೆಗಳಿಗೆ ವಿಶೇಷ ಪ್ರಾಮುಖ್ಯ ಸಿಗುತ್ತದೆ.

ತುಲಾ ರಾಶಿ : ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ತರಬೇತುದಾರರಿಗೆ ಹೆಚ್ಚಿನ ಮನ್ನಣೆಯು ಬರಲಿದೆ. ನಿಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಯಾರು ಏನೇ ಅಂದರೂ ನಿಮ್ಮ ನಿರ್ಧಾರವನ್ನು ಬದಲಿಸಲು ನೀವು ಒಪ್ಪುವುದಿಲ್ಲ. ಇಷ್ಟಪಟ್ಟಿದ್ದು ನಿಮ್ಮದಾಗದೇ ಇರುವುದು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು.

ವೃಶ್ಚಿಕ ರಾಶಿ : ಮನ್ನಣೆ ದೊರಕುವ ಕ್ಷಣಗಳು ನಿಮ್ಮನ್ನು ಅಚ್ಚರಿಗೊಳಿಸಬಹುದು. ಯಾರೊಂದಿಗೋ ಸ್ಪರ್ಧೆ ಮಾಡುವುದಕ್ಕಿಂತ ಬಲಾಬಲವನ್ನು ಅರಿತು ಮುನ್ನಡೆದರೆ ನಿಮಗೇ ಕ್ಷೇಮ. ದಾಂಪತ್ಯದ ಒಳ ಜಗಳವು ಕುಟುಂಬಕ್ಕೆ ಗೊತ್ತಾಗಲಿದೆ. ದುರಭ್ಯಾಸವನ್ನು ರೂಢಿಸಿಕೊಳ್ಳುವಿರಿ. ದಾನ ಮಾಡುವುದು ಒಳ್ಳೆಯದೇ. ಸಹನೆಯನ್ನು ನೀವು ಪ್ರಯತ್ನದಿಂದ ಬೆಳೆಸಿಕೊಳ್ಳಬೇಕಾದೀತು. ದೇಹಕ್ಕೆ ಬಲವಾದ ಪೆಟ್ಟು ಬೀಳಬಹುದು.

ಧನು ರಾಶಿ : ಕೆಲಸಕ್ಕೋಸ್ಕರ ನಿಮ್ಮನ್ನು ಹೊಗಳುವರು. ಕೆಲಸ ಕಾರ್ಯಗಳಲ್ಲಿ ಪೂರ್ಣಜಯವು ಪ್ರಾಪ್ತವಾಗದು. ಯಾವುದರ ಮೌಲ್ಯವನ್ನೂ ನೋಡಿ ಊಹಿಸಲಾಗದು. ನೀವು ಸ್ವಾರ್ಥಿಗಳಂತೆ ಕಾಣುವಿರಿ ಅಷ್ಟೇ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು. ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಮನೆಗೆ ಬರುವಿರಿ. ನಿಮ್ಮ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ಮನಸ್ಸು ಬಹಳ ಚಂಚಲವಾಗಿ ಇರುವಿದು.

ಮಕರ ರಾಶಿ : ಸ್ಥಿರಾಸ್ತಿಯ ವಿಚಾರದಲ್ಲಿ ಸೋದರರ ನಡುವೆ ಮಾತುಗಳು ಬರಬಹುದು. ಉದ್ಯಮವು ಯಶಸ್ಸಿನ ಒಂದೊಂದೇ ಹಂತವನ್ನು ಏರಲಿದೆ. ಸಹೋದರರ ಬಾಂಧವ್ಯವು ಸಡಿಲಾಗುವುದು. ಇಂದಿನ‌ ಕಾರ್ಯದಲ್ಲಿ ರೋಚಕತೆ ಕಾಣಿಸುವುದು. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಹೊಸ ಕಲ್ಪನೆಗಳು ತೀವ್ರವಾಗಿ ಚಲಿಸುತ್ತವೆ. ಒಂದು ಸಣ್ಣ ಸಂಭಾಷಣೆ ಜೀವನದ ದೊಡ್ಡ ತಿರುವಾಗಬಹುದು.

ಕುಂಭ ರಾಶಿ : ಇಷ್ಟು ದಿನ ಕಷ್ಟವೆಂದುಕೊಂಡಿದ್ದ ಸಮಸ್ಯೆಯು ಸರಳವಾಗಿ ಇತ್ಯರ್ಥವಾಗುವುದು. ಖಾಸಗಿ ಉದ್ಯೋಗದಲ್ಲಿ ನಿಮಗೆ ಮನ್ನಣೆಯು ಸಿಗುವುದು. ಸಹೋದ್ಯೋಗಿಗಳ ಜೊತೆ ಆತ್ಮೀಯತೆ ಬೆಳೆಯುವುದು. ನಿಮ್ಮ ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ದುರಾಲೋಚನೆಯು ನಿಮ್ಮ ಸಂತೋಷಕ್ಕೆ ತೊಂದರೆಯನ್ನು ಕೊಡಬಹುದು. ಮನಸ್ಸಿನಲ್ಲಿ ಅಸಾಮಾನ್ಯ ದೃಷ್ಟಿಕೋನ ಮೂಡಿ, ಹಳೆಯ ಸಮಸ್ಯೆಗೆ ಹೊಸ ಪರಿಹಾರ ಸಿಗುವುದು.

ಮೀನ ರಾಶಿ : ಹೊರಗಿನ ಆಹಾರವು ನಿಮ್ಮ ಮೇಲೆ ಇಂದು ದುಷ್ಪರಿಣಾಮ ಬೀರಿ, ಅದನ್ನು ತ್ಯಜಿಸುವಿರಿ. ಪೂರ್ವಾಗ್ರಹವಿಲ್ಲದೇ ಮಾತನಾಡುವುದು ಸೂಕ್ತ. ಮಿತ್ರರ ಸಲಹೆಗಳು ನಿಮಗೆ ಪೂರಕ ಮಾನಸಿಕತೆಯನ್ನು ತಂದುಕೊಡಬಹುದು.‌ ಅಪಕ್ವತೆಯನ್ನು ಹೇಳಿಕೊಳ್ಳಲಾಗದು. ಮನೋಬಲ ಹೆಚ್ಚಾಗಿ, ನಿರಾಕರಿಸಿದ್ದ ಯೋಜನೆಗಳು ಮತ್ತೆ ಶುಭ ಸೂಚನೆ ಕೊಡುತ್ತವೆ. ಸಂಜೆಯಲ್ಲಿ ಅತಿ ಸಣ್ಣ ಘಟನೆ ದೊಡ್ಡ ಸಂದೇಶ ನೀಡಬಹುದು.

-ಲೋಹಿತ್ ಹೆಬ್ಬಾರ್-8762924271 (what’s app only)

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
ನಾವು ಶಿವಭಕ್ತರು, ಶಿವ ದೇವಾಲಯದಲ್ಲಿ ಮದುವೆ: ಐಶ್ವರ್ಯಾ-ಶಿಶಿರ್
ನಾವು ಶಿವಭಕ್ತರು, ಶಿವ ದೇವಾಲಯದಲ್ಲಿ ಮದುವೆ: ಐಶ್ವರ್ಯಾ-ಶಿಶಿರ್
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ