AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್: ಕ್ಯಾಪ್ಟನ್ ಆದ ಯಶಸ್, ಉತ್ತಮ ಪಟ್ಟ ಪಡೆದ ತಾಂಡವ್ ರಾಮ್

ತಮ್ಮ ಆಸೆಯಂತೆಯೇ ಯಶಸ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಟಾಸ್ಕ್ ಗೆಲ್ಲುವ ಮೂಲಕ ಅವರು ಈ ಪಟ್ಟ ಪಡೆದುಕೊಂಡರು. ಅವರು ಕ್ಯಾಪ್ಟನ್ ಆಗಿದ್ದಕ್ಕೆ ಆಸಿಯಾ, ಸೌಂದರ್ಯಾ ಅವರು ಹೆಚ್ಚು ಖುಷಿಪಟ್ಟಿದ್ದಾರೆ. ಇನ್ನು, ಈ ವಾರದ ಉತ್ತಮ ಪಟ್ಟವನ್ನು ತಾಂಡವ್ ರಾಮ್ ಅವರಿಗೆ ನೀಡಲಾಗಿದೆ.

ಬಿಗ್ ಬಾಸ್: ಕ್ಯಾಪ್ಟನ್ ಆದ ಯಶಸ್, ಉತ್ತಮ ಪಟ್ಟ ಪಡೆದ ತಾಂಡವ್ ರಾಮ್
Thandav Ram, YashasImage Credit source: Colors Kannada
ಮದನ್​ ಕುಮಾರ್​
|

Updated on: Nov 06, 2026 | 11:00 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಯಶಸ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟೆನ್ಸಿ ಓಟದಲ್ಲಿ ಫೈನಲ್ ಆಗಿ ಗಾನವಿ ಮತ್ತು ಯಶಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಯಶಸ್ ಅವರು ಬಹುಬೇಗ ಟಾಸ್ಕ್ ಪೂರ್ಣಗೊಳಿಸುವ ಮೂಲಕ ಮನೆಯ ಕ್ಯಾಪ್ಟನ್ ಪಟ್ಟ ಪಡೆದುಕೊಂಡರು. ಯಶಸ್ ಕ್ಯಾಪ್ಟನ್ ಆಗಿದ್ದಕ್ಕೆ ಆಸಿಯಾ, ಸೌಂದರ್ಯಾ ಮುಂತಾದವರು ಖುಷಿಪಟ್ಟರು.

ಈ ವಾರ ತಾಂಡವ್ ರಾಮ್ ಅವರಿಗೆ ‘ಉತ್ತಮ’ ಪಟ್ಟ ನೀಡಲಾಗಿದೆ. ಜಗದೀಶ್, ಗಗನ್ ಚಿನ್ನಪ್ಪ, ಪ್ರಶಾಂತ್ ಹಾಗೂ ಯಶಸ್ ಅವರು ಓಟ್ ಮಾಡಿದ್ದಕ್ಕಾಗಿ ತಾಂಡವ್ ರಾಮ್ ಅವರಿಗೆ ಉತ್ತಮ ಪಟ್ಟ ಸಿಕ್ಕಿದೆ. ಈ ವಾರದ ಅವರ ಆಟವನ್ನು ಬಹುತೇಕರು ಮೆಚ್ಚಿಕೊಂಡಿದ್ದಾರೆ. ಯಶಸ್, ಧನುಷ್ ಕೂಡ ತಲಾ ಮೂರು ಓಟ್ ಪಡೆದು ಮೆಚ್ಚುಗೆ ಗಳಿಸಿದರು.

ಮನೆಯವರಿಂದ ಪತ್ರ ಪಡೆಯುವ ಅವಕಾಶವನ್ನು ಈ ವಾರ ನೀಡಲಾಗಿತ್ತು. ಅದರ ಬೆನ್ನಲ್ಲೇ ಒಂದು ಟ್ವಿಸ್ಟ್ ಕೂಡ ಎದುರಾಗಿದೆ. ಈಗ ಮನೆಯೊಳಗೆ ಇರುವ ಸದಸ್ಯರು ತಮ್ಮ ಸಹ-ಸ್ಪರ್ಧಿಗಳಿಗೆ ಪತ್ರ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಪತ್ರ ಅನಾಮಧೇಯ ಆಗಿರುತ್ತದೆ. ತಮಗೆ ಇಷ್ಟ ಆಗದೇ ಇರುವ ಮೂವರು ಸ್ಪರ್ಧಿಗಳಿಗೆ ಕಟು ಮಾತುಗಳಿಂದ ಪತ್ರ ಬರೆಯಬಹುದು.

ಯಾರು ಬರೆದಿದ್ದಾರೆ ಎಂಬ ಗುರುತನ್ನು ಬಹಿರಂಗ ಮಾಡದೇ ಪತ್ರಗಳನ್ನು ನೀಡಲಾಗಿದೆ. ಸೌಂದರ್ಯಾ, ಪ್ರಶಾಂತ್, ಕಿರಣ್ ಶಾಸ್ತ್ರಿ ಮುಂತಾದ ಸ್ಪರ್ಧಿಗಳ ಬಗ್ಗೆ ಕಟುವಾಗಿ ಟೀಕೆ ಮಾಡಲಾಗಿದೆ. ಪತ್ರದಲ್ಲಿನ ಮಾತುಗಳನ್ನು ತಿಳಿದುಕೊಂಡು ಎಲ್ಲ ಸ್ಪರ್ಧಿಗಳಿಗೆ ಬೇಸರ ಆಗಿದೆ. ಅದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಮಾತಿನ ಚಕಮಕಿ ಕೂಡ ಹೆಚ್ಚಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ 4 ಸ್ಪರ್ಧಿಗಳು ಯಾರು?

‘ವಯಸ್ಸಿನಲ್ಲಿ ಸಣ್ಣವ ಶಾಸ್ತ್ರಿ. ಗುಣ, ಬುದ್ಧಿ, ನಡತೆಯಲ್ಲಿಯೂ ಸಣ್ಣವ. ಆಟ ಮತ್ತು ಟಾಸ್ಕ್​ನಲ್ಲಿ ಝೀಯೋ. ಎಲ್ಲರಿಗೂ ಕೆಟ್ಟದನ್ನು ಬಯಸುತ್ತ, ಮತ್ತೊಬ್ಬರ ದುಃಖದಲ್ಲಿ ಖುಷಿಕಾಣುವ ಕಳ್ಳ ಶಾಸ್ತ್ರಿ. ನೀನು ತುಂಬಾ ನೀಚ. ನಿನ್ನನ್ನು ವರ್ಣಿಸಲು ಕನ್ನಡದ ಶಬ್ದಕೋಶದಲ್ಲಿನ ತುಚ್ಛ ಪದಗಳು ಬೇಕಾಗುತ್ತವೆ. ಆದಷ್ಟು ಬೇಗ ನೀನು ಮನೆಗೆ ಹೊರಡು’ ಎಂದು ಕಿರಣ್ ಶಾಸ್ತ್ರಿಗೆ ಅನಾಮಧೇಯ ಪತ್ರ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More