
ಈ ತಿಂಗಳಲ್ಲಿ ಪ್ರೇಮವನ್ನು ಆಪ್ತವಾಗಿ ಅನುಭವಿಸಲು ಸಾಧ್ಯವಾಗದು. ಒತ್ತಡ ನಿಮ್ಮನ್ನು ಎಲ್ಲದರಿಂದ ದೂರ ಇರಿಸಲಿದೆ. ಮೊದಲೇ ಮಾತನಾಡಿಕೊಂಡರೆ ಪರಸ್ಪರ ಸೌಹಾರ್ದತೆ ಉಂಟಾಗಲಿದೆ. ಪ್ರೇಮಿಗಳಿಗೆ ಶುಭವಾಗಲಿ.
ಮೇಷ ರಾಶಿ: ಸಪ್ತಮ ಶುಕ್ರ, ಪಂಚಮ ಗುರುವಿನಿಂದ ಪ್ರೇಮಕ್ಕೆ ಶುಭಕಾಲ. ಮನದ ಮಾತು ಹಂಚಿಕೊಳ್ಳಲು ಅನುಕೂಲ. ದಂಪತಿಗಳಲ್ಲಿ ಆತ್ಮೀಯತೆ ಹೆಚ್ಚಲಿದೆ. ಆದರೆ ಪಂಚಮ ಕುಜನಿರುವುದರಿಂದ ಪ್ರೀತಿಪಾತ್ರರ ಮೇಲೆ ಅಧಿಕಾರ ಚಲಾಯಿಸದೆ, ಅವರ ಭಾವನೆಗಳನ್ನು ಗೌರವಿಸಿ. ಸಿಹಿಮಾತು ಬಾಂಧವ್ಯವನ್ನು ಬೆಳಗಲಿದೆ.
ವೃಷಭ ರಾಶಿ: ಷಷ್ಠ ಶುಕ್ರನಿಂದ ಸಣ್ಣ ಮನಸ್ತಾಪ ಮೂಡಬಹುದು. ಸಪ್ತಮ ರವಿಯಿರುವುದರಿಂದ ಅಹಂಗೆ ಅವಕಾಶ ನೀಡದಿರಿ. ಸಂಗಾತಿಯ ಮಾತನ್ನು ಸಹನೆಯಿಂದ ಆಲಿಸಿ. ಸಣ್ಣ ವಿಷಯಗಳನ್ನು ಮರೆತು ಮುಂದೆ ಸಾಗಿದರೆ ಪ್ರೀತಿ ಗಟ್ಟಿಯಾಗುವುದು. ಅವಿವಾಹಿತರು ಹೊಸ ಸಂಬಂಧದಲ್ಲಿ ಆತುರಪಡದಿರುವುದು ಹಿತಕರ.
ಮಿಥುನ ರಾಶಿ: ಪಂಚಮ ಶುಕ್ರ ಹೃದಯದಲ್ಲಿ ಹೊಸ ಉಲ್ಲಾಸ ತುಂಬುವನು. ಪ್ರೇಮಿಗಳಿಗೆ ಮಧುರ ಕ್ಷಣಗಳು ಒದಗಬಹುದು. ಅವಿವಾಹಿತರಿಗೆ ಆಕರ್ಷಕ ಪರಿಚಯವಾಗುವ ಸಂಭವವಿದೆ. ತೃತೀಯ ಗುರು, ಕುಜರು ಮನದ ಮಾತು ಹೇಳುವ ಧೈರ್ಯ ನೀಡುವರು. ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿ, ನಿರ್ಧಾರದಲ್ಲಿ ಆತುರ ಬೇಡ.
ಕರ್ಕಾಟಕ ರಾಶಿ: ಚತುರ್ಥ ಶುಕ್ರನಿಂದ ಮನೆಯಲ್ಲಿ ಸ್ನೇಹಮಯ ವಾತಾವರಣ ಸಾಧ್ಯ. ಸಂಗಾತಿಯೊಂದಿಗೆ ನೆಮ್ಮದಿಯ ಸಮಯ ಕಳೆಯುವಿರಿ. ಪಂಚಮ ರವಿಯಿಂದ ಪ್ರೇಮದಲ್ಲಿ ಪ್ರತಿಷ್ಠೆ ಅಡ್ಡಬರಬಹುದು. ದ್ವಿತೀಯ ಕುಜನಿರುವುದರಿಂದ ಕೋಪದ ಮಾತು ಮನ ನೋಯಿಸದಂತೆ ಎಚ್ಚರ ವಹಿಸಿ. ಮೃದುನುಡಿಯೇ ನಿಮ್ಮ ಶಕ್ತಿಯಾಗಲಿ.
ಸಿಂಹ ರಾಶಿ: ತೃತೀಯ ಶುಕ್ರ ಪ್ರೀತಿಯ ಸಂವಾದಕ್ಕೆ ರಂಗು ನೀಡುವನು. ಆತ್ಮೀಯ ಸಂದೇಶ ಅಥವಾ ಚಿಕ್ಕ ಪ್ರಯಾಣ ಸಂತಸ ತರಬಹುದು. ರಾಶಿಯ ಕುಜನಿಂದ ಹಠ ಹೆಚ್ಚುವ ಸಾಧ್ಯತೆಯಿದೆ. ವಾದದಲ್ಲಿ ಗೆಲ್ಲುವುದಕ್ಕಿಂತ ಸಂಗಾತಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ತಾಳ್ಮೆಯಿಂದ ಅನುರಾಗ ವೃದ್ಧಿಸುವುದು.
ಕನ್ಯಾ ರಾಶಿ: ದ್ವಿತೀಯ ಶುಕ್ರನಿಂದ ಸವಿನುಡಿಗಳು ಸಂಬಂಧವನ್ನು ಬೆಳಗುವವು. ಕುಟುಂಬದ ಬೆಂಬಲ ದೊರೆಯಬಹುದು. ಸಪ್ತಮ ವಕ್ರ ಶನಿಯಿಂದ ಹಳೆಯ ವಿಚಾರಗಳು ಮರುಕಳಿಸುವ ಸಾಧ್ಯತೆಯಿದೆ. ಮನಸ್ಸಿನಲ್ಲೇ ಕೊರಗದೆ ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ. ಸಂಗಾತಿಗಾಗಿ ಮೀಸಲಿಡುವ ಸಮಯ ನಂಬಿಕೆಯನ್ನು ಬಲಪಡಿಸಲಿದೆ.
ತುಲಾ ರಾಶಿ: ರಾಶಿಯಲ್ಲೇ ಶುಕ್ರನಿರುವುದರಿಂದ ನಿಮ್ಮ ವ್ಯಕ್ತಿತ್ವಕ್ಕೆ ವಿಶೇಷ ಮೆರುಗು. ಲಾಭದ ಗುರು ಸಂತಸದ ಅವಕಾಶ ಸೂಚಿಸುತ್ತಾನೆ. ಪ್ರೇಮ ನಿವೇದನೆಗೆ ಅನುಕೂಲಕರ ವಾತಾವರಣವಿದೆ. ದಂಪತಿಗಳ ನಡುವೆ ಅನುರಾಗ ವೃದ್ಧಿಸಲಿದೆ. ದ್ವಿತೀಯ ರವಿಯಿರುವುದರಿಂದ ಮಾತಿನಲ್ಲಿ ನಯವಿದ್ದರೆ ಮಧುರ ಕ್ಷಣಗಳು ನಿಮ್ಮದಾಗುವವು.
ವೃಶ್ಚಿಕ ರಾಶಿ: ವ್ಯಯ ಶುಕ್ರನಿಂದ ಪ್ರೀತಿಪಾತ್ರರಿಗಾಗಿ ಖರ್ಚು ಮಾಡುವ ಸಂಭವವಿದೆ. ರಾಶಿಯ ರವಿಯಿಂದ ಸ್ವಾಭಿಮಾನ ತುಸು ಹೆಚ್ಚಬಹುದು. ಅನುಮಾನಕ್ಕಿಂತ ನಂಬಿಕೆಗೆ ಆದ್ಯತೆ ನೀಡಿ. ಕೆಲಸದ ನಡುವೆಯೂ ಸಂಗಾತಿಗೆ ಸಮಯ ಮೀಸಲಿಡಿ. ದುಬಾರಿ ಉಡುಗೊರೆಗಿಂತ ನಿಮ್ಮ ಪ್ರೀತಿಯ ಕಾಳಜಿಯೇ ಅಮೂಲ್ಯವೆನಿಸುವುದು.
ಧನು ರಾಶಿ: ಲಾಭದ ಶುಕ್ರ ಮನದಾಸೆಗಳಿಗೆ ರೆಕ್ಕೆ ನೀಡುವನು. ಸ್ನೇಹ ಪ್ರೀತಿಯಾಗಿ ಅರಳುವ ಸಂಭವವಿದೆ. ಭಾಗ್ಯದ ಗುರು ಸಂಬಂಧಕ್ಕೆ ಭರವಸೆ ತುಂಬುವನು. ಭವಿಷ್ಯದ ಕನಸುಗಳನ್ನು ಜೊತೆಯಾಗಿ ಹಂಚಿಕೊಳ್ಳಲು ಅನುಕೂಲ. ಚತುರ್ಥ ಶನಿಯಿರುವುದರಿಂದ ಮನೆಯವರ ಅಭಿಪ್ರಾಯಗಳನ್ನು ತಾಳ್ಮೆಯಿಂದ ಆಲಿಸಿ.
ಮಕರ ರಾಶಿ: ದಶಮ ಶುಕ್ರನಿರುವ ಈ ವಾರ ಕೆಲಸ ಮತ್ತು ಪ್ರೀತಿಯ ನಡುವೆ ಸಮತೋಲನ ಅಗತ್ಯ. ಅಷ್ಟಮ ಕುಜನಿಂದ ತಪ್ಪುಗ್ರಹಿಕೆ ಉಂಟಾಗಬಹುದು. ಸಂಶಯವನ್ನು ಬೆಳೆಸದೆ ಸ್ಪಷ್ಟವಾಗಿ ಮಾತನಾಡಿ. ಲಾಭದ ರವಿ ಹಿತೈಷಿಗಳ ಸಹಕಾರ ಸೂಚಿಸುತ್ತಾನೆ. ನಿಮ್ಮ ಸಂಯಮ ಸಂಬಂಧಕ್ಕೆ ರಕ್ಷಾಕವಚವಾಗಲಿದೆ.
ಕುಂಭ ರಾಶಿ: ಭಾಗ್ಯದ ಶುಕ್ರ ಮತ್ತು ಸಪ್ತಮ ಗುರು ಪ್ರೇಮಕ್ಕೆ ಆಶಾಕಿರಣ. ವಿವಾಹ ಮಾತುಕತೆಗಳಿಗೆ ಅನುಕೂಲ, ಹಿರಿಯರ ಸಹಕಾರ ಸಿಗಬಹುದು. ಸಪ್ತಮ ಕುಜನೂ ಇರುವುದರಿಂದ ಸಣ್ಣ ವಿಷಯಗಳನ್ನು ದೊಡ್ಡದು ಮಾಡದಿರಿ. ಪರಸ್ಪರರ ಸ್ವಾತಂತ್ರ್ಯವನ್ನು ಗೌರವಿಸಿದರೆ ಬಾಂಧವ್ಯದಲ್ಲಿ ಸಂತಸ ನೆಲೆಸುವುದು.
ಮೀನ ರಾಶಿ: ಅಷ್ಟಮ ಶುಕ್ರ ಭಾವನೆಗಳನ್ನು ಸೂಕ್ಷ್ಮಗೊಳಿಸುವನು. ಜನ್ಮ ಶನಿಯಿಂದ ಕೆಲವೊಮ್ಮೆ ಏಕಾಂಗಿತನ ಕಾಡಬಹುದು. ಮನದ ಭಾರವನ್ನು ಸಂಗಾತಿ ಅಥವಾ ಆಪ್ತರೊಂದಿಗೆ ಹಂಚಿಕೊಳ್ಳಿ. ಅತಿಯಾದ ನಿರೀಕ್ಷೆ ಹಾಗೂ ಊಹೆಗಳಿಂದ ದೂರವಿರಿ. ಭಾಗ್ಯದ ರವಿಯ ಈ ಕಾಲದಲ್ಲಿ ಹಿರಿಯರ ಸಲಹೆ ನೆಮ್ಮದಿ ನೀಡಬಹುದು.
ಲೋಹಿತ್ ಹೆಬ್ಬಾರ್
Published On - 1:05 am, Sun, 29 November 26