ಹೊಸ ವರ್ಷದ ಆರಂಭಕ್ಕೆ ಇನ್ನೇನು ಕ್ಷಣಗಣೆನೆ ಆರಂಭವಾಗಿದ್ದು, 2022ಕ್ಕೆ ಬೈ ಹೇಳಿ 2023 ಅನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನರು ಸಜ್ಜಾಗಿದ್ದಾರೆ. ಇನ್ನು 2023ನೇ ವರ್ಷ ಹೇಗಿರಲಿದೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗಾದ್ರೆ 2023ರ ವರ್ಷ ಭವಿಷ್ಯದಲ್ಲಿ 12 ರಾಶಿಗಳ ಆರ್ಥಿಕ ಜೀವನ, ಉದ್ಯೋಗ, ವೈವಾಹಿಕ ಜೀವನ, ಪ್ರೇಮ, ಹಣಕಾಸು, ಆಸ್ತಿ ಇಂತೆಲ್ಲಾ ವಿಚಾರದಲ್ಲಿ ಹೇಗಿರಲಿದೆ? ಶುಭವೋ..? ಅಶುಭವೋ..? ತಿಳಿದುಕೊಳ್ಳಿ.
2023 ಭಾನುವಾರದಂದು ಆರಂಭವಾಗಿದೆ. ಈ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉನ್ನತ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಮಾತಿನ ಮೇಲೆ ಎಚ್ಚರವಿರಲಿ. ನಿಮ್ಮ ಅಸಂಬದ್ಧ ಮಾತುಗಳು ವಿಶೇಷವಾಗಿ ಕುಟುಂಬದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುವುದು. ಸಂಬಂಧಗಳು ಚೆನ್ನಾಗಿರಲು ಯೋಚಿಸಿ ಮಾತನಾಡಿ. 2023ರ ಆರಂಭದ ಒಂದೆರಡು ತಿಂಗಳು ಈ ರಾಶಿಯವರು ಸಂಗಾತಿಯ ಅತಿಯಾದ ಪ್ರೀತಿಯನ್ನು ಅನುಭವಿಸುವರು. ಜನವರಿಯ ಮಧ್ಯಭಾಗದಲ್ಲಿ ಕರ್ಮಾಧಿಪತಿಯಾದ ಶನಿಯು ದಶಮಸ್ಥಾನದಿಂದ ಏಕಾದಶಸ್ಥಾನಕ್ಕೆ ಪ್ರವೇಶಿಸಲಿದ್ದಾನೆ. ಅದು ಆತನ ಸ್ವಕ್ಷೇತ್ರವೂ ಆದಕಾರಣ ಆರ್ಥಿಕವಾಗಿ ಅನುಕೂಲತೆಗಳನ್ನು ಮಾಡುವನು. ಆರ್ಥಿಕವಾಗಿ ಸಬಲರಾಗುವಿರಿ. ವಿವಾಹಾದಿಗಳಿಗೆ ವರ್ಷಾರಂಭದಲ್ಲಿ ಶುಭವಿಲ್ಲ. ಕಾರ್ತಿಕೇಯನ ಆರಾಧನೆಯು ಆಪತ್ಕಾಲಕ್ಕೆ ಆಧಾರ. ನಿತ್ಯವು ಭಜಿಸಿ, ದರ್ಶನವನ್ನು ಪಡೆಯಿರಿ.
ವೃತ್ತಿಜೀವನ ವಿಶೇಷಮಜಲುಗಳನ್ನು ಈ ವರ್ಷದಲ್ಲಿ ಕಾಣಲಿದ್ದೀರಿ. ನಿಮ್ಮ ದೈತ್ಯಪ್ರತಿಭೆಗೆ ಹತ್ತಾರು ಸವಾಲುಗಳು ಬರಲಿವೆ. ದ್ವಾದಶದ ರಾಹುವಿನ ಕಾರಣ ಖರ್ಚುಗಳು ಹೆಚ್ಚಾಗುವುವು. ಗುರುವು ಏಪ್ರಿಲ್ ನ ಮಧ್ಯಭಾಗದಲ್ಲಿ ಏಕಾದಶಸ್ಥಾನಕ್ಕೆ ಬರುವನು. ಆತ ಅನೇಕ ಲಾಭಗಳನ್ನು ನಿಮಗೆ ಮಾಡಿಕೊಡಲಿದ್ದಾನೆ. ಏಪ್ರಿಲ್ ನಲ್ಲಿ ಮೇಷರಾಶಿಗೆ ಬರುವ ಸೂರ್ಯನಿಂದ ಎಚ್ಚರಾಗಿರಿ. ರಾಹು ಮತ್ತು ಸೂರ್ಯರ ಸಂಯೋಗವಾಗಲಿದೆ. ಆರೋಗ್ಯದ ಮೇಲೆ ಗಮನವಿರಿಸಿ. ಓಡಾಟಗಳಿಂದ ಅನಿರೀಕ್ಷಿತವಾಗಿ ಧನವ್ಯಯವಾಗಬಹುದು. ಗುರುವು ಹನ್ನೆರಡನೆಯ ಭಾವಕ್ಕೆ ಬಂದಾಗ ಸಂಪತ್ತನ್ನು ಕಳೆದುಕೊಳ್ಳಬಹುದು. ಏಪ್ರಿಲ್ ತಿಂಗಳ ಒಳಗಾಗಿ ವಿವಾಹಾದಿಗಳನ್ನು ಮುಗಿಸಿಕೊಳ್ಳಿ. ಮಾರ್ಚ್ ನ ಪಿತ್ರಾರ್ಜಿತ ಆಸ್ತಿಗಳನ್ನು ಕಳೆದುಕೊಳ್ಳುವಿರಿ. ಅದಕ್ಕೆ ಬೇಕಾದ ಪೂರ್ವತಯಾರಿಯನ್ನು ಮಾಡಿಕೊಳ್ಳಿ. ರಾಜರಾಜೇಶ್ವರಿಯು ಜಗನ್ಮಾತೆ. ಆಕೆಯು ತನ್ನ ಮಕ್ಕಳ ಕರೆಗೆ ಓಗುಡದಿರುವಳೇ. ಪ್ರತಿನಿತ್ಯ ಸ್ಮರಿಸಿ. ಶುಕ್ರವಾರ ಆಕೆಯ ದಿವ್ಯರೂಪವನ್ನು ದರ್ಶನ ಮಾಡಿ.
ದೈಹಿಕ ಅನಾರೋಗ್ಯವು ವರ್ಷಾರಂಭದಲ್ಲಿ ಇರಲಿದೆ. ಅಷ್ಟಮದ ಶನಿ ನಿಮ್ಮಲ್ಲಿ ನಾನಾ ಪೀಡಿಗಳನ್ನು ಉಂಟುಮಾಡಿ ನಿಮ್ಮ ಹಿಂಡಿ ಹಿಪ್ಪೆ ಮಾಡುವನು. ಸ್ನಾಯುಸಂಬಂಧವಾದ ಖಾಯಿಲೆಯನ್ನು ನೀಡುವನು. ಜನವರಿಯ ಮಧ್ಯಭಾಗದಲ್ಲಿ ಆತ ನವಮಸ್ಥಾನಕ್ಕೆ ಬಂದು ಶುಭವನ್ನೇ ನೀಡುವನು. ನೋವುಗಳೆಲ್ಲವನ್ನೂ ಮಾಯಮಾಡುವನು. ಏಕಾದಶಸ್ಥಾನಕ್ಕೆ ಗುರವಿನ ಪ್ರವೇಶ ಏಪ್ರಿಲ್ ನಲ್ಲಿ ಆಗಲಿದೆ. ಶುಭಕರನಾದ ಗುರುವು ಶುಭವನ್ನೇ ನೀಡುವನು. ಎಲ್ಲರೀತಿ ಅಡೆತಡೆಗಳನ್ನು ದೂರಮಾಡುವನು. ವಿವಾಹಕ್ಕೆ ಪ್ರಶಸ್ತಕಾಲವು ಇದಾಗಲಿದೆ. ದುಡುಕಿನ ನಿರ್ಧಾರವನ್ನು ತೆಗದುಕೊಳ್ಳುವುದು ಉತ್ತಮವಲ್ಲ. ಅನಂತರ ಹತಾಶರಾಗಬೇಕಾದೀತು. ಸಾಪ್ಟ್ ವೇರ್ ಉದ್ಯೋಗಿಗಳಿಗೆ ವಿದೇಶಪ್ರಯಾಣ ಮಾಡುವ ಯೋವಿದೆ. ಮಹಾವಿಷ್ಣುವು ಜಗತ್ಪಿತಾ. ಸೃಷ್ಟಿಯನ್ನೇ ಪಾಲಿಸುವಾತ. ನಿಮ್ಮನ್ನು ಪಾಲಿಸನೇ? ಭಕ್ತಿಯಿಂದ ಪಾಡಿರಿ. ಗಣಪತಿಯು ಸಕಲಕಾರ್ಯಗಳಿಗೂ ಮಂಗಲವನ್ನು ಉಂಟುಮಾಡುವವನು. ನಿರ್ವಿಘ್ನದಾತನನ್ನು ಮನಃಪೂರ್ವಕ ಧ್ಯಾನಿಸಿ.
2023ರ ಆರಂಭದ ದಿನಗಳು ಬಹಳ ಸುಂದರವಾಗಿ ಇರಲಿವೆ. ವೃತ್ತಿಯಲ್ಲಿ ಸಂತಸ, ಆರ್ಥಿಕವಾಗಿ ಸಬಲ, ಸಂಸಾರದಲ್ಲಿ ಸಲ್ಲಾಪಗಳು, ಉದ್ಯಮದಲ್ಲಿ ಉತ್ಸಾಹ ಇವೆಲ್ಲವೂ ಇರಲಿವೆ. ಜನವರಿಯ ಮಧ್ಯದಲ್ಲಿ ಶನಿಯು ಅಷ್ಟಮಸ್ಥಾನಕ್ಕೆ ಪ್ರವೇಶಿಸುತ್ತಾನೆ. ಅಲ್ಲಿಂದ ನಿಮಗೆ ಒಂದೊಂದೇ ಸಂಕಟಗಳ ಉಗಮ ಎಂದು ಹೇಳಬಹದು. ಆಗ ಉದ್ವೇಗದಿಂದ ನೀವೂ ನಿಮ್ಮಿಂದ ನಿಮ್ಮ ಬಳಗವೂ ನೋವನ್ನು ಉಣುವಿರಿ. ಏಪ್ರಿಲ್‌ನಲ್ಲಿ ಗುರುಗ್ರಹವು ಹತ್ತನೇ ಭಾವವಾದ ಮೇಷರಾಶಿಗೆ ಪ್ರವೇಶಿಸುತ್ತದೆ. ಅಲ್ಲಿ ರಾಹು ಮತ್ತು ಸೂರ್ಯರೂ ಇರುತ್ತಾರೆ. ಮೂರು ಗ್ರಹಗಳ ಸಂಯೋಗದಿಂದ ಕೆಲಸಕಾರ್ಯಗಳಲ್ಲಿ ಪರಿವರ್ತೆನೆಯಾಗಲಿದೆ. ಮುಂದೆ ಗುರುವು ಮಾತ್ರ ದಶಮದಲ್ಲಿ ಇದ್ದು ನಿಮ್ಮ ವೃತ್ತಿಯ ಸುವರ್ಣಕಾಲವೆಂದೇ ಹೇಳಬಹುದು. ಶಿಕ್ಷಕರಿಗೆ ಉನ್ನತಸ್ಥಾನ, ಮಾನಗಳು ಸಿಗಲಿವೆ. ಗೌರಿಯ ಸ್ತುತಿ ಮಾಡಿ. ನಾನಾವಿಧವಾದ ಮಧುರ ಭಕ್ಷ್ಯಗಳನ್ನು ನೈವೇದ್ಯ ಮಾಡಿ.
ಈ ರಾಶಿಯವರಿಗೆ ಶನಿಯು ಷಷ್ಠಭಾವದಲ್ಲಿರುತ್ತಾನೆ. ಶತ್ರುಗಳನ್ನು ಸಿಂಹದಂತೆ ಸದೆಬಡಿವ ಉತ್ಸಾಹ ಮತ್ತು ಬಲವಿರುತ್ತದೆ. ಏಪ್ರಿಲ್ ನ ಅನಂತರ ಧರ್ಮಕಾರ್ಯಗಳನ್ನು ಬಹಳಷ್ಟು ಮಾಡುವಿರಿ. ದೈವಭಕ್ತಿ ನಿಮ್ಮಲ್ಲಿ ಹೆಚ್ಚಾಗಲಿದೆ. ವರ್ಷಾರಂಭದಲ್ಲಿ ಪಂಚಸ್ಥಾನದಲ್ಲಿರುವ ರವಿಯು ನಿಮ್ಮ ಪ್ರತಿಭೆಯನ್ನು, ಬುದ್ಧಿಶಕ್ತಿಯನ್ನು ಪ್ರಕಾಶಗೊಳಿಸುವನು. ಶಿಕ್ಷಣಕ್ಕೆ ಸಂಬಂಧಿಸಿ ಪ್ರಗತಿಗಳು ಅಧಿಕವಾಗಿರುವುವು. ಬುಧಾದಿತ್ಯರು ಸಂಯೋಗದಿಂದ ನಿಮ್ಮ ಜ್ಞಾನದ ಬಗ್ಗೆ ನಿಮಗೇ ಅಸೂಯೆಯಾಗುವಷ್ಟು ತಿಳಿದುಬರುತ್ತದೆ. ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವಾದ ಯೋಗವಾಗಿದೆ. ಏಪ್ರಿಲ್ ನಲ್ಲಿ ಒಂಬತ್ತನೇ ಮನೆಗೆ ಚಲಿಸುವ ಗುರುವು ಸಂಪತ್ತು ಮತ್ತು ಪೂರ್ವಾರ್ಜಿತ ಸಂಪತ್ತನ್ನೂ ನೀಡುವನು. ವರ್ಷದ ಮುಕ್ಕಾಲು ಭಾಗ ಅಂದರೆ ಅಕ್ಟೊಬರ್ ತಿಂಗಳಲ್ಲಿ ನವಮದ ರಾಹುವು ಅನಾರೋಗ್ಯವನ್ನೂ, ಅಧರ್ಮದ ಕಾರ್ಯದಿಂದ ಧನನಾಶವನ್ನೂ ಮಾಡಿಸುವನು. ಶಿವನಿಗೆ ಅಭಿಷೇಕ ಮಾಡಿಸಿ ಸೋಮವಾರದಂದು. ಶಿವನ ಸ್ತೋತ್ರಗಳನ್ನು ಪಠಿಸಿ ನಿಮ್ಮ ಮುಂದಿನ ಕಾರ್ಯಗಳನ್ನು ಮಾಡಿ.
ಅನಿರೀಕ್ಷಿತ ಲಾಭಗಳನ್ನು ವರ್ಷದ ಆರಂಭದಲ್ಲಿ ಕಾಣಬಹುದು. ಆತ್ಮವಿಶ್ವಾಸವನ್ನು ಗಟ್ಟಿಯಾಗಿಸಿಕೊಂಡೆ ಮುಂದೆಯೂ ನೀವು ಶುಭಫಲವನ್ನೇ ನಿರೀಕ್ಷಿಸಬಹುದು. ಶನಿ ಮತ್ತು ಶುಕ್ರರು ವರ್ಷದ ಆರಂಭದಲ್ಲಿ ಪಂಚಮದಲ್ಲಿರುವರು. ಇಬ್ಬರೂ ನಿಮ್ಮ ಜೀವನಕ್ಕೆ ಶುಭವನ್ನೇ ತರುವರು. ಶುಕ್ರನು ಜನವರಿಯಲ್ಲಿ ಷಷ್ಠಭಾವಕ್ಕೆ ಹೋಗುವನು. ಆಗ ನಿಮ್ಮ ಆರ್ಥಿಕಸ್ಥಿತಿಯು ಅಷ್ಟಾಗಿ ಚೆನ್ನಾಗಿರದು. ಶತ್ರುಗಳ ಉಪಟಳವಿದ್ದಂತೆ ಕಂಡೀತು. ಅನಂತರ ಶುಕ್ರನು ಮೀನರಾಶಿಯನ್ನು ಪ್ರವೇಶಿಸುವನು. ಅದು ಗುರುವಿನ ಜೊತೆ ಶುಕ್ರನು ಹೋಗುವ ಕಾರಣ ವಿವಾಹ ಸಂಬಂಧಗಳು ಏರ್ಪಡುವುವುದು. ಪತಿಪತ್ನಿಯರ ಕಲಹಗಳು ಒಂದಾಗಿ ಅನ್ಯೋನ್ಯದಿಂದ ಬದುಕುವರು. ಏಪ್ರಿಲ್ ನ ಅನಂತರ ಅಷ್ಟಮಭಾವಕ್ಕೆ ಗುರುವು ಚಲಿಸಿದಾಗ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯು ಕಡಿಮೆಯಾಗುವುದು. ಪಂಚಮದ ಶನಿಯು ನಿಮ್ಮನ್ನು ವಿದೇಶಕ್ಕೆ ಕಳುಹಿಸುವನು. ಅಷ್ಟಮದ ರಾಹುವು ಕಷ್ಟವನ್ನು ತರುವನು. ಪುರುಷೋತ್ತಮ ಶ್ರೀರಾಮ ಶರಣಾಗತರಕ್ಷಕ. ಆತನನ್ನು ಶರಣು ಹೋಗಿ. ಶ್ರೀರಾಮರಕ್ಷಾಸ್ತೋತ್ರವನ್ನು ಮಾಡಿ.
ವರ್ಷಾರಂಭದಲ್ಲಿ ಹಿಂದಿನ ವರ್ಷದ ಮುಂದುವರಿಕೆಯಾಗಿಯೇ ಇರುತ್ತದೆ. ಜನವರಿ ಮಧ್ಯದಲ್ಲಿ ಗ್ರಹಗತಿಗಳ ಬದಲಾವಣೆಯಿಂದ ನಿಮ್ಮ ಜೀವನದಲ್ಲೂ ಒಂದಿಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಜನವರಯಿಂದ ನಿಮ್ಮ ಸಂಪತ್ತೂ ಹೆಚ್ಚಾಗುತ್ತದೆ. ಶನಿಯು ಚತುರ್ಥಭಾವದಿಂದ ಪಂಚಮಭಾವಕ್ಕೆ ಹೋಗುವನು. ಸುತರ ಸಹಕರಾ ನಿಮಗೆ ಎಂದಿನಂತೆ ಸಿಗಲಿದೆ. ನಾಲ್ಕನೇ ಮನೆಯನ್ನು ತೊರೆದು ಐದನೇ ಸ್ಥಾನಕ್ಕೆ ಹೋಗುವುದು ಗೋಚರಿಸುತ್ತದೆ. ದಂಪತಿಗಳು ನಂಬಿಕೆಯ ಮೇಲೆ ಬದುಕನ್ನು ನಡೆಸುವುದರಿಂದ ಅದನ್ನು ಕಳೆದು ಕೊಂಡರೆ ದುರಂತದಲ್ಲಿ ಮುಕ್ತಾಯಗೊಳ್ಳಬಹುದು. ಕಠಿಣ ಶ್ರಮವನ್ನು ವಿದ್ಯಾರ್ಥಿಗಳು ಹಾಕಿದರೆ ಉತ್ತಮವೂ ಮಧುರವೂ ಆದ ಫಲವನ್ನು ಕಾಣಬಹುದು. ಇಂದಿನ ಶ್ರಮವು ಮುಂದಿನ ದಿನದಲ್ಲಿ ಫಲವನ್ನು ನೀಡುತ್ತದೆ.ಅಕ್ಟೋಬರ್ ನ ಅನಂತರ ವಿವಾಹದ ಶುಭಕಾರ್ಯಗಳು ನಡೆಯುತ್ತದೆ. ವ್ಯಾಪಾರಸ್ಥರಿಗೆ ಶುಭಕಾಲ. ಏಪ್ರಿಲ್‌ನಲ್ಲಿ ಗುರು ಮತ್ತು ರಾಹು ಸಂಯೋಗದಿಂದ ಸ್ತ್ರೀಸಂಬಂಧದ ಅಪಕೀರ್ತಿಗಳು ಬರುತ್ತವೆ. ಮಹಾಕಾಳಿ ಜಗ್ಮಾತೆಯಾದರೆ, ನಿಮ್ಮನ್ನು ಹೆತ್ತವಳು ಮಹಾತಾಯಿ. ಆಕೆಯ ಸೇವೆ ಮಾಡಿ. ಈರ್ವರೂ ತಾಯಿಯರೂ ಶುಭವನ್ನೇ ಕರುಣಿಸುವರು.
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು
ವರ್ಷಾರಂಭವು ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಉಪಯುಕ್ತ ಕಾಲ. ತೃತೀಯ ಹಾಗೂ ಚತುರ್ಥಭಾವದ ಅಧಿಪತಿಯಾದ ಶನಿಯು ಸ್ವಸ್ಥಾನದಿಂದ ಸ್ವಸ್ತಿಯನ್ನು ಉಂಟುಮಾಡುವನು. ಹೊಸ ಉದ್ಯಮವನ್ನು ಮುನ್ನಡೆಸಲು ಶನಿಯು ಪ್ರೋತ್ಸಾಹಿಸುವನು. ವಿದ್ಯಾರ್ಥಿಯಾಗಿದ್ದರೆ ಈ ವರ್ಷ ಖ್ಯಾತಿಯನ್ನು ಪಡೆಯಬಹುದು. ಇದು ನಿಮ್ಮನ್ನು ಶಿಕ್ಷಣದ ಕಡೆಗೆ ಕೊಂಡೊಯ್ಯತ್ತದೆ. ಮಕ್ಕಳ ಯಶಸ್ಸಿನ ಶುಭವಾರ್ತೆಯನ್ನು ಕೇಳುವಿರಿ. ವರ್ಷದ ಮೊದಲಾರ್ಧವನ್ನು ಆನಂದದಿಂದಲೇ ಕಳೆಯುವಿರಿ.
ಏಪ್ರಿಲ್ ನಲ್ಲಿ ಗುರುವು ಪಂಚಮಭಾವನ್ನು ತೊರೆದು ಷಷ್ಠಭಾವಕ್ಕೆ ಹೋಗುವನು. ಅಲ್ಲಿರುವ ಸೂರ್ಯ ಹಾಗು ರಾಹುಗಳ ಸಂಯೋಗವನ್ನು ಹೊಂದಿ ಅನಾರೋಗ್ಯವನ್ನು ಕೊಡುವನು. ತಲೆಯಲ್ಲಿ ಗಾಯಗಳಾಗುವುವು. ಆ ಸಂದರ್ಭದಲ್ಲಿ ಶತ್ರುಗಳ ಉಪಟಳಗಳು ಇರಲಿವೆ. ಸುಬ್ರಹ್ಮಣ್ಯನು ದೇವತೆಗಳ ಸಂಕಷ್ಟವನ್ನು ಸಂಹರಿಸಿದಂತೆ ಸ್ತೋತ್ರ, ಪೂಜೆ, ಧ್ಯಾನವನ್ನು ಮಾಡಿದರೆ ಎಲ್ಲ ಆಪತ್ತನ್ನೂ ದೂರಮಾಡುವನು.
2023ರ ಆರಂಭದಲ್ಲಿ ದ್ವಿತೀಯಸ್ಥಾನದಲ್ಲಿರುವ ಶನಿಯು ಅನಂತರ ತೃತೀಯಭಾವಕ್ಕೆ ಹೋಗುವನು. ಆಗ ಸಂಪತ್ತುನ್ನೂ, ಪ್ರಭಾವವನ್ನೂ, ಕುಟುಂಬದಲ್ಲಿ ಸಹಬಾಳ್ವೆಯನ್ನೂ ಸಹೋದರರಲ್ಲಿ ಸಾಮರಸ್ಯವನ್ನೂ ನೀಡುವನು. ಏಪ್ರಿಲ್ ಮಾಸದಲ್ಲಿ ಗುರುವು ರಾಹುವಿನ ಜೊತೆಯಲ್ಲಿ ಪಂಚಮ ಭಾವದಲ್ಲಿ ಇರುವುದುರಿಂದ ಮಕ್ಕಳಿಂದ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ನೀವು ಪರಸ್ಪರ ಸಮಸ್ಯೆಗಳನ್ನು ಅನುಭವಿಸಬಹುದು. ದೈಹಿಕ ಸಮಸ್ಯೆ ಉಂಟಾಗಬಹುದು. ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳೊಂದಿಗೆ ಸಮಸ್ಯೆಗಳು ಉಂಟಾಗಬಹುದು. ವಿವಾಹಕ್ಕೆ ಪ್ರತಿಬಂಧಗಳು ಎದುರಾಗಬಹುದು. ಜಾತಕವನ್ನು ಪರಿಶೀಲಿಸಿ ವಿವಾಹವಾಗುವುದು ಬಹಳ ಉತ್ತಮ. ಜೂನ್ ನಲ್ಲಿ ಮಂಗಳ ಹಾಗು ಶುಕ್ರರ ಸಂಯೋಗ ಮಕ್ಕಳ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಹುದು. ಪಾಲಕರು ಜಾಗರೂಕರಾಗಬೇಕು. ವರ್ಷಾಂತ್ಯದಲ್ಲಿ
ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸುವಿರಿ. ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಿಸಿ. ಇಲ್ಲವಾದರೆ ಭಕ್ತಿಯಿಂದ ಅದನ್ನು ಶ್ರವಣ ಮಾಡಿ ಪ್ರತಿನಿತ್ಯ.
ಶನಿಯು ವರ್ಷದ ಆದಿಯಲ್ಲಿ ದ್ವಿತೀಯಸ್ಥಾನಕ್ಕೆ ಹೋಗಲಿದ್ದಾನೆ. ಸಂಪತ್ತುಗಳನ್ನು ನಿಮಗೆ ನೀಡಲಿದ್ದಾನೆ. ಶನಿಯು ನಿಮ್ಮ ಎರಡನೇ ಮನೆಗೆ ಚಲಿಸುತ್ತದೆ. ಕುಟುಂಬದಲದಲ್ಲಿ ನೆಮ್ಮದಿ ಇರಲಿದೆ. ಸ್ವಂತ ಆಸ್ತಿಯನ್ನು ಕ್ರಯವಿಕ್ರಯವನ್ನು ಮಾಡಲಿದ್ದೀರಿ. ಕುಟುಂಬದಲ್ಲಿರುವ ಸಮಸ್ಯೆಗಳು ದೂರವಾಗಿ ನಿಶ್ಚಿಂತರಾಗುವಿರಿ. ಸಂಪತ್ತು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಮಕ್ಕಳ ಯಶಸ್ಸನ್ನು ಪಂಚಮಭಾವದಲ್ಲಿರುವ ಶುಕ್ರನಿಂದ ಏಪ್ರಿಲ್ ತಿಂಗಳಲ್ಲಿ ಕಾಣಬಹುದು. ಗುರು ಹಾಗೂ ರಾಹುವಿನ ಸಮಾಗಮವು ಏಪ್ರಿಲ್ ತಿಂಗಳಲ್ಲಿ ಆಗಲಿದೆ. ಆಗ ಮನೆಯಲ್ಲಿ ಕಲಹಗಳು ಆಗುವುದು. ಆತ್ಮವಿಶ್ವಾಸವು ಕುಸಿಯುವ ಸಾಧ್ಯತೆಯಿದೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ಪೂರ್ವಕೃತ ಅಪೂರ್ವಕರ್ಮವು ನಿಮ್ಮನ್ನು ಸಕಾಲಕ್ಕೆ ಬೇಕಾದುದನ್ನು ನೀಡುತ್ತದೆ. ಶಿವನ ಸ್ತೋತ್ರವನ್ನು ಪಠಿಸಿ. ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ.
ವರ್ಷದ ಆದಿಯಲ್ಲಿ ಸಂಪತ್ತು ವ್ಯಯವಾಗುತ್ತಾ ಹೋಗುವುದು. ಖರ್ಚುಗಳ ಮೇಲೆ ಗಮನವಿರಬೇಕು. ಹೊಸ ವ್ಯಾಪಾರಕ್ಕೆ ಒಪ್ಪಂದವಾಗಲಿದೆ. ವೃತ್ತಿಯಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ನೀವು ಶಿಸ್ತನ್ನು ಕಾಪಾಡಿಕೊಳ್ಳುವ ಮೂಲಕ ಕೆಲಸದ ಕ್ಷೇತ್ರದಲ್ಲಿ ಎಲ್ಲರ ಗಮನ ಹರಿಸುವಿರಿ. ಹೊಸ ವ್ಯಕ್ತಿಗಳನ್ನು ನೀವು ಭೇಟಿಯಾಗುತ್ತೀರಿ. ವಿದೇಶ ಸಂಬಂಧಿಯವರಿಂದ ಧನಾಗಮನವಾಗಲಿದೆ. ಏಪ್ರಿಲ್ ನಲ್ಲಿ ಗುರುವು ತೃತೀಯಭಾವಕ್ಕೆ ಹೋಗಲಿದ್ದಾನೆ. ಸಹೋದರರ ಬಾಂಧವ್ಯವನ್ನು ಗಟ್ಟಿಗೊಳಿಸುವನು. ಕುಂಭ ರಾಶಿಯವರಿಗೆ ಶಾರೀರಿಕವ್ಯಾಧಗತೊಂದರೆಗಳನ್ನು ಅನುಭವಿಸಬಹುದು. ನಿಮಗೆ ಶಾಂತತೆ ಮತ್ತು ವಿಶ್ರಾಂತಿಯನ್ನು ಒದಗಿಸುವ ಜನರು ನಿಮ್ಮ ಸುತ್ತಲು ಇರುತ್ತಾರೆ. ಜೊತೆಗೆ ನಿಮ್ಮ ಮಾನಸಿಕ ಒತ್ತಡವನ್ನು ದೂರ ಮಾಡುವವರೂ ಇರುತ್ತಾರೆ. ಎಪ್ರಿಲ್ ಮತ್ತು ಮೇ ತಿಂಗಳ ನಡುವೆ ಕೌಟುಂಬಿಕ ಸಾಮರಸ್ಯದಲ್ಲಿ ಸುಧಾರಣೆಯಾಗಲಿದೆ. ಹೊಸ ವಾಹನ ಖರೀದಿಸುವ ಅವಕಾಶವಿದೆ. ಶನೈಶ್ಚರನ ಸ್ತೋತ್ರ ಮಾಡಿ. ಹನುಮಾನ್ ಚಾಲೀಸ್ ಪಠಿಸಿ. ನಿಮ್ಮ ಸಾಢಸಾತ್ ಶನಿಯು ಶುಭವನ್ನೇ ನೀಡುವನು.
2023ನೇ ವರ್ಷದಲ್ಲಿ ಜೀವನವು ಹಲವು ತಿರುವುಗಳಿಂದ ಕೂಡಿರಲಿದೆ. ಮಾನಸಿಕವಾಗಿ ಬಹಳ ಗೊಂದಲಗಳು ಇರಲಿವೆ. ನಿಮ್ಮ ವಿದ್ಯೆಯಿಂದ ಗೊಂದಲಗಳು ಪರಿಹಾರಗೊಳ್ಳುವುದು. ವೃತ್ತಿಯಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಶನಿಯು ದ್ವಾದಶಭಾವಕ್ಕೆ ಜನವರಿಯಲ್ಲಿ ಪ್ರವೇಶಿಸುತ್ತಾನೆ. ಆಗ ನಿಮ್ಮ ಕಾಲುಗಳಲ್ಲಿ ಗಾಯ, ನೋವು, ಶಸ್ತ್ರಚಿಕಿತ್ಸೆಯ ಸಾಧ್ಯತೆಗಳಿವೆ. ದೇಹಾಲಸ್ಯವು ಹೆಚ್ಚಾಗಲಿದೆ. ಗುರುವು ಏಪ್ರಿಲ್ ನಲ್ಲಿ ದ್ವಿತೀಯಭವಕ್ಕೆ ಹೋಗುವನು. ರಾಹುವಿನ ಜೊತೆಯಿದ್ದು ನಾನಾ ತೊಂದರೆಗಳಿಗೆ ಕಾರಣನಾಗುವನು. ಕುಟುಂಬದಲ್ಲಿ ಕಲಹಗಳು ಉಂಟಾಗಬಹುದು. ಅಕ್ಟೋಬರ್ ನಲ್ಲಿ ರಾಹುವು ನಿಮ್ಮ ರಾಶಿಗೆ ಪ್ರವೇಶ ಮಾಡಿದಾಗ ಸಂಪತ್ತಿನ ಸಮೃದ್ಧಿಯಿದ್ದರೂ, ಕುಟುಂಬದಲ್ಲಿ ಸಂತಸವಿದ್ದರೂ ಆರೋಗ್ಯದಲ್ಲಿನ ಏರುಪೇರಿನಿಂದ ಹಣದ ವ್ಯಯವಾಗುವುದು. ಗುರವಿನ ದರ್ಶನ, ಧ್ಯಾನ, ಪೂಜೆಗಳಿಂದ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಿ.
ಲೇಖನ – ಲೋಹಿತ ಶರ್ಮಾ, ಇಡುವಾಣಿ
Published On - 6:31 pm, Sat, 31 December 22