Alfa Romeo: ಹೈಬ್ರಿಡ್ ಕಾರು ಪರಿಚಯಿಸಿದ ಆಲ್ಫಾ ರೋಮಿಯೋ
ಆಲ್ಫಾ ರೋಮಿಯೋ ಟೋನೆಲ್ ಕಾರು 1.3 ಲೀಟರ್ ಟರ್ಬೋಚಾರ್ಜ್ಡ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಇದರೊಂದಿಗೆ ಆರು ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿರುವ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿ ನೀಡಲಾಗಿದೆ.
ಇಟಾಲಿಯನ್ ಕಾರು ತಯಾರಕ ಕಂಪೆನಿ ಆಲ್ಫಾ ರೋಮಿಯೋ ತನ್ನ ಮೊದಲ ಪ್ಲಗ್-ಇನ್ ಹೈಬ್ರಿಡ್ ಇ-ಕಾರನ್ನು (PH ಎಲೆಕ್ಟ್ರಿಕ್ ಕಾರ್) ಅನಾವರಣಗೊಳಿಸಿದೆ. ಈ ಆಲ್ಫಾ ರೋಮಿಯೋ ಟೋನೆಲ್ ಕಾರು ಸ್ಟ್ರಾಂಗ್ ಇಂಜಿನ್ ಹೊಂದಿದ್ದು, ಇದರ ಜೊತೆಗೆ ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ. ಇದಾಗ್ಯೂ ಈ ಕಾರು ಇನ್ನೂ ಕೂಡ ರಸ್ತೆಗಿಳಿದಿಲ್ಲ ಎಂಬುದು ವಿಶೇಷ. ಇದೇ ಮೊದಲ ಬಾರಿ ಆಲ್ಫಾ ಪ್ಲಗ್-ಇನ್ ಹೈಬ್ರಿಡ್ ಅನಾವರಣಗೊಳಿಸಿದ್ದು, ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಕಂಪನಿಯು 1910 ರಿಂದ ಆಲ್ಫಾ ರೋಮಿಯೋ ಟೋನೆಲ್ ಕಾರಿನ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಇದೀಗ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನ ಮೂಲಕ ವಾಹನ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುವ ಇರಾದೆಯಲ್ಲಿದೆ.
ಈ ಕಾರಿನ ವಿಶೇಷತೆ ಏನು? ಆಲ್ಫಾ ರೋಮಿಯೋ ಟೋನೆಲ್ ಕಾರು 1.3 ಲೀಟರ್ ಟರ್ಬೋಚಾರ್ಜ್ಡ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಇದರೊಂದಿಗೆ ಆರು ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿರುವ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿ ನೀಡಲಾಗಿದೆ. ಹಾಗೆಯೇ ಮತ್ತೊಂದು ಮಾಡೆಲ್ನಲ್ಲಿ, 2-ಲೀಟರ್ ಟರ್ಬೋಚಾರ್ಜ್ಡ್ 4-ಸಿಲಿಂಡರ್ ಎಂಜಿನ್ ಇದ್ದು, ಇದು 9-ಸ್ಪೀಡ್ ಟ್ರಾನ್ಸ್ಮಿಷನ್ನೊಂದಿಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಹೊಂದಿದೆ.
ಈ ಕಾರಿನ ವೈಶಿಷ್ಟ್ಯಗಳೇನು? ಕಾರಿನ ದೊಡ್ಡ ವೈಶಿಷ್ಟ್ಯವೆಂದರೆ ವಿದ್ಯುತ್ ಶಕ್ತಿಯೊಂದಿಗೆ ಹೈಬ್ರಿಡ್ ಎಂಜಿನ್. ವಾಹನವು 15.5 kWh ಲಿಥಿಯಂ ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. ಇದು 80 ಕಿ.ಮೀ ವರೆಗೂ ಚಲಿಸಲಿದೆ. ನೀವು ಅದನ್ನು ಕೇವಲ ಎರಡು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. US ನ ಹೊರಗೆ, ಈ ಕಾರು 1.5-ಲೀಟರ್ ಹೈಬ್ರಿಡ್ ಎಂಜಿನ್‌ನೊಂದಿಗೆ ಲಭ್ಯವಿರುತ್ತದೆ.
ಇನ್ನು ಈ ಕಾರಿನ ಮುಂಭಾಗದಲ್ಲಿ ಶೀಲ್ಡ್ ಗ್ರಿಲ್‌ನೊಂದಿಗೆ LED ಹೆಡ್‌ಲೈಟ್ ಅನ್ನು ನೀಡಲಾಗಿದೆ. ವಾಹನದ ಒಟ್ಟು ಉದ್ದ 4,529 ಎಂಎಂ, ಅಗಲ 1839 ಎಂಎಂ ಮತ್ತು ಎತ್ತರ 1,600 ಎಂಎಂ. ವಾಹನದ ಒಳಭಾಗವನ್ನು 12.3-ಇಂಚಿನ ಡಿಜಿಟಲ್ ಇನ್ಫೋಟೈನ್‌ಮೆಂಟ್ ಕ್ಲಸ್ಟರ್‌ನಿಂದ ಅಲಂಕರಿಸಲಾಗಿದೆ. ಇದರೊಂದಿಗೆ 10.25 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ನೀಡಲಾಗಿದೆ. ಇದು Apple CarPlay ಮತ್ತು Android ಅನ್ನು ಬೆಂಬಲಿಸುತ್ತದೆ. ಹಾಗೆಯೇ ಈ ಅಲೆಕ್ಸಾ ಅಸಿಸ್ಟ್‌ನಲ್ಲೂ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ