Audi: ಆಡಿ ಕಾರು ಖರೀದಿಸಲು ಬಯಸಿದ್ದೀರಾ? ಹಾಗಿದ್ರೆ ಇಲ್ಲಿದೆ ಹೈಕಿಂಗ್ ನ್ಯೂಸ್
Audi Cars: ಇನ್ನು ಇ-ಟ್ರಾನ್ ಬ್ರಾಂಡ್‌ನ ಅಡಿಯಲ್ಲಿ ಕಂಪನಿಯ ಎಲೆಕ್ಟ್ರಿಕ್ ವಾಹನಗಳಾದ ಆಡಿ ಇ-ಟ್ರಾನ್ 50, ಆಡಿ ಇ-ಟ್ರಾನ್ 55, ಆಡಿ ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ 55 ಮತ್ತು ಆಡಿ ಇ-ಟ್ರಾನ್ ಜಿಟಿ ಮತ್ತು ಆಡಿ ಆರ್‌ಆರ್ ಇ-ಟ್ರಾನ್ ಜಿಟಿಗಳು ಕೂಡ ಭಾರತೀಯ ಶೋರೂಮ್ಗಳಲ್ಲಿದೆ.
ಭಾರತೀಯ ಮಾರುಕಟ್ಟೆಯ ದುಬಾರಿ ಕಾರುಗಳಲ್ಲಿ ಆಡಿ ಕಾರ್ ಕೂಡ ಒಂದು. ಆದರೆ ಇದೀಗ ಕಂಪೆನಿಯು ತನ್ನ ವಾಹನಗಳನ್ನು ಮತ್ತಷ್ಟು ದುಬಾರಿಯನ್ನಾಗಿಸಲು ಹೊರಟಿದೆ. ಹೌದು, ಜರ್ಮನಿಯ ಐಷಾರಾಮಿ ಕಾರು ತಯಾರಕ ಆಡಿ ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಏಪ್ರಿಲ್ 1 ರಿಂದ ಶೇಕಡಾ 3 ರಷ್ಟು ಹೆಚ್ಚಿಸಲಿದೆ. ಹೊಸ ಬೆಲೆಗಳು ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ. ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ. ಹೊಸ ಬೆಲೆಗಳು ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
“ಹೆಚ್ಚುತ್ತಿರುವ ವೆಚ್ಚಗಳು ಮತ್ತು ಬದಲಾಗುತ್ತಿರುವ ವಿದೇಶಿ ವಿನಿಮಯ ದರಗಳನ್ನು ಗಮನದಲ್ಲಿಟ್ಟುಕೊಂಡು, ನಾವು ನಮ್ಮ ವಾಹನಗಳ ಬೆಲೆಯನ್ನು ಶೇಕಡಾ ಮೂರರಷ್ಟು ಹೆಚ್ಚಿಸಬೇಕಾಗಿದೆ” ಎಂದು ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಿಂದ ಭಾರತದಲ್ಲಿ ಆಡಿ ಕಾರುಗಳ ಬೆಲೆಗಳಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.
ಆಡಿ ಕಂಪೆನಿಯು ಭಾರತದಲ್ಲಿ ಪೆಟ್ರೋಲ್ ಚಾಲಿತ Audi A4, Audi A6, Audi A8 L, Audi Q2, Audi Q5 ಮತ್ತು ಇತ್ತೀಚೆಗೆ ಬಿಡುಗಡೆಯಾದ Audi Q7, Audi Q8, Audi S5 ಸ್ಪೋರ್ಟ್‌ಬ್ಯಾಕ್, Audi RS 5 ಸ್ಪೋರ್ಟ್‌ಬ್ಯಾಕ್, ಆಡಿ RS 7 ಸ್ಪೋರ್ಟ್‌ಬ್ಯಾಕ್ ಮತ್ತು ಆಡಿ RS Q8 ಅನ್ನು ಬಿಡುಗಡೆ ಮಾಡಿದೆ. ಇದೀಗ ಬೆಲೆ ಹೆಚ್ಚಳದಿಂದಾಗಿ ಮುಂದಿನ ತಿಂಗಳಿಂದ ಈ ಕಾರುಗಳ ಬೆಲೆ ಕೂಡ ದುಬಾರಿಯಾಗಲಿದೆ.
ಇನ್ನು ಇ-ಟ್ರಾನ್ ಬ್ರಾಂಡ್‌ನ ಅಡಿಯಲ್ಲಿ ಕಂಪನಿಯ ಎಲೆಕ್ಟ್ರಿಕ್ ವಾಹನಗಳಾದ ಆಡಿ ಇ-ಟ್ರಾನ್ 50, ಆಡಿ ಇ-ಟ್ರಾನ್ 55, ಆಡಿ ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ 55 ಮತ್ತು ಆಡಿ ಇ-ಟ್ರಾನ್ ಜಿಟಿ ಮತ್ತು ಆಡಿ ಆರ್‌ಆರ್ ಇ-ಟ್ರಾನ್ ಜಿಟಿಗಳು ಕೂಡ ಭಾರತೀಯ ಶೋರೂಮ್ಗಳಲ್ಲಿದೆ. ಈ ಕಾರುಗಳ ಬೆಲೆಯನ್ನೂ ಕೂಡ ಶೇ. 3 ರಷ್ಟು ಹೆಚ್ಚಿಸಲಿದೆ ಎಂದು ಆಡಿ ಇಂಡಿಯಾ ತಿಳಿಸಿದೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Audi to hike vehicle prices up to 3% from April)