ದುಬಾರಿ ಬೆಲೆಯ ಎಂ5 ಕಾಂಪಿಟೇಷನ್ 50 ಜಹ್ರೇ ಎಂ ಎಡಿಷನ್ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಂ5 ಕಾಂಪಿಟೇಷನ್ ಪರ್ಫಾಮೆನ್ಸ್ ಸೆಡಾನ್ ಮಾದರಿಯಲ್ಲಿ ಹೊಸದಾಗಿ 50 ಜಹ್ರೇ ಎಂ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.80 ಕೋಟಿ ಬೆಲೆ ಹೊಂದಿದೆ.

ದುಬಾರಿ ಬೆಲೆಯ ಎಂ5 ಕಾಂಪಿಟೇಷನ್ 50 ಜಹ್ರೇ ಎಂ ಎಡಿಷನ್ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು
BMW M5 Competition 50 Jahre M Edition launched in India
Follow us
Praveen Sannamani
| Updated By: ಗಂಗಾಧರ​ ಬ. ಸಾಬೋಜಿ

Updated on:Oct 15, 2022 | 9:44 PM

ಡಿಸೈನ್ ಮತ್ತು ಫೀಚರ್ಸ್: ಭಾರತದಲ್ಲಿ ಬಿಎಂಡಬ್ಲ್ಯ ಕಂಪನಿಯು ಸುಮಾರು 8 ಪ್ರಮುಖ ಕಾರು ಮಾದರಿಗಳಲ್ಲಿ 50 ಜಹ್ರೇ ಎಂ ಎಡಿಷನ್ ಬಿಡುಗಡೆ ಮಾಡಿದ್ದು, ಎಂ ಸೀರಿಸ್‌ ಕಾರುಗಳನ್ನು ಪರಿಚಯಿಸಿದ 50ನೇ ವರ್ಷದ ಸಂಭ್ರಮಾಚರಣೆಗಾಗಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 50 ಜಹ್ರೇ ಎಂ ಎಡಿಷನ್ ಕಾರುಗಳು ವಿಶೇಷ ಬ್ಯಾಡ್ಜ್ ಜೊತೆ ಹಲವು ಹೊಸ ಫೀಚರ್ಸ್ ಪಡೆದುಕೊಂಡಿದ್ದು, ಹೊಸ ಕಾರು ಮಾದರಿಗಾಗಿ ಇಂದಿನಿಂದಲೇ ಬುಕಿಂಗ್ ಆರಂಭಿಸಲಾಗಿದೆ.

ಹೊಸ 50 ಜಹ್ರೇ ಎಂ ಎಡಿಷನ್ ಕಾರಿನಲ್ಲಿ ಬಿಎಂಡಬ್ಲ್ಯು ಕಂಪನಿಯು ಇಂಡಿವಿಜುವಲ್ ಅವೆಂಚುರಿನ್ ರೆಡ್ ಪೇಂಟ್ ಹೊಂದಿರಲಿದ್ದು, ಲಿಮಿಟೆಡ್ ಎಡಿಷನ್ ಬ್ಯಾಡ್ಜ್ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಹೊಸ ಕಾರಿನ ನೊಸ್ ಗ್ರಿಲ್, ವೀಲ್ಹ್ ಮತ್ತು ಬೂಟ್ ಲೀಡ್ ಮೇಲೆ 50 ಜಹ್ರೇ ಎಂ ಎಡಿಷನ್ ಬ್ಯಾಡ್ಜ್ ಗಳಿದ್ದು, ಇನ್ನುಳಿದಂತೆ ಹೊಸ ಕಾರಿನಲ್ಲಿ ಕಿಡ್ನಿ ಗ್ರಿಲ್, ಎಂ ವೈಶಿಷ್ಟ್ಯತೆಯ ಡಬಲ್ ಬಾರ್, ಎಂ ಗ್ರಿಲ್, ಮಿರರ್ ಕ್ಯಾಪ್ ಮತ್ತು ರಿಯರ್ ಸ್ಪಾಯ್ಲರ್ ಗಳ ಮೇಲೆ ಹೈ ಗ್ಲಾಸ್ ಬ್ಲ್ಯಾಕ್ ಸೇರಿಸಲಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಎಂ ಕಾಪೌಂಡ್ ಬ್ರೇಕ್ ಕ್ಯಾಲಿಪರ್, ಬ್ಲ್ಯಾಕ್ ಕ್ರೋಮ್ ಹೊಂದಿರುವ ಎಂ ಸ್ಪೋರ್ಟ್ ಎಕ್ಸಾಸ್ಟ್, 20 ಇಂಚಿನ ಜೆಟ್ ಬ್ಲ್ಯಾಕ್ ಫಿನಿಷ್ ಹೊಂದಿರುವ ಅಲಾಯ್ ವ್ಹೀಲ್ಸ್ ಪಡೆದುಕೊಂಡಿದೆ. ಇನ್ನು ಹೊಸ ಕಾರಿನ ಒಳಭಾಗದಲ್ಲೂ ಕೂಡಾ ಹಲವಾರು ಹೊಸ ಫೀಚರ್ಸ್ ನೀಡಲಾಗಿದ್ದು, ಆರಗೊನ್ ಬ್ರೌನ್ ಮೆರಿನೊ ಲೆದರ್ ಅಪ್ಹೋಲ್ಸ್ಟರಿ ಮತ್ತು ಆಂಥ್ರಾಸೈಟ್‌ನಲ್ಲಿ ಬಿಎಂಡಬ್ಲ್ಯು ಇಂಡಿವಿಜುವಲ್ ಹೆಡ್‌ಲೈನರ್‌ ಮುಖ್ಯಾಂಶಗಳನ್ನು ಕಾಣಬಹುದಾಗಿದೆ.

ಇದನ್ನು ಓದಿ: Polestar 3 EV: ಪ್ರತಿ ಚಾರ್ಜ್ ಗೆ 610 ಕಿ.ಮೀ ಮೈಲೇಜ್ ನೀಡುತ್ತದೆ ಪೊಲ್ ಸ್ಟಾರ್ 3 ಎಲೆಕ್ಟ್ರಿಕ್ ಕಾರು!

ಹಾಗೆಯೇ ಇಂಟಿಗ್ರಲ್ ಹೆಡ್ ರೆಸ್ಟ್ ಗಳೊಂದಿಗೆ ಎಂ ಮಲ್ಟಿಫಂಕ್ಷನ್ ಆಸನಗಳು, ಪ್ರಕಾಶಿತ ಎಂ5 ಲೋಗೋ ಸೇರಿದಂತೆ ಹಲವಾರು ಐಷಾರಾಮಿ ಫೀಚರ್ಸ್ ಗಳು ಸ್ಟ್ಯಾಂಡರ್ಡ್ ಆಗಿರಲಿದ್ದು, ಎಂ ಸೀಟ್ ಬೆಲ್ಟ್, ಎಂ ಫುಟ್ ರೆಸ್ಟ್ ಮತ್ತು ಪೆಡಲ್, ಮುಂಭಾಗ ಆಸನಗಳಲ್ಲಿ ಕೂಲ್ ವೆಂಟೆಲೆಷನ್, ಎಲೆಕ್ಟ್ರಿಕ್ ಅಡ್ಜೆಸ್ಟ್ ಹೊಂದಿರುವ ಸೀಟ್ ಮತ್ತು ಮೆಮೊರಿ ಫಂಕ್ಷನ್ಸ್, ಆಟೋಮ್ಯಾಟಿಕ್ ಟೈಲ್ ಗೇಟ್, ಪಾಲಿಮರ್ ಸನ್ ರೂಫ್ ಸೌಲಭ್ಯಗಳಿವೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಎಂ5 ಕಾಂಪಿಟೇಷನ್ 50 ಜಹ್ರೇ ಎಂ ಎಡಿಷನ್ ನಲ್ಲಿ ಬಿಎಂಡಬ್ಲ್ಯು ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ 4.4 ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 8-ಸ್ಪೀಡ್ ಜೆಡ್ಎಫ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 617 ಬಿಹೆಚ್ ಪಿ ಮತ್ತು 750 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ. ಐಷಾರಾಮಿ ಕಾರುಗಳಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಹೊಸ ಮಾದರಿಯು 3.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ.

Published On - 9:25 pm, Sat, 15 October 22

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ