Polestar 3 EV: ಪ್ರತಿ ಚಾರ್ಜ್ ಗೆ 610 ಕಿ.ಮೀ ಮೈಲೇಜ್ ನೀಡುತ್ತದೆ ಪೊಲ್ ಸ್ಟಾರ್ 3 ಎಲೆಕ್ಟ್ರಿಕ್ ಕಾರು!

ಸ್ಪೀಡಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ಪೊಲ್ ಸ್ಟಾರ್ ತನ್ನ ಎರಡನೇ ಎಲೆಕ್ಟ್ರಿಕ್ ಕಾರು ಮಾದರಿಯಾದ ಪೊಲ್ ಸ್ಟಾರ್ 3 ಅನಾವರಣಗೊಳಿಸಿದ್ದು, ಹೊಸ ಕಾರು ಮೈಲೇಜ್ ವಿಚಾರವಾಗಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

Polestar 3 EV: ಪ್ರತಿ ಚಾರ್ಜ್ ಗೆ 610 ಕಿ.ಮೀ ಮೈಲೇಜ್ ನೀಡುತ್ತದೆ ಪೊಲ್ ಸ್ಟಾರ್ 3 ಎಲೆಕ್ಟ್ರಿಕ್ ಕಾರು!
Polestar 3 Electric SUV Revealed With 610 Kilometre Range
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 14, 2022 | 4:17 PM

ಪೊಲ್ ಸ್ಟಾರ್3 ಎಲೆಕ್ಟ್ರಿಕ್ ಎಸ್ ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಜೊತೆಗೆ ಪ್ರಮುಖ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿದ್ದು, ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ಪೊಲ್ ಸ್ಟಾರ್ 3 ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ ಅತಿ ದೊಡ್ಡ 111kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 610 ಕಿ.ಮೀ ಮೈಲೇಜ್ ನೀಡಲಿದೆ.

ಹೊಸ ಇವಿ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಆರಂಭಿಕ ಮಾದರಿಯು ಲಾಂಗ್ ರೇಂಜ್ ಡ್ಯುಯಲ್ ಮೋಟಾರ್ ಹೊಂದಿರಲಿದ್ದರೆ ಟಾಪ್ ಎಂಡ್ ಮಾದರಿಯು ಲಾಂಗ್ ರೇಂಜ್ ಡ್ಯುಯಲ್ ಮೋಟಾರ್ ಜೊತೆಗೆ ಪರ್ಫಾಮೆನ್ಸ್ ಪ್ಯಾಕ್ ಹೊಂದಿರಲಿದೆ.

ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆಯಿಂದಾಗಿ ಹೊಸ ಕಾರು ಮೈಲೇಜ್ ಜೊತೆಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ವ್ಹೀಲ್ ಗಳಿಗೆ ಪ್ರತ್ಯೇಕ ಶಕ್ತಿ ಪೂರೈಕೆ ಮೂಲಕ ಗರಿಷ್ಠ 510 ಬಿಎಚ್ ಪಿ ಉತ್ಪಾದನೆ ಮಾಡುತ್ತದೆ.

ಹೊಸ ಕಾರಿನಲ್ಲಿ ಕಂಪನಿಯು ಹೆಚ್ಚಿನ ಮಟ್ಟದ ಬಿಎಚ್ ಪಿ ಉತ್ಪಾದಿತ ಮಾದರಿಯನ್ನು ಖರೀದಿಸುವ ಗ್ರಾಹಕರಿಗಾಗಿ ಪರ್ಫಾಮೆನ್ಸ್ ಪ್ಯಾಕ್ ಪರಿಚಯಿಸಿದ್ದು, ಇದು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ವೇಗದೊಂದಿಗೆ 558 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಚಾರ್ಜಿಂಗ್ ಅವಧಿ

ಹೊಸ ಪೊಲ್ ಸ್ಟಾರ್ 3 ಕಾರು 250kW ಫಾಸ್ಟ್ ಚಾರ್ಜ್ ಸರ್ಪೊಟ್ ಹೊಂದಿದ್ದು, ಅತಿ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಕೇವಲ 30 ನಿಮಿಷಗಳ ಚಾರ್ಜಿಂಗ್ ಮೂಲಕ ಶೇ.10 ರಿಂದ ಶೇ.80 ರಷ್ಟು ಚಾರ್ಜ್ ಮಾಡಬಹುದಾಗಿದೆ.

ಡಿಸೈನ್ ಮತ್ತು ಫೀಚರ್ಸ್

ಹೊಸ ಪೊಲ್ ಸ್ಟಾರ್ 3 ಕಾರು ಆಧುನಿಕ ವಿನ್ಯಾಸ ಭಾಷೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಸ್ಲಿಮ್ ಆ್ಯರೋ ಬ್ಯಾಜ್ಡ್, ಟಿ ಶೇಫ್ ಹೆಡ್ ಲ್ಯಾಂಪ್ಸ್, ಬಂಪರ್ ಮೇಲ್ಭಾದಲ್ಲಿರುವ ದೊಡ್ಡದಾದ ಸೆಂಟ್ರಲ್ ಏರ್ ಇನ್ ಟೆಕ್, ಕರ್ವಿಂಗ್ ರೂಫ್, ಫ್ಲಶ್ ಡೋೡ ಹ್ಯಾಂಡಲ್, ಫ್ರೆಮ್ ಲೆಸ್ ವಿಂಡೋ ಮತ್ತು ಸ್ನ್ಯಾಜಿ ವ್ಹೀಲ್ ಹೊಂದಿದೆ.

ಇನ್ನು ಹಿಂಬದಿಯ ವಿನ್ಯಾಸವು ಕೂಡಾ ಪ್ರಮುಖ ಪ್ರತಿಸ್ಪರ್ಧಿ ಇವಿ ಕಾರುಗಳಿಂತಲೂ ಉತ್ತಮವಾಗಿದ್ದು, ಇಂಟ್ರೆಗ್ರೆಟೆಡ್ ಸ್ಪಾಯ್ಲರ್, ರಿಯರ್ ಬಂಪರ್ ಮೇಲಿರುವ ಆ್ಯರೋ ಬ್ಯಾಡ್ಜ್ ಐಷಾರಾಮಿ ಕಾರಿಗೆ ಪೂರಕವಾಗಿವೆ.

ಇಂಟಿರಿಯರ್ ಡಿಸೈನ್ ಮತ್ತು ಫೀಚರ್ಸ್

ಹೊಸ ಪೊಲ್ ಸ್ಟಾರ್ 3 ಕಾರಿನಲ್ಲಿ ಕಂಪನಿಯು ಹಲವಾರು ಐಷಾರಾಮಿ ಸೌಲಭ್ಯಗಳನ್ನು ನೀಡಿದ್ದು, ಚಾಲಕನಿಗೆ ಸಹಕಾರಿಯಾಗುವಂತೆ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಗೂಗಲ್ ಆಟೋಮೊಟಿವ್ ಸರ್ಪೊಟ್ ಹೊಂದಿರುವ 14.5 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, 25 ಸ್ಪೀಕರ್ಸ್ ಒಳಗೊಂಡಿರುವ 3ಡಿ ಸರೌಂಡ್ ಆಡಿಯೋ ಸಿಸ್ಟಂ, ಹೆಡ್ ಅಪ್ ಡಿಸ್ ಪ್ಲೇ, 360 ಡಿಗ್ರಿ ಕ್ಯಾಮೆರಾ ಸೌಲಭ್ಯವಿದೆೆ.

ಇದರೊಂದಿಗೆ ಹೊಸ ಕಾರು 4,900 ಎಂಎಂ ಉದ್ದ, 2,120 ಎಂಎಂ ಅಗಲ, 1,627 ಎಂಎಂ ಎತ್ತರ, 2,985 ಎಂಎಂ ವ್ಹೀಲ್ ಬೆಸ್ ನೊಂದಿಗೆ ಆರಾಮದಾಯಕ ಒಳಾಂಗಣ ಹೊಂದಿರಲಿದ್ದು, 211 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ 2,584 ಕೆಜಿ ತೂಕ ಹೊಂದಿದೆ.

ಇದನ್ನು ಓದಿ: ಪರ್ಫಾಮೆನ್ಸ್ ಪ್ರಿಯರನ್ನು ರಂಜಿಸಲು ಬಂದಿರುವ ಮಹೀಂದ್ರಾ ಎಕ್ಸ್ ಯುವಿ300 ಟರ್ಬೊಸ್ಪೋರ್ಟ್ ವಿಶೇಷತೆಗಳಿವು!

ಇದಲ್ಲದೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್ ಗಳಿದ್ದು, ಲೆವಲ್ 1 ಎಡಿಎಎಸ್ ಸೌಲಭ್ಯವು ಹೊಸ ಕಾರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ. ಜೊತೆಗೆ ಹೊಸ ಕಾರಿನಲ್ಲಿ 22 ಇಂಚಿನ ಅಲಾಯ್ ವ್ಹೀಲ್ ಸೇರಿದಂತೆ ಹಲವಾರು ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಜರ್ಮನ್ ಕಾರು ತಯಾರಕ ಕಂಪನಿಗಳಾದ ಬಿಎಂಡಬ್ಲ್ಯು ನಿರ್ಮಾಣದ ಐಎಕ್ಸ್ ಮತ್ತು ಆಡಿ ನಿರ್ಮಾಣದ ಇ-ಟ್ರಾನ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Published On - 4:17 pm, Fri, 14 October 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್